ಒತ್ತುವರಿ ಭೂಮಿ ಗುತ್ತಿಗೆ ನೀಡುವ ನೀತಿ ಕೈಬಿಡಿ

Team Udayavani, May 17, 2022, 3:56 PM IST

mudigere

ಮೂಡಿಗೆರೆ: ರಾಜ್ಯ ಸರಕಾರ ಒತ್ತುವರಿ ಭೂಮಿಯನ್ನು ಗುತ್ತಿಗೆ ನೀಡುವ ನೀತಿಯನ್ನು ಕೂಡಲೇ ಕೈಬಿಡಬೇಕೆಂದು ಆಗ್ರಹಿಸಿ ಸರಕಾರಿ ಒತ್ತುವರಿ ಭೂಮಿ ಗುತ್ತಿಗೆ ವಿರೋಧಿ ಹೋರಾಟ ಸಮಿತಿಯಿಂದ ತಾಲೂಕು ಕಚೇರಿ ಎದುರು ಧರಣಿ ನಡೆಸಲಾಯಿತು.

ಸಮಿತಿಯ ಕಾರ್ಯದರ್ಶಿ ಹಾಗೂ ಸಿಪಿಐಎಂಎಲ್‌ ರಾಜ್ಯ ಕಾರ್ಯದರ್ಶಿ ಬಿ. ರುದ್ರಯ್ಯ ಮಾತನಾಡಿ, ಸರಕಾರಿ ಭೂಮಿಯನ್ನು ಭೂ ಮಾಲೀಕರಿಗೆ ಗುತ್ತಿಗೆ ನೀಡುವ ಮೂಲಕ ಪ್ರಜಾಪ್ರಭುತ್ವ, ಪರಿಸರ ವಿರೋಧಿ, ದುಡಿಯುವ ವರ್ಗದ ವಿರೋಧಿ ನೀತಿ ಅನುಸರಿಸಲಾಗಿದೆ. ರಾಜ್ಯದಲ್ಲಿ ಲಕ್ಷಾಂತರ ಕೂಲಿ ಕಾರ್ಮಿಕರು, ದಲಿತರು, ಅಲ್ಪಸಂಖ್ಯಾತರು, ಹಿಂದುಳಿದ ವರ್ಗ, ನಿವೇಶನ ರಹಿತರು, ಅತಿವೃಷ್ಟಿ ದಾಳಿಗೆ ಸಿಲುಕಿದ ನಿರಾಶ್ರಿತರಿಗೆ ಭೂಮಿ ನೀಡಬೇಕಾದ ಸರಕಾರ, ಇವರನ್ನು ಹೊರತುಪಡಿಸಿ ಭೂ ಮಾಲೀಕರಿಗೆ 30 ವರ್ಷ ಸರಕಾರಿ ಒತ್ತುವರಿ ಭೂಮಿಯನ್ನು ಗುತ್ತಿಗೆ ನೀಡಲು ಮುಂದಾಗಿದೆ. ಕಂದಾಯ ಸಚಿವ ಆರ್‌. ಅಶೋಕ್‌ ಅವರು ಕೂಲಿ ಕಾರ್ಮಿಕರ, ಬಡವರ ನೆರವಿಗೆ ಬಾರದೆ ಭೂ ಮಾಲೀಕರ ಏಜೆಂಟರಂತೆ ಕೆಲಸ ಮಾಡುತ್ತಿರುವುದು ಖಂಡನೀಯ. ರಾಜ್ಯದಲ್ಲಿ ಈಗಾಗಲೇ 300 ಕ್ಕೂ ಅಧಿಕ ಸಂಘಟನೆಗಳು ನಮ್ಮ ಹೋರಾಟಕ್ಕೆ ಬೆಂಬಲ ಸೂಚಿಸಿದ್ದು, ಹೋರಾಟ ಇನ್ನಷ್ಟು ತೀವ್ರಗೊಳ್ಳಲಿದೆ. ನಮ್ಮ ಬೇಡಿಕೆಯನ್ನು ಸರಕಾರ ಈಡೇರಿಸದಿದ್ದರೆ ಮುಂದಿನ 15 ದಿನಗಳ ನಂತರ ಸತ್ಯಾಗ್ರಹ ನಡೆಸಲಾಗುವುದು ಎಂದು ಎಚ್ಚರಿಕೆ ನೀಡಿದರು.

