ಚನ್ನಪಟ್ಟಣದಿಂದ ಅನಿತಾ ಕಣಕ್ಕೆ?
Team Udayavani, Jan 20, 2018, 6:30 AM IST
ಚಿಕ್ಕಮಗಳೂರು: ಮುಂಬರುವ ವಿಧಾನ ಸಭಾ ಚುನಾವಣೆಯಲ್ಲಿ ಚನ್ನಪಟ್ಟಣ ಕ್ಷೇತ್ರದಿಂದ ಕಣಕ್ಕಿಳಿಯಲು ಯಾರೂ ಮುಂದೆ ಬರುತ್ತಿಲ್ಲ.
ಹೀಗೆಂದು ಆ ಕ್ಷೇತ್ರವನ್ನು ಖಾಲಿ ಬಿಡಲಾಗುತ್ತದೆಯೆ ಎಂದು ಪ್ರಶ್ನಿಸುವ ಮೂಲಕ ಅನಿತಾ ಕುಮಾರಸ್ವಾಮಿ ಈ ಕ್ಷೇತ್ರದಲ್ಲಿ ಕಣಕ್ಕಿಳಿಯಲಿದ್ದಾರೆ ಎಂಬುದನ್ನು ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡ ಪರೋಕ್ಷವಾಗಿ ತಿಳಿಸಿದರು.
ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, “ಚನ್ನಪಟ್ಟಣ ಕ್ಷೇತ್ರದಿಂದ ಕಣಕ್ಕೆ ಇಳಿಯಲು ಬಯಸುವವರು
ಮುಂದೆ ಬನ್ನಿ ಎಂದು ಹಲವು ಬಾರಿ ಹೇಳಲಾಗಿದೆ. ನಾನೇ ಸ್ವತ: ಸುಮಾರು 5 ಗಂಟೆಗಳ ಕಾಲ ಪಕ್ಷದ ಮುಖಂಡರು
ಗಳೊಂದಿಗೆ ಚರ್ಚಿಸಿದೆ. ಆದರೆ, ಯಾರೂ ಸಹ ಒಪ್ಪಿಗೆ ಸೂಚಿಸಿಲ್ಲ. ಹಾಗೆಂದ ಮಾತ್ರಕ್ಕೆ ಆ ಕ್ಷೇತ್ರದಲ್ಲಿ ಅಭ್ಯರ್ಥಿಯನ್ನು ಕಣಕ್ಕಿಳಿಸದೆ ಬಿಡಲಾಗುತ್ತದೆ?’ ಎಂದರು.
ಪ್ರಜ್ವಲ್ ರೇವಣ್ಣ ಕಳೆದ 5 ವರ್ಷಗಳಿಂದ ಪಕ್ಷದ ಕೆಲಸ ಮಾಡಿದ್ದಾನೆ. ಪ್ರಜ್ವಲ್ ವಿಚಾರಕ್ಕೂ ಅನಿತಾ ವಿಚಾರಕ್ಕೂ ಸಾಕಷ್ಟು ವ್ಯತ್ಯಾಸಗಳಿವೆ. ಅನಿತಾ ಕುಮಾರಸ್ವಾಮಿ ಹಲವು ಚುನಾವಣೆಯಲ್ಲಿ ಸ್ಪರ್ಧೆ ಮಾಡಿದ್ದಾರೆ. ಸೋಲು ಗೆಲುವು
ಎರಡನ್ನೂ ಕಂಡಿದ್ದಾರೆ. ಅನಿತಾ ಕುಮಾರಸ್ವಾಮಿಗೆ ಟಿಕೆಟ್ ಕೊಟ್ಟರೂ ಅವರು ನಮ್ಮ ಕುಟುಂಬದವರು ಎಂಬ ಕಾರಣಕ್ಕೆ ಕೊಡಲಾಗಿದೆ ಎನ್ನುವಂತಿಲ್ಲ. ಅವರೂ ಪಕ್ಷಕ್ಕಾಗಿ ದುಡಿದಿದ್ದಾರೆ ಎಂದರು.
ಕಾಂಗ್ರೆಸ್ ಈವರೆಗೂ ಹಾರ್ಡ್ ಹಿಂದುತ್ವದಡಿ ಕೆಲಸ ಮಾಡುತ್ತಿತ್ತು. ಈಗ ರಾಹುಲ್ ಗಾಂಧಿ ನಿರ್ದೇಶನದಂತೆ ಸಾಫ್ಟ್ ಹಿಂದುತ್ವ ಮಾಡಲು ಹೊರಟಿದೆ. ಆದರೆ, ನಮ್ಮದು ಸಾಪೂr ಅಲ್ಲ, ಹಾರ್ಡೂ ಅಲ್ಲ ಎಂದು ಇದೇ ವೇಳೆ ದೇವೇಗೌಡರು ವ್ಯಂಗ್ಯವಾಡಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Criminal case; ಏಕಕಾಲಕ್ಕೆ ಪಾಲಿಕೆ, ಮುಡಾದಲ್ಲಿ ಕೆಲಸ: ನೌಕರ ವಜಾ
CID ನೂತನ ಡಿಐಜಿಪಿ ಆಗಿ ಶಾಂತನು ಸಿನ್ಹಾ
Guarantee schemes; ಸಿದ್ದರಾಮಯ್ಯ ವಿರುದ್ಧದ ಅರ್ಜಿ: ವಿಚಾರಣೆ ಡಿ. 6ಕ್ಕೆ ಮುಂದೂಡಿಕೆ
Congress: ಸರ್ಕಾರದಲ್ಲಿ ಒಬ್ಬರು ಏತಿ ಅಂದರೆ ಮತ್ತೊಬ್ಬರು ಪ್ರೇತಿ ಅಂತಾರೆ: ಆರ್.ಅಶೋಕ್
50 cr for 50 Cong MLAs ; ಎಸ್ ಐಟಿ ತನಿಖೆಗೆ ಎಚ್.ಡಿ.ಕುಮಾರಸ್ವಾಮಿ ಒತ್ತಾಯ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.