4.50 ಕೋಟಿ ರೂ. ಮಿಗತೆ ಬಜೆಟ್‌ 


Team Udayavani, Feb 1, 2018, 3:18 PM IST

01-39.jpg

ಚಿಕ್ಕಮಗಳೂರು: 2018-19ನೇ ಸಾಲಿಗೆ 4.50 ಕೋಟಿ ರೂ. ಉಳಿತಾಯದ ಆಯವ್ಯಯವನ್ನು ನಗರಸಭೆ ಅಧ್ಯಕ್ಷ ಶಿಲ್ಪಾ
ರಾಜಶೇಖರ್‌ ಮಂಡಿಸಿ ಸರ್ವಾನುಮತದ ಅನುಮೋದನೆ ಪಡೆದುಕೊಂಡರು.

ಬುಧವಾರ ನಗರಸಭೆ ಸಭಾಂಗಣದಲ್ಲಿ ನಡೆದ ಸಭೆಯಲ್ಲಿ  ನಗರಸಭಾ ಅಧ್ಯಕ್ಷೆ ಶಿಲ್ಪಾ ರಾಜಶೇಖರ್‌ ಬಜೆಟ್‌ನ್ನು ಮಂಡಿಸಿದರು. ಪ್ರಾರಂಭದ ಶಿಲ್ಕು 1640.17 ಲಕ್ಷ, ಆದಾಯ 6537.50 ಲಕ್ಷ ರೂ. ನಿರೀಕ್ಷಿಸಲಾಗಿದ್ದು, ಒಟ್ಟು ಆದಾಯ 8177.67 ಲಕ್ಷ. ಇದರಲ್ಲಿ 7727 ಲಕ್ಷ ವೆಚ್ಚಕ್ಕೆ ನಿಗದಿಗೊಳಿಸಲಾಗಿದೆ. ಆಸ್ತಿ ತೆರಿಗೆ, ಕಟ್ಟಡ ರಚನಾ ಪರವಾನಗಿ ಶುಲ್ಕ, ವ್ಯಾಪಾರ ಪರವಾನಗಿ ಶುಲ್ಕ,
ಯುಜಿಡಿ ಸಂಪರ್ಕಕ್ಕಾಗಿ ಸೇವಾ ಶುಲ್ಕ, ರಸ್ತೆ ಕಟ್ಟಿಂಗ್‌ ಚಾರ್ಜ್‌, ಪಾರ್ಕಿಂಗ್‌ ಶುಲ್ಕ, ನಲ್ಲಿ ಸಂಪರ್ಕ ಶುಲ್ಕ, ಜಾಹೀರಾತು ಎಲ್ಲಾ ರೀತಿಯ ಎನ್‌ಒಸಿ ದೃಢೀಕರಣ, ಮೊಬೈಲ್‌ ಟವರ್‌ಗಳನ್ನು ಸರ್ವೆ ಮಾಡಿ ವಾರ್ಷಿಕ ದರ ನಿಗ ಪಡಿಸುವ ಮೂಲಕ ಆದಾಯದ ಮೂಲವನ್ನು ಶೇ.20ರಷ್ಟು ಹೆಚ್ಚಿಸಲು ಬಜೆಟ್‌ ಕ್ರಮ ವಹಿಸಿದೆ ಎಂದರು.

2017-18ನೇ ಸಾಲಿನ ಆಯವ್ಯಯದಲ್ಲಿ ಹಲವಾರು ಹೊಸ ಯೋಜನೆಗಳನ್ನು ಹಮ್ಮಿಕೊಂಡಿದ್ದು, ಅದರಲ್ಲಿ ಶೇ.65ರಷ್ಟು
ಯೋಜನೆಗಳು ಯಶಸ್ವಿಯಾಗಿ ಪೂರ್ಣಗೊಂಡಿವೆ. ಇನ್ನುಳಿದವು ಪ್ರಗತಿಯಲ್ಲಿದೆ ಎಂದು ಹೇಳಿದರು. ಆಸ್ತಿ ತೆರಿಗೆಯಿಂದ 800 ಲಕ್ಷ, ಕಟ್ಟಡ ಪರವಾನಗಿ ಬಾಬ್ತು 50 ಲಕ್ಷ, ವಾಣಿಜ್ಯ ಮಳಿಗೆ ಬಾಡಿಗೆ 170 ಲಕ್ಷ, ಪಾರ್ಕಿಂಗ್‌ ಶುಲ್ಕ 40 ಲಕ್ಷ, ಖಾತಾ ಬದಲಾವಣೆ 40 ಲಕ್ಷ, ಎಸ್‌ಎಫ್‌ಸಿ ವೇತನ ನಿಧಿ ಅನುದಾನ 605 ಲಕ್ಷ, ಎಸ್‌ಎಫ್‌ಸಿ ಮುಕ್ತನಿಧಿ  600 ಲಕ್ಷ ಒಟ್ಟು 3,526 ಲಕ್ಷ ರೂ. ಅನುದಾನ
ನಿರೀಕ್ಷಿಸಲಾಗಿದೆ.

