ಏಲಕ್ಕಿ ಬೆಳೆದು ಮಾದರಿಯಾದ ರೈತ!

ಸಾವಯವ ಪದ್ಧತಿಯಡಿ ಉತ್ತಮ ತೋಟ ರೂಪಿಸಿದ ಅರಣ್ಯ ಇಲಾಖೆ ನಿವೃತ್ತ ಗಾರ್ಡ್

Team Udayavani, Sep 9, 2020, 5:13 PM IST

ಏಲಕ್ಕಿ ಬೆಳೆದು ಮಾದರಿಯಾದ ರೈತ!

ತೀರ್ಥಹಳ್ಳಿ: ಎಡೆಬಿಡದೆ ಸದ್ದು ಮಾಡುವ ತುಂಗಾನದಿ ಹೊಳೆಯ ಮಧ್ಯ ಹೆಬ್ಬಂಡೆ ಜುಳುಜುಳು ನೀರಿನ ಶಬ್ದದ ನಡುವೆ ಪಕ್ಕದ ತೋಟದಲ್ಲಿ ವಿಸ್ತಾರವಾಗಿ ಹಸಿರು ಹೊದಿಕೆ ಹೊದ್ದಿರುವ ಅಡಿಕೆ ತೋಟ. ಮನೆಯ ಸುತ್ತಲೂ ಪಸರಿಸಿರುವ ವಿವಿಧ ತಳಿಯ ಸಸ್ಯ ರಾಶಿ.. ಇದರ ನಡುವೆ ಸಾವಯವ ಕೃಷಿ ನೆಚ್ಚಿಕೊಂಡುತಮ್ಮದೇ ಕಲ್ಪನೆಯಲ್ಲಿ ಜಮೀನನ್ನು ಸುಂದರವಾಗಿ ರೂಪಿಸಿರುವ ತಮ್ಮ 62 ವರ್ಷದ ಲಕ್ಷಿ¾àಪುರ ಅಶೋಕ್‌ ಅವರು ಏಲಕ್ಕಿ ಬೆಳೆದು ಮಾದರಿಯಾಗಿದ್ದಾರೆ.

ಮೇಲಿನ ಕುರುವಳ್ಳಿ ಗ್ರಾಪಂ ವ್ಯಾಪ್ತಿಯ ತುಂಬಡಿಯಲ್ಲಿ ಒಂದು ಎಕರೆ ಭೂಮಿಯಲ್ಲಿ ಅಡಕೆ, ತೆಂಗು, ಬಾಳೆ, ಕೋಕೋ, ವೀಳ್ಯದೆಲೆ, ಕಾಳುಮೆಣಸು, ಕಾಫಿ, ಏಲಕ್ಕಿ, ಜಾಯಿಕಾಯಿ, ಲವಂಗ ಸೇರಿದಂತೆ ಸ್ಥಳೀಯವಾಗಿ ಲಭ್ಯವಿರುವ ಔಷ ಧೀಯ ಸಸ್ಯಗಳುಒಳಗೊಂಡಂತೆ ಅವರ ತೋಟದಲ್ಲಿ ಗಿಡಗಳುಕಾಣಸಿಗುತ್ತವೆ. ನಿತ್ಯ ಬೆಳಗಾದರೆ ತೋಟದಲ್ಲಿಅವರು ಕಾಯಕವೇ ಕೈಲಾಸ ಎನ್ನುವ ಹಾಗೆತಮ್ಮದೇ ಕನಸಿನಂತೆ ಜಮೀನನ್ನು, ರೂಢಿಸಿಕೊಂಡು ಬರುತ್ತಿದ್ದಾರೆ.

