ಪಂಚಶೀಲ ತತ್ತ್ವಗಳು ಮಹಾವೀರರ ಕೊಡುಗೆ

ಜಗತ್ತಿಗೆ ಉತ್ತಮ ಧರ್ಮ ಪ್ರಚುರಪಡಿಸಿದ ಮಹಾವೀರ: ಗೌತಮ್‌ಚಂದ್‌ ಸಿಯಾಲ್‌

Team Udayavani, Apr 18, 2019, 4:14 PM IST

18-April-25

ಚಿಕ್ಕಮಗಳೂರು: ನಗರದ ಶ್ರೀಜೈನ ಶ್ವೇತಾಂಬರ ತೇರಾಪಂಥ್‌ ಭವನದಲ್ಲಿ ಶ್ರೀ ಜೈನ ಸಂಘದ ನೇತೃತ್ವದಲ್ಲಿ ಭಗವಾನ್‌ ಮಹಾವೀರರ ಜಯಂತಿ ಆಚರಿಸಲಾಯಿತು.

ಚಿಕ್ಕಮಗಳೂರು: ಪಂಚಶೀಲತಣ್ತೀಗಳನ್ನು ಬೋಧಿಸಿದ ಭಗವಾನ್‌ ಮಹಾವೀರ ಜಗತ್ತಿನಲ್ಲಿ ಶಾಂತಿಸ್ಥಾಪನೆಗಾಗಿ ಪ್ರಯತ್ನಿಸಿದರು ಎಂದು ಜೈನ ಸಂಘದ ಅಧ್ಯಕ್ಷ ಗೌತಮಚಂದ್‌ ಸಿಯಾಲ್‌ ಅಭಿಪ್ರಾಯಪಟ್ಟರು.. ನಗರದ ಶ್ರೀ ಜೈನ ಶ್ವೇತಾಂಬರ ತೇರಪಂಥ್‌ ಭವನದಲ್ಲಿ ಶ್ರೀ ಜೈನ ಸಂಘದ ನೇತೃತ್ವದಲ್ಲಿ ವಿವಿಧ
ಜೈನ ಪರಿವಾರದ ಸಂಘಟನೆಗಳು ಬುಧವಾರ ಆಯೋಜಿಸಿದ್ದ ಭಗವಾನ್‌ ಮಹಾವೀರರ ಜಯಂತಿ ಉದ್ಘಾಟಿಸಿ ಅವರು ಮಾತನಾಡಿದರು.

ಜೈನ ಪರಂಪರೆಯ 24ನೇ ತೀರ್ಥಂಕರರಾದ ಮಹಾವೀರರೆ ಕೊನೆಯ ತೀರ್ಥಂಕರರು. ಬಿಹಾರದ ಕುಂಡಲಪುರದ ರಾಜಪರಿವಾರದಲ್ಲಿ ಸಿದ್ಧಾರ್ಥ ಮತ್ತು ಕುಶಲಾದೇವಿ ದಂಪತಿಗಳ ಪುತ್ರನಾಗಿ ಜನನ. ವರ್ಧಮಾನ ಎಂಬ ನಾಮಕರಣ ಅರಮನೆಯಲ್ಲಿ ಬೆಳೆದರೂ ಜನಸಾಮಾನ್ಯರ ಬಗ್ಗೆ ಅತೀವ ಕಾಳಜಿ
ತುಡಿತ ಹೊಂದಿದ ಯುವಕ ಸತ್ವಾನ್ವೇಷಣೆಗಾಗಿ ಮನೆಬಿಟ್ಟು ಹೊರಬಂದು ಸುತ್ತಾಡಿದ. 12ವರ್ಷಗಳ ಕಾಲ ಕಠಿಣ ತಪಸ್ಸನ್ನು ಮಾಡಿ ಪ್ರೇಮ ಮತ್ತು ಅಹಿಂಸೆಯ ಮಹತ್ವವನ್ನು ಕಂಡುಕೊಂಡರು. ಕೊನೆಗೆ ಮಹಾವೀರರಾಗಿ ಜಗತ್ತಿಗೆ ಉತ್ತಮ ಧರ್ಮವನ್ನು ಪ್ರಚುರಪಡಿಸಿದರು ಎಂದು ತಿಳಿಸಿದರು.