ಎಂ.ಜಿ.ರಸ್ತೆ, ಐ.ಜಿ.ರಸ್ತೆ ಹಾಗೂ ಅಂಬೇಡ್ಕರ್‌ ರಸ್ತೆಗಳಲ್ಲಿ ವಾಹನ ನಿಲುಗಡೆ ಶುಲ್ಕವನ್ನು ವಿಧಿಸಲು ಆಲೋಚಿಸಲಾಗಿದ್ದು, ಇದರಲ್ಲಿ 40 ಲಕ್ಷ ಆದಾಯ ನಿರೀಕ್ಷಿಸಲಾಗಿದೆ. ನಗರಸಭೆ ಬಂಡವಾಳ ಖಾತೆಯಲ್ಲಿ ನಗರಸಭೆ ನಿವೇಶನಗಳ ಹರಾಜು ಮೂಲಕ ಮಾರಾಟದಿಂದ 200 ಲಕ್ಷ ಆದಾಯ ನಿರೀಕ್ಷಿಸಲಾಗಿದೆ. ಪರಿಶಿಷ್ಟ ಜಾತಿ ಮತ್ತು ಪಂಗಡ ವರ್ಗದವರ ಶ್ರೇಯೋಭಿವೃದ್ಧಿಗಾಗಿ 132 ಲಕ್ಷ ರೂ., ಇತರೆ ಬಡಜನರಿಗಾಗಿ 40 ಲಕ್ಷ, ವಿಶೇಷ ವಿಕಲಚೇತನರ ಅಭಿವೃದ್ಧಿ ಕಾರ್ಯಕ್ರಮಗಳಿಗಾಗಿ 16.50 ಲಕ್ಷ ರೂ. ಕಾಯ್ದಿರಿಸಲಾಗಿದೆ. ಅರ್ಹ ಫಲಾನುಭವಿಗಳಿಗೆ ವೈಯಕ್ತಿಕ ಶೌಚಾಲಯ, ಕುಡಿಯುವ ನೀರು ಮತ್ತು ಒಳಚರಂಡಿ ಸಂಪರ್ಕಗಳಿಗೆ ಸಹಾಯಧನ, ಅರ್ಹ ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ಆರ್ಥಿಕ ಸಹಾಯಧನ ನೀಡಲು ಉದ್ದೇಶಿಸಲಾಗಿದೆ. 

ನಗರಸಭಾ ನಿಧಿ, ಎಸ್‌.ಎಫ್‌.ಸಿ., 14ನೇ ಹಣಕಾಸು ಯೋಜನೆಗಳಲ್ಲಿ ಶೇ.65 ರಷ್ಟು ರಸ್ತೆ, ಚರಂಡಿ ಮತ್ತು ಕುಡಿಯುವ ನೀರಿನ ಯೋಜನೆಗಳಿಗೆ ಬಳಸಿಕೊಳ್ಳಲು ಹಾಗೂ ಉಳಿಕೆ ಕಾಮಗಾರಿ ನಿರ್ವಹಿಸಲು 600 ಲಕ್ಷ ರೂ. ಮೀಸಲಿಡಲಾಗಿದೆ.  ಮನೆ, ಮನೆ ಕಸ ಸಂಗ್ರಹಣೆ ಮಾಡಲು 1 ಹಿಟಾಚಿ, 1 ಕಂಪ್ಯಾಕ್ಟರ್‌, 16 ಆಟೋ ಟಿಪ್ಪರ್‌ಗಳು ಹಾಗೂ ಹೆಚ್ಚಿನ ಕಸ ವಿಂಗಡಣೆ ಮಾಡಲು 1 ಸೆಗ್ರಿಗೇಷನ್‌ ಯಂತ್ರ ಖರೀದಿಸಲು ಆಯೋಜಿಸಲಾಗಿದ್ದು, ಮೂಲದಲ್ಲೇ ಕಸ ವಿಂಗಡಣೆ ಮಾಡಲು ಪ್ರತಿ ಮನೆಗೆ ಹಸಿರು ಮತ್ತು ಹಳದಿ ಬಣ್ಣದ ಎರಡು ಟಬ್‌ ನೀಡಲು ಯೋಜನೆ ರೂಪಿಸಲಾಗಿದೆ. 

