ಗುರುಕುಲದ ಅರಿವು ಮೂಡಿಸಲು ಬೃಹತ್ ಕಾರ್ಯಕ್ರಮ
Team Udayavani, Jun 2, 2019, 10:39 AM IST
ಮೂಡಿಗೆರೆ: ಪ್ರಬೋಧಿನಿ ಗುರುಕುಲದ ಅಧರ್ಮಂಡಲ ಉತ್ಸವದ ಅಂಗವಾಗಿ ಪಟ್ಟಣದಲ್ಲಿ ಸಾರ್ವಜನಿಕರಿಗೆ ಶಿಕ್ಷಣ ಮತ್ತು ಭಾರತೀಯತೆ ಮತ್ತು ಗುರುಕುಲದ ಬಗ್ಗೆ ಅರಿವು ಮೂಡಿಸಲು ಜೂನ್ 11ರ ಮಂಗಳವಾರ 11ಗಂಟೆಗೆ ರೈತ ಭವನದಲ್ಲಿ ಬೃಹತ್ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ಸಂಯೋಜಕ ದಿನೇಶ್ ದೇವವೃಂದ ತಿಳಿಸಿದರು.
ಶನಿವಾರ ತಾಪಂ ಸಭಾಂಗಣದಲ್ಲಿ ನಡೆದ ಪೂರ್ವಬಾವಿ ಸಭೆಯಲ್ಲಿ ಮಾತನಾಡಿ ಭಾರತೀಯ ಶಿಕ್ಷಣ ಪದ್ಧ್ದತಿ ಮೂಲಕ ವ್ಯಕ್ತಿಯ ಸಮಗ್ರ ವಿಕಾಸವನ್ನು ಸಾಧಿಸಿ ತನ್ಮೂಲಕ ಸ್ವಸ್ಥ ಸಮಾಜದ ನಿರ್ಮಾಣ ಮಾಡಬೇಕೆಂಬ ಧ್ಯೇಯದೊಂದಿಗೆ ಶೃಂಗೇರಿಯ ಸಮೀಪದ ತುಂಗಾ ತಟದ ಹರಿಹರಪುರದಲ್ಲಿರುವ ಪ್ರಬೋನಿ ಗುರುಕುಲವು ಕಳೆದ 24 ವರ್ಷಗಳಿಂದ ಶಿಕ್ಷಣವನ್ನು ನೀಡುತ್ತಿದೆ. ಗುರುಕುಲವು ಇಂದು ವಿಶ್ವಮಾನ್ಯವಾಗುತ್ತಿದ್ದು, ಇಲ್ಲಿ ಕಲಿತ ವಿದ್ಯಾರ್ಥಿಗಳು ಸಮಾಜದಲ್ಲಿ ಉನ್ನತ ಸ್ಥಾನದಲ್ಲಿದ್ದಾರೆ. ಒಂದು ವರ್ಷದಿಂದ ಗುರುಕುಲದ ಶಿಕ್ಷಣದ ಮಹತ್ವವನ್ನು ಸಾರ್ವಜನಿಕರಿಗೆ ಮುಟ್ಟಿಸುವ ದೃಷ್ಟಿಯಿಂದ ತಾಲೂಕು ಜಿಲ್ಲೆ ಮತ್ತು ರಾಜ್ಯಮಟ್ಟದಲ್ಲಿ ಆರಿವು ಕಾರ್ಯಕ್ರಮ ನೀಡುತ್ತಿದೆ. ಜಾತಿ ಮತ ಪಕ್ಷ ಬೇಧ ಮರೆತು ಸಮಾಜವನ್ನು ಒಗ್ಗೂಡಿಸುವುದು ಕಾರ್ಯಕ್ರಮದ ಉದ್ದೇಶವಾಗಿದೆ ಎಂದು ತಿಳಿಸಿದರು.
