![DKSHi-4](https://www.udayavani.com/wp-content/uploads/2025/02/DKSHi-4-415x234.jpg)
![DKSHi-4](https://www.udayavani.com/wp-content/uploads/2025/02/DKSHi-4-415x234.jpg)
Team Udayavani, Aug 29, 2023, 8:37 AM IST
ಕೊಟ್ಟಿಗೆಹಾರ: ಪತಿಯೊಂದಿಗೆ ಜಗಳವಾಡಿಕೊಂಡು ಪತ್ನಿ ತವರು ಮನೆ ಸೇರಿದ್ದು, ಇದರಿಂದ ಸಿಟ್ಟು ಗೊಂಡ ಪತಿ ಪತ್ನಿಯ ತವರು ಮನೆಗೆ ಮಾಟ ಮಾಡಿಸಿರುವ ವಿಚಿತ್ರಕಾರಿ ಘಟನೆ ಜಿಲ್ಲೆಯ ಮೂಡಿಗೆರೆ ತಾಲೂಕು ಮತ್ತಿಕಟ್ಟೆ ಗ್ರಾಮದಲ್ಲಿ ನಡೆದಿದೆ.
ಮೂಡಿಗೆರೆ ತಾಲೂಕಿನ ಮರಗಣಸೆ ಗ್ರಾಮದ ಗುರುಮೂರ್ತಿ ಕಳೆದ ೧೨ವರ್ಷಗಳ ಹಿಂದೆ ಸುಮಿತ್ರ ಎಂಬುವರನ್ನು ಮದುವೆಯಾಗಿದ್ದರೂ. ಮದುವೆಯಾದ ದಿನದಿಂದ ಗಂಡ ಹೆಂಡತಿ ನಡುವೆ ಜಗಳ ನಡೆ ಯುತ್ತಿತ್ತು. ಹಿರಿಯರು ಅನೇಕ ಬಾರೀ ರಾಜೀ ಪಂಚಾಯಿತಿ ಮಾಡಿದ್ದರು.
ಕಳೆದ ಒಂದು ತಿಂಗಳ ಹಿಂದೆ ಗಂಡ ಹೆಂಡತಿ ನಡುವೆ ಮತ್ತೇ ಜಗಳವಾಗಿದ್ದು, ಸುಮಿತ್ರ ಅಣ್ಣ ಸತೀಶನ ಮನೆಯಲ್ಲಿ ಉಳಿದುಕೊಂಡಿದ್ದಳು. ಇದರಿಂದ ಕೋಪಗೊಂಡ ಗುರುಮೂರ್ತಿ ಸುಮಿತ್ರ ಅಣ್ಣ ಸತೀಶ್ ಮನೆಗೆ ಬಂದು ಜಗಳವಾಡಿ ಆತನಿಗೆ ಕೊಲೆ ಬೆದರಿಕೆಯನ್ನು ಹಾಕಿದ್ದ. ಜೊತೆಗೆ ಚಾಕುವನ್ನು ತಂದಿದ್ದು ಅದನ್ನು ಅಲ್ಲಿಯೆ ಬಿಟ್ಟು ಹೋಗಿದ್ದಾನೆ.
ನಂತರ ಯಾವುದೋ ಪ್ರಾಣಿಯನ್ನು ಬಲಿಕೊಟ್ಟು, ರಕ್ತವನ್ನು ಸುಮಿತ್ರ ಅಣ್ಣನಸ ಮನೆ ಬಾಗಿಲ ಮುಂದೆ ಹಾಕಿದ್ದು, ವಾಮಾಚಾರ ಮಾಡಿಸಿದ್ದಾನೆಂದು ಸುಮಿತ್ರ ತವರು ಮನೆಯವರು ಗುರುಮೂರ್ತಿ ವಿರುದ್ಧ ಆರೋಪಿಸಿ ಬಣಕಲ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
ಪ್ರಕರಣ ದಾಖಲಿಸಿಕೊಂಡ ಪೊಲೀಸರು ಆರೋಪಿ ಗುರುಮೂರ್ತಿಯನ್ನು ವಶಕ್ಕೆ ಪಡೆದಿದ್ದಾರೆ ಹಾಗೂ ಘಟನಾ ಸ್ಥಳದ ಪರಿಶೀಲನೆ ನಡೆಸಿದ್ದಾರೆ.
You seem to have an Ad Blocker on.
To continue reading, please turn it off or whitelist Udayavani.