Nandini ಬೂತ್ ಬಳಿಯೇ ಬಂದು ಕರುವಿಗೆ ಹಾಲುಣಿಸುವ ಹಸು
Team Udayavani, Aug 25, 2023, 5:00 PM IST
ಮೂಡಿಗೆರೆ: ಹಸುವೊಂದು ತನ್ನ ಕರುವಿಗೆ ನಂದಿನಿ ಹಾಲಿನ ಬೂತ್ ಮುಂಭಾಗದಲ್ಲೇ ಕೆಚ್ಚಲಿನ ಹಾಲುಣಿಸಿ ಗಮನ ಸೆಳೆದಿರುವ ಘಟನೆ ಜಿಲ್ಲೆಯ ಮೂಡಿಗೆರೆ ಪಟ್ಟಣದಲ್ಲಿ ನಡೆದಿದೆ.
ಮೂಡಿಗೆರೆ ಪಟ್ಟಣದ ಪ್ರವೀಣ್ ಪೂಜಾರಿ ಎಂಬುವರ ಅಂಗಡಿ ಮುಂಭಾಗ ಬಂದ ಹಸು ತನ್ನ ಪುಟ್ಟ ಮುದ್ದಾದ ಕರುವಿಗೆ ಹಾಲು ಕುಡಿಸಿದೆ. ಹಸು-ಕರುವಿನ ಈ ಕ್ರಿಯೆ ನಿನ್ನೆ-ಮೊನ್ನೆಯಿಂದಲ್ಲ. ಕಳೆದ ಒಂದೂವರೆ ತಿಂಗಳಿನಿಂದಲೂ ಹೀಗೆ ನಡೆಯುತ್ತಿದೆ ಎಂದು ಸ್ಥಳಿಯರು ಮಾಹಿತಿ ನೀಡಿದ್ದಾರೆ.
ಹಸು ಎಲ್ಲೇ ಇದ್ದರೂ ಕರು ಅದರ ಜತೆಯೇ ಇರುತ್ತದೆ. ಕರು ಹಾಲು ಕುಡಿಯಲು ಯತ್ನಿಸಿದ ಕೂಡಲೇ ಹಸು ನೇರವಾಗಿ ಹಾಲಿನ ಡೈರಿವರೆಗೂ ಬಂದು ಮುಂಭಾಗದ ಕಟ್ಟೆ ಮೇಲೆ ನಿಂತು ಹಾಲುಣಿಸುತ್ತಿದೆ. ನಿತ್ಯ ಹಸು-ಕರುವಿನ ಈ ಪ್ರೀತಿ ಕಂಡು ಸ್ಥಳಿಯರು ಕೂಡ ಆಶ್ಚರ್ಯಚಕಿತರಗಿದ್ದಾರೆ. ಈ ಹಸು ಹಲವು ವರ್ಷಗಳಿಂದ ಹಾಲಿನ ಡೈರಿ ಮುಂಭಾಗದಿಂದಲೇ ಇದೆ. ಅಂಗಡಿ ಮಾಲಕ ಪ್ರವೀಣ್ ಪೂಜಾರಿ ನಿತ್ಯ ಹಸುವಿಗೆ ಬಾಳೆಹಣ್ಣು ಸೇರಿದಂತೆ ವಿವಿಧ ಹಣ್ಣುಗಳನ್ನ ಕೊಡುತ್ತಿದ್ದರು. ಅಂದಿನಿಂದ ಹಸು ಈ ಅಂಗಡಿಗೆ ನಿರಂತರ ಬರುತ್ತಿದ್ದು, ಕರು ಹಾಕಿದ ಮೇಲೂ ಅಂಗಡಿ ಬಳಿಯೇ ಇತ್ತು. ಆಗಲೂ ಪ್ರವೀಣ್ ಹಸುವಿನ ಆರೈಕೆ ಮಾಡಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Chikkamagaluru: ಮದುವೆ ಹಾಲ್ ನಲ್ಲೇ ವಧುವಿನ ಚಿನ್ನ ಎಗರಿಸಿದ ಖದೀಮರು…
Chikkamagaluru: ಕೇರಳದಿಂದ “ಸುರಕ್ಷಿತ’ ಮಲೆನಾಡಿನತ್ತ “ನಕ್ಸಲರು’?
Naxalite: ಮಲೆನಾಡಿಗೆ ನಕ್ಸಲರ ಭೇಟಿ ದೃಢ; 3 ಬಂದೂಕು-ಮದ್ದುಗುಂಡು ವಶ
ಚಿಕಿತ್ಸೆಗೆಂದು ಬಂದಿದ್ದ ರೋಗಿ ಸಾವು; ವೈದ್ಯರ ನಿರ್ಲಕ್ಷ್ಯವೇ ಕಾರಣ ಎಂದು ಕುಟುಂಬಸ್ಥರ ಆರೋಪ
Chikkamagaluru: ಮನೆಯೊಂದರಲ್ಲಿ ಬಂದೂಕು ಪತ್ತೆ; ನಕ್ಸಲ್ ಓಡಾಟ ಶಂಕೆ
MUST WATCH
ಹೊಸ ಸೇರ್ಪಡೆ
Udupi; ಗೀತಾರ್ಥ ಚಿಂತನೆ 96 : ವ್ಯಾಮೋಹ ಜಾಲ vs ಜಾಗೃತಾತ್ಮ
Uppunda: ಶ್ರೀದುರ್ಗಾಪರಮೇಶ್ವರಿ ಅಮ್ಮನವರ ಸಂಭ್ರಮದ ಮನ್ಮಹಾರಥೋತ್ಸವ
Udupi: ಗೋವಿಂದ ಪೈಗಳ ಸಂಶೋಧನ ಬರಹಗಳು ಸಮಗ್ರತೆಯ ಹೂರಣ: ಡಾ.ವಿವೇಕ್ ರೈ
MLAs 50 ಕೋಟಿ ರೂ.; ಸಾಕ್ಷಿ ಕೊಡುವ ಹೊಣೆ ಯತ್ನಾಳ್‌ದು: ಡಿಕೆಶಿ
Mangaluru: ಎಲ್ಲ ವರ್ಗದ ಜನರ ಸಹಕಾರದಿಂದ ಸಾಮಾಜಿಕ ಸಾಧನೆ: ಕನ್ಯಾನ ಸದಾಶಿವ ಶೆಟ್ಟಿ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.