Team Udayavani, Mar 29, 2019, 1:56 PM IST
ಶೃಂಗೇರಿ: ತಾಲೂಕಿನ ಅತ್ಯಂತ ಹಿಂದುಳಿದ ದೂರದ ಒಳನಾಡು ಪ್ರದೇಶವಾದ ಹೆಮ್ಮಿಗೆ ಗ್ರಾಮಸ್ಥರ ಬಹುದಿನದ ಬೇಡಿಕೆಯಾದ ಸೇತುವೆ ಕನಸು ಭಗ್ನಗೊಂಡಿದ್ದು, ಕೈಗೆ ಬಂದ ತುತ್ತು ಬಾಯಿಗೆ ಬಂದಿಲ್ಲ ಎಂಬ ದುಸ್ಥಿತಿ ಗ್ರಾಮಸ್ಥರದ್ದಾಗಿದೆ.
ಕುದುರೆಮುಖ ರಾಷ್ಟ್ರೀಯ ಉದ್ಯಾನ ವ್ಯಾಪ್ತಿಯ ನೆಮ್ಮಾರ್ ಗ್ರಾಪಂಯ ಹೆಮ್ಮಿಗೆ ಹಳ್ಳಕ್ಕೆ ಸೇತುವೆ ಮಂಜೂರಾಗಿ ಆರಂಭಿಕ ಕಾಮಗಾರಿ ನಡೆದ ನಂತರ ವನ್ಯಜೀವಿ ಇಲಾಖೆ ತಡೆಯೊಡ್ಡಿದ ಪರಿಣಾಮ ಗ್ರಾಮಸ್ಥರ ಸೇತುವೆ ಇದೀಗ ಮರಿಚೀಕೆಯಾಗಿದೆ.
ಹಲವಾರು ವರ್ಷದ ಬೇಡಿಕೆಯಾಗಿದ್ದ ಸೇತುವೆ ಕಳೆದ ಮೂರು ವರ್ಷದ ಹಿಂದೆ ಆಗಿನ ಜಿಲ್ಲಾಧಿಕಾರಿಯಾಗಿದ್ದ ಜಿ. ಸತ್ಯವತಿ
ಅವರು ನಕ್ಸಲ್ ಪ್ಯಾಕೇಜ್ ಅಡಿ 68 ಲಕ್ಷ ರೂ. ಕಾಮಗಾರಿಗೆ ಮಂಜೂರಾತಿ ನೀಡಿದ್ದರು. ಕಳೆದ ವರ್ಷ ಟೆಂಡರ್ ಪ್ರಕ್ರಿಯೆ ನಡೆದಿದ್ದು, ಈ ಸಾಲಿನಲ್ಲಿ ಶಾಸಕ ಟಿ.ಡಿ.ರಾಜೇಗೌಡ ಶಂಕುಸ್ಥಾಪನೆ ನೆರವೇರಿಸಿ ಕಳೆದ ಎರಡು ತಿಂಗಳಿಂದ
ಸೇತುವೆ ಕಾಮಗಾರಿ ಆರಂಭಗೊಂಡಿತ್ತು.
ಬುಕುಡಿಬೈಲು ಸಮೀಪದ ಹೆಮ್ಮಿಗೆ ಹಳ್ಳವು ಮಳೆಗಾಲದಲ್ಲಿ ಪ್ರವಾಹವಾಗಿ ಹರಿಯುತ್ತದೆ. ಬೇಸಗೆಯಲ್ಲಿ ಸಾಕಷ್ಟು ನೀರು
ಹರಿಯುತ್ತದೆ. ಈ ಹಳ್ಳದ ಮೂಲಕವೇ ಹೆಮ್ಮಿಗೆ, ಗೊಚ್ಚೆಹೊಂಡ, ಕಟ್ಟೆಮನೆ, ಗೋಳಿಮಕ್ಕಿ ಮುಂತಾದ ಹಳ್ಳಿಯ ಜನರು ಬುಕುಡಿಬೈಲಿಗೆ ಬರಬೇಕು. ಪಡಿತರ, ದಿನಸಿ ಮತ್ತಿತರ ಎಲ್ಲ ಸೌಲಭ್ಯಕ್ಕೆ ಇಲ್ಲಿನ ಜನರು ಹಳ್ಳ ದಾಟಿ ಬರಬೇಕಾಗಿರುವುದು ಅನಿವಾರ್ಯವಾಗಿದೆ.
ಗಿರಿಜನರೇ ಹೆಚ್ಚಾಗಿ ವಾಸಿಸುತ್ತಿರುವ ಈ ಗ್ರಾಮದಲ್ಲಿ ಮಳೆಗಾಲದ ಸಮಯದಲ್ಲಿ ಹಳ್ಳ ದಾಟಲು ಮರದ ದಿಮ್ಮಿ ಸಹಾಯದಿಂದ ಕಾಲು ಸಂಕವನ್ನು ಗ್ರಾಮಸ್ಥರೇ ನಿರ್ಮಿಸಿಕೊಳ್ಳುತ್ತಾರೆ. ಕಾಲು ಸಂಕದಲ್ಲಿ ಪ್ರತಿ ದಿನವೂ ಶಾಲೆಗೆ ತೆರಳುವ ವಿದ್ಯಾರ್ಥಿಗಳು ಜೀವವನ್ನು ಕೈಯಲ್ಲಿ ಹಿಡಿದು ಸಾಗಬೇಕಿದೆ. ಅನಾರೋಗ್ಯ ಉಂಟಾದಾಗ ರೋಗಿಯನ್ನು 20 ಕಿಮೀ ದೂರದ ಪಟ್ಟಣಕ್ಕೆ ಕರೆ ತರುವುದು ದುಸ್ಸಾಹಸದ ಸಂಗತಿಯಾಗಿದೆ. ಕಾಲು ಸಂಕದಲ್ಲಿ ಉಂಟಾದ ಅನಾಹುತದಲ್ಲಿ ಜೀವ ಹಾನಿ ಸಂಭವಿಸಿದ್ದು, ಇದರಿಂದ ಸರಕಾರ ಕಾಲು ಸೇತುವೆಗೆ ವಿಶೇಷ ಆದ್ಯತೆ ನೀಡಿ ತುರ್