ಅಹಿಂಸೆ, ಸತ್ಯ, ಅಚೌರ್ಯ, ಬ್ರಹ್ಮಚರ್ಯ ಮತ್ತು ಪರಿಗ್ರಹ ಎಂಬ ಪಂಚಶೀಲತತ್ತ್ವ ಗಳನ್ನು ಸಮರ್ಥವಾಗಿ ಪರಿಪಾಲಿಸಿ ಜನರಿಗೆ ಬೋಧಿಸಿದ ಭಗವಾನ್‌ ಮಹಾವೀರರು ಜಗತ್‌ ವಂದನೀಯರಾಗಿದ್ದಾರೆ. ಜಗತ್ತಿನ ವಿವಿಧೆಡೆ ಇಂದು ಮಹಾವೀರರ ಸ್ಮರಣೆ ನಡೆದಿದೆ. ಭಾರತ ಸರ್ಕಾರದ ಜೊತೆಗೆ ದೇಶದ ವಿವಿಧ
ಸರ್ಕಾರಗಳು ಪುಣ್ಯಪುರುಷನ ತತ್ವ$¤ಸಿದ್ಧಾಂತಗಳನ್ನು ಕೊಂಡಾಡುತ್ತಿವೆ ಎಂದರು.

ವಿಶೇಷ ಉಪನ್ಯಾಸ ನೀಡಿದ ದಿಗಂಬರ ಮಂಡಳಿಯ ನಿಶ್ಚಲಾ, ಕ್ರಿಸ್ತ ಪೂರ್ವ 599ರಲ್ಲಿ ಕುಂಡಲಪುರದ ಬಂಗಾರ ಜನಿಸಿತು. ಮೂರು
ಲೋಕವನ್ನು ಮೂರು ಕಾಲವನ್ನು ಕನ್ನಡಿಯಂತೆ ಕಾಣುತ್ತಿದ್ದ ಚೈತ್ರದ ಚಿಗುರು ಬಾಲಕನಿಗೆ ಸನ್ಮತಿ ಎಂದು ಅರಮನೆಯಲ್ಲಿ ನಾಮಕರಣ ಮಾಡಲಾಯಿತು.

ಬಾಲಕನ ಗುಣಲಕ್ಷಣಗಳಿಗೆ ಅನುಗುಣವಾಗಿ ವೀರ, ಮಹಾವೀರ, ವರ್ಧಮಾನ ಎಂತೆಲ್ಲಾ ಕರೆಯಲಾಯಿತು. ಹತ್ತುವರ್ಷಗಳ ಬಾಲ್ಯ, ಮತ್ತೆ ಹತ್ತು ವರ್ಷಗಳ ಕೌಮಾರ್ಯ, 29ನೇ ವರ್ಷದವರೆಗೆ
ರಾಜಕುಮಾರನಾಗಿ ಬೆಳೆದವನಿಗೆ ಜನರಲ್ಲಿದ್ದ ಅಶಾಂತಿ ಅಸಮಾಧಾನಗಳು ಅಚ್ಚರಿ ಮೂಡಿಸಿತು.

ಇವಕ್ಕೆಲ್ಲಾ ರಾಗ-ದ್ವೇಷವೇ ಕಾರಣವೆಂದು ಅರಿತು ಅವುಗಳ
ಮೂಲೋತ್ಪಾಟನೆಗಾಗಿ ಆಲೋಚಿಸುತ್ತಾ ಅರಮನೆ ತೊರೆದರು ಎಂದರು.

ಕಠಿಣ ತಪಸ್ಸಿನ ನಂತರ ಪಂಚಶೀಲ ತತ್ತ್ವದಿಂದ ರಾಗದ್ವೇಷ ಗೆಲ್ಲಬಹುದೆಂದು ಪ್ರತಿಪಾದಿಸಿದರು.ಜೈನ ಧರ್ಮದ ಪಂಚವರ್ಣಗಳ ಧ್ವಜ ಮಹಾವೀರರ ಐದುತಣ್ತೀಗಳ ಸಂಕೇತವಾಗಿವೆ. ಮಾಜಿ ರಾಷ್ಟ್ರಪತಿ ಎಪಿಜೆ ಅಬ್ದುಲ್‌ ಕಲಾಂ ಅವರು ಅಪರಿಗ್ರಹದಂತೆ ಬಾಳಿದವರು. ಮಾಜಿ ಮುಖ್ಯಮಂತ್ರಿ ವೀರಪ್ಪಮೊಯ್ಲಿ ಬಾಹುಬಲಿ ಮಹಾಕಾವ್ಯ ರಚಿಸುವಾಗ ಮಾಂಸಹಾರ ತ್ಯಜಿಸಿದ್ದರೆಂದ ನಿಶ್ಚಲಾ, ಮಹಾವೀರರ ತತ್ತ್ವಗಳು
ಅನೇಕ ಮಹಾಪುರುಷರಿಗೆ ದಾರಿದೀಪವಾಯಿತು ಎಂದು ತಿಳಿಸಿದರು.