ಸಮಿತಿ ಅಧ್ಯಕ್ಷ ಯು.ಬಿ.ಮಂಜಯ್ಯ ಮಾತನಾಡಿ, ಒತ್ತುವರಿ ಭೂಮಿಯ ಗುತ್ತಿಗೆ ನೀಡುವ ನೀತಿ ಕೈ ಬಿಡಬೇಕು. ಅಕ್ರಮ ಒತ್ತುವರಿ ಭೂಮಿಯನ್ನು ತೆರವುಗೊಳಿಸಿ ಭೂಹೀನ ಬಡವರಿಗೆ ತಲಾ 3 ಎಕರೆ ಭೂಮಿ ನೀಡಬೇಕು. ತಾಲೂಕಿನಲ್ಲಿ ನಿವೇಶನ ರಹಿತರ ಪಟ್ಟಿ ತಯಾರಿಸಿ ನಿವೇಶನ ಭೂಮಿ ಕಾಯ್ದಿರಿಸಿ ಫಲಾನುಭವಿಗಳಿಗೆ ಹಂಚಿಕೆ ಮಾಡಬೇಕು. ದಲಿತರಿಗೆ ಮಂಜೂರಾದ ಭೂಮಿಯನ್ನು ದುರಸ್ತಿಪಡಿಸಿ ಸ್ವಾಧೀನಕ್ಕೆ ನೀಡಬೇಕು. 1975ರಿಂದ ದಲಿತ, ಆದಿವಾಸಿ ಬಡವರಿಗೆ ಮಂಜೂರಾದ ಭೂಮಿಯ ಒತ್ತುವರಿ ಪತ್ತೆ ಮಾಡಿ ಸಂಬಂಧಿಸಿದವರಿಗೆ ನೀಡಬೇಕು. ಮಲೆನಾಡು ಭೂಮಿಗೆ ಭೂ ಮಿತಿ ಕಾಯ್ದೆ ಜಾರಿಗೊಳಿಸಬೇಕು ಎಂದು ಆಗ್ರಹಿಸಿದರು.

ಬಳಿಕ ತಹಶೀಲ್ದಾರ್‌ ನಾಗರಾಜು ಮೂಲಕ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಲಾಯಿತು. ಬಿಎಸ್‌ಪಿ ರಾಜ್ಯ ಕಾರ್ಯದರ್ಶಿ ಜಾಕೀರ್‌ ಹುಸೇನ್‌, ತಾಲೂಕು ಅಧ್ಯಕ್ಷ ಲೋಕವಳ್ಳಿ ರಮೇಶ್‌, ಮುಖಂಡರಾದ ಸುರೇಂದ್ರ ಉಗ್ಗೇಹಳ್ಳಿ, ಬಕ್ಕಿ ರವಿ, ಶೇಖರ್‌ ಹೊಸಳ್ಳಿ, ಭಾನುಪ್ರಕಾಶ್‌, ಸುರೇಂದ್ರ, ಪಿ.ಕೆ. ಮಂಜುನಾಥ್‌, ಜಗದೀಶ್‌, ಕೃಷ್ಣ, ಸಿದ್ದೇಶ್‌, ಸುರೇಶ್‌ ಮತ್ತಿತರರಿದ್ದರು.