ಅಶೋಕ್‌ ಅವರು ಈ ಹಿಂದೆ ಅರಣ್ಯ ಇಲಾಖೆಯ ವಾಚರ್‌ ಆಗಿ ನಂತರ ಕೆಲವು ಸಮಯ ಗಾರ್ಡ್‌ ಆಗಿ ನಿವೃತ್ತಿ ಪಡೆದು ಇದೀಗ ಕೃಷಿ ಕ್ಷೇತ್ರದಲ್ಲಿ ತೊಡಗಿದ್ದಾರೆ. ತಮ್ಮ ತೋಟದ ಮಧ್ಯೆ ದನದ ಕೊಟ್ಟಿಗೆ ನಿರ್ಮಿಸಿ ಎರಡು ಎಚ್‌ಎಫ್‌ ಜರ್ಸಿ ದನಗಳನ್ನು ಸಾಕಿ ಹೈನುಗಾರಿಕೆಯನ್ನು ಸಹ ಮಾಡುತ್ತ ನಿತ್ಯ ತಮ್ಮ ಉಪ ಕಸುಬಿನ ಜೊತೆಗೆ ಹಾಲು ಮಾರಾಟದಲ್ಲೂ ನಿರತರಾಗಿದ್ದಾರೆ. ಕೃಷಿಯಲ್ಲಿ ಪ್ರೇರಿತರಾದ ಇವರು ಒಮ್ಮೆ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ವತಿಯಿಂದ ನಿಯೋಜನೆ ಮಾಡಿದ ಪ್ರವಾಸದಲ್ಲಿತೊಡಗಿ ಸಾಗರದಲ್ಲಿ ಒಬ್ಬರು ಪ್ರಗತಿಪರ ಕೃಷಿಕರು ತೋಟದಲ್ಲಿ ತೊಡಗಿಸಿದ ಸಾವಯವ ಗೊಬ್ಬರ ಮಿಶ್ರಣ ಸಂಗ್ರಹಣಾ ಘಟಕ ನೋಡಿ ಬಂದುತಮ್ಮ ತೋಟದಲ್ಲಿ ಯಾಕೆ ಇದನ್ನು ಅಳವಡಿಸಬಾರದು ಎಂಬ ಕಲ್ಪನೆಯಿಂದ ತಮ್ಮ ತೋಟದ ಮಧ್ಯೆ ಒಂದುಸಾವಿರ ಲೀಟರ್‌ ಸಾಮರ್ಥಯದ ಟ್ಯಾಂಕ್‌ ಇಟ್ಟು ಅದರಿಂದ ನೂರು ಮೀಟರ್‌ ದೂರವಿರುವ ಕೊಟ್ಟಿಗೆಗೆ ಪೈಪ್‌ ಮುಖಾಂತರ ಸಂಪರ್ಕ ಅಳವಡಿಸಿದ್ದಾರೆ.

ಕೊಟ್ಟಿಗೆಯಲ್ಲಿ ತಾವು ನಿತ್ಯ ದನಗಳನ್ನು ತೊಳೆದ ನೀರು ಹಾಗೂ ಗೋಮೂತ್ರ ಮಿಶ್ರಿತ ಸಗಣಿ ನೀರುಹಾದು ಹೋಗಿ ತೋಟದ ಮಧ್ಯದಲ್ಲಿರುವ ಟ್ಯಾಂಕ್‌ಗೆ ತುಂಬುತ್ತದೆ. ಈ ನೀರು ಕೆಲವೇ ವಾರದಲ್ಲಿ ಜೀವಾಮೃತವಾಗಿ ಪರಿವರ್ತನೆಗೊಳ್ಳುತ್ತದೆ. ಈ ಪರಿವರ್ತನೆಯಾದ ಗೋಮೂತ್ರ ತಾವು ಬೆಳೆದ ಏಲಕ್ಕಿ, ಕಾಳುಮೆಣಸು ಇನ್ನಿತರ ಸಸಿಗಳಿಗೆ ಹಾಕಿ ಉತ್ತಮ ಇಳುವರಿ ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ. ಅವರ ಸಾವಯವ ಕೃಷಿಗೆ ಮಡದಿ ಗಂಗಮ್ಮ ಮತ್ತು ಮಗ ಅರುಣ್‌ ಕುಮಾರ್‌ ಅವರ ಅವರ ಸಂಪೂರ್ಣ ಸಹಕಾರವಿದ್ದು ಎಲ್ಲಾ ಕೆಲಸ ಕಾರ್ಯಗಳಿಗೆ ಜೊತೆಗೂಡುತ್ತಾರೆ. ತೀರ್ಥಹಳ್ಳಿಯ ಕುರುವಳ್ಳಿ ಪುತ್ತಿಗೆ ಮಠ ರಸ್ತೆಯಲ್ಲಿ ಒಂದೂವರೆ ಕಿಮೀ ಹೋದರೆ ತುಮ್ಡಿ ಸಮೀಪದಲ್ಲಿ ಅಶೋಕ್‌ ಅವರ ಮನೆ ಇದೆ. ಚಿಕ್ಕಮಗಳೂರು ಜಿಲ್ಲೆಯ ಕೊಪ್ಪದಏಲಕ್ಕಿ ಬೋರ್ಡ್‌, ಫಾರಂನಿಂದ ಒಂದೆರಡು ಏಲಕ್ಕಿ ಗಿಡ ತಂದು ಮೊದಲ ಬಾರಿಗೆ ನೆಟ್ಟಿದ್ದಾರೆ. ನಂತರ ಗಿಡ ಮಾಡಿ ತಮ್ಮ ತೋಟದ ಮಧ್ಯೆ ನೆಟ್ಟು ಸ್ವತಃ ತಾವೇ ಕೃಷಿಯಲ್ಲಿ ತೊಡಗಿ ಉತ್ತಮ ಇಳುವರಿ ಪಡೆದು ತಮ್ಮ ಆದಾಯ ದುಪ್ಪಟ್ಟು ಹೆಚ್ಚಿಗೆ ಮಾಡಿಕೊಂಡಿದ್ದಾರೆ. ಆಸಕ್ತರು ಹೆಚ್ಚಿನ ಮಾಹಿತಿಗಾಗಿ ಅವರನ್ನು (ದೂ: 9731159612)ಸಂಪರ್ಕಿಸಬಹುದು.