ಸ್ವಾಗತ ಸಮಿತಿ ಸದಸ್ಯ ಮಹೇಶ್ ಬೆರಣಗೂಡು ಮಾತನಾಡಿ, ಸಮಾಜದ ಪಾಲನೆ, ಪೋಷಣೆಗಳನ್ನು ಅವಲಂಬಿಸಿರುವ ಗುರುಕುಲವು ಆಹಾರ ಮತ್ತು ವಸತಿಗಳೊಂದಿಗೆ ವೇದ, ವಿಜ್ಞಾನ, ಯೋಗ, ಕೃಷಿ ಮತ್ತು ಕಲೆಗಳೆಂಬ ವಿಶಿಷ್ಟ ಪಂಚಮುಖೀ ಶಿಕ್ಷಣವನ್ನು ಸಮಾಜದ ಎಲ್ಲ ವರ್ಗದವರಿಗೂ ಉಚಿತವಾಗಿ ನೀಡುತ್ತ ಬಂದಿದೆ. ಈ ಕಾರಣದಿಂದ ಮೇಲಿನ ಎಲ್ಲ ವರ್ಗಗಳಲ್ಲಿ ವಿಶೇಷ ಕಾರ್ಯಗಳನ್ನು ರಾಜ್ಯಾದ್ಯಂತ ಹಮ್ಮಿಕೊಳ್ಳಲಾಗಿದೆ. ಕಾಫಿ ಬೆಳೆಗಾರರು ಮತ್ತು ಅರ್ಧಮಂಡಲೋತ್ಸವ ಸಮಿತಿ ಕಾರ್ಯಾಧ್ಯಕ್ಷ ಹೆಚ್.ಪಿ.ರಾಜಗೋಪಾಲ ಅಧ್ಯಕ್ಷತೆ, ಮುಖ್ಯ ಭಾಷಣಕಾರರಾಗಿ ಕಜಂಪಾಡಿ ಸುಬ್ರಹ್ಮಣ್ಯ ಭಟ್ ಮತ್ತು ಮುಖ್ಯ ಅತಿಥಿಗಳಾಗಿ ಡಾ. ಅನಂತ ಪದ್ಮನಾಭ ಪಾಲ್ಗೊಳ್ಳಲಿದ್ದಾರೆ.
ಸಭೆಯಲ್ಲಿ ಎಂ.ಕೆ. ಪ್ರಾಣೇಶ್, ದೀಪಕ್ ದೊಡ್ಡಯ್ಯ, ಕಾ.ದಾ. ಕೃಷ್ಣರಾಜ್, ಆಶಾ ಮೋಹನ್, ಬಸವರಾಜ್, ದಿಲೀಪ್ ಕನ್ನಗೆರೆ, ಬಿ.ಎನ್. ಜಯಂತ್, ಕೆ.ಹೆಚ್. ವೆಂಕಟೇಶ್, ಉಪೇಂದ್ರ, ಪ್ರಸನ್ನ ಗೌಡಳ್ಳಿ, ನಯನ ತಳವಾರ, ಸುಂದ್ರೇಶ್ ಕೊಣಗೆರೆ, ಉಮಾಶಂಕರ್, ಸುಧಿಧೀರ್, ಪುರುಷೋತ್ತಮ್, ನಾರಾಯಣ ಆಚಾರ್, ವಿನಯ್ ಹಳೇಕೋಟೆ, ಪೂರ್ಣೇಶ್ವರಿ ಲಕ್ಷ್ಮಣಗೌಡ, ಸರೋಜ ಸುರೇಂದ್ರ, ಉತ್ತಮ್, ಪಟೇಲ್ ಮಂಜು, ಧನಿಕ್, ದಿಧೀಕ್ಷಿತ್ ಮತ್ತಿತರರಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
CT Ravi:ಪ್ರಕರಣ ಮುಗಿದ ಬಳಿಕ ಧರ್ಮಸ್ಥಳಕ್ಕೂ,ಸವದತ್ತಿ ಯಲ್ಲಮ್ಮನ ದೇವಸ್ಥಾನಕ್ಕೂ ಹೋಗುತ್ತೇನೆ
Mudigere: ಆಕಸ್ಮಿಕ ಬೆಂಕಿ ತಗುಲಿ ಕಟ್ಟಡದಲ್ಲಿದ್ದ ಫೈನಾನ್ಸ್ ಕಚೇರಿಗೆ ಬೆಂಕಿ ಸುಟ್ಟು ಭಸ್ಮ
Derogatory Remark: ಧರ್ಮಸ್ಥಳದಲ್ಲಿ ಆಣೆ, ಪ್ರಮಾಣ ಮುಗಿದ ಕತೆ: ಸಿ.ಟಿ.ರವಿ
ಸುಮ್ನೆ ಬ್ಯಾಂಡೇಜ್ ಹಾಕಿಕೊಳ್ಳಲು ಯಾರಿಗೂ ತಲೆ ಕೆಟ್ಟಿಲ್ಲ: ಸಿ.ಟಿ.ರವಿ ಪತ್ನಿ ಪಲ್ಲವಿ
ಬಿಜೆಪಿ, ಕಾಂಗ್ರೆಸ್‌ಗೆ ಪ್ರತ್ಯೇಕ ಕಾನೂನಿಲ್ಲ, ನನ್ನ ದೂರಿಗೆ ಕ್ರಮವಿಲ್ಲವೇಕೆ?: ಸಿ.ಟಿ.ರವಿ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.