ಆಮ್ಲಜನಕ ನೀಡುವ ಮರ ಕಡಿದ್ರೆ ಮನುಷ್ಯರನ್ನೇ ಕಡಿದಂತೆ

ಮನುಷ್ಯ ಧರ್ಮವನ್ನು ಪಾಲಿಸದವ ಬುದ್ಧಿವಂತನಲ್ಲ

Team Udayavani, May 6, 2019, 4:30 PM IST

6–May-27

ಚಿಕ್ಕಮಗಳೂರು: ಆದಿಚುಂಚನಗಿರಿ ತಾಂತ್ರಿಕ ಮಹಾವಿದ್ಯಾಲಯದ ವಿದ್ಯುತ್‌ ವಿಭಾಗದಲ್ಲಿ ಏರ್ಪಡಿಸಿದ್ದ ಸಮಾವೇಶವನ್ನು ಡಾ| ವಿಶ್ವನಾಥ್‌ ಹೆಗ್ಡೆ ಉದ್ಘಾಟಿಸಿದರು.

ಚಿಕ್ಕಮಗಳೂರು: ಈಗಿನ ಆಧುನಿಕ ತಂತ್ರಜ್ಞಾನದಲ್ಲಿ ಸ್ಮಾರ್ಟ್‌ ಗ್ರಿಡ್‌ ಬಳಸಿ ವಿದ್ಯುತ್‌ ಸಂರಕ್ಷಿಸಬಹುದು. ವಿದ್ಯುತ್‌ ಸರಬರಾಜಿಗಾಗಿ ಆಮ್ಲಜನಕ ನೀಡುವ ಮರಗಳನ್ನು ಕಡಿಯುವುದು ಮನುಷ್ಯರನ್ನು ಕಡಿದಂತೆಯೇ ಎಂದು ಹಾಸನದ ಮಲೆನಾಡು ತಾಂತ್ರಿಕ ಮಹಾವಿದ್ಯಾಲಯದ ಪ್ರಾಧ್ಯಾಪಕ ಡಾ| ವಿಶ್ವನಾಥ್‌ ಹೆಗ್ಡೆ ಎಚ್ಚರಿಕೆ ನೀಡಿದರು.

ನಗರದ ಆದಿಚುಂಚನಗಿರಿ ತಾಂತ್ರಿಕ ಮಹಾವಿದ್ಯಾಲಯದ ವಿದ್ಯುತ್‌ ವಿಭಾಗದಲ್ಲಿ ಏರ್ಪಡಿಸಿದ್ದ ಒಂದು ದಿನದ ರಾಷ್ಟ್ರ ಮಟ್ಟದ ‘ಪ್ರಸ್ತುತ ಪರಿಸ್ಥಿತಿಯ ವಿದ್ಯುತ್‌ ಸಮಸ್ಯೆಗಳಿಗೆ ಆಧುನಿಕ ರೀತಿಯಲ್ಲಿ ಬೆಳಕು ಚೆಲ್ಲುವ’ ‘ಈ- ಬೆಳಕು-2019’ ರಾಷ್ಟ್ರ ಮಟ್ಟದ ಸಮಾವೇಶ ಉದ್ಘಾಟಿಸಿ ಅವರು ಮಾತನಾಡಿದರು.

ಪರಿಸರವನ್ನು ಹಾಳು ಮಾಡುವುದು ಮನುಷ್ಯ ಧರ್ಮವಲ್ಲ. ಮನುಷ್ಯ ಧರ್ಮವನ್ನು ಪಾಲಿಸದವ ಬುದ್ಧಿವಂತನಲ್ಲ. ಹಾಗಾಗಿ ಯೋಜನೆ ಮತ್ತು ಯೋಚನೆಗಳ ಮುಖಾಂತರ ಆವಿಷ್ಕಾರಗಳನ್ನು ಮಾಡುವುದು ಉತ್ತಮ. ಪ್ರಸ್ತುತ ವಿದ್ಯುತ್‌ ಕ್ಷೇತ್ರದಲ್ಲಿನ ಆಧುನಿಕ ತಾಂತ್ರಿಕ ಆವಿಷ್ಕಾರಗಳ ಬಗ್ಗೆ ಮತ್ತು ವಿದ್ಯುತ್‌ ಸಮಸ್ಯೆ ಮತ್ತು ಪರಿಹಾರಗಳ ವಿಚಾರವಾಗಿ ತಾಂತ್ರಿಕ ಬೆಳವಣಿಗೆೆಯನ್ನು ತಿಳಿಸಿದರು.