ಟಾಪ್ ನ್ಯೂಸ್

UP: ಹಾವು ಕಚ್ಚಿ ಮೂವರು ಮೃತ್ಯು, ಇಬ್ಬರು ಗಂಭೀರ… ಹಾವಾಡಿಗನ ಮೊರೆ ಹೋದ ಅಧಿಕಾರಿಗಳು

UP: ಹಾವು ಕಚ್ಚಿ ಮೂವರು ಮೃತ್ಯು, ಇಬ್ಬರು ಗಂಭೀರ… ಹಾವಾಡಿಗನ ಮೊರೆ ಹೋದ ಅಧಿಕಾರಿಗಳು

 India: ಮತ್ತೆ ಏರ್‌ ಇಂಡಿಯಾ, ವಿಸ್ತಾರ ಸೇರಿ 85 ವಿಮಾನಗಳಿಗೆ ನಕಲಿ ಬಾಂಬ್‌ ಬೆದರಿಕೆ ಕರೆ

 India: ಮತ್ತೆ ಏರ್‌ ಇಂಡಿಯಾ, ವಿಸ್ತಾರ ಸೇರಿ 85 ವಿಮಾನಗಳಿಗೆ ನಕಲಿ ಬಾಂಬ್‌ ಬೆದರಿಕೆ ಕರೆ

INDvsNZ: New Zealand caught in Washington’s spin web; All out for 259 run

INDvsNZ:  ವಾಷಿಂಗ್ಟನ್‌ ಸ್ಪಿನ್‌ ಜಾಲಕ್ಕೆ ಸಿಲುಕಿದ ಕಿವೀಸ್‌; 259 ರನ್‌ ಗೆ ಆಲೌಟ್

Salaar 2: ಪ್ರಭಾಸ್‌ – ಪ್ರಶಾಂತ್‌ ನೀಲ್‌ ʼಸಲಾರ್‌ -2ʼ ಶೂಟಿಂಗ್‌ ಆರಂಭ?

Salaar 2: ಪ್ರಭಾಸ್‌ – ಪ್ರಶಾಂತ್‌ ನೀಲ್‌ ʼಸಲಾರ್‌ -2ʼ ಶೂಟಿಂಗ್‌ ಆರಂಭ?

Udupi: ಸನಾತನ ಧರ್ಮದ ಸಂಸ್ಕೃತವು ವಿಶ್ವವನ್ನೇ ಸೆಳೆದಿದೆ: ಬಾಬಾ ರಾಮ್ ದೇವ್

Udupi: ಸಂಸ್ಕೃತ ಎಲ್ಲ ಭಾಷೆಗಳ ಮೂಲ.. ಪ್ರಾಚ್ಯವಿದ್ಯಾ ಸಮ್ಮೇಳನ ಉದ್ಘಾಟಿಸಿ ಬಾಬಾ ರಾಮ್ ದೇವ್

v

By Polls; ಕಳೆಗಟ್ಟಿದ ಚನ್ನಪಟ್ಟಣ; ಉಪಚುನಾವಣೆ ಅಭ್ಯರ್ಥಿ ಅಂತಿಮಗೊಳಿಸಿದ ಜೆಡಿಎಸ್

Bellary; ಯಾರೇ ಬಂದರೂ ಸಂಡೂರಿನಲ್ಲಿ ಕಾಂಗ್ರೆಸ್ ಗೆಲ್ಲುತ್ತದೆ: ಸಚಿವ ಸಂತೋಷ ಲಾಡ್

Bellary; ಯಾರೇ ಬಂದರೂ ಸಂಡೂರಿನಲ್ಲಿ ಕಾಂಗ್ರೆಸ್ ಗೆಲ್ಲುತ್ತದೆ: ಸಚಿವ ಸಂತೋಷ ಲಾಡ್

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Chikkamagaluru:ದತ್ತಮಾಲಾ ಅಭಿಯಾನ: ಜಿಲ್ಲಾಡಳಿತ ಷರತ್ತು

Chikkamagaluru:ದತ್ತಮಾಲಾ ಅಭಿಯಾನ: ಜಿಲ್ಲಾಡಳಿತ ಷರತ್ತು

Chikkamagaluru: ಬಾವನನ್ನು ಇಟ್ಟಿಗೆಯಿಂದ ಹೊಡೆದು ಕೊಲೆ ಮಾಡಿದ ಭಾಮೈದ

Chikkamagaluru: ಬಾವನನ್ನು ಇಟ್ಟಿಗೆಯಿಂದ ಹೊಡೆದು ಕೊ*ಲೆ ಮಾಡಿದ ಭಾಮೈದ

12

Chikkamagaluru: ಭಾರೀ ಮಳೆ; ರಸ್ತೆ ಕಾಣದೆ ಕಾರುಗಳು ಮುಖಾಮುಖಿ ಡಿಕ್ಕಿ

rain

Chikkamagaluru; ಭಾರೀ ಮಳೆ ಸಾಧ್ಯತೆ: ಸಾರ್ವಜನಿಕರು, ಪ್ರವಾಸಿಗರಿಗೆ ಎಚ್ಚರಿಕೆ

Chikkamagaluru: ಮಲೆನಾಡಿನಲ್ಲಿ ಮಳೆಯ ಅಬ್ಬರ… ಸಾವಿರಾರು ಎಕರೆ ಬೆಳೆ ಜಲಾವೃತ

Chikkamagaluru: ಕಾಫಿನಾಡಿನಲ್ಲಿ ಮಳೆಯ ಅಬ್ಬರ… ಸಾವಿರಾರು ಎಕರೆ ಬೆಳೆ ಜಲಾವೃತ

MUST WATCH

udayavani youtube

ಡೂಪ್ಲಿಕೇಟ್ ಕೀ ಮಹತ್ವವೇನು ?