ಕೋವಿಡ್ ಮಹಾಮಾರಿಗೆ ಹೆದರಿ ಮಾನಸಿಕ ನೆಮ್ಮದಿ ಹುಡುಕಿಕೊಂಡು ಇಂದು ಬೆಂಗಳೂರಿನಂತಹ ಮಹಾನಗರಗಳಿಂದ ಹಳ್ಳಿ ಕಡೆಗೆ ಜನರು ಮತ್ತು ಯುವಕರು ಮುಖ ಮಾಡುತ್ತ ಇದ್ದಾರೆ.ಇದರಿಂದ ಹಳ್ಳಿಗಳಲ್ಲಿ ಎಷ್ಟೋ ಪಾಳು ಬಿದ್ದ ಜಾಗಗಳು ಕೃಷಿ ಭೂಮಿಯಾಗಿ ಪರಿವರ್ತನೆಆಗುತ್ತಿರುವುದು ಸಂತೋಷ ತಂದಿದೆ. ಇದು ಆಶಾದಾಯಕ ಬೆಳವಣಿಗೆ ಕೂಡ. – ಎಲ್‌. ಟಿ. ಅಶೋಕ್‌, ಸಾವಯವ ಕೃಷಿಕ

 

-ಶ್ರೀಕಾಂತ್‌ ವಿ. ನಾಯಕ್‌

ಟಾಪ್ ನ್ಯೂಸ್

5–COPD

COPD: ಕ್ರೋನಿಕ್‌ ಒಬ್‌ಸ್ಟ್ರಕ್ಟಿವ್‌ ಪಲ್ಮನರಿ ಡಿಸೀಸ್‌ (ಸಿಒಪಿಡಿ)

