ಹರಪನಹಳ್ಳಿಗೆ ವಾಪಾಸಾದ 74 ಕಾರ್ಮಿಕರು
Team Udayavani, Apr 30, 2020, 3:26 PM IST
ಆಲ್ದೂರು: 74 ಕಾರ್ಮಿಕರನ್ನು ಬುಧವಾರ ಸರ್ಕಾರಿ ಬಸ್‌ನಲ್ಲಿ ಹರಪನಹಳ್ಳಿಗೆ ಕಳುಹಿಸಿಕೊಡಲಾಯಿತು.
ಆಲ್ದೂರು: ಬನ್ನೂರು ಗ್ರಾಮದ ಸಿ.ಎ. ಕೃಷ್ಣೇಗೌಡ ಅವರ ಕಾಫಿ ತೋಟಕ್ಕೆ ಹರಪನಹಳ್ಳಿಯಿಂದ ಕೆಲಸ ಅರಸಿ ಬಂದಿದ್ದ 23 ಜನ ಹಾಗೂ ಗುಲ್ಲನ್‌ಪೇಟೆಯ ಮಹಮ್ಮದ್ ಜೆ. ಅವರ ಕಾಫಿ ತೋಟಕ್ಕೆ ಬಂದಿದ್ದ 18 ಜನ ಹಾಗೂ ಕಬ್ಬಿಣ ಸೇತುವೆ ಬಳಿ ತೋಟವೊಂದರಲ್ಲಿ ಕೆಲಸಕ್ಕೆ ಬಂದಿದ್ದ 33 ಜನ ಒಟ್ಟು 74 ಜನ ಕಾರ್ಮಿಕರನ್ನು ಬುಧವಾರ ಮೂರು ಸರ್ಕಾರಿ ಬಸ್‌ನಲ್ಲಿ ಗ್ರಾಮಕ್ಕೆ ವಾಪಸು ಕಳುಹಿಸಿಕೊಡಲಾಯಿತು.
ಕಾಫಿ ಕೊಯ್ಲು ಆರಂಭವಾದ್ದರಿಂದ ಈ ಕಾರ್ಮಿಕರು ಇಲ್ಲಿ ಕೆಲಸ ಮಾಡುತ್ತಿದ್ದರು. ಕೆಲಸ ಮುಗಿದು ವಾಪಾಸಾಗಬೇಕಾದ ಸಂದರ್ಭದಲ್ಲಿ ಭಾರತ ಲಾಕ್ ಡೌನ್ ಆದ ಕಾರಣ ತಮ್ಮ ಊರಿಗೆ ಹಿಂತಿರುಗಲು ಸಾಧ್ಯವಾಗದೆ ತೋಟದಲ್ಲೇ ಬಂಧಿಯಾಗಿದ್ದರು. ಬುಧವಾರ ಆಲ್ದೂರಿನ ಸರ್ಕಾರಿ ಆಸ್ಪತ್ರೆ, ವಸ್ತಾರೆ ಹಾಗೂ ಮಾಚಗೊಂಡನಹಳ್ಳಿಯ ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ಕಾರ್ಮಿಕರ ಪ್ರಾಥಮಿಕ ಆರೋಗ್ಯ ಪರೀಕ್ಷೆ ನಡೆಸಿ ನಂತರ ಬಸ್ ಮೂಲಕ ಅವರನ್ನು ಹರಪ್ಪನಹಳ್ಳಿಗೆ ಕಳುಹಿಸಲಾಯಿತು. ಉಪ ತಹಶೀಲ್ದಾರ್ ಸುಮಿತ್ರ, ರಾಜಸ್ವ ನಿರೀಕ್ಷಕ ವೆಂಕಟೇಶ್, ಗ್ರಾಮ ಲೆಕ್ಕಾಧಿಕಾರಿಗಳಾದ ಸಾರಿಕಾ, ಸಂದೀಪ್, ಸತ್ತಿಹಳ್ಳಿ ಗ್ರಾಪಂ ಅಭಿವೃದ್ಧಿ ಅಧಿಕಾರಿ ಪುರುಷೋತ್ತಮ್, ಪೊಲೀಸ್ ಸಿಬ್ಬಂದಿ ಶಿವಶಂಕರ್ ಇದ್ದರು.
