ಜನತೆಗೆ ಸಂವಿಧಾನದ ಅರಿವು ಮೂಡಲಿ: ನ್ಯಾ| ನಾಗಮೋಹನದಾಸ್
ಉಪನ್ಯಾಸ ಕಾರ್ಯಕ್ರಮದಲ್ಲಿ ಹೈಕೋರ್ಟ್ ನಿವೃತ್ತ ನ್ಯಾಯಮೂರ್ತಿ ಎಚ್.ಎಂ.ನಾಗಮೋಹನದಾಸ್ ಅಭಿಮತ
Team Udayavani, Jun 28, 2019, 5:29 PM IST
ಚಿಕ್ಕಮಗಳೂರು: ನಗರದಲ್ಲಿ ನಡೆದ 'ಸಂವಿಧಾನ ಓದು' ಉಪನ್ಯಾಸ ಕಾರ್ಯಕ್ರಮವನ್ನು ಹೈಕೋರ್ಟ್ ನಿವೃತ್ತ ನ್ಯಾಯಮೂರ್ತಿ ಎಚ್.ಎಂ.ನಾಗಮೋಹನದಾಸ್ ಉದ್ಘಾಟಿಸಿದರು.
ಚಿಕ್ಕಮಗಳೂರು: ದೇಶಕ್ಕೆ ಸ್ವಾತಂತ್ರ್ಯ ಬಂದು 70 ವರ್ಷಗಳಾದರೂ ಸಾಕಷ್ಟು ಮಂದಿಗೆ ಕಾನೂನು ಅರಿವು ಮೂಡಿಲ್ಲ. ಸಾಕ್ಷರತೆ ಬೆಳೆದಿದ್ದರೂ ಜನತೆ ಕಾನೂನು ಸಾಕ್ಷರರಾಗಿಲ್ಲ. ಈ ಹಿನ್ನೆಲೆಯಲ್ಲಿ ಸಂವಿಧಾನದ ಅರಿವು ಮೂಡಬೇಕು. ಹಾಗಾಗಿ, ಅದನ್ನು ಓದಬೇಕೆಂದು ಹೈಕೋರ್ಟ್ ನಿವೃತ್ತ ನ್ಯಾಯಮೂರ್ತಿ ಎಚ್.ಎಂ.ನಾಗಮೋಹನದಾಸ್ ಹೇಳಿದರು.
ನಗರದ ಮಲೆನಾಡು ವಿದ್ಯಾಸಂಸ್ಥೆ ಸಭಾಂಗಣದಲ್ಲಿ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಜಿಲ್ಲಾಡಳಿತ, ಜಿಲ್ಲಾ ವಕೀಲರ ಸಂಘ, ಆರಕ್ಷಕ ಇಲಾಖೆ, ಶಿಕ್ಷಣ ಮತ್ತು ವಾರ್ತಾ ಇಲಾಖೆ ಹಾಗೂ ಮಲೆನಾಡು ವಿದ್ಯಾ ಸಂಸ್ಥೆ ಆಶ್ರಯದಲ್ಲಿ ಗುರುವಾರ ನಡೆದ ‘ಸಂವಿಧಾನ ಓದು’ ಉಪನ್ಯಾಸ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ದೇಶದಲ್ಲಿ ಸ್ವಾತಂತ್ರ್ಯ ಪೂರ್ವದಲ್ಲಿ ಕಾಶ್ಮೀರದಿಂದ ಕನ್ಯಾಕುಮಾರಿ ವರೆಗೆ ಒಂದೂ ಆಡಳಿತವಿರಲಿಲ್ಲ. 600 ಮಂದಿ ರಾಜಮಹಾರಾಜರು, ಸಾಮಂತರು ಇದ್ದರು ಎಂದು ಹೇಳಿದರು.
ನಿಜವಾದ ಸ್ವತಂತ್ರ ಭಾರತ ಹಾಗೂ ಅದರ ರಾಜಕೀಯ ಮತ್ತು ಆಡಳಿತ ವ್ಯವಸ್ಥೆ ಹೊಂದಿರುವ ಭೂ ಪ್ರದೇಶ ನಿರ್ಮಾಣವಾದುದು ಸ್ವಾತಂತ್ರ್ಯ ಬಂದ ನಂತರ. ಸ್ವಾತಂತ್ರ್ಯ ಗಳಿಸಿದ ಮೇಲೆ ಕಾರ್ಯಾಂಗ ವ್ಯವಸ್ಥೆ, ಶಾಸಕಾಂಗ ವ್ಯವಸ್ಥೆ ಮತ್ತು ನ್ಯಾಯಾಂಗ ವ್ಯವಸ್ಥೆಯನ್ನು ಕಟ್ಟಲಾಯಿತು. ಅದರಲ್ಲಿ ಎಲ್ಲರೂ ಭಾಗವಹಿಸಲು ಸಾಧ್ಯವಾದುದು ಸಂವಿಧಾನದಿಂದ ಎಂದು ತಿಳಿಸಿದರು.
