ಹನಿ ನೀರಾವರಿ ಕಾಮಗಾರಿಗೆ ಗ್ರಹಣ
ಗುತ್ತಿಗೆದಾರರು-ಅಧಿಕಾರಿಗಳ ನಿರ್ಲಕ್ಷ್ಯ ದಿಂದ ಒಣಗುತ್ತಿರುವ ತೋಟಗಳು
Team Udayavani, Mar 13, 2020, 12:54 PM IST
ಅಜ್ಜಂಪುರ: ಬಹು ನಿರೀಕ್ಷಿತ ಭದ್ರಾ ಮೇಲ್ದಂಡೆ ಯೋಜನೆಯಡಿ ನಡೆಯುತ್ತಿರುವ ಹನಿ ನೀರಾವರಿ ಕಾಮಗಾರಿಯ ವಿಳಂಬದಿಂದ ತೋಟಗಳು ಒಣಗುತ್ತಿದ್ದು, ರೈತರು ಅಸಹಾಯಕತೆಯಿಂದ ಕಣ್ಣೀರಿಡುವಂತಾಗಿದೆ.
ಅಜ್ಜಂಪುರ ತಾಲೂಕಿನ ಅನುವನಹಳ್ಳಿ ಶಿವನಿ ಗ್ರಾಮದಲ್ಲಿ ರೈತರ ತೋಟಗಳಲ್ಲಿ ಕಳೆದ 2 ತಿಂಗಳಿಂದ 4×4 ಅಳತೆಯಲ್ಲಿ ಹನಿ ನೀರಾವರಿ ಅಳವಡಿಸಲು ಭೂಮಿ ಅಗೆದಿದ್ದು, ಈವರೆಗೂ ಕಾಮಗಾರಿ ಪೂರ್ಣಗೊಂಡಿಲ್ಲ. ಸಂಬಂಧಪಟ್ಟ ಅಧಿಕಾರಿಗಳು ಇತ್ತ ತಿರುಗಿಯೂ ನೋಡುತ್ತಿಲ್ಲ.
ಭೂಮಿ ಅಗೆದ ಪರಿಣಾಮ 2 ಬದಿಯ ಸುಮಾರು 20-30 ವರ್ಷಗಳಿಂದ ಕಷ್ಟಪಟ್ಟು ಬೆಳೆದಿದ್ದ ಅಡಕೆ, ತೆಂಗಿನ ಮರಗಳು ಒಣಗುವ ಸ್ಥಿತಿ ತಲುಪಿವೆ. ಸಂಬಂಧಪಟ್ಟ ಅಧಿಕಾರಿಗಳಿ ಕರೆ ಮಾಡಿದರೆ ಕರೆ ಸ್ವೀಕರಿಸುತ್ತಿಲ್ಲ. ಯಾರೊಬ್ಬರೂ ನಮ್ಮ ಕಷ್ಟ ಆಲಿಸುತ್ತಿಲ್ಲ ಎನ್ನುತ್ತಾರೆ ಅನುವನಹಳ್ಳಿ ರೈತ ಮಹೇಶ್.
ಇಂದಿನ ಪರಿಸ್ಥಿತಿಯಲ್ಲಿ ಅತಿವೃಷ್ಟಿ-ಅನಾವೃಷ್ಟಿಯಿಂದ ರೈತ ಸಾಲದ ಸುಳಿಗೆ ಸಿಲುಕಿ ಸಾಯುವ ಸ್ಥಿತಿ ತಲುಪಿದ್ದಾನೆ. ಇಂತಹ ಪರಿಸ್ಥಿಯಲ್ಲಿ ಅಧಿಕಾರಿಗಳ ನಿರ್ಲಕ್ಷ್ಯದಿಂದ ನಮ್ಮ ತೋಟ ಒಣಗುವ ಸ್ಥಿತಿ ತಲುಪಿದೆ. ಇದಕ್ಕೆ ಅಧಿಕಾರಿಗಳೇ ಹೊಣೆಯಾಗಿ ನಷ್ಟ ಭರಿಸಬೇಕು ಎನ್ನುತ್ತಾರೆ ಶಿವನಿ ಗ್ರಾಮದ ರೈತ ಶ್ರೀನಿವಾಸ್.
ಅಜ್ಜಂಪುರ ತಾಲೂಕಿನ 21 ಸಾವಿರ ಎಕರೆ ಪ್ರದೇಶಕ್ಕೆ ಹನಿ ನೀರಾವರಿ ಕಲ್ಪಿಸುವ ಯೋಜನೆಗೆ 2017ರಲ್ಲಿ ಚಾಲನೆ ನೀಡಲಾಗಿತ್ತು. 2 ವರ್ಷದಲ್ಲಿ ಯೋಜನೆ ಪೂರ್ಣಗೊಳಿಸುವ ಭರವಸೆಯನ್ನು ಅಧಿಕಾರಿಗಳು ನೀಡಿದ್ದರು. ಆದರೆ 3ವರ್ಷ ಕಳೆದರೂ ಅರ್ಧದಷ್ಟು ಕಾಮಗಾರಿ ಪೂರ್ಣಗೊಂಡಿಲ್ಲ.
