ಕೆರೆ ಭರ್ತಿ ಯೋಜನೆಗೆ ಮಂಜೂರಾತಿ ನೀಡಿ
ಜಿಲ್ಲೆಗೆ ಬಹುಗ್ರಾಮ ಕುಡಿಯುವ ನೀರಿನ ಯೋಜನೆ ಜಾರಿಗೆ ಶಾಸಕ ರವಿ ಒತ್ತಾಯ
Team Udayavani, Jun 10, 2019, 4:54 PM IST
ಚಿಕ್ಕಮಗಳೂರು: ಜಿಲ್ಲೆಗೆ ಬಹುಗ್ರಾಮ ಕುಡಿಯುವ ನೀರಿನ ಯೋಜನೆ ಹಾಗೂ ಕೆರೆ ತುಂಬಿಸುವ ಯೋಜನೆಗೆ ಮಂಜೂರಾತಿ ನೀಡಬೇಕೆಂದು ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರನ್ನು ಶಾಸಕ ಸಿ.ಟಿ.ರವಿ ಒತ್ತಾಯಿಸಿದ್ದಾರೆ.
ಶಾಶ್ವತ ಕುಡಿಯುವ ನೀರು ಒದಗಿಸಲು ಜಿಲ್ಲೆಯ ಬಹುಗ್ರಾಮ ಕುಡಿಯುವ ನೀರಿನ ಯೋಜನೆಗೆ ಮಂಜೂರಾತಿ ನೀಡಬೇಕೆಂದು ಮುಖ್ಯಮಂತ್ರಿ ಕುಮಾರಸ್ವಾಮಿ ಅವರನ್ನು ಬೆಂಗಳೂರಿನಲ್ಲಿ ಭೇಟಿ ಮಾಡಿ ಮನವಿ ಸಲ್ಲಿಸಿದ್ದಾರೆ.
ಜಿಲ್ಲೆಯಲ್ಲಿ ತುಂಗಾ, ಭದ್ರಾ, ನೇತ್ರಾವತಿ, ಹೇಮಾವತಿ, ವೇದಾವತಿ ನದಿಗಳು ಉಗಮವಾಗಿ ರಾಜ್ಯದ ಬೇರೆ ಬೇರೆ ಜಿಲ್ಲೆಗಳಿಗೆ ನೀರುಣಿಸುವ ಜೀವನದಿಗಳಾಗಿವೆ. ಇಂತಹ ಮಲೆನಾಡು, ಅರೆಮಲೆನಾಡು, ಬಯಲುಸೀಮೆಯನ್ನು ಹೊಂದಿರುವ ಜಿಲ್ಲೆಗೆ ಕುಡಿಯುವ ನೀರಿನ ತೊಂದರೆ ಉಂಟಾಗಿದೆ. ಕಳೆದ 5-6 ವರ್ಷಗಳಿಂದ ತೀವ್ರ ಬರಗಾಲ ಕಾಡುತ್ತಿದ್ದು, ನೂರಾರು ಹಳ್ಳಿಗಳಿಗೆ ಟ್ಯಾಂಕರ್ ಮೂಲಕ ನೀರು ನೀಡಲಾಗುತ್ತಿದೆ ಎಂದು ಮುಖ್ಯಮಂತ್ರಿಗೆ ಸಲ್ಲಿಸಿರುವ ಮನವಿಯಲ್ಲಿ ಹೇಳಿದ್ದಾರೆ.
ಜಿಲ್ಲೆಯ ಚಿಕ್ಕಮಗಳೂರು, ಕಡೂರು, ತರೀಕೆರೆ ತಾಲೂಕುಗಳ ಕೆರೆಗಳಿಗೆ ನೀರು ತುಂಬಿಸುವ ಯೋಜನೆಯಾದ ಭದ್ರಾನದಿಗೆ ಲಕ್ಕವಳ್ಳಿಯ ಗೋಂಧಿ ಬಳಿ ಚೆಕ್ ಡ್ಯಾಂ ನಿರ್ಮಿಸಿ, ಕೆರೆ ತುಂಬಿಸುವ ಯೋಜನೆಗೆ ಈಗಾಗಲೇ ಸಮಗ್ರ ಯೋಜನಾ ವರದಿ ತಯಾರಾಗಿದೆ. ಈ ಯೋಜನೆಗೆ ಅಗತ್ಯ ಅನುದಾನದೊಂದಿಗೆ ಮಂಜೂರಾತಿ ನೀಡಬೇಕು ಎಂದು ಕೋರಿದರು.