ನಗರಸಭಾ ವ್ಯಾಪ್ತಿಯ ಎಲ್ಲ ವಾರ್ಡ್‌ಗಳ ಅಡ್ಡರಸ್ತೆಗಳಿಗೆ ನಾಮಫಲಕ ಹಾಕುವುದು, ಹಾಳಾಗಿರುವ ರಸ್ತೆಗಳ ಗುಂಡಿ ಮುಚ್ಚುವುದು,
ನಗರಸಭಾ ವ್ಯಾಪ್ತಿಯ ಹೊರವಲಯಗಳಲ್ಲಿ ಪ್ರವಾಸಿಗರ ಅನುಕೂಲಕ್ಕಾಗಿ ಪಾವತಿಸಿ  ಉಪಯೋಗಿಸುವ ಶೌಚಾಲಯಗಳನ್ನು
ನಿರ್ಮಿಸುವುದು, ಎಂ.ಜಿ.ರಸ್ತೆಯ ಗುರುತಿಸಿದ ಎರಡು ಬದಿಗಳಲ್ಲಿ ಹೂಕುಂಡ ಮತ್ತು ಡಸ್ಟ್‌ಬಿನ್‌ಗಳನ್ನು ಇಡಲು ಯೋಜಿಸಲಾಗಿದೆ.

ನಗರಸಭಾ ವ್ಯಾಪ್ತಿಯಲ್ಲಿ ಆಧುನಿಕ ಚಿತಾಗಾರ ಮತ್ತು ಕಸಾಯಿಖಾನೆ ನಿರ್ಮಾಣ ಮಾಡಲು, ನಗರದ ವಸತಿ ರಹಿತರಿಗೆ
ರಾತ್ರಿ ತಂಗುದಾಣಗಳನ್ನು ನಿರ್ಮಿಸಲು, ಎಲ್ಲೆಂದರಲ್ಲಿ ತಿಂಡಿ ಗಾಡಿಗಳನ್ನು ಇಡುವುದನ್ನು ತಪ್ಪಿಸಲು ನಗರದ ನಾಲ್ಕೂ
ಭಾಗಗಳಲ್ಲಿ ಫುಡ್‌ ಕೋರ್ಟ್‌ ನಿರ್ಮಾಣ ಮಾಡಲು ಉದ್ದೇಶಿಸಲಾಗಿದೆ ಎಂದು ಅಧ್ಯಕ್ಷರು ಘೋಷಿಸಿದರು. ಕರಡು ಬಜೆಟ್‌ ಮೇಲೆ ಚರ್ಚೆ ನಡೆಸಿದ ಸದಸ್ಯರು ನಂತರ ಸರ್ವಾನುಮತದಿಂದ ಅಂಗೀಕಾರ ನೀಡಿದರು. ಸಭೆಯಲ್ಲಿ ನಗರಸಭಾ ಉಪಾಧ್ಯಕ್ಷ ಶ್ರೀನಿವಾಸ್‌ ರಾವ್‌ ಹಾಗೂ ಪೌರಾಯುಕ್ತೆ ತುಷಾರಮಣಿ, ಶಾಸಕ ಸಿ.ಟಿ.ರವಿ ಉಪಸ್ಥಿತರಿದ್ದರು.

ಟಾಪ್ ನ್ಯೂಸ್

Khameni

warrant: ಇಸ್ರೇಲಿ ನಾಯಕರಿಗೆ ವಾರಂಟ್‌ ಬೇಡ, ಗಲ್ಲು ವಿಧಿಸಿ: ಇರಾನ್‌

GOLD2

Gold Price Decline: ಚಿನ್ನದ ದರ ಮತ್ತೆ 1,000 ರೂ.ಇಳಿಕೆ: 10 ಗ್ರಾಂಗೆ 78,550 ರೂ.

Ajith-Pawar

Assembly Election: ನಾನು ಪ್ರಚಾರ ಮಾಡದ್ದಕ್ಕೆ ನೀನು ಶಾಸಕನಾದೆ: ಸಂಬಂಧಿಗೆ ಅಜಿತ್‌

AAP–BJP

Scheme: ದಿಲ್ಲಿಯಲ್ಲಿ ಆಮ್‌ ಆದ್ಮಿ ಸರಕಾರ-ಬಿಜೆಪಿ ಮಧ್ಯೆ ವೃದ್ಧಾಪ್ಯ ವೇತನ ಕದನ!