ಇನ್ನೂ ಪೂರ್ಣಗೊಂಡಿರುವ ಸಾಕಷ್ಟು ಕಾಮಗಾರಿಗಳು ಕಳಪೆಯಾಗಿವೆ. ರೈತರೊಂದಿಗೆ ಚರ್ಚಿಸದೆ ತಮಗಿಷ್ಟ ಬಂದ ಹಾಗೆ ಕಾಮಗಾರಿ ನಡೆಸುತ್ತಿದ್ದಾರೆ. ಕೇಳಿದರೆ ಉಡಾಫೆ ಉತ್ತರ ನೀಡುತ್ತಾ ಕಾಲಕಳೆಯುತ್ತಿದ್ದಾರೆ ಎಂದು ರೈತರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ರೈತರ ಜಮೀನಿನಲ್ಲಿ ಕಾಮಗಾರಿಪ್ರಾರಂಭಗೊಂಡು 3-4 ದಿನದೊಳಗಾಗಿ ಕಾಮಗಾರಿ ಪೂರ್ಣಗೊಳಿಸಬೇಕು ಎಂಬ ನಿಯಮವಿದ್ದರೂ ಅಧಿಕಾರಿಗಳು ಹಾಗೂ ಕಾಂಟ್ರ್ಯಾಕ್ಟರ್‌ಗಳ ನಿರ್ಲಕ್ಷ್ಯದಿಂದ ತಿಂಗಳುಗಳೇ ಕಳೆದರೂ ಕಾಮಗಾರಿ ಪೂರ್ಣಗೊಳ್ಳುತ್ತಿಲ್ಲ. ಇದರಿಂದ ರೈತರು ಸಾಕಷ್ಟು ನಷ್ಟ ಅನುಭವಿಸುವಂತಾಗಿದೆ.
ಅಧಿಕಾರಿಗಳ ನಿರ್ಲಕ್ಷ್ಯವೇ ರೈತನಿಗೆ ಶಾಪ
ಅಧಿಕಾರಿಗಳಿಗೆ ಕಾಮಗಾರಿ ಬಗ್ಗೆ ಮಾಹಿತಿಯಿಲ್ಲವಾದರೆ ಸಮಸ್ಯೆ ಗೆಹಿಸುವವರ್ಯಾರು. ಸರ್ಕಾರ ಹನಿ ನೀರಾವರಿ ಯೋಜನೆ ಕಲ್ಪಿಸುವುದರಿಂದ ಈ ಭಾಗದ ರೈತರಿಗೆ ಸಾಕಷ್ಟು ಅನುಕೂಲವಾಗಲಿದೆ. ಇನ್ನಾದರೂ ತಮ್ಮ ಬದುಕು ಬಂಗಾರವಾಗಲಿದೆ ಎಂಬ ಕನಸು ಹೊಂದಿದ್ದ ರೈತನಿಗೆ ಅಧಿಕಾರಿಗಳ ನಿರ್ಲಕ್ಷ್ಯ ಶಾಪವಾಗಿದೆ. ಆದರೆ, ಕಳೆದ 2 ತಿಂಗಳಿಂದ ಬಾರದ ಅಧಿಕಾರಿಗಳು ಕೇವಲ ಭರವಸೆ ನೀಡುತ್ತಿದ್ದಾರೆ. ಕೂಡಲೇ ನಮ್ಮ ಸಮಸ್ಯೆಗಳಿಗೆ ಸ್ಪಂದಿಸಬೇಕು. ನಷ್ಟದ ವೆಚ್ಚವನ್ನು ಭರಿಸಬೇಕು. ಇಲ್ಲವಾದರೆ ಬರಗಾಲದ ಈ ಸ್ಥಿತಿಯಲ್ಲಿ ಆತ್ಮಹತ್ಯೆಯೇ ನಮಗೆ ಉಳಿದಿರುವ ದಾರಿ ಎಂಬುದು ಅನ್ನದಾತರ ನೋವಿನ ಮಾತಾಗಿದೆ.