ಸಂವಿಧಾನದ ಕೊಡುಗೆಗಳನ್ನು ವಿವರಿಸಿದ ದಾಸ್ ಅವರು, ಶೇ.20ರಷ್ಟಿದ್ದ ಸಾಕ್ಷರರ ಸಂಖ್ಯೆ ಶೇ.80 ಕ್ಕೆ ಏರಿತು. 282ದಶಲಕ್ಷ ಟನ್ ಆಹಾರ ಉತ್ಪಾದನೆಯಾಗುತ್ತಿದೆ. ಶೇ.70ರಷ್ಟಿದ್ದ ಬಡತನ ರೇಖೆ ಒಳಗಿನವರ ಸಂಖ್ಯೆ ಇಂದು ಶೇ.21ಕ್ಕೆ ಇಳಿದಿದೆ. ಮಹಿಳೆಯರು, ದಲಿತರು, ಬುಡಕಟ್ಟು ಜನಾಂಗದವರಿಗೂ ಒಂದು ಉತ್ತಮ ಜೀವನ ದೊರೆತಿದೆ. ಇವೆಲ್ಲವೂ ಸಂವಿಧಾನದಿಂದ ಎಂದು ವಿವರಿಸಿದರು.
ದೇಶದಲ್ಲಿ ತಾಂತ್ರಿಕತೆ ಇಂದು ಬೆಳೆದಿದ್ದರೆ ಅದಕ್ಕೂ ಸಂವಿಧಾನವೇ ಕಾರಣ. ಈ ದೇಶದಲ್ಲಿ ಜಾತಿ ವ್ಯವಸ್ಥೆ ಇದೆ. ಜಾತಿ ಹಾಗೂ ವೃತ್ತಿಯನ್ನು ಬದಲಿಸುವ ಹಾಗಿಲ್ಲ. ವೃತ್ತಿ ವಂಶಪಾರಂಪರ್ಯವಾಗಿಬಿಟ್ಟಿದೆ. ಆದರೆ, ಸಂವಿಧಾನದಿಂದ ಇದೆಲ್ಲವೂ ಬದಲಾಗಿದೆ. ಪಾದರಕ್ಷೆ ತಯಾರಿಸುವ ವರ್ಗದ ವ್ಯಕ್ತಿಯೊಬ್ಬ ದೇಶದ ಅಧ್ಯಕ್ಷರಾಗಿದ್ದಾರೆ. ಅತೀ ಹಿಂದುಳಿದ ವ್ಯಕ್ತಿ ಪ್ರಧಾನ ಮಂತ್ರಿಯಾಗಿದ್ದಾರೆ. ಇದೆಲ್ಲ ಸಂವಿಧಾನದಿಂದ ಸಾಧ್ಯವಾಯಿತೆಂದು ತಿಳಿಸಿದರು.
ಆಯಾಯ ಧರ್ಮದವರಿಗೆ ಅವರದೇ ಆದ ಧರ್ಮಗ್ರಂಥಗಳಿವೆ. ಆದರೆ, ದೇಶದ ಎಲ್ಲರಿಗೂ ಇರುವ ಮಹಾಗ್ರಂಥ ಭಾರತದ ಸಂವಿಧಾನ. ಅದನ್ನು ಓದಿದರೆ ಅರ್ಥವಾಗುವುದಿಲ್ಲ. ಅದೊಂದು ಕಾರ್ಯಕ್ರಮ. ಪ್ರಜಾಪ್ರಭುತ್ವ ವ್ಯವಸ್ಥೆ ನಿರ್ಮಿಸಿದೆ. ಕೃಷಿ, ಕೈಗಾರಿಕೆ ಬೆಳೆಯಲು, ಅನಕ್ಷರತೆ, ಕಂದಾಚಾರ ಹೋಗಲಾಡಿಸಲು ಸಂವಿಧಾನವೇ ಕಾರಣವಾಗಿದೆ. ಸಂವಿಧಾನ ಕೇವಲ ರಾಜಕೀಯ ವ್ಯವಸ್ಥೆಯಲ್ಲ. ಅದು ಸಾಮಾಜಿಕ ಹಾಗೂ ಆರ್ಥಿಕ ವ್ಯವಸ್ಥೆಯನ್ನು ನೀಡಿದೆ ಎಂದು ವಿವರಿಸಿದರು.