ಜೈನ ಮಹಿಳಾ ಮಂಡಳಿ ಉಪಾಧ್ಯಕ್ಷೆ ಮಂಜುಳಾ ಬನ್ಸಾಲಿ ಮಾತನಾಡಿ, ಅಜ್ಞಾನ, ಅಂಧಕಾರ ಹೋಗಲಾಡಿಸಲು ಜನ್ಮತಾಳಿದ ಮಹಾಬೆಳಕು ಮಹಾವೀರರು. ಧೀರ-ವೀರ-ಗಂಭೀರತೆಯ ಸಾಕಾರ ಮೂರ್ತಿಗಳಾಗಿದ್ದು ಅಹಿಂಸೆ ಪರೋಮ ಧರ್ಮವೆಂದು ಸಮುದಾಯಕ್ಕೆ ಅರ್ಥ ಮಾಡಿಸಿದರು ಎಂದರು.
ತೇರಾಪಂಥ್‌ ಧರ್ಮಸಂಘದ ಉಪಾಧ್ಯಕ್ಷ ಜಯಪ್ರಕಾಶ್‌ ಗಾದಿಯಾ, ತೇರಾಪಂಥ್‌ ಮಹಿಳಾ ಮಂಡಳಿ ಕಾರ್ಯದರ್ಶಿ ಕರುಣಾ ಗಾದಿಯಾ, ಜೈನ ಯುವ ಫೆಡರೇಷನ್‌ ಕಾರ್ಯದರ್ಶಿ ರಾಹುಲ್‌ ಗಾದಿಯಾ, ಸ್ಥಾನಿಕವಾಸಿ ಸಂಘದ ಅಧ್ಯಕ್ಷ ಕಾಂತಿಲಾಲ್‌ ಕಿವೇಸರಾ, ಜೈನ ಸಂಘದ ಕಾರ್ಯದರ್ಶಿ ಮಹಾವೀರನಾಹರ್‌
ಮತ್ತಿತರರು ಮಾತನಾಡಿದರು.

ಮಹಿಳಾಮಂಡಳಿ ಕಾರ್ಯದರ್ಶಿ ನರೀತಾಗಾದಿಯಾ ಕಾರ್ಯಕ್ರಮ ನಿರೂಪಿಸಿದರು. ಪುಷ್ಪಾ ಕಿವೇಸರಾ ನೇತೃತ್ವದ ತಂಡದಿಂದ ಪ್ರಾರ್ಥನೆ ನೆರವೇರಿತು. ಜೈನ ಯೂಥ್‌ ಫೆಡರೇಷನ್‌ ಅಧ್ಯಕ್ಷ ನೀರಜ್‌ ಗಾದಿಯಾ, ಜೈನ ಶ್ವೇತಾಂಬರ ಮಹಿಳಾ ಮಂಡಳಿ ಅಧ್ಯಕ್ಷೆ ಪುಷ್ಪಾಬಾಯಿ ಕಿವೇಸರಾ, ದಿಗಂಬರ ಜೈನ ಸಮಾಜದ ಇಂದೂಮತಿ, ಮೂರ್ತಿ ಪೂಜಕ ಸಂಘದ ಸಜ್ಜನ್‌ಪಿರಾಗಲ್‌ ಮತ್ತಿತರ ಪದಾಧಿಕಾರಿಗಳು ಜೈನ ಸಂಘದ ಅಧ್ಯಕ್ಷ ಗೌತಮಚಂದ್‌ ಸಿಯಾಲ್‌ ನೇತೃತ್ವದಲ್ಲಿ ಮಹಾವೀರರ ಭಾವಚಿತ್ರಕ್ಕೆ ಪುಷ್ಪನಮನ
ಸಲ್ಲಿಸಿದರು.