ತಾವು ಕಾಮಗಾರಿ ಪ್ರಾರಂಭಕ್ಕೂ ಮುನ್ನ ಮೆಗಾ ಹಾಗೂ ನೆಟಾಫಿನ್ ಹನಿ ನೀರಾವರಿ ಕಂಪನಿ ಜೊತೆ ಒಪ್ಪಂದ ಮಾಡಿಕೊಂಡಿದ್ದು, ಕೆಲಸದ ಸಮಯದಲ್ಲಿ ಶೇ. 60 ರಷ್ಟು ಹಣ ಹಾಗೂ ಕಾಮಗಾರಿ ಪೂರ್ಣಗೊಂಡ ನಂತರ ಶೇ. 40ರಷ್ಟು ಹಣ ನೀಡುವುದಾಗಿ ತಿಳಿಸಿದ್ದರು. ಇದೀಗ ಕೆಲಸ ಪ್ರಾರಂಭಿಸಿ 2 ತಿಂಗಳು ಕಳೆದರೂ ಹಣ ನೀಡುತ್ತಿಲ್ಲ. ಹಾಗಾಗಿ, ಕಾಮಗಾರಿ ಸ್ಥಗಿತಗೊಳಿಸಿದ್ದೇವೆ.
ಕಾಂತರಾಜು, ಕಾಂಟ್ರ್ಯಾಕ್ಟರ್
ಕೂಡಲೇ ರೈತರ ಜಮೀನುಗಳಿಗೆ ತೆರಳಿ ಅಗೆದಿರುವ ಭೂಮಿಯನ್ನು ಮುಚ್ಚಿಕೊಡಲಾಗುವುದು. ನಂತರ ಕಾಮಗಾರಿ ಪ್ರಾರಂಭಿಸಲಾಗುವುದು.
ಹರೀಶ್, ಮ್ಯಾನೇಜರ್, ಭದ್ರಾ
ಮೇಲ್ದಂಡೆ ಹನಿ ನೀರಾವರಿ ಕಾಮಗಾರಿ
ನಮಗೆ ಈ ಬಗ್ಗೆ ಮಾಹಿತಿಯಿಲ್ಲ. ಸ್ಥಳಕ್ಕೆ ತೆರಳಿ ಪರಿಶೀಲಿಸಲಾಗುವುದು.
ಸುರೇಶ್, ಎಇಇ, ಭದ್ರಾ
ಮೇಲ್ದಂಡೆ ಹನಿ ನೀರಾವರಿ
ಮಂಜುನಾಥ್ ಎನ್.ಎಸ್.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಗುಜರಾತ್‌ಗೆ ತಲುಪಿಸಬೇಕಿದ್ದ ಕೋಟ್ಯಾಂತರ ರೂಪಾಯಿ ಮೌಲ್ಯದ ಅಡಿಕೆಯ ವಂಚಿಸಿದ ಖದೀಮರ ಸೆರೆ
C.T.Ravi ಪರವಾಗಿ ಸ್ವಾಮಿ ಕೊರಗಜ್ಜನ ಮೊರೆ ಹೋದ ಬಿಜೆಪಿ ಕಾರ್ಯಕರ್ತರು
Mahakumbha Mela: ಕುಂಭಮೇಳದಲ್ಲಿ ಶೃಂಗೇರಿ ಸಹಿತ 4 ಆಮ್ನಾಯ ಪೀಠದ ಶ್ರೀಗಳು ಭಾಗಿ
Threat letter: ಚಿಕ್ಕಮಗಳೂರು ಅಂಚೆ ಕಚೇರಿಯಿಂದ ಸಿ.ಟಿ.ರವಿಗೆ ಬೆದರಿಕೆಗೆ ಪತ್ರ ರವಾನೆ!
Kottigehara: ಸ್ವೀಟ್ ಬಾಕ್ಸ್‌ನಲ್ಲಿ ಗೋಮಾಂಸ ಇಟ್ಟು ಮಾರಾಟ: ಇಬ್ಬರ ಸೆರೆ
MUST WATCH
ಹೊಸ ಸೇರ್ಪಡೆ
ಮೈಸೂರಿನ ಇನ್ಫೋಸಿಸ್ ಕ್ಯಾಂಪಸ್ ಚಿರತೆ ಸೆರೆ ಕಾರ್ಯಾಚರಣೆ ಸ್ಥಗಿತ
Hubballi: ವರೂರಿನ ನವಗ್ರಹ ತೀರ್ಥಕ್ಷೇತ್ರದಲ್ಲಿ ಮಹಾಮಸ್ತಕಾಭಿಷೇಕಕ್ಕೆ ವಿಧ್ಯುಕ್ತ ಚಾಲನೆ
Chikkaballapura: “ಈಶ’ದಲ್ಲಿ 54 ಅಡಿ ಎತ್ತರದ ತ್ರಿಶೂಲ ಲೋಕಾರ್ಪಣೆ
Chamarajpete: ಕೆಚ್ಚಲು ಕೊಯ್ದ ಕೇಸ್; 3 ಲಕ್ಷ ರೂ.ಮೌಲ್ಯದ 3 ಹಸು ಕೊಡಿಸಿದ ಸಚಿವ ಜಮೀರ್
Udupi: ಗೀತಾರ್ಥ ಚಿಂತನೆ-157: ಸೂಕ್ಷ್ಮ ಜಗತ್ತೂ, ಸ್ಥೂಲ ಜಗತ್ತೂ ಅನಂತ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.