ದೇಶವನ್ನು ಮೊದಲು ಸಂಕ್ಷಿಪ್ತವಾಗಿಯಾದರೂ ಅರ್ಥ ಮಾಡಿಕೊಳ್ಳಬೇಕು. ಇಲ್ಲಿನ ಇತಿಹಾಸ, ಜನ, ಆರ್ಥಿಕ ಸಂಬಂಧ, ಧಾರ್ಮಿಕತೆ, ಜಾತಿ, ಸಾಮಾಜಿಕ ಸಂಬಂಧ, ನೈತಿಕ ಹಾಗೂ ಸಾಂಸ್ಕೃತಿಕ ಮೌಲ್ಯ, ಭಾಷೆಯ ಬಗ್ಗೆ ತಿಳಿದರೆ ದೇಶ ಅರ್ಥವಾಗುತ್ತದೆ. ಅವುಗಳ ಬಗ್ಗೆ ಕನಿಷ್ಠ ತಿಳಿವಳಿಕೆ ಇರಬೇಕೆಂದು ವಿದ್ಯಾರ್ಥಿಗಳಿಗೆ ತಿಳಿಹೇಳಿದರು.
ದೇಶದಲ್ಲಿ ಶುದ್ಧ ಮಾನವ ಪ್ರಭೇದವಿಲ್ಲ. ಹಾಗೆಯೇ, ಶುದ್ಧ ಭಾಷೆಯೂ ಇಲ್ಲ. ಶುದ್ಧ ರಾಷ್ಟ್ರೀಯತೆಯನ್ನು ಕಾಣಲಾಗದು. ಇವೆಲ್ಲವೂ ಕೂಡ ಅಂತರ್ ಸಂಬಂಧಗಳನ್ನು ಹೊಂದಿವೆ. ಹಾಗಾಗಿಯೇ ಬಹುತ್ವದ ಸಂಸ್ಕೃತಿಯನ್ನು ಸಂವಿಧಾನದ ಮೂಲಕ ರಕ್ಷಿಸಲಾಗಿದೆ ಎಂದರು.
ಹಿಂದೆ ಪ್ರತಿಯೊಂದು ಗ್ರಾಮ ಸ್ವಾವಲಂಬಿಯಾಗಿತ್ತು. ಆದರೆ ಇಂದು ಜಾಗತೀಕರಣ ಮನುಷ್ಯನ ಮನಸ್ಸಿನ ಮೇಲೂ ಪರಿಣಾಮ ಬೀರಿದೆ. ಬಹುರಾಷ್ಟ್ರೀಯ ಕಂಪೆನಿಗಳು ಕೇವಲ ಮಾರುಕಟ್ಟೆಯನ್ನು ಆಳುತ್ತಿಲ್ಲ. ನಮ್ಮ ಮನಸ್ಸನ್ನು ಆಳುತ್ತಿವೆ. ಈ ಹಿನ್ನೆಲೆಯಲ್ಲಿ ಕಲ್ಯಾಣ ರಾಜ್ಯ ಸ್ಥಾಪಿಸುವ ಜವಾಬ್ದಾರಿ ಸರ್ಕಾರದ್ದು, ಪ್ರತಿ ವ್ಯಕ್ತಿಗೆ ಅನ್ನ, ಬಟ್ಟೆ, ಶಿಕ್ಷಣ, ಉದ್ಯೋಗ, ಆರೋಗ್ಯವನ್ನು ನೀಡಬೇಕು. ಅದನ್ನು ಸರ್ಕಾರಗಳು ಮರೆತಿವೆ ಅನಿಸುತ್ತಿದೆ ಎಂದು ವಿಷಾದಿಸಿದರು.
ಕಾರ್ಯಕ್ರಮದಲ್ಲಿ ಪ್ರಾಸ್ತಾವಿಕವಾಗಿ ಮಾತನಾಡಿದ ಪ್ರಧಾನ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಧೀಶ ಉಮೇಶ್ ಎಂ.ಅಡಿಗ, ಸಂವಿಧಾನ ಬಿಟ್ಟು ಯೋಚಿಸಲು ಸಾಧ್ಯವಿಲ್ಲ. ಅದು ಕೇವಲ ನ್ಯಾಯಾಧೀಶರಿಗೆ, ವಕೀಲರಿಗೆ ಮಾತ್ರವಲ್ಲ. ಎಲ್ಲರಿಗೂ ಅದರ ಅರಿವಿರಬೇಕೆಂಬ ಉದ್ದೇಶದಿಂದ ನಿವೃತ್ತ ನ್ಯಾಯಮೂರ್ತಿ ನಾಗಮೋಹನದಾಸ್ ಈ ಅಭಿಯಾನ ಕೈಗೊಂಡಿದ್ದಾರೆ ಎಂದರು. ರಾಜಶೇಖರ ಕಿಗ್ಗಾ ‘ಸಂವಿಧಾನ ಓದು’ ಕೃತಿ ಬಗ್ಗೆ ಮಾತನಾಡಿದರು.