ಸಮಾರಂಭದ ಮುನ್ನ ಶ್ವೇತವಸ್ತ್ರಧಾರಿಗಳಾದ ಜೈನ ಪರಿವಾರದ ವಿವಿಧ ಸಂಘ ಸಂಸ್ಥೆಯ ಸದಸ್ಯರು ಮಹಾವೀರರ ಅಲಂಕೃತ ಭಾವಚಿತ್ರದೊಂದಿಗೆ ಶೋಭಾಯಾತ್ರೆ ನಡೆಸಿದರು. ತೇರಾಪಂಥ್‌
ಭವನದಿಂದ ಹೊರಟ ಮೆರವಣಿಗೆ ರತ್ನಗಿರಿರಸ್ತೆ, ಹನುಮಂತಪ್ಪ ವೃತ್ತ, ಎಂ.ಜಿ.ರಸೆ¤, ಆಜಾದ್‌ ವೃತ್ತ, ನಾಯ್ಡುಬೀದಿ, ಗುರುನಾಥ್‌ ವೃತ್ತದ ಮೂಲಕ ಪುನಃ ಭವನ ತಲುಪಿತು.

ಟಾಪ್ ನ್ಯೂಸ್

Launch of Bharat Brand-2: Wheat flour at 30, kg. 34 for rice

Bharat Brand: ಭಾರತ್‌ ಬ್ರ್ಯಾಂಡ್‌-2ಗೆ ಚಾಲನೆ: 30ಕ್ಕೆ ಗೋಧಿ ಹಿಟ್ಟು, ಕೆ.ಜಿ.ಅಕ್ಕಿಗೆ 34

Famous Moo deng predicted Victory for Trump

US Polls; ಟ್ರಂಪ್‌ಗೆ ಗೆಲುವು: ಭವಿಷ್ಯ ನುಡಿದ ಪ್ರಸಿದ್ಧ ನೀರಾನೆ ಮೂಡೆಂಗ್‌

Dattapeeta

Chikkamagaluru: ನ.9ರಿಂದ 11ರ ತನಕ ದತ್ತಪೀಠಕ್ಕೆ ಪ್ರವಾಸಿಗರಿಗೆ ನಿರ್ಬಂಧ

Edaneer-swmij

Attack On Car: ಎಡನೀರು ಸ್ವಾಮೀಜಿ ಕಾರಿನ ಮೇಲೆ ದಾಳಿ: ಕಸಾಪ, ಬ್ರಾಹ್ಮಣ ಮಹಾಸಭಾ ಖಂಡನೆ

vidhana-Soudha

Covid Scam: ತನಿಖೆಗೆ ಎಸ್‌ಐಟಿ?: ಬಿಜೆಪಿಯ ಇಕ್ಕಟ್ಟಿಗೆ ಸಿಲುಕಿಸಲು ಸಿದ್ಧತೆ

Constable-Hsn

Hassan: ವಿವಾಹ ಆಮಂತ್ರಣ ಪತ್ರಿಕೆ ಹಂಚಿ ಮನೆಗೆ ಮರಳುತ್ತಿದ್ದ ಪೊಲೀಸ್‌ ಬರ್ಬರ ಹ*ತ್ಯೆ!

US Election 2024: ಟ್ರಂಪ್‌,ಕಮಲಾ ಮಧ್ಯೆ ತೀವ್ರ ಪೈಪೋಟಿUS Election 2024: ಟ್ರಂಪ್‌,ಕಮಲಾ ಮಧ್ಯೆ ತೀವ್ರ ಪೈಪೋಟಿ

US Election 2024: ಟ್ರಂಪ್‌,ಕಮಲಾ ಮಧ್ಯೆ ತೀವ್ರ ಪೈಪೋಟಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Dattapeeta

Chikkamagaluru: ನ.9ರಿಂದ 11ರ ತನಕ ದತ್ತಪೀಠಕ್ಕೆ ಪ್ರವಾಸಿಗರಿಗೆ ನಿರ್ಬಂಧ

Constable-Hsn

Hassan: ವಿವಾಹ ಆಮಂತ್ರಣ ಪತ್ರಿಕೆ ಹಂಚಿ ಮನೆಗೆ ಮರಳುತ್ತಿದ್ದ ಪೊಲೀಸ್‌ ಬರ್ಬರ ಹ*ತ್ಯೆ!

