ಸಂವಿಧಾನಕ್ಕೆ ಎದುರಾದ ಸವಾಲು ಹಿಮ್ಮೆಟ್ಟಿಸಿ
ಹೈಕೋರ್ಟ್ ನಿವೃತ್ತ ನ್ಯಾಯಮೂರ್ತಿ ಎಚ್.ಎನ್.ನಾಗಮೋಹನದಾಸ್ ಸಲಹೆ
Team Udayavani, Jun 29, 2019, 4:14 PM IST
ಚಿಕ್ಕಮಗಳೂರು: ನಗರದ ಕುವೆಂಪು ಕಲಾಮಂದಿರದಲ್ಲಿ ಏರ್ಪಡಿಸಿದ್ದ ಸಂವಿಧಾನ ಓದು ಕಾರ್ಯಾಗಾರವನ್ನು ನ್ಯಾಯಮೂರ್ತಿ ಎಚ್.ಎನ್.ನಾಗಮೋಹನದಾಸ್ ಉದ್ಘಾಟಿಸಿದರು.
ಚಿಕ್ಕಮಗಳೂರು: ದೇಶದ ಸಂವಿಧಾನ ಪ್ರಸ್ತುತ ಎದುರಿಸುತ್ತಿರುವ ಸವಾಲುಗಳನ್ನು ಎಲ್ಲರೂ ಒಟ್ಟಾಗಿ ಹಿಮ್ಮೆಟ್ಟಿಸಬೇಕೆಂದು ಹೈಕೋರ್ಟ್ ನಿವೃತ್ತ ನ್ಯಾಯಮೂರ್ತಿ ಎಚ್.ಎನ್.ನಾಗಮೋಹನದಾಸ್ ಕರೆ ನೀಡಿದರು.
ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಜಿಲ್ಲಾಡಳಿತ, ವಿವಿಧ ಇಲಾಖೆ ಹಾಗೂ ಸಮುದಾಯ ಮತ್ತು ಸಹಯಾನ ಸಂಘಟನೆಗಳ ಸಹಯೋಗದಲ್ಲಿ ಕುವೆಂಪು ಕಲಾಮಂದಿರದಲ್ಲಿ ಗ್ರಾಪಂ, ತಾಪಂ ಜನಪ್ರತಿನಿಧಿಗಳು ಮತ್ತು ಪಿಡಿಒಗಳಿಗೆ ಶುಕ್ರವಾರ ಏರ್ಪಡಿಸಿದ್ದ ‘ಸಂವಿಧಾನ ಓದು’ ಕಾರ್ಯಾಗಾರದಲ್ಲಿ ಅವರು ಉಪನ್ಯಾಸ ನೀಡಿದರು.
ಭಾರತದ ಸಂವಿಧಾನದಲ್ಲಿ ಯಾವುದೇ ದೋಷವಿಲ್ಲ. ಅದನ್ನು ಜಾರಿ ಮಾಡುವವರಲ್ಲಿ ದೋಷವಿದೆ. ಹಾಗಾಗಿ, ಪ್ರಸ್ತುತ ಸಂವಿಧಾನ ಸಾಕಷ್ಟು ಸವಾಲು ಎದುರಿಸುವಂತಾಗಿದೆ. ಈ ಸವಾಲುಗಳ್ನು ಹಿಮ್ಮೆಟ್ಟಿಸುವ ಹೊಣೆಗಾರಿಕೆ ಎಲ್ಲರ ಮೇಲಿದೆ ಎಂದು ಹೇಳಿದರು.
ಹುಟ್ಟಿನಿಂದ ಸಾಯುವವರೆಗೂ ನಾವು ಕಾನೂನಿನ ನಿಯಂತ್ರಣಕ್ಕೊಳಪಡುತ್ತೇವೆ. ಎಲ್ಲ ಕಾನೂನುಗಳ ತಾಯಿ ಸಂವಿಧಾನ. ಆ ತಾಯಿಯನ್ನು ಅರ್ಥ ಮಾಡಿಕೊಳ್ಳಬೇಕು. ಹಿಂದು, ಕ್ರೈಸ್ತ, ಮುಸಲ್ಮಾನ ಮತ್ತಿತರೆ ಧರ್ಮದವರಿಗೆ ಅವರದೇ ಆದ ಧರ್ಮ ಗ್ರಂಥಗಳಿವೆ. ಆದರೆ, ಇವರೆಲ್ಲರಿಗೂ ಸಂವಿಧಾನವೇ ಮಹಾಗ್ರಂಥ ಎಂದರು.