Raj-Thackrey

Election: ರಾಜ್‌ ಠಾಕ್ರೆ ಎಂಎನ್‌ಎಸ್‌ ಶೂನ್ಯ ಸಾಧನೆ: ಚಿಹ್ನೆ, ಮಾನ್ಯತೆ ನಷ್ಟದ ಭೀತಿ!

Delhi-School

Air Quality: ದಿಲ್ಲಿಯಲ್ಲಿ ಭೌತಿಕ ತರಗತಿ ಪುನಾರಂಭದ ಬಗ್ಗೆ ಗಮನ ಹರಿಸಿ: ಸುಪ್ರೀಂ ಕೋರ್ಟ್‌

President-Murmu

Indian Constitution: ಸಂವಿಧಾನ ಅಂಗೀಕರಿಸಿ 75 ವರ್ಷ: ಸದನದಲ್ಲಿಂದು ರಾಷ್ಟ್ರಪತಿ ಭಾಷಣ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

K.-J.-George

ಒಕ್ಕಲಿಗ ಸಂಘದ ಕಾರ್ಯಕ್ರಮದಲ್ಲಿ ಕೆ.ಜೆ.ಜಾರ್ಜ್ ಭಾಷಣಕ್ಕೆ ಆಕ್ಷೇಪ: ಕ್ಷಮೆಯಾಚಿಸಿದ ಸಚಿವರು

Waqf; Donated property is different, writing the property to the Waqf Board is different: C.T. Ravi

Waqf; ದಾನದ ಆಸ್ತಿ ಬೇರೆ, ಕಂಡವರ ಆಸ್ತಿ ವಕ್ಫ್‌ ಬೋರ್ಡ್‌ ಗೆ ಬರೆಯುವುದು ಬೇರೆ: ಸಿ.ಟಿ ರವಿ

17-ckm

Kaduru: ಜೆಡಿಎಸ್ ಅಭ್ಯರ್ಥಿ ನಿಖಿಲ್ ಕುಮಾರಸ್ವಾಮಿಗೆ ರಕ್ತದಲ್ಲಿ ಪತ್ರ ಬರೆದ ಕಾರ್ಯಕರ್ತ

7-bus

Chikkamagaluru: ಸರ್ಕಾರಿ ಬಸ್-ಲಾರಿ ಮುಖಾಮುಖಿ ಡಿಕ್ಕಿ; ಹಲವರಿಗೆ ಗಾಯ

15-

Chikkamagaluru: ಆಕಸ್ಮಿಕ ಬೆಂಕಿ ತಗುಲಿ ಸಂಪೂರ್ಣ ಸುಟ್ಟು ಭಸ್ಮವಾದ ಗುಡಿಸಲು

MUST WATCH

udayavani youtube

ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು

udayavani youtube

ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು

udayavani youtube

ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?

udayavani youtube

ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್‌ |

udayavani youtube

ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್

ಹೊಸ ಸೇರ್ಪಡೆ

Shiva-sene-Shinde

Election: ಶಿಂಧೆ ವಿರುದ್ಧ ಸೋತಿದ್ದ ಕಾಂಗ್ರೆಸ್‌ ಬಂಡಾಯ ಅಭ್ಯರ್ಥಿ ಶಿವಸೇನೆಗೆ

Khameni

warrant: ಇಸ್ರೇಲಿ ನಾಯಕರಿಗೆ ವಾರಂಟ್‌ ಬೇಡ, ಗಲ್ಲು ವಿಧಿಸಿ: ಇರಾನ್‌

GOLD2

Gold Price Decline: ಚಿನ್ನದ ದರ ಮತ್ತೆ 1,000 ರೂ.ಇಳಿಕೆ: 10 ಗ್ರಾಂಗೆ 78,550 ರೂ.

Ajith-Pawar

Assembly Election: ನಾನು ಪ್ರಚಾರ ಮಾಡದ್ದಕ್ಕೆ ನೀನು ಶಾಸಕನಾದೆ: ಸಂಬಂಧಿಗೆ ಅಜಿತ್‌

AAP–BJP

Scheme: ದಿಲ್ಲಿಯಲ್ಲಿ ಆಮ್‌ ಆದ್ಮಿ ಸರಕಾರ-ಬಿಜೆಪಿ ಮಧ್ಯೆ ವೃದ್ಧಾಪ್ಯ ವೇತನ ಕದನ!

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.