ಕಸ್ತೂರಿ ರಂಗನ್ ವರದಿ ಜಾರಿ ವಿರೋಧಿಸಿ ಸುಪ್ರೀಂಗೆ ಮೇಲ್ಮನವಿ
Team Udayavani, Oct 8, 2018, 6:20 AM IST
ಚಿಕ್ಕಮಗಳೂರು: ಕಸ್ತೂರಿ ರಂಗನ್ ವರದಿ ಜಾರಿಗೊಳಿಸಲು ಸುಪ್ರೀಂಕೋರ್ಟ್‌ನ ಹಸಿರು ಪೀಠ ಕೇಂದ್ರ ಸರ್ಕಾರಕ್ಕೆ ಆದೇಶಿಸಿದ್ದು, ಇದರ ವಿರುದ್ಧ ಸುಪ್ರೀಂಕೋರ್ಟ್‌ಗೆ ಮೇಲ್ಮನವಿ ಸಲ್ಲಿಸಲಾಗುವುದು ಎಂದು ಪರಿಸರ ಹೋರಾಟಗಾರ ಕಲ್ಕುಳಿ ವಿಠuಲ ಹೆಗ್ಡೆ ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕಸ್ತೂರಿ ರಂಗನ್ ವರದಿ ಮಲೆನಾಡಿಗೆ ಮಾರಕವಾಗಿದೆ. ಗೋವಾ ಫೌಂಡೇಶನ್ ಸಲ್ಲಿಸಿರುವ ಅರ್ಜಿ ಪರಿಗಣಿಸಿ ಆರು ತಿಂಗಳೊಳಗೆ ವರದಿಯನ್ನು ಯಥಾವತ್ತಾಗಿ ಜಾರಿಗೊಳಿಸಲು ಹಸಿರು ಪೀಠ ಆದೇಶಿಸಿರುವುದು ದೇಶದ ಒಕ್ಕೂಟ ವ್ಯವಸ್ಥೆಗೆ ಧಕ್ಕೆ ತರುವಂತಿದೆ.
ಹಸಿರು ಪೀಠ ಸಾರ್ವಜನಿಕರ ಅರ್ಜಿ ಪರಿಗಣಿಸದೆ ಏಕಪಕ್ಷೀಯ ತೀರ್ಮಾನ ಕೈಗೊಂಡಂತಿದೆ ಎಂದು ಅಸಮಾಧಾನ
ವ್ಯಕ್ತಪಡಿಸಿದರು.
ಈ ವರದಿ ಜಾರಿಯಾದರೆ ಮಲೆನಾಡಿನ ಕೃಷಿ ಅಭಿವೃದ್ಧಿ ಕುಂಠಿತಗೊಳ್ಳುತ್ತದೆ. ವರದಿಯ ಪ್ರಕಾರ ಯಾವುದೇ ಕೀಟನಾಶಕ ಬಳಸುವಂತಿಲ್ಲ.
ಆದರೆ, ಮಲೆನಾಡು ಭಾಗದಲ್ಲಿ ಅಡಕೆ ಮತ್ತು ಕಾಫಿ ಕೊಳೆ ರೋಗ ನಿಯಂತ್ರಣಕ್ಕೆ ಬೋರ್ಡೊ ದ್ರಾವಣ ಸಿಂಪಡಿಸಬೇಕು. ಈ ಔಷಧ ಸಿಂಪರಣೆ ತಡೆಗೆ ಪರ್ಯಾಯ ವ್ಯವಸ್ಥೆಯನ್ನು ವರದಿಯಲ್ಲಿ ಸೂಚಿಸಿಲ್ಲ.
ಗ್ರಾಮೀಣ ಪ್ರದೇಶದಲ್ಲಿ ಹರಿಯುವ ಹಳ್ಳದ ನೀರನ್ನು ಬಳಸಲು ಪರಿಸರ ಇಲಾಖೆಯ ಅನುಮತಿ ಪಡೆಯಬೇಕಾಗಿದೆ. ಶೇ.30ರಷ್ಟು ನೀರನ್ನು ನಿರ್ಬಂಧಿಸುವಂತಿಲ್ಲ. ವರದಿ ಜಾರಿಯಾದರೆ ಕಾಫಿ ಫಿಲ್ಪಿಂಗ್‌ಗೂ ನಿರ್ಬಂಧ ಬರುತ್ತದೆ. ಕಾಡು ಉಳಿಸಿರುವ ಮಲೆನಾಡು ಜನರಿಗೆ ಮತ್ತಷ್ಟು ನಿರ್ಬಂಧ ಹೇರಲಾಗುತ್ತದೆ ಎಂದು ಹೇಳಿದರು.
ಈ ವರದಿ ಮಲೆನಾಡಿನ ಜನರ ಬದುಕಿಗೇ ಮಾರಕವಾಗಿದೆ. ಪಶ್ಚಿಮ ಘಟ್ಟ ಸಂರಕ್ಷಣೆ ಆಗಬೇಕು. ಆದರೆ, ರಕ್ಷಣೆ ಹೆಸರಲ್ಲಿ ಜನರಹಿತ ಮಲೆನಾಡು ಮಾಡಲು ಮುಂದಾಗಲಾಗುತ್ತಿದೆ. ಹೀಗಾಗಿ, ಸುಪ್ರೀಂಕೋರ್ಟ್‌ನಲ್ಲಿ ಈ ಬಗ್ಗೆ ಮೇಲ್ಮನವಿ ಸಲ್ಲಿಸಲಾಗುವುದು ಎಂದರು.
ಪಶ್ಚಿಮ ಘಟ್ಟಗಳನ್ನು ಪಾರಂಪರಿಕ ಪಟ್ಟಿಗೆ ಸೇರಿಸುವಂತೆ ಕಸ್ತೂರಿ ರಂಗನ್ ವರದಿ ಶಿಫಾರಸು ಮಾಡಿದ್ದರೂ ಕೂಡ
ಇದು 1980ರ ಅರಣ್ಯ ಕಾಯ್ದೆಗೆ ವಿರುದ್ಧವಾಗಿರುವುದರಿಂದ ರಾಜ್ಯ ಸರ್ಕಾರ ಯಾವುದೇ ಕಾರಣಕ್ಕೂ ಈ ಶಿಫಾರಸ್ಸನ್ನು ಒಪ್ಪಲು ಸಾಧ್ಯವಿಲ್ಲ.
– ಆರ್.ಶಂಕರ್ ಅರಣ್ಯ ಸಚಿವ
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.