ಜಿ.ಕ.ಸೆ.ಪ್ರಾ. ಸದಸ್ಯ ಕಾರ್ಯದರ್ಶಿ ಬಸವರಾಜ ಚೇಂಗಟಿ ಸ್ವಾಗತಿಸಿದರು. ಎಂಇಎಸ್ ಗೌರವ ಕಾರ್ಯದರ್ಶಿ ಡಾ.ಡಿ.ಎಲ್.ವಿಜಯಕುಮಾರ್ ಅಧ್ಯಕ್ಷತೆ ವಹಿಸಿದ್ದರು. ಪದವಿ ಪೂರ್ವ ಕಾಲೇಜುಗಳ ಉಪನಿರ್ದೇಶಕ ಡಿ.ಎಸ್.ದೇವರಾಜು, ಎಂಇಎಸ್ ಆಡಳಿತಾಧಿಕಾರಿ ಶಾಂತಕುಮಾರಿ, ಜಿಲ್ಲಾ ವಕೀಲರ ಸಂಘದ ಅಧ್ಯಕ್ಷ ಎಸ್.ಎಸ್. ವೆಂಕಟೇಶ್, ಕಾಲೇಜು ಪ್ರಾಚಾರ್ಯ ವಿಷ್ಣುವರ್ಧನ, ನ್ಯಾಯವಾದಿ ಸುರೇಶ್ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Growers Meet: ಕಾಫಿಗೆ ಜಗತ್ತಿನೆಲ್ಲೆಡೆ ಮಾರುಕಟ್ಟೆ ಸೃಷ್ಟಿ ಅಗತ್ಯ: ಪಿಯೂಷ್ ಗೋಯಲ್
Congress Government: ಸಿದ್ದರಾಮಯ್ಯ ಅವಧಿಯಲ್ಲೇ ದ್ವೇಷದ ರಾಜಕಾರಣ ಬೇಸರ ತಂದಿದೆ: ಸೋಮಣ್ಣ
Shyam Benegal; ಸಾಮಾಜಿಕ ಕಳಕಳಿ ಚಿತ್ರಗಳ ಪ್ರವರ್ತಕ ವಿಧಿವಶ: ಉಡುಪಿಯ ಬೆನಗಲ್ ಮೂಲದವರು
Udupi; ಗೀತಾರ್ಥ ಚಿಂತನೆ 134: ಮನುಷ್ಯ ದೇಹದೊಳಗೆ ಯಾವ ಜೀವವೂ ಇರಬಹುದು
Udupi- Mangaluru; ವರ್ಷಾಂತ್ಯಕ್ಕೆ ಹೆಚ್ಚಿದ ಪ್ರವಾಸಿಗರು: ಟ್ರಾಫಿಕ್ ಜಾಮ್
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Intervention: ಗೃಹ ಇಲಾಖೆಯಲ್ಲಿ ಯಾರ ಹಸ್ತಕ್ಷೇಪವೂ ಇಲ್ಲ: ಸಚಿವ ಪರಮೇಶ್ವರ್
Encounter: ಉತ್ತರಪ್ರದೇಶದಲ್ಲಿ ಎನ್‌ಕೌಂಟರ್: 3 ಶಂಕಿತ ಖಲಿಸ್ಥಾನಿ ಉಗ್ರರ ಹತ್ಯೆ
Investment: 9.8 ಸಾವಿರ ಕೋಟಿ ರೂ. 9 ಯೋಜನೆಗೆ ಒಪ್ಪಿಗೆ: ಸಿಎಂ ಸಿದ್ದರಾಮಯ್ಯ
Growers Meet: ಕಾಫಿಗೆ ಜಗತ್ತಿನೆಲ್ಲೆಡೆ ಮಾರುಕಟ್ಟೆ ಸೃಷ್ಟಿ ಅಗತ್ಯ: ಪಿಯೂಷ್ ಗೋಯಲ್
Congress Government: ಸಿದ್ದರಾಮಯ್ಯ ಅವಧಿಯಲ್ಲೇ ದ್ವೇಷದ ರಾಜಕಾರಣ ಬೇಸರ ತಂದಿದೆ: ಸೋಮಣ್ಣ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.