ಜೀವನದ ಸಾಧನೆಯ ಹಾದಿಯಲ್ಲಿ ಪಠ್ಯಕ್ರಮವೆಂಬುದು ಇರುವುದಿಲ್ಲ. ನಾವುಗಳು ವಿದ್ಯೆ ಕಲಿಯುವುದು, ಪರೀಕ್ಷೆ ಎದುರಿಸುವುದು ಸಮಾಜಕ್ಕೆ ಮತ್ತು ಪರಿಸರದ ಒಳಿತಿಗೆ. ಹಾಗಾಗಿ ಪಠ್ಯಕ್ರಮದ ಹೊರಗೆ ಯಾವಾಗಲು ಯೋಚಿಸಬೇಕು. ಅಂಕಗಳು ಉದ್ಯೋಗಕ್ಕೆ ಮಾತ್ರವಲ್ಲದೆ ಬುದ್ಧಿಶಕ್ತಿಗೂ ಅಗತ್ಯ ಎಂದು ಹೇಳಿದರು.

ಪ್ರಸ್ತುತ ಭಾರತದಲ್ಲಿ ಎಲ್ಲಾ ಇಂಧನಗಳ ಮೂಲಗಳಿಂದ 377ಗಿಗ ವ್ಯಾಟ್ ವಿದ್ಯುತ್‌ ಉತ್ಪಾದಿಸಲಾಗುತ್ತಿದೆ. 2024ಕ್ಕೆ 603 ಗಿಗ ವ್ಯಾಟ್‌ನ ಗುರಿ ಇದೆ. ಇನ್ನು 5 ವರ್ಷದ ಬಳಿಕ ಸಾಂಪ್ರದಾಯಿಕ ಇಂಧನಗಳು ನಶಿಸಿ ಹೋಗಿ ಸೋಲಾರ್‌ ಮತ್ತು ಗಾಳಿಯ ಮೂಲಕ ಮಾತ್ರ ವಿದ್ಯುತ್‌ ಉತ್ಪಾದಿಸುವ ಪರಿಸ್ಥಿತಿ ಬರುತ್ತದೆ. ಏನೇ ವಿದ್ಯುತ್‌ ಉತ್ಪಾದಿಸಿದರೂ ಸರಬರಾಜು ಮಾಡಲು ಟ್ರಾನ್ಸ್ಮಿಶನ್‌ ಲೈನ್‌ಗಳ ಕೊರತೆ ಬಹಳಷ್ಟು ಇದೆ ಎಂದು ಹೇಳಿದರು.

ಎಐಟಿ ಕಾಲೇಜಿನ ನಿರ್ದೇಶಕ ಡಾ| ಸಿ.ಕೆ ಸುಬ್ರಾಯ ಮಾತನಾಡಿ, ಸಾಧಕರು ಎಂದರೆ ಸಾಮಾನ್ಯರಲ್ಲ, ಅವರ ಹಿಂದೆ ಬಹಳಷ್ಟು ವರ್ಷಗಳ ಶ್ರಮವಿರುತ್ತದೆ. ತಂದೆ- ತಾಯಿಗಳ, ಗುರು-ಹಿರಿಯರ ಮಾರ್ಗದರ್ಶನದಂತೆ ಸಾಧಕರ ವಿಚಾರಗಳನ್ನು ಅಳವಡಿಸಿಕೊಂಡು ಪ್ರಯತ್ನಗಳನ್ನು ಮಾಡಬೇಕು. ನಮ್ಮ ಕೆಲಸದಲ್ಲಿ ನಮ್ಮದೇ ಆದ ಧೈರ್ಯ, ನಂಬಿಕೆ ಮತ್ತು ಆತ್ಮಸಾಕ್ಷಿಗಳು ಹೆಚ್ಚಿನ ಕೆಲಸಗಳನ್ನು ಮಾಡಿಕೊಡುತ್ತವೆ. ಎಇಸಿಟಿಇ ನೂತನವಾಗಿ ಪ್ರಸ್ತುತ ಪಡಿಸುವ ಹ್ಯಾಖಥಾನ್‌ ಪ್ರೊಗ್ರಾಮ್‌ ಬಗ್ಗೆ ಗಮನ ಹರಿಸಲು ಸೂಚಿಸಿದರು.