ಲೋಕೋಪಯೋಗಿ ಸಚಿವ ಎಚ್.ಡಿ. ರೇವಣ್ಣ ಅವರನ್ನು ಭೇಟಿಯಾಗಿರುವ ಶಾಸಕರು, ಚಿಕ್ಕಮಗಳೂರು ವಿಧಾನಸಭಾ ಕ್ಷೇತ್ರದ ಗ್ರಾಮೀಣ ರಸ್ತೆಗಳನ್ನು ಜಿಲ್ಲಾಪ್ರಮುಖ ರಸ್ತೆಗಳನ್ನಾಗಿ ಮೇಲ್ದರ್ಜೆಗೇರಿಸಬೇಕೆಂದು ಮನವಿ ಮಾಡಿದರು.
ಚಿಕ್ಕಮಗಳೂರು ತಾಲೂಕು ಬಸವನಕೋಡಿ-ಸಿಂದಿಗೆರೆ ಮೂಲಕ ಕಡೂರು ತಾಲೂಕು ಎಸ್.ಬಿದರೆ ಗ್ರಾಮಕ್ಕೆ ಸಂಪರ್ಕ ಕಲ್ಪಿಸುವ ರಸ್ತೆ, ಚಿಕ್ಕಮಗಳೂರು ತಾಲೂಕು ದೇವಗೊಂಡನಹಳ್ಳಿ ಕಬ್ಬಿಗರಹಳ್ಳಿ, ಸಿಂದಿಗೆರೆ ಮುಖಾಂತರ ಕಡೂರು ತಾಲೂಕು ಹುಲಿಕೆರೆ, ಹೊಸಳ್ಳಿ ಮೂಲಕ ಬಾಣೂರು ಗ್ರಾಮಕ್ಕೆ ಸೇರುವ ರಸ್ತೆ ಮೇಲ್ದರ್ಜೆಗೇರಿಸಬೇಕೆಂದು ಮನವಿಯಲ್ಲಿ ಒತ್ತಾಯಿಸಿದ್ದಾರೆ.
ಚಿಕ್ಕಮಗಳೂರು ತಾಲೂಕಿನ ಉದ್ದೇಬೋರನಹಳ್ಳಿ, ಲಕ್ಕಮ್ಮನಹಳ್ಳಿ, ಸಿರಬಡಿಗೆ ಮೂಲಕ ಕಡೂರು ತಾಲೂಕು ಹುಲಿಕೆರೆ ಗ್ರಾಮಕ್ಕೆ ಸೇರುವ ರಸ್ತೆ, ನರಿಗುಡ್ಡೇನಹಳ್ಳಿ, ಕುರುವಂಗಿ, ನೆಟ್ಟೆಕೆರೆಹಳ್ಳಿ ಮೂಲಕ ರಾಷ್ಟ್ರೀಯ ಹೆದ್ದಾರಿ 173 ಕ್ಕೆ ಸೇರುವ ರಸ್ತೆ. ಮಾಗಡಿ, ಜಾವಗಲ್ ರಸ್ತೆಯಿಂದ ಮಾಚೇನಹಳ್ಳಿ, ಧರ್ಮಾಪುರ, ಎಸ್. ಬಿದರೆ ರಸ್ತೆ, ಚಿಕ್ಕಮಗಳೂರು ತಾಲೂಕು ಬಿ.ಟಿ. ರಸ್ತೆ ಹಲಸಬಾಳು ಗೇಟ್ನಿಂದ ಹಲಸಬಾಳು ಮುಖಾಂತರ ಕಾಮೇನಹಳ್ಳಿ ಗ್ರಾಮದ ರಸ್ತೆ, ಬಿ.ಟಿ. ರಸ್ತೆ ಕುಮಾರಗಿರಿ, ಹೂವೇನಹಳ್ಳಿ, ಕಾಮೇನಹಳ್ಳಿ, ಪಾದಮನೆ ಮೂಲಕ ಕಡೂರು ತಾಲೂಕು ಕೆ.ಎಂ.ರಸ್ತೆ ಸೇರುವ ರಸ್ತೆ, ಕೊಳಗಾಮೆ ಗ್ರಾಮದಿಂದ ಅತ್ತಿಗುಂಡಿ ಕ್ರಾಸ್‌ವರೆಗಿನ ರಸ್ತೆಯನ್ನು ಮೇಲ್ದರ್ಜೆಗೇರಿಸಿ ಅಭಿವೃದ್ಧಿಪಡಿಸಬೇಕೆಂದು ಮನವಿಯಲ್ಲಿ ತಿಳಿಸಲಾಗಿದೆ.
