ಹುಟ್ಟು-ಸಾವು ನಮ್ಮದಲ್ಲ, ಬದುಕು ನಮ್ಮದು
ಕುಡಿತದ ಚಟ ಬಿಟ್ಟು ಹೊಸ ಜೀವನ ಕಟ್ಟಿಕೊಳ್ಳಿ: ಪ್ರಕಾಶ್‌ರಾವ್
Team Udayavani, Jul 15, 2019, 4:04 PM IST
ಚಿಕ್ಕಮಗಳೂರು: ಹಿರೇಮಗಳೂರಿನಲ್ಲಿ ಏರ್ಪಡಿಸಿದ್ದ ಮದ್ಯವರ್ಜನ ಶಿಬಿರವನ್ನು ಕನ್ನಡ ಪೂಜಾರಿ ಹಿರೇಮಗಳೂರು ಕಣ್ಣನ್ ಉದ್ಘಾಟಿಸಿದರು.
ಚಿಕ್ಕಮಗಳೂರು: ಹುಟ್ಟು, ಸಾವು ನಮ್ಮದಲ್ಲ. ಆದರೆ, ಬದುಕು ನಮ್ಮದು. ಆ ಬದುಕನ್ನು ಸಾಯಿಸಬಾರದು ಎಂದು ಕನ್ನಡದ ಪೂಜಾರಿ ಹಿರೇಮಗಳೂರು ಕಣ್ಣನ್ ಹೇಳಿದರು.
ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ, ಅಖೀಲ ಕರ್ನಾಟಕ ಜನಜಾಗೃತಿ ವೇದಿಕೆ, ರಾಜ್ಯ ಮದ್ಯಪಾನ ಸಂಯಮ ಮಂಡಳಿ, ಜಿಲ್ಲಾ ಜನಜಾಗೃತಿ ವೇದಿಕೆ ಮತ್ತತರೆ ಸಂಘ ಸಂಸ್ಥೆಗಳ ಸಹಯೋಗದಲ್ಲಿ ಹಿರೇಮಗಳೂರು ಸಂಘದ ಕಲ್ಯಾಣ ಮಂಟಪದಲ್ಲಿ ಏರ್ಪಡಿಸಿದ್ದ ಮದ್ಯವರ್ಜನ ಶಿಬಿರ ಉದ್ಘಾಟಿಸಿ ಮಾತನಾಡಿದ ಅವರು, ಇಲ್ಲಿಯ ತನಕ ಹೆಂಡದ ಸೀಸೆ ಹಿಡಿಯುತ್ತಿದ್ದ ಕೈಗಳು ಇನ್ನು ಮುಂದೆ ಹೆಂಡತಿ ಕೈ ಹಿಡಿದು ಸಂಸಾರ ಮುನ್ನಡೆಸಬೇಕು. ಮಕ್ಕಳನ್ನು ಗುರಿ ಮುಟ್ಟಿಸಬೇಕು. ಮದ್ಯ ಸೇವನೆ ಬಿಡುವುದು ಕಷ್ಟವೇನಲ್ಲ. ಇಷ್ಟಪಟ್ಟು ಬಿಟ್ಟರೆ ಎಲ್ಲವೂ ಸಾಧ್ಯ. ಕುಟುಂಬವನ್ನು ಚೆನ್ನಾಗಿ ಇಟ್ಟುಕೊಳ್ಳಿ ಬದುಕು ಹಸನ್ಮುಖವಾಗಿರಲಿ. ತಾಳ ತಪ್ಪಿದರೆ ಸಂಗೀತ ಕೆಡುತ್ತದೆ. ತಾಳ್ಮೆ ತಪ್ಪಿದರೆ ಸಂಸಾರ ಕೆಡುತ್ತದೆ. ಈ ಹಿನ್ನೆಲೆಯಲ್ಲಿ ಎಲ್ಲವನ್ನೂ ಸರಿದೂಗಿಸಿಕೊಂಡು ಮುಂದೆ ಹೋಗಿ. ಮತ್ತೆ ಯಾವುದೇ ಕಾರಣಕ್ಕೂ ದುಶ್ಚಟಕ್ಕೆ ಬಲಿಯಾಗದಿರಿ ಎಂದು ಶಿಬಿರಾರ್ಥಿಗಳಿಗೆ ಮದ್ಯ ವರ್ಜನದ ಬಗ್ಗೆ ಪ್ರಮಾಣ ವಚನ ಬೋಧಿಸಿದರು.