Udupi: ಗೀತಾರ್ಥ ಚಿಂತನೆ-85: ಕಶ್ಮಲ-ಕಲ್ಮಶಗಳ ವ್ಯತ್ಯಾಸ

Udupi: ಗೀತಾರ್ಥ ಚಿಂತನೆ-85: ಕಶ್ಮಲ-ಕಲ್ಮಶಗಳ ವ್ಯತ್ಯಾಸ

Mangaluru Airport: ಮಂಜು ಕವಿದ ವಾತಾವರಣ: ವಿಮಾನ ಯಾನದಲ್ಲಿ ವ್ಯತ್ಯಯ

Mangaluru Airport: ಮಂಜು ಕವಿದ ವಾತಾವರಣ: ವಿಮಾನ ಯಾನದಲ್ಲಿ ವ್ಯತ್ಯಯ

ಸಜೀಪಮೂಡ: ಮನೆಗೆ ಸಿಡಿಲು ಬಡಿದು ಹಾನಿ

Bantwal ಸಜೀಪಮೂಡ: ಮನೆಗೆ ಸಿಡಿಲು ಬಡಿದು ಹಾನಿ

MUST WATCH

udayavani youtube

ಗೋವಿನ ಪೂಜೆ ಯಾಕಾಗಿ ಮಾಡಬೇಕು?

udayavani youtube

ಮೇಲುಕೋಟೆಯಲ್ಲಿ ದೀಪಾವಳಿ ಆಚರಿಸುವುದಿಲ್ಲ ಎಂಬ ಮಾತು ನಿಜವೋ ಸುಳ್ಳೋ

udayavani youtube

ಗಣಪತಿ ಸಹಕಾರಿ ವ್ಯವಸಾಯಕ ಸಂಘ ‘ನಿ.’ ಕೆಮ್ಮಣ್ಣು ಶತಾಭಿವಂದನಂ ಸಮಾರೋಪ ಸಂಭ್ರಮ ಸಂಪನ್ನ

udayavani youtube

ಉದಯವಾಣಿ’ಚಿಣ್ಣರ ಬಣ್ಣ -2024

udayavani youtube

ಹಬ್ಬದ ಊಟವೇ ಈ ಹೋಟೆಲ್ ನ ಸ್ಪೆಷಾಲಿಟಿ

ಹೊಸ ಸೇರ್ಪಡೆ

Archana, abhishekam in ancestral village for Kamala’s victory!

US Polls: ಕಮಲಾ ಗೆಲುವಿಗಾಗಿ ಪೂರ್ವಿಕರ ಗ್ರಾಮದಲ್ಲಿ ಅರ್ಚನೆ, ಅಭಿಷೇಕ!

Launch of Bharat Brand-2: Wheat flour at 30, kg. 34 for rice

Bharat Brand: ಭಾರತ್‌ ಬ್ರ್ಯಾಂಡ್‌-2ಗೆ ಚಾಲನೆ: 30ಕ್ಕೆ ಗೋಧಿ ಹಿಟ್ಟು, ಕೆ.ಜಿ.ಅಕ್ಕಿಗೆ 34

Famous Moo deng predicted Victory for Trump

US Polls; ಟ್ರಂಪ್‌ಗೆ ಗೆಲುವು: ಭವಿಷ್ಯ ನುಡಿದ ಪ್ರಸಿದ್ಧ ನೀರಾನೆ ಮೂಡೆಂಗ್‌

Kanaka-Award

Award: ಪ್ರೊ.ತಾಳ್ತಜೆ ವಸಂತ ಕುಮಾರ್‌ಗೆ ಕನಕ ಗೌರವ ಪ್ರಶಸ್ತಿ

Dattapeeta

Chikkamagaluru: ನ.9ರಿಂದ 11ರ ತನಕ ದತ್ತಪೀಠಕ್ಕೆ ಪ್ರವಾಸಿಗರಿಗೆ ನಿರ್ಬಂಧ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.