Maryade Prashne Review

Maryade Prashne Review: ಮಧ್ಯಮ ವರ್ಗದ ಮರ್ಯಾದೆ ಹೋರಾಟ

4-Laparoscopic

Laparoscopic surgery: ಸಂತಾನೋತ್ಪತ್ತಿ ಹೆಚ್ಚಿಸುವ ಲ್ಯಾಪರೊಸ್ಕೋಪಿಕ್ ಶಸ್ತ್ರಚಿಕಿತ್ಸೆ

3-darshan

Renukaswamy Case: ಹತ್ಯೆ ಸ್ಥಳದಲ್ಲಿ ನಟ ದರ್ಶನ್‌: ಫೋಟೋ ಸಾಕ್ಷ್ಯ

2–Chennamman-Kittur

Chennamman-Kittur: ಯೋಧ ನರೇಶ ಯಲ್ಲಪ್ಪ ಅಗಸರ ಕೆರೆಗೆ ಹಾರಿ ಆತ್ಮಹತ್ಯೆ

Kukke-Subhramanaya

Subhramanya: ಕುಕ್ಕೆ ಶ್ರೀಸುಬ್ರಹ್ಮಣ್ಯ ದೇವಸ್ಥಾನದ ಸೇವೆಗಳಲ್ಲಿ ವ್ಯತ್ಯಯ

Shivaraj-Kumar

Health Issue: ಸರ್ಜರಿಗಾಗಿ ಮುಂದಿನ ತಿಂಗಳು ಅಮೆರಿಕಕ್ಕೆ ಹೋಗುವೆ: ನಟ ಶಿವರಾಜ್‌ಕುಮಾರ್‌


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

15-

Chikkamagaluru: ಆಕಸ್ಮಿಕ ಬೆಂಕಿ ತಗುಲಿ ಸಂಪೂರ್ಣ ಸುಟ್ಟು ಭಸ್ಮವಾದ ಗುಡಿಸಲು

1-dp

Datta peeta; ಸರಕಾರ ನೇಮಕ ಮಾಡಿದ್ದ ಅರ್ಚಕ ರಾಜೀನಾಮೆ

Kottigehara: ಅಪಘಾತದಿಂದ ಗಾಯಗೊಂಡ ನಾಗರಹಾವಿಗೆ ಚಿಕಿತ್ಸೆ

Kottigehara: ಅಪಘಾತದಿಂದ ಗಾಯಗೊಂಡ ನಾಗರಹಾವಿಗೆ ಚಿಕಿತ್ಸೆ

13-

Chikkamagaluru: ಅಪರಿಚಿತ ವಾಹನ ಡಿಕ್ಕಿಯಾಗಿ ಕಂಡಕ್ಟರ್ ಸಾವು

11-elephant

Chikkamagaluru: ನಾವು ನಡೆದಿದ್ದೇ ದಾರಿ, ನಡಿ ಮಗಾ….ಮರಿ ಆನೆಗೆ ನಡೆಯಲು ಕಲಿಸಿದ ತಾಯಿ ಆನೆ

MUST WATCH

udayavani youtube

ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು

udayavani youtube

ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?

udayavani youtube

ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್‌ |

udayavani youtube

ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್

udayavani youtube

ಉಡುಪಿ ಶ್ರೀ ಕೃಷ್ಣ ಮಠದಲ್ಲಿ ಬೃಹತ್ ಗೀತೋತ್ಸವಕ್ಕೆ ಅದ್ದೂರಿ ಚಾಲನೆ|

ಹೊಸ ಸೇರ್ಪಡೆ

5–COPD

COPD: ಕ್ರೋನಿಕ್‌ ಒಬ್‌ಸ್ಟ್ರಕ್ಟಿವ್‌ ಪಲ್ಮನರಿ ಡಿಸೀಸ್‌ (ಸಿಒಪಿಡಿ)

Maryade Prashne Review

Maryade Prashne Review: ಮಧ್ಯಮ ವರ್ಗದ ಮರ್ಯಾದೆ ಹೋರಾಟ

4-Laparoscopic

Laparoscopic surgery: ಸಂತಾನೋತ್ಪತ್ತಿ ಹೆಚ್ಚಿಸುವ ಲ್ಯಾಪರೊಸ್ಕೋಪಿಕ್ ಶಸ್ತ್ರಚಿಕಿತ್ಸೆ

3-darshan

Renukaswamy Case: ಹತ್ಯೆ ಸ್ಥಳದಲ್ಲಿ ನಟ ದರ್ಶನ್‌: ಫೋಟೋ ಸಾಕ್ಷ್ಯ

2–Chennamman-Kittur

Chennamman-Kittur: ಯೋಧ ನರೇಶ ಯಲ್ಲಪ್ಪ ಅಗಸರ ಕೆರೆಗೆ ಹಾರಿ ಆತ್ಮಹತ್ಯೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.