ಚಿಕ್ಕಮಗಳೂರು ತಾಲೂಕು ಗಾಳಿಗುಡ್ಡೆ ಗ್ರಾಮದಿಂದ ಅರುಣೋದಯ ಗಂಧರ್ವಗಿರಿ ರಸ್ತೆ, ಮುತ್ತೋಡಿ, ಕೊಳಗಾಮೆ, ಹುಲುವತ್ತಿ ಮೂಲಕ ನೆತ್ತಿಚೌಕ ರಸ್ತೆ, ಕಡೂರು ತಾಲೂಕು ನಿಡಘಟ್ಟ ಗ್ರಾಮದಿಂದ ಚಟ್ನಳ್ಳಿ ಮುಖಾಂತರ ಟಿ.ಬಿ. ಕಾವಲು, ಚಿಕ್ಕಜ್ಜಿಕಟ್ಟೆ ಗಡಿ, ನೀರುಗುಂಡಿ ತಾಂಡಾದ ಮೂಲಕ ಕಾಮೇನಹಳ್ಳಿ, ದೇವನೂರು ರಸ್ತೆ, ನಿಡಘಟ್ಟ, ಚನ್ನನಕೊಪ್ಪಲು, ನಾಗರಾಳು ಮೂಲಕ ಸಖರಾಯಪಟ್ಟಣ, ಜಾವಗಲ್ ರಸ್ತೆಗೆ ಸಂಪರ್ಕ ಕಲ್ಪಿಸುವ ರಸ್ತೆ ಮೇಲ್ದರ್ಜೆಗೇರಿಸಬೇಕೆಂದು ಲೋಕೋಪಯೋಗಿ ಸಚಿವರನ್ನು ಒತ್ತಾಯಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಹೊಸ ಸೇರ್ಪಡೆ
BBK11: ಮೋಕ್ಷಿತಾ ಎರಡು ತಲೆ ನಾಗರಹಾವು ಎಂದ ತ್ರಿವಿಕ್ರಮ್; ನಾಮಿನೇಟ್ ವಿಚಾರವಾಗಿ ವಾಗ್ವಾದ
Udaipur Palace: ರಾಜಮನೆತನದ ಎರಡು ಗುಂಪುಗಳ ನಡುವೆ ಘರ್ಷಣೆ: ಮೂವರಿಗೆ ಗಾಯ
Tensions Grip: ಬಾಂಗ್ಲಾದೇಶ ಸರಕಾರದಿಂದ ಹಿಂದೂ ನಾಯಕ, ಇಸ್ಕಾನ್‌ನ ಕೃಷ್ಣದಾಸ್ ಸೆರೆ
Parliament Session: ಗೂಂಡಾಗಿರಿ ಮೂಲಕ ಸಂಸತ್ ಮೇಲೆ ನಿಯಂತ್ರಣ ಸಾಧಿಸಲು ಯತ್ನ: ಮೋದಿ
Sullia: ರಬ್ಬರ್ ಸ್ಮೋಕ್ ಹೌಸ್‌ಗೆ ಬೆಂಕಿ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.