ಉಳ್ಳಾ ಗಡ್ಡಿ ಬಿತ್ತನೆಗೆ ಸಿದ್ಧರಾದ ರೈತರು
ಸಾಧಾರಣ ತುಂತುರು ಮಳೆಯಾಗುತ್ತಿರುವ ಹಿನ್ನೆಲೆ
Team Udayavani, Jun 5, 2020, 5:26 PM IST
ಸಾಂದರ್ಭಿಕ ಚಿತ್ರವನ್ನು ಬಳಸಲಾಗಿದೆ – Representative Image Used
ಬೀರೂರು: ರೈತರು ತಮ್ಮ ಜಮೀನುಗಳತ್ತ ಮುಖ ಮಾಡುತ್ತಿದ್ದಾರೆ. ಮುಂಗಾರು ಆರಂಭವಾಗುತ್ತಿದ್ದಂತೆ ಬೀರೂರಿನ ಎರೆಭೂಮಿ ಮತ್ತು ಸುತ್ತಮುತ್ತಲ ಪ್ರದೇಶಗಳಲ್ಲಿ ಈರುಳ್ಳಿ ಬಿತ್ತನೆ ಕಾರ್ಯ ಭರದಿಂದ ಸಾಗಿದೆ.
ಬೀರೂರಿನಲ್ಲಿ ಸಾಮಾನ್ಯವಾಗಿ ಮಳೆಯಾಧಾರಿತ ಕೃಷಿಯೇ ಪ್ರಧಾನವಾಗಿದೆ. ವಾರದ ಮೊದಲು ಬಂದ ಮಳೆಗೆ ರೈತರು ಹೊಲಗಳ ಉಳುಮೆ ಮಾಡಿ ನೆಲವನ್ನು ಹರಗಿಸಿಕೊಂಡು ಬಿತ್ತನೆಗೆಂದು ಅಣಿ ಮಾಡಿಕೊಂಡಿದ್ದರು. ಎರಡು- ಮೂರು ದಿನಗಳಿಂದ ಸಾಧಾರಣ ತುಂತುರು ಮಳೆಯಾಗುತ್ತಿದ್ದು ಪಟ್ಟಣದ ರೈತರು ಸಿದ್ಧಪಡಿಸಿದ್ದ ಹೊಲಗಳಲ್ಲಿ ಕಾಯಕ ಆರಂಭಿಸಿದ್ದಾರೆ. ಬೀರೂರು ಹೋಬಳಿಯಲ್ಲಿ 338 ಹೆಕ್ಟೇರ್ ಈರುಳ್ಳಿ ಬೆಳೆಯುವ ಪ್ರದೇಶವಿದ್ದು, ಸುತ್ತಮುತ್ತಲ ಗ್ರಾಮಗಳಾದ ಜೋಡಿತಿಮ್ಮಾಪುರ, ಯರೇಹಳ್ಳಿ, ದೊಡ್ಡಘಟ್ಟ, ದೋಗಿಹಳ್ಳಿ ಇಂಗ್ಲಾರ್ನಹಳ್ಳಿ ಇನ್ನಿತರ ಗ್ರಾಮಗಳಲ್ಲಿ ಈರುಳ್ಳಿ ಭಿತ್ತನೆ ಆರಂಬಸಿದ್ದಾರೆ. ಅದಲ್ಲದೆ ಇತರೆ ದ್ವಿದಳ ಧಾನ್ಯಗಳಾದ ಉದ್ದು, ಹುರುಳಿ, ಶೇಂಗಾ ಬಿತ್ತುವ ಕಾರ್ಯದಲ್ಲಿ ತೊಡಗಿದ್ದಾರೆ.
ಕಡೂರು ಸಹಾಯಕ ತೋಟಗಾರಿಕೆ ಅಧಿಕಾರಿ ಸೈಯದ್ ರಶೀದ್ ಮಾಹಿತಿ ನೀಡಿ, ಬೀರೂರು ಭಾಗದಲ್ಲಿ ವಾಣಿಜ್ಯ ಬೆಳೆ ಅಡಕೆ, ತೆಂಗು ಹೆಚ್ಚು ಬೆಳೆಯುವ ಪ್ರದೇಶವಾಗಿದೆ. ಆದರೂ ಮಳೆಯಾಶ್ರಿತ 330 ಹೆಕ್ಟೇರ್ ಹಾಗೂ ನೀರಾವರಿ 8 ಹೆಕ್ಟೇರ್ ಭೂಮಿಯಲ್ಲಿ ಈರುಳ್ಳಿ ಬಿತ್ತನೆ ಮಾಡಲಾಗಿದೆ. ಆಲೂಗಡ್ಡೆ 2 ಹೆಕ್ಟೇರ್ ನೀರಾವರಿ ಹಾಗೂ 869 ಹೆಕ್ಟೇರ್ ಮಳೆಯಾಶ್ರಿತ ಪ್ರದೇಶ. ಹಾಗೆಯೇ ಕಡ್ಲೆ 12, ಕುಂಬಳ 34 ಟೊಮ್ಯಾಟೋ 57 ಮತ್ತು ಮೆಣಸಿನಕಾಯಿ 11 ಹೆಕ್ಟೇರ್ ಪ್ರದೇಶದಲ್ಲಿ ಬಿತ್ತನೆ ನಡೆಯುವ ಸಾಧ್ಯತೆ ಇದೆ. ಅಡಕೆ ಮತ್ತು ತೆಂಗು ಬಿಟ್ಟರೆ ಆಲೂಗಡ್ಡೆ ಮತ್ತು ಈರುಳ್ಳಿ ಪ್ರಮುಖ ಬೆಳೆಯಾಗಿದೆ ಎನ್ನುತ್ತಾರೆ.