ಒಂದು ದೇಶ ಅಂದರೆ ಕೇವಲ ಮಣ್ಣಲ್ಲ. ಇತಿಹಾಸ, ಇಲ್ಲಿನ ರಾಜಕೀಯ, ಸಾಮಾಜಿಕ, ಸಾಂಸ್ಕೃತಿಕ, ಆರ್ಥಿಕ ವ್ಯವಸ್ಥೆ, ಇಲ್ಲಿನ ಜನ ಸಂಸ್ಕೃತಿ, ಪರಂಪರೆ, ಮಾನವೀಯ ಮೌಲ್ಯಗಳ ಸಮ್ಮಿಳತವೇ ಒಂದು ದೇಶ. ಈ ಬಗ್ಗೆ ಕನಿಷ್ಠ ತಿಳಿವಳಿಕೆ ಇಲ್ಲದಿದ್ದರೆ ಸಂವಿಧಾನ, ಪ್ರಜಾಪ್ರಭುತ್ವ ಅರ್ಥವಾಗುವುದಿಲ್ಲ. ಇಲ್ಲಿ 4,635 ಜಾತಿಗಳು 325 ಭಾಷೆ, 25 ಲಿಪಿಗಳಿವೆ. ಬಹತ್ವದಲ್ಲಿ ನಂಬಿಕೆ ಇಟ್ಟಿರುವ ದೇಶ ನಮ್ಮದು. ಹಾಗಾಗಿ, ವಿವಿಧತೆಯಲ್ಲಿ ಏಕತೆ ಸಾಧಿಸಿದ್ದೇವೆ. ಇಲ್ಲಿ ಜಾತಿ, ಧರ್ಮ, ಲಿಂಗ, ಭಾಷೆ ಅಧಾರದ ಮೇಲೆ ತಾರತಮ್ಯ ತೋರಬಾರದು. ಸಮಾನ ಅವಕಾಶ, ಸಮಾನ ನ್ಯಾಯ ಕೊಡಬೇಕು ಎಂದು ಸಂವಿಧಾನದ ಪ್ರತಿಪಾದಿಸಿದೆ ಎಂದು ಹೇಳಿದರು.
ರಾಜರು, ಪಾಳೆಯಗಾರರ ಕೈಯಲ್ಲಿದ್ದ ಒಂದು ಭಾಗದ ಅಧಿಕಾರ ಈಗ ಜನಪ್ರತಿನಿಧಿಗಳ ಕೈಗೆ ಬರಲು ಸಂವಿಧಾನವೇ ಕಾರಣ. ರಾಜಮಹಾರಾಜರ ಕಾಲಹೋಗಿ ಈಗ ಪ್ರಜಾಫ್ರಭುತ್ವ ಅಸ್ತಿತ್ವಕ್ಕೆ ಬಂದಿದೆ. ಶಾಸಕಾಂಗ, ಕಾರ್ಯಾಂಗ, ನ್ಯಾಯಾಂಗದ ಮೂಲಕ ಅಧಿಕಾರ ವಿಂಗಡಣೆಯಾಗಿ ಅವುಗಳು ಸಮರ್ಪಕವಾಗಿ ಕಾರ್ಯ ನಡೆಸಲು ರಚನೆಯಾಗಿರುವುದೇ ನಮ್ಮ ಸಂವಿಧಾನ ಎಂದರು.
