ಬಿಡಾಡಿ ದನ ನಿಯಂತ್ರಣಕ್ಕೆ ಕ್ರಮ
Team Udayavani, Aug 31, 2020, 7:20 PM IST
ಮೂಡಿಗೆರೆ: ಪಟ್ಟಣದಲ್ಲಿ ಜಾನುವಾರುಗಳ ಹಾವಳಿ ಅತಿಯಾಗಿದ್ದು ಅವುಗಳನ್ನು ವಶಕ್ಕೆ ತೆಗೆದುಕೊಳ್ಳುವಂತೆ ಸಾರ್ವಜನಿಕರು ಪಪಂಗೆ ದೂರು ನೀಡಿದ್ದರ ಹಿನ್ನೆಲೆಯಲ್ಲಿ ಪಪಂ ಅಧಿಕಾರಿಗಳು ಕಠಿಣ ಕ್ರಮಕ್ಕೆ ಮುಂದಾಗಿದ್ದಾರೆ.
ಪಪಂ ಮುಖ್ಯಾಧಿಕಾರಿ ಕೃಷ್ಣೇಗೌಡ ಅವರು, ಜಾನುವಾರು ಮಾಲೀಕರು ತಮ್ಮ ಜಾನುವಾರುಗಳನ್ನು ತಮ್ಮ ಮನೆಯಲ್ಲೇ ಕಟ್ಟಿಹಾಕುವಂತೆ ಒಂದು ತಿಂಗಳ ಹಿಂದೆಯೇ ಎಚ್ಚರಿಕೆ ನೀಡಿದ್ದರು. ಇದಾವುದಕ್ಕೂ ಬೆಲೆ ನೀಡದೆ ಇದ್ದ ಗೋವು ಮಾಲೀಕರ ನಿರಾಸಕ್ತಿಯನ್ನು ಕಂಡ ಅಧಿಕಾರಿಗಳು ಕೂಡಲೇ ಕಾರ್ಯರೂಪಕ್ಕೆ ಇಳಿದು ಜಾನವಾರು ಮಾಲೀಕರಿಗೆ ಬಿಸಿ ಮುಟ್ಟಿಸಿದ್ದಾರೆ. ಬೀದಿಗಳಲ್ಲಿ ಅಲೆಯುತ್ತಿದ್ದ ಕೆಲವು ಜಾನುವಾರುಗಳಲ್ಲಿ ಕೈಗೆ ಸಿಕ್ಕ ಐದು ಜಾನುವಾರುಗಳನ್ನು ಕಚೇರಿಯ ಆವರಣದಲ್ಲೆ ಕೂಡಿ ಹಾಕಿದ್ದರು. ರಾಸುಗಳ ಮಾಲೀಕರು ಕಚೇರಿಗೆ ಬಂದು ಬಿಡಿಸಿಕೊಂಡು ಹೋಗದೇ ಇದ್ದಲ್ಲಿ ಕೂಡಿಟ್ಟಿರುವಂತಹ ರಾಸುಗಳನ್ನು ಗೋಶಾಲೆಗೆ ಕಳಿಸಿ ಕೊಡುವುದಾಗಿ ಮಾಹಿತಿ ನೀಡಿದ್ದರು. ಜಾನುವಾರುಗಳನ್ನು ಕೂಡಿ ಹಾಕಿ ಒಂದು ವಾರವಾದರೂ ಜಾನುವಾರುಗಳ ಮಾಲೀಕರು ಬಾರದೆ ಇದ್ದುದನ್ನು ಕಂಡು ಕೂಡಿಹಾಕಿದ್ದ ಜಾನುವಾರುಗಳನ್ನು ಹಾಸನ ಜಿಲ್ಲೆಯ ಬಾಣಾವಾರದ ಶ್ರೀ ಭಗವಾನ್ ಗೋಶಾಲೆ ಟ್ರಸ್ಟ್‌ಗೆ ಕಳುಹಿಸಿಕೊಡಲಾಗಿದೆ.