ಶೃಂಗೇರಿ: ಕೂಲಿಗಾಗಿ ಹಾವೇರಿಯಿಂದ ಆಗಮಿಸಿ ಲಾಕ್‌ಡೌನ್ ಹಿನ್ನಲೆಯಲ್ಲಿ ಊರಿಗೆ ತೆರಳಲಾಗದೆ ಇಲ್ಲಿಯೇ ವಾಸ್ತವ್ಯವಿದ್ದ 24 ಕಾರ್ಮಿಕರನ್ನು ರಾಜ್ಯ ಉಪ ತಹಸೀಲ್ದಾರ್ ಶಿವರಾಂ ಮಾತನಾಡಿ, ಕಳೆದ ವರ್ಷ ಅಕ್ಟೋಬರ್-ನವೆಂಬರ್‌ನಲ್ಲಿ ಕೆಲಸಕ್ಕಾಗಿ ಹಾವೇರಿಯಿಂದ ಬಂದಿದ್ದ ಕಾರ್ಮಿಕರು ಲಾಕ್‌ಡೌನ್ ಆದ ನಂತರ ಕೆಲಸವೂ ಇಲ್ಲದೇ ಪರದಾಡುವಂತಾಗಿತ್ತು. ತೊಂದರೆಯಲ್ಲಿದ್ದ ಕಾರ್ಮಿಕರಿಗೆ ಶ್ರೀಮಠದಿಂದ ಮೂರು ಹೊತ್ತಿನ ಊಟ, ಉಪಾಹಾರ ವ್ಯವಸ್ಥೆ ಮಾಡಿತ್ತು. ಜಿಲ್ಲಾಡಳಿತದ ಸೂಚನೆ ಮೇರೆಗೆ ಇದೀಗ ಅವರ ಊರಿಗೆ ಕಳುಹಿಸಿಕೊಡಲಾಗುತ್ತಿದೆ. ರಾಣಿಬೆನ್ನೂರು, ಚಿತ್ರದುರ್ಗ ಮುಂತಾದೆಡೆಯಿಂದ ಬಂದಿದ್ದ ಇನ್ನಷ್ಟು ಕಾರ್ಮಿಕರಿಗೂ ಬಸ್ ವ್ಯವಸ್ಥೆಗೊಳಿಸಲಾಗಿದೆ ಎಂದರು. ವೃತ್ತ ನಿರೀಕ್ಷಕ ಸಿದ್ದರಾಮಯ್ಯ, ವಿದ್ಯಾರಣ್ಯಪುರ ಗ್ರಾಪಂ ಸಿಬ್ಬಂದಿ ರವಿ ಮತ್ತಿತರರು ಇದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Chikkamagaluru: ತಿಂಗಳ ಹಿಂದೆ ಮದುವೆಯಾಗಿದ್ದ ನವವಿವಾಹಿತೆ ನೇಣು ಬಿಗಿದು ಆತ್ಮಹತ್ಯೆ
CT Ravi:ಪ್ರಕರಣ ಮುಗಿದ ಬಳಿಕ ಧರ್ಮಸ್ಥಳಕ್ಕೂ,ಸವದತ್ತಿ ಯಲ್ಲಮ್ಮನ ದೇವಸ್ಥಾನಕ್ಕೂ ಹೋಗುತ್ತೇನೆ
Mudigere: ಆಕಸ್ಮಿಕ ಬೆಂಕಿ ತಗುಲಿ ಕಟ್ಟಡದಲ್ಲಿದ್ದ ಫೈನಾನ್ಸ್ ಕಚೇರಿಗೆ ಬೆಂಕಿ ಸುಟ್ಟು ಭಸ್ಮ
Derogatory Remark: ಧರ್ಮಸ್ಥಳದಲ್ಲಿ ಆಣೆ, ಪ್ರಮಾಣ ಮುಗಿದ ಕತೆ: ಸಿ.ಟಿ.ರವಿ
ಸುಮ್ನೆ ಬ್ಯಾಂಡೇಜ್ ಹಾಕಿಕೊಳ್ಳಲು ಯಾರಿಗೂ ತಲೆ ಕೆಟ್ಟಿಲ್ಲ: ಸಿ.ಟಿ.ರವಿ ಪತ್ನಿ ಪಲ್ಲವಿ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.