ನೀಗಲಿದೆ ಕುಡಿಯುವ ನೀರಿನ ಬವಣೆ
ಭದ್ರಾ ಮೇಲ್ದಂಡೆ ಯೋಜನೆ ಕಾಮಗಾರಿ ವೀಕ್ಷಿಸಿದ ಜಲಸಂಪನ್ಮೂಲ ಸಚಿವ ರಮೇಶ್ ಜಾರಕಿಹೊಳಿ
Team Udayavani, May 13, 2020, 6:22 PM IST
ಸಾಂದರ್ಭಿಕ ಚಿತ್ರ
ಅಜ್ಜಂಪುರ: ಭದ್ರಾ ಮೇಲ್ದಂಡೆ ಯೋಜನೆಯಿಂದ ಹಲವು ಜಿಲ್ಲೆಗಳ ಜನರ ಕುಡಿಯುವ ನೀರಿನ ಭವಣೆ ನೀಗಲಿದೆ. ಹಾಗಾಗಿ ತ್ವರಿತಗತಿಯ ಕಾಮಗಾರಿಗೆ ಸೂಚಿಸಲಾಗಿದೆ ಎಂದು ಜಲಸಂಪನ್ಮೂಲ ಸಚಿವ ರಮೇಶ್ ಜಾರಕಿಹೊಳಿ ತಿಳಿಸಿದರು.
ಅಜ್ಜಂಪುರ ಸಮೀಪದ ಹೆಬ್ಬೂರು ಗ್ರಾಮದ ಬಳಿ ಮಂಗಳವಾರ ನಡೆಯುತ್ತಿರುವ ಭದ್ರ ಮೇಲ್ದಂಡೆ ಕಾಮಗಾರಿ ವೀಕ್ಷಿಸಿ ಮಾತನಾಡಿದರು. ಕಾಮಗಾರಿಗೆ ಸರ್ಕಾರದ ವತಿಯಿಂದ ಸಂಪೂರ್ಣ ಸಹಕಾರವಿದೆ. ಹಣಕಾಸಿನ ಸಮಸ್ಯೆಯಿಲ್ಲ. ಮುಖ್ಯಮಂತ್ರಿಗಳು ನೀರಾವರಿಗೆ ಹೆಚ್ಚಿನ ಆದ್ಯತೆ ನೀಡುತ್ತಿದ್ದಾರೆ. ಕಾಮಗಾರಿ ಕಳಪೆ ಬಗ್ಗೆ ನಮಗೆ ಯಾವುದೇ ದೂರು ಬಂದಿಲ್ಲ. ಆ ರೀತಿ ದೂರು ಬಂದರೆ ಸೂಕ್ತ ಕ್ರಮಕೈಗೊಳ್ಳುವ ಭರವಸೆ ನೀಡಿದರು. ಭದ್ರ ಮೇಲ್ದಂಡೆ ಕಾಮಗಾರಿಯಿಂದ ಜಮೀನು ಕಳೆದುಕೊಂಡ ರೈತರಿಗೆ ಸೂಕ್ತ ಪರಿಹಾರ ನೀಡಿಲ್ಲ. ಅಧಿಕಾರಿಗಳು ಇತ್ತ ತಿರುಗಿ ನೋಡುತ್ತಿಲ್ಲ. ಕೂಡಲೇ ಪರಿಹಾರ ಕೊಡಿಸಿ ಎಂದು ರೈತರು ಮನವಿ ಮಾಡಿದರು.
ಇನ್ನೂ ಭದ್ರ ಮೇಲ್ದಂಡೆ ಯೋಜನೆ ಯಡಿ ಅಜ್ಜಂಪುರ ತಾಲೂಕಿನ ಸುಮಾರು 21 ಸಾವಿರ ಎಕರೆ ಪ್ರದೇಶಕ್ಕೆ ಹನಿ ನೀರಾವರಿ ಕಲ್ಪಿಸುವ ಕಾಮಗಾರಿ ನಡೆಯುತ್ತಿದ್ದು, ಇದು ಸಹ ಸಂಪೂರ್ಣ ಅವೈಜ್ಞಾನಿಕವಾಗಿದೆ. ಇದರಿಂದ ರೈತರಿಗೆ ಲಾಭಕ್ಕಿಂತ ನಷ್ಟವೇ ಜಾಸ್ತಿ ಎಂದು ರೈತ ಮಾರುತಿ ಅಸಮಧಾನ ವ್ಯಕ್ತಪಡಿಸಿದರು. ಹೆಬ್ಬೂರು ಗ್ರಾಮದ ಬಳಿ ರೈಲ್ವೆ ಅಂಡರ್ ಪಾಸ್ ರಸ್ತೆ ಕಾಮಾಗಾರಿ ನಡೆಯುತ್ತಿದ್ದು, ಇದು ಸಂಪೂರ್ಣವಾಗಿ ಕಳಪೆಯಾಗಿದೆ. ಇದರಿಂದ ಮಳೆಗಾಲದ ಪರಿಸ್ಥಿತಿಯಲ್ಲಿ ಈ ಭಾಗದಲ್ಲಿ ಸಂಚರಿಸುವ ಸಾವಿರಾರು ವಾಹನಗಳಿಗೆ ರೈತರಿಗೆ ಜಮೀನಿಗೆ ತೆರಳಲು ಸಾಕಷ್ಟು ತೊಂದರೆಯಾಗುತ್ತಿದೆ. ಸಚಿವರು ಕಾಮಗಾರಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಬೇಕು ಎಂದು ಹೆಬ್ಬೂರು ಗ್ರಾಮಸ್ಥರು ಸಚಿವರ ಕಾರು ತಡೆದು ಘೇರಾವ್ ಹಾಕಿದರು. ಸಚಿವರು ಸ್ಥಳೀಯ ಶಾಸಕರು ಮತ್ತು ಅಧಿಕಾರಿಗಳೊಂದಿಗೆ ಚರ್ಚಿಸಿ ಸೂಕ್ತ ಕ್ರಮಕೈಗೊಳ್ಳುವ ಭರವಸೆ ನೀಡಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಗುಜರಾತ್‌ಗೆ ತಲುಪಿಸಬೇಕಿದ್ದ ಕೋಟ್ಯಾಂತರ ರೂಪಾಯಿ ಮೌಲ್ಯದ ಅಡಿಕೆಯ ವಂಚಿಸಿದ ಖದೀಮರ ಸೆರೆ
C.T.Ravi ಪರವಾಗಿ ಸ್ವಾಮಿ ಕೊರಗಜ್ಜನ ಮೊರೆ ಹೋದ ಬಿಜೆಪಿ ಕಾರ್ಯಕರ್ತರು
Mahakumbha Mela: ಕುಂಭಮೇಳದಲ್ಲಿ ಶೃಂಗೇರಿ ಸಹಿತ 4 ಆಮ್ನಾಯ ಪೀಠದ ಶ್ರೀಗಳು ಭಾಗಿ
Threat letter: ಚಿಕ್ಕಮಗಳೂರು ಅಂಚೆ ಕಚೇರಿಯಿಂದ ಸಿ.ಟಿ.ರವಿಗೆ ಬೆದರಿಕೆಗೆ ಪತ್ರ ರವಾನೆ!
Kottigehara: ಸ್ವೀಟ್ ಬಾಕ್ಸ್‌ನಲ್ಲಿ ಗೋಮಾಂಸ ಇಟ್ಟು ಮಾರಾಟ: ಇಬ್ಬರ ಸೆರೆ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.