ಸಮಾರಂಭದ ಅದ್ಯಕ್ಷತೆ ವಹಿಸಿದ್ದ ಪ್ರಿನ್ಸಿಪಾಲ್ ಡಾ| ಸಿ.ಟಿ.ಜಯದೇವ ಮಾತನಾಡಿ, ವಿದ್ಯುತ್‌ ಕ್ಷೇತ್ರ ಎಂಬುದು ಪ್ರಸ್ತುತ ಪರಿಸ್ಥಿತಿಯಲ್ಲಿ ಬಹುಪಯೋಗಿ ಕ್ಷೇತ್ರ. ಇದರ ಸಹಾಯದಿಂದ ಮಾನವನ ಪ್ರತಿಕ್ಷಣಗಳು ಆಧುನೀಕರಣಗೊಂಡು ನಿಶ್ಚಿಂತೆಯಿಂದ ಕೂಡಿದೆ ಎಂದು ತಿಳಿಸಿದರು. ಡಾ| ಬಿ.ಆರ್‌. ವೀರೇಂದ್ರ ಸ್ವಾಗತಿಸಿದರು. ವಿನೋದ್‌ಕುಮಾರ್‌ ಶೇs್ ವಂದಿಸಿದರು. ಅಪೇಕ್ಷ್ಯ ನಿರೂಪಿಸಿದರು.

ಟಾಪ್ ನ್ಯೂಸ್

Karkala: ಅಣ್ಣನ ತಿಥಿಗೆ ಬಂದಿದ್ದ ತಂಗಿಯೂ ವಿದ್ಯುತ್ ಆಘಾತದಿಂದ ಮೃ*ತ್ಯು

Karkala: ಅಣ್ಣನ ತಿಥಿಗೆ ಬಂದಿದ್ದ ತಂಗಿ ವಿದ್ಯುತ್ ಆಘಾತದಿಂದ ಮೃ*ತ್ಯು

Sanju Weds Geetha 2: ಅವನು ಸಂಜು ಅವಳು ಗೀತಾ!; ಹಾಡಿನಲ್ಲಿ ಪ್ರೇಮ ಕಥನ

Sanju Weds Geetha 2: ಅವನು ಸಂಜು ಅವಳು ಗೀತಾ!; ಹಾಡಿನಲ್ಲಿ ಪ್ರೇಮ ಕಥನ

Ranji Trophy: ಇನ್ನಿಂಗ್ಸ್‌ ನ ಎಲ್ಲಾ 10 ವಿಕೆಟ್‌ ಕಿತ್ತು ಅನ್ಶುಲ್‌ ಕಾಂಬೋಜ್‌ ದಾಖಲೆ

Ranji Trophy: ಇನ್ನಿಂಗ್ಸ್‌ ನ ಎಲ್ಲಾ 10 ವಿಕೆಟ್‌ ಕಿತ್ತು ಅನ್ಶುಲ್‌ ಕಾಂಬೋಜ್‌ ದಾಖಲೆ

ಅಕ್ಕಿ ಗಿರಣಿ ಮುಂದೆ ಭತ್ತ ತುಂಬಿದ ವಾಹನಗಳ ಸಾಲು… ಮುಂಗಾರು ಮುಗಿದರೂ ನಿಲ್ಲದ ಕೃಷಿಕರ ಗೋಳು

ಅಕ್ಕಿ ಗಿರಣಿ ಮುಂದೆ ಭತ್ತ ತುಂಬಿದ ವಾಹನಗಳ ಸಾಲು… ಮುಂಗಾರು ಮುಗಿದರೂ ನಿಲ್ಲದ ಕೃಷಿಕರ ಗೋಳು

Sri Lanka Election Result:ಸಂಸತ್‌ ಚುನಾವಣೆ-ಅಧ್ಯಕ್ಷ ಅನುರಾ ದಿಸ್ಸಾನಾಯಕೆ ಪಕ್ಷ ಜಯಭೇರಿ

Sri Lanka Election Result:ಸಂಸತ್‌ ಚುನಾವಣೆ-ಅಧ್ಯಕ್ಷ ಅನುರಾ ದಿಸ್ಸಾನಾಯಕೆ ಪಕ್ಷ ಜಯಭೇರಿ

India Vs India A ಅಭ್ಯಾಸ ಪಂದ್ಯ: ಅಗ್ಗಕ್ಕೆ ಔಟಾದ ಕೊಹ್ಲಿ, ಪಂತ್;‌ ಗಾಯಗೊಂಡ ರಾಹುಲ್

India Vs India A ಅಭ್ಯಾಸ ಪಂದ್ಯ: ಅಗ್ಗಕ್ಕೆ ಔಟಾದ ಕೊಹ್ಲಿ, ಪಂತ್;‌ ಗಾಯಗೊಂಡ ರಾಹುಲ್

Shimoga; Deport Zameer Ahmed: ​​MLA Channabasappa

Shimoga; ಜಮೀರ್‌ ಅವರನ್ನು ಗಡಿಪಾರು ಮಾಡಿ: ಶಾಸಕ ಚನ್ನಬಸಪ್ಪ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Chikkamagaluru: ಮದುವೆ ಹಾಲ್ ನಲ್ಲೇ ವಧುವಿನ ಚಿನ್ನ ಎಗರಿಸಿದ ಖದೀಮರು…

Chikkamagaluru: ಮದುವೆ ಹಾಲ್ ನಲ್ಲೇ ವಧುವಿನ ಚಿನ್ನ ಎಗರಿಸಿದ ಖದೀಮರು…

ಕೇರಳದಿಂದ “ಸುರಕ್ಷಿತ’ ಮಲೆನಾಡಿನತ್ತ “ನಕ್ಸಲರು’?