ಗ್ರಾಮಾಭಿವೃದ್ಧಿ ಯೋಜನೆಯ ನಿರ್ದೇಶಕ ಪ್ರಕಾಶ್‌ರಾವ್ ಮಾತನಾಡಿ, ಧರ್ಮಸ್ಥಳ ಗ್ರಾಮಾಭಿವೃದ್ಧಿಯಿಂದ ಇಲ್ಲಿಯವರೆಗೆ 1368 ಮದ್ಯ ವರ್ಜನ ಶಿಬಿರಗಳು ನಡೆದಿವೆ. ಒಂದೊಂದು ಶಿಬಿರದಲ್ಲಿ 50 ರಿಂದ 60 ಮಂದಿ ಭಾಗವಹಿಸಿದ್ದಾರೆ. ಒಬ್ಬೊಬ್ಬರು ಮದ್ಯಕ್ಕಾಗಿ ಒಂದು ದಿನಕ್ಕೆ ಕನಿಷ್ಠ 100 ರೂ. ವಿನಿಯೋಗಿಸಿದ್ದು ಇಲ್ಲಿಯವರೆಗೆ ಆರೇಳು ಕೋಟಿ ರೂ. ಗಳಾಗುತ್ತವೆ. ದೇಶದಲ್ಲಿ ಕುಡಿಯಲಿಕ್ಕೆ ಖರ್ಚು ಮಾಡುವ ಹಣ ಲೆಕ್ಕ ಹಾಕಿದರೆ ದೇಶವನ್ನು ಬಡತನ ಮುಕ್ತವಾಗಿ ಮಾಡಬಹುದೇನೋ ಎಂದು ಹೇಳಿದರು.
ಗ್ರಾಮೀಣ ಭಾಗದಲ್ಲಿ ಮದ್ಯ ಸೇವನೆ ಚಟಕ್ಕೆ ಬಿದ್ದು ಅನೇಕ ಕುಟುಂಬಗಳು ಇಂದಿಗೂ ಬಡತನ ಅನುಭವಿಸುತ್ತಿವೆ. ಕುಡಿತದಿಂದ ಹೊರಬಂದು ನವ ಜೀವನ ಕಟ್ಟಿಕೊಳ್ಳಿ ಎಂದು ಸಲಹೆ ನೀಡಿದರು.
ಪೊಲೀಸ್ ಅಧಿಕಾರಿ ರಕ್ಷಿತ್ ಮಾತನಾಡಿ, ಮದ್ಯವ್ಯಸನದಿಂದ ಆರ್ಥಿಕ ಸಂಕಷ್ಟ ಎದುರಾಗುತ್ತದೆ. ಸಾಮಾಜಿಕ ತುಳಿತಕ್ಕೆ ಒಳಗಾಗಬೇಕಾಗುತ್ತದೆ. ಜತೆಗೆ ದಿನದಿಂದ ದಿನಕ್ಕೆ ಆರೋಗ್ಯವೂ ಕೂಡ ಸಂಪೂರ್ಣ ಹದಗೆಡುತ್ತದೆ. ಈ ಹಿನ್ನೆಲೆಯಲ್ಲಿ ಮತ್ತೆ ಮದ್ಯದ ಕಡೆ ಮುಖ ಮಾಡದೆ ಹೊಸ ಜೀವನ ಕಂಡುಕೊಳ್ಳಬೇಕು ಎಂದು ಶಿಬಿರಾರ್ಥಿಗಳಿಗೆ ಸಲಹೆ ನೀಡಿದರು.
ಶಿಬಿರ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಹಸನ್‌ಬಾವ ಅಧ್ಯಕ್ಷತೆ ವಹಿಸಿದ್ದರು. ಕಸ್ತೂರಿ ಬಾ ಸದನದ ಕೌಟುಂಬಿಕ ಸಲಹಾ ಕೇಂದ್ರದ ಮೋಹಿನಿ ಸಿದ್ದೇಗೌಡ, ಜನಜಾಗೃತಿ ವೇದಿಕೆಯ ತೇಗೂರು ಜಗದೀಶ್, ನಿವೃತ್ತ ಸರ್ಜನ್ ಡಾ.ದೊಡ್ಡಮಲ್ಲಪ್ಪ, ಗ್ರಾಮಾಭಿವೃದ್ಧಿ ಯೋಜನೆಯ ಸಂಚಾಲಕಿ ಸುನಿತಾಪ್ರಭು ಮತ್ತಿತರರು ಹಾಜರಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Udupi: ಯುವ ಗೀತೋತ್ಸವದಲ್ಲಿ ವಿದ್ಯಾರ್ಥಿಗಳಿಗೆ ಕಾರ್ಯಾಗಾರ
Udupi: ಗೀತಾರ್ಥ ಚಿಂತನೆ 133: ಜವಾಬ್ದಾರಿಯೊಂದಿಗೆ ಅಭಿಮಾನಶೂನ್ಯತೆ ಅತಿಸೂಕ್ಷ್ಮ
Mandya: ಕನ್ನಡ ಹಬ್ಬಕ್ಕೆ ಏಳು ಲಕ್ಷಕ್ಕೂ ಅಧಿಕ ಜನರ ಭೇಟಿ
Kannada Sahitya Sammelana: ವಿದೇಶದಲ್ಲೂ ಸಮ್ಮೇಳನ ನಡೆಯಲಿ: ಹಕ್ಕೊತ್ತಾಯ
H.D. Kumaraswamy: 15,000 ಕೋಟಿ ರೂ. ವೆಚ್ಚದಲ್ಲಿ ಭದ್ರಾವತಿ ಕಬ್ಬಿಣ ಕಾರ್ಖಾನೆಗೆ ಮರುಜೀವ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.