udayavani youtube

ಕಪ್ಪುಪಟ್ಟಿ ತೆಗೆಸಿದ ಚೀಫ್ ಜಸ್ಟೀಸ್ ಆಫ್ ಇಂಡಿಯಾ!

udayavani youtube

ಯಾಹ್ಯಾ ಸಿನ್ವಾರ್ ಹತ್ಯೆಯ ಡ್ರೋನ್ ವಿಡಿಯೋ ಬಿಡುಗಡೆ ಮಾಡಿದ ಇಸ್ರೇಲ್

udayavani youtube

ಡೂಪ್ಲಿಕೇಟ್ ಕೀ ಮಹತ್ವವೇನು ?

udayavani youtube

ಅಗಲಿದ ರತನ್ ಟಾಟಾಗೆ ಶ್ರದ್ಧಾಂಜಲಿ ಸಲ್ಲಿಸಿದ ಅಂಬಾನಿ ಕುಟುಂಬ

ಹೊಸ ಸೇರ್ಪಡೆ

UP: ಹಾವು ಕಚ್ಚಿ ಮೂವರು ಮೃತ್ಯು, ಇಬ್ಬರು ಗಂಭೀರ… ಹಾವಾಡಿಗನ ಮೊರೆ ಹೋದ ಅಧಿಕಾರಿಗಳು

UP: ಹಾವು ಕಚ್ಚಿ ಮೂವರು ಮೃತ್ಯು, ಇಬ್ಬರು ಗಂಭೀರ… ಹಾವಾಡಿಗನ ಮೊರೆ ಹೋದ ಅಧಿಕಾರಿಗಳು

 India: ಮತ್ತೆ ಏರ್‌ ಇಂಡಿಯಾ, ವಿಸ್ತಾರ ಸೇರಿ 85 ವಿಮಾನಗಳಿಗೆ ನಕಲಿ ಬಾಂಬ್‌ ಬೆದರಿಕೆ ಕರೆ

 India: ಮತ್ತೆ ಏರ್‌ ಇಂಡಿಯಾ, ವಿಸ್ತಾರ ಸೇರಿ 85 ವಿಮಾನಗಳಿಗೆ ನಕಲಿ ಬಾಂಬ್‌ ಬೆದರಿಕೆ ಕರೆ

INDvsNZ: New Zealand caught in Washington’s spin web; All out for 259 run

INDvsNZ:  ವಾಷಿಂಗ್ಟನ್‌ ಸ್ಪಿನ್‌ ಜಾಲಕ್ಕೆ ಸಿಲುಕಿದ ಕಿವೀಸ್‌; 259 ರನ್‌ ಗೆ ಆಲೌಟ್

Salaar 2: ಪ್ರಭಾಸ್‌ – ಪ್ರಶಾಂತ್‌ ನೀಲ್‌ ʼಸಲಾರ್‌ -2ʼ ಶೂಟಿಂಗ್‌ ಆರಂಭ?

Salaar 2: ಪ್ರಭಾಸ್‌ – ಪ್ರಶಾಂತ್‌ ನೀಲ್‌ ʼಸಲಾರ್‌ -2ʼ ಶೂಟಿಂಗ್‌ ಆರಂಭ?

Udupi: ಸನಾತನ ಧರ್ಮದ ಸಂಸ್ಕೃತವು ವಿಶ್ವವನ್ನೇ ಸೆಳೆದಿದೆ: ಬಾಬಾ ರಾಮ್ ದೇವ್

Udupi: ಸಂಸ್ಕೃತ ಎಲ್ಲ ಭಾಷೆಗಳ ಮೂಲ.. ಪ್ರಾಚ್ಯವಿದ್ಯಾ ಸಮ್ಮೇಳನ ಉದ್ಘಾಟಿಸಿ ಬಾಬಾ ರಾಮ್ ದೇವ್

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.