ಒಂದು ಸೇರು ಭಿತ್ತನೆ ಬೀಜಕ್ಕೆ ರೂ. 1500 ಗಳನ್ನು ನೀಡಿದ್ದೇನೆ. ಒಂದು ಎಕರೆ ಜಮೀನಿಗೆ ಸುಮಾರು 8 ಸೇರು ಬೀಜ ಬೇಕಾಗುತ್ತದೆ. ನಾನು ಮಳೆ ಆರಂಭವಾಯಿತೆಂದು ನನ್ನ 1 ಎಕರೆ ಎರೇ ಜಮೀನಿಗೆ ಈರುಳ್ಳಿ ಬಿತ್ತನೆ ಮಾಡಲು ಬಿತ್ತನೆ ಬೀಜಕ್ಕೆ ರೂ. 13,500, ಬಿತ್ತನೆ ಬೇಸಾಯಕ್ಕೆ 3 ಸಾವಿರ, ಖರ್ಚು ಮಾಡಿದ್ದೇನೆ ಎನ್ನುತ್ತಾರೆ ರೈತ ಪೂಜಾರ್ ಮಲ್ಲಪ್ಪ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
KSRTC: ಚಾರ್ಮಾಡಿ ಘಾಟಿಯಲ್ಲಿ ಕೆಟ್ಟು ನಿಂತ ಸರ್ಕಾರಿ ಬಸ್, ಪ್ರಯಾಣಿಕರಲ್ಲಿ ಆತಂಕ…!
Mudigere; ಕಾಫಿ ಎಸ್ಟೇಟ್ ನಲ್ಲಿ ಕಾಡುಕೋಣ ದಾಳಿ: ಅಸ್ಸಾಂ ಮೂಲದ ಕಾರ್ಮಿಕ ಮಹಿಳೆ ಮೃ*ತ್ಯು
Naxalites ಶರಣಾಗತಿಯಲ್ಲಿ ಟ್ವಿಸ್ಟ್; ಚಿಕ್ಕಮಗಳೂರು ಬದಲು ಬೆಂಗಳೂರಿನಲ್ಲಿ ನಕ್ಸಲರ ಶರಣಾಗತಿ
Naxal ಶರಣಾಗತಿ; ಚಿಕ್ಕಮಗಳೂರು ಡಿಸಿ ಕಚೇರಿ ಸುತ್ತಮುತ್ತ ಬಿಗಿ ಭದ್ರತೆ
Kadur; ತಾಲೂಕು ವೈದ್ಯಾಧಿಕಾರಿ ಮನೆ ಮೇಲೆ ಲೋಕಾಯುಕ್ತ ದಾಳಿ
MUST WATCH
ಹೊಸ ಸೇರ್ಪಡೆ
Bantwal: ಕಾಂಟ್ರಾಕ್ಟ್ ಕ್ಯಾರೇಜ್ ಬಸ್ ಪ್ರಯಾಣ ದರ ಏರಿಕೆ
Special Train ಮಕರ ಸಂಕ್ರಾಂತಿ: ಇಂದು ಬೆಂಗಳೂರಿನಿಂದ ಕರಾವಳಿಗೆ ವಿಶೇಷ ರೈಲು
Daily Horoscope: ಅನಿರೀಕ್ಷಿತ ಧನಾಗಮ, ಅವಿವಾಹಿತರಿಗೆ ಯೋಗ್ಯ ಸಂಗಾತಿ ಲಭ್ಯ
ಕಾಂಗ್ರೆಸ್‌ಗೆ ಬಿಸಿ ಊಟ: ಪರಂಗೆ ಹೈ ಬುಲಾವ್?ವಿವಾದ ಬೆನ್ನಲ್ಲೇ ದಿಲ್ಲಿಗೆ ಕರೆದ ಹೈಕಮಾಂಡ್
California Wildfire: “ಮನೆಯ ಅಂಗಳದಲ್ಲೇ ಬೆಂಕಿ ಕುಣಿದಂತಿದೆ’
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.