Chikkamagaluru: ಕೇರಳದಿಂದ “ಸುರಕ್ಷಿತ’ ಮಲೆನಾಡಿನತ್ತ “ನಕ್ಸಲರು’?

19-naxalite

Naxalite: ಮಲೆನಾಡಿಗೆ ನಕ್ಸಲರ ಭೇಟಿ ದೃಢ; 3 ಬಂದೂಕು-ಮದ್ದುಗುಂಡು ವಶ

17-2

ಚಿಕಿತ್ಸೆಗೆಂದು ಬಂದಿದ್ದ ರೋಗಿ ಸಾವು; ವೈದ್ಯರ ನಿರ್ಲಕ್ಷ್ಯವೇ ಕಾರಣ ಎಂದು ಕುಟುಂಬಸ್ಥರ ಆರೋಪ

Chikkamagaluru: ಮನೆಯೊಂದರಲ್ಲಿ ಬಂದೂಕು ಪತ್ತೆ; ನಕ್ಸಲ್‌ ಓಡಾಟ ಶಂಕೆ

Chikkamagaluru: ಮನೆಯೊಂದರಲ್ಲಿ ಬಂದೂಕು ಪತ್ತೆ; ನಕ್ಸಲ್‌ ಓಡಾಟ ಶಂಕೆ

MUST WATCH

udayavani youtube

ಹೊಸ ತಂತ್ರಜ್ಞಾನಕ್ಕೆ ತೆರೆದುಕೊಂಡ ತುಳುನಾಡ ಕಂಬಳ

udayavani youtube

ಉಡುಪಿಯ ಶ್ರೀ ಕೃಷ್ಣ ಮಠದಲ್ಲಿ ಕಾರ್ತಿಕ ಲಕ್ಷದೀಪೋತ್ಸವ

udayavani youtube

ಪುಂಗನೂರು ತಳಿಯ ಹಾಲು ಯಾವೆಲ್ಲ ಕಾಯಿಲೆಗಳನ್ನು ಗುಣಪಡಿಸುತ್ತದೆ ?

udayavani youtube

ಪುಸ್ತಕ ನೋಡುವುದಿಲ್ಲ, ಗುರುವಿಲ್ಲ ಆದರೂ ಕಲೆ ತಾನಾಗಿಯೇ ಒಲಿದು ಬಂತು

udayavani youtube

ನನ್ನ ಎದುರು ನೀನು ಬಚ್ಚ ! ಏಕವಚದಲ್ಲಿ ಕಿತ್ತಾಡಿಕೊಂಡ ಲಾಯರ್ ಜಗದೀಶ್ & ಕುಡುಪಲಿ ನಾಗರಾಜ್

ಹೊಸ ಸೇರ್ಪಡೆ

6

Hampanakatte: ಗುಟ್ಕಾ ಉಗುಳುವವರು, ಧೂಮಪಾನಿಗಳ ಹಾವಳಿ

5

Mangaluru: ತೆರೆದ ತೋಡಿನಲ್ಲಿ ಕೊಳಚೆ ನೀರು ಹರಿಯುವುದು ನಿಂತಿಲ್ಲ

Karkala: ಅಣ್ಣನ ತಿಥಿಗೆ ಬಂದಿದ್ದ ತಂಗಿಯೂ ವಿದ್ಯುತ್ ಆಘಾತದಿಂದ ಮೃ*ತ್ಯು

Karkala: ಅಣ್ಣನ ತಿಥಿಗೆ ಬಂದಿದ್ದ ತಂಗಿ ವಿದ್ಯುತ್ ಆಘಾತದಿಂದ ಮೃ*ತ್ಯು

4(1

Mangaluru: ಪಂಪ್‌ವೆಲ್‌-ಪಡೀಲ್‌ ನಡುವಿನ ಚತುಷ್ಪಥ ಕಾಮಗಾರಿ 3 ವರ್ಷ ಕಳೆದರೂ ಅಪೂರ್ಣ

10-thirthahalli

Thirthahalli: ಶಾಸಕ ಸ್ಥಾನವನ್ನು ಗಿರವಿ ಇಟ್ಟರಾ ಆರಗ ಜ್ಞಾನೇಂದ್ರ ?

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.