ಐದು ಜಾನುವಾರುಗಳಲ್ಲಿ ಮೂರು ಹಸು, ಎರಡು ಹೋರಿಗಳಿದ್ದು ಅವುಗಳನ್ನು ಮುತುವರ್ಜಿಯಿಂದ ಬಿಟ್ಟು ಬಂದಿದ್ದು. ಇನ್ನು ಮುಂದಿನ ದಿನಗಳಲ್ಲಿ ಪಟ್ಟಣದ ಬೀದಿಗಳಲ್ಲಿ ಜಾನುವಾರುಗಳು ಓಡಾಡುವುದು ಕಂಡರೆ ಅವುಗಳನ್ನು ಗೋಶಾಲೆಗೆ ಕಳಿಸುವುದಾಗಿ ಮುಖ್ಯಾ ಧಿಕಾರಿ ಕೃಷ್ಣೇಗೌಡರು ಕಟ್ಟುನಿಟ್ಟಿನ ಎಚ್ಚರಿಕೆ ನೀಡಿದ್ದಾರೆ. ಕೆಲವು ಮಾಲೀಕರು ಹಸುವಿನ ಹಾಲನ್ನು ಕರೆದುಕೊಂಡು ನಂತರ ಅವುಗಳನ್ನು ರಸ್ತೆಗೆ ಬಿಡುತ್ತಿದ್ದಾರೆ. ಇದರಿಂದಾಗಿ ವಾಹನಗಳ ಮತ್ತು ಸಾರ್ವಜನಿಕರ ಓಡಾಟಕ್ಕೆ ತೊಂದರೆ ಆಗುತ್ತಿದೆ. ಕೆಲವು ಅಪರಿಚಿತರು ರಾತ್ರಿ ಸಮಯದಲ್ಲಿ ಬೀದಿಯಲ್ಲಿರುವಂತಹ ಜಾನುವಾರುಗಳನ್ನು ಕಸಾಯಿಖಾನೆಗೆ ಒಯ್ಯುತ್ತಿರುವ ಪ್ರಕರಣಗಳು ಹೆಚಾಗಿದ್ದು ಗೋವುಗಳ ರಕ್ಷಣೆ ಪ್ರತಿಯೊಬ್ಬರದ್ದಾಗಿದ್ದು ಅವುಗಳನ್ನು ಉಳಿಸುವ ಸದುದ್ದೇಶದಿಂದ ಗೋಶಾಲೆಗೆ ಕಳಿಸಲಾಗುತ್ತಿದೆ ಎಂದು ತಿಳಿಸಿದರು.
ಕಾರ್ಯಾಚರಣೆಯಲ್ಲಿ ಕಂದಾಯ ನಿರೀಕ್ಷಕರಾದ ಶರತ್ ಕುಮಾರ್, ಮಮತ, ಆರೋಗ್ಯಾಧಿಕಾರಿ ಪ್ರಕಾಶ್, ಕೃಷ್ಣಯ್ಯ ಮತ್ತಿತರರು ಇದ್ದರು
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಕಡೂರಲ್ಲಿ 40 ವರ್ಷದವರಿಗೂ ವೃದ್ದಾಪ್ಯ ವೇತನ! ಯೋಜನೆಯಲ್ಲಿ ಗೋಲ್‌ಮಾಲ್?
Chikkamagaluru: ನ.9ರಿಂದ 11ರ ತನಕ ದತ್ತಪೀಠಕ್ಕೆ ಪ್ರವಾಸಿಗರಿಗೆ ನಿರ್ಬಂಧ
Charmadi Ghat: ಚಾಲಕನ ನಿಯಂತ್ರಣ ತಪ್ಪಿ ಬಂಡೆಕಲ್ಲಿಗೆ ಡಿಕ್ಕಿ ಹೊಡೆದ ಕಾರು.. ಮಹಿಳೆ ಗಂಭೀರ
Hebbe Falls: ಸ್ನೇಹಿತರ ಜೊತೆ ಹೆಬ್ಬೆ ಜಲಪಾತದಲ್ಲಿ ಈಜಲು ಹೋಗಿ ಜೀವ ಕಳೆದುಕೊಂಡ ಪ್ರವಾಸಿಗ
Mudigere: ಬೀದಿನಾಯಿ ಅಡ್ಡಬಂದು ಅಪಘಾತ… ಬೈಕ್ ಸವಾರ ಸ್ಥಳದಲ್ಲೇ ಮೃತ್ಯು
MUST WATCH
ಹೊಸ ಸೇರ್ಪಡೆ
Waqf Bill: ಜೆಪಿಸಿ ಅಧ್ಯಕ್ಷರ ಭೇಟಿ ಚುನಾವಣ ನಿಯಮ ಉಲ್ಲಂಘನೆ: ಸಚಿವ ಪ್ರಿಯಾಂಕ್
MUDA: ಆರೋಪಿ ಸ್ಥಾನದಲ್ಲಿರುವ ಸಿಎಂ ತಮ್ಮ ಬೆನ್ನು ತಾವೇ ತಟ್ಟಿಕೊಳ್ಳುತ್ತಿದ್ದಾರೆ: ಬಿವೈವಿ
By Election: ಒಬ್ಬ ಯುವಕನ ಕಟ್ಟಿ ಹಾಕಲು ಬೀಡುಬಿಟ್ಟ ಕೈ ನಾಯಕರ ದಂಡು: ಎಚ್.ಡಿ.ಕುಮಾರಸ್ವಾಮಿ
Rahul Gandhi ಗುರಿ ತಪ್ಪಿದ ಕ್ಷಿಪಣಿ, ಸೋನಿಯಾರಿಂದ ತರಬೇತಿ ಅಗತ್ಯ: ಹಿಮಾಂತ
Delhi; ಕಾನೂನು ಅಧಿಕಾರಿ ನಿವಾಸದಲ್ಲಿ 3.79 ಕೋಟಿ ನಗದು ಸಿಬಿಐನಿಂದ ವಶಕ್ಕೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.