ಈವರೆಗೆ ನಮ್ಮನ್ನಾಳಿದ ಸರ್ಕಾರಗಳು ಸಂವಿಧಾನವನ್ನು ಜನರಿಗೆ ತಿಳಿಸುವ ಕೆಲಸ ಮಾಡಲಿಲ್ಲ. ನಾವೂ ಕೂಡ ತಿಳಿದುಕೊಳ್ಳುವ ಪ್ರಯತ್ನ ಮಾಡಲಿಲ್ಲ. ನಮಗೆ ಓದು ಬರಹ ಕಲಿಸಿದ್ದಾರೆ. ಆದರೆ, ಕಾನೂನು ಶಿಕ್ಷಣ ನೀಡಲಿಲ್ಲ. ಕಾನೂನು ಅರಿವಿಲ್ಲದ ಕಾರಣ ಸ್ಥಳೀಯ ಸಂಸ್ಥೆಗಳಲ್ಲಿ ಜನಪ್ರತಿನಿಧಿ ಮತ್ತು ಅಧಿಕಾರಿಗಳ ನಡುವೆ ಸಂಘರ್ಷ ಮುಂದುವರಿದಿದೆ. ಸಮಾಜ, ಸಮುದಾಯಕ್ಕೆ ಒಳಿತಾಗಬೇಕೆಂದರೆ ಸಂವಿಧಾನವನ್ನು ಓದಿ ಅರ್ಥಮಾಡಿಕೊಳ್ಳಬೇಕೆಂದು ಸಲಹೆ ನೀಡಿದರು.
ಸಂವಿಧಾನ ಓದು ಸಮಿತಿ ರಾಜ್ಯ ಸಂಚಾಲಕಿ ಕೆ.ಎಸ್.ವಿಮಲಾ ಪ್ರಾಸ್ತಾವಿಕವಾಗಿ ಮಾತನಾಡಿ, ಸಂವಿಧಾನದ ಕರಡು ರಚಿಸಿದ ಡಾ.ಅಂಬೇಡ್ಕರ್ ಅವರನ್ನು ಆರಾಧನೆ, ಅವಗಣನೆ ಮಾಡುವಂತಹ ವೈಪರೀತ್ಯಗಳನ್ನು ಇತ್ತೀಚೆಗೆ ಕಾಣುತ್ತಿದ್ದೇವೆ. ಸಂವಿಧಾನದ ವಿಚಾರಗಳನ್ನು ನಮ್ಮೊಳಗೆ ಅವಗಾಹನೆ ಮಾಡಿಕೊಳ್ಳದಿದ್ದರೆ ಅಂಬೇಡ್ಕರ್ ಕೇವಲ ಆರಾಧನೆಗೆ ಸೀಮಿತರಾಗುತ್ತಾರೆ ಎಂದು ಎಚ್ಚರಿಸಿದರು.
ಜಿಲ್ಲಾ ನ್ಯಾಯಾಧೀಶ ಉಮೇಶ್ ಎಂ.ಅಡಿಗ ಮಾತನಾಡಿ, ಸಂವಿಧಾನ ಓದದ ಕಾರಣ ದೇಶದಲ್ಲಿ ವೈಷಮ್ಯ, ದ್ವೇಷದ ಹೇಳಿಕೆಗಳು ಕೇಳಿಬರುತ್ತಿವೆ. ಸಂಕುಚಿತ ಮನೋಭಾವದಿಂದ ಸಂವಿಧಾನವನ್ನು ನೋಡುವವರಿಗೆ ಅದರಲ್ಲಿ ದೋಷ ಕಾಣುತ್ತದೆ ಎಂದು ಹೇಳಿದರು.
ಜಿಲ್ಲಾಧಿಕಾರಿ ಡಾ.ಬಗಾದಿ ಗೌತಮ್ ಮಾತನಾಡಿ, ನಾಗಮೋಹನ್‌ದಾಸ್ ಅವರು ಹೈಕೋರ್ಟ್ ನ್ಯಾಯಾಮೂರ್ತಿಯಾಗಿದ್ದಾಗ ಜನಪರವಾಗಿ ಕಾರ್ಯನಿರ್ವಹಿಸಿದವರು ಎಂದರು.
ಜಿ.ಕಾ.ಸೇ.ಪ್ರಾ. ಸದಸ್ಯ ಕಾರ್ಯದರ್ಶಿ ಬಸವರಾಜ ಚೇಂಗಟಿ, ತಾಪಂ ಇಒ ತಾರಾನಾಥ, ಜಿಲ್ಲಾ ವಕೀಲರ ಸಂಘದ ಅಧ್ಯಕ್ಷ ಎಸ್.ಎಸ್.ವೆಂಕಟೇಶ್ ಹಾಜರಿದ್ದರು. ವಕೀಲ ಜಗದೀಶ್ ನಿರೂಪಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Fraud: ಸಿಬಿಐ ಹೆಸರಲ್ಲಿ ಕಾರ್ಕಳದ ಮಹಿಳೆಗೆ 24 ಲಕ್ಷ ರೂ. ವಂಚನೆ
Dandeli: ಅಪ್ರಾಪ್ತ ಬಾಲಕಿಯ ಮೇಲೆ ಲೈಂಗಿಕ ಕಿರುಕುಳ : ಪೋಕ್ಸೋ ಪ್ರಕರಣದಡಿ ಓರ್ವನ ಬಂಧನ
Naxalites ಶರಣಾಗತಿಯಲ್ಲಿ ಟ್ವಿಸ್ಟ್; ಚಿಕ್ಕಮಗಳೂರು ಬದಲು ಬೆಂಗಳೂರಿನಲ್ಲಿ ನಕ್ಸಲರ ಶರಣಾಗತಿ
Belagavi: ತಹಶೀಲ್ದಾರ್ ಮನೆ ಮೇಲೆ ಲೋಕಾಯುಕ್ತ ದಾಳಿ
Bengaluru: ಪಾಲುದಾರನ ಕಿರುಕುಳ: ಉದ್ಯಮಿ ಆತ್ಮಹತ್ಯೆ
MUST WATCH
ಫೋನ್ ಪೇ ಹೆಸರಿನಲ್ಲಿ ಹೇಗೆಲ್ಲಾ ಮೋಸ ಮಾಡುತ್ತಾರೆ ನೋಡಿ !
ನಿಮ್ಮ ತೋಟಕ್ಕೆ ಬೇಕಾದ ಗೊಬ್ಬರವನ್ನು ನೀವೇ ತಯಾರಿಸಬೇಕೆ ? ಇಲ್ಲಿದೆ ಸರಳ ಉಪಾಯ
ಮೈಲಾರಲಿಂಗ ಸ್ವಾಮಿ ಹೆಸರಿನಲ್ಲಿ ಒಂಟಿ ಮನೆಗಳೇ ಇವರ ಟಾರ್ಗೆಟ್ |
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಹೊಸ ಸೇರ್ಪಡೆ
Fraud: ಸಿಬಿಐ ಹೆಸರಲ್ಲಿ ಕಾರ್ಕಳದ ಮಹಿಳೆಗೆ 24 ಲಕ್ಷ ರೂ. ವಂಚನೆ
Caught On Cam!;ಕೇರಳದ ಉತ್ಸವದ ಆನೆ ರೌದ್ರಾವತಾರ: ಹಲವರಿಗೆ ಗಾಯ: Video
2047 ರ ವೇಳೆಗೆ ದೇಶದ 50% ಜನ ನಗರ ಪ್ರದೇಶಗಳಲ್ಲಿ ವಾಸಿಸುತ್ತಾರೆ: ಸಚಿವ ಖಟ್ಟರ್
VIDEO: ಅಪ್ಪಿಕೊಳ್ಳಲು ಬಂದ ನಿರ್ದೇಶಕನನ್ನು ತಡೆದು ಕೆನ್ನೆಗೆ ಮುತ್ತು ಕೊಟ್ಟ ನಿತ್ಯಾ ಮೆನನ್
Dandeli: ಅಪ್ರಾಪ್ತ ಬಾಲಕಿಯ ಮೇಲೆ ಲೈಂಗಿಕ ಕಿರುಕುಳ : ಪೋಕ್ಸೋ ಪ್ರಕರಣದಡಿ ಓರ್ವನ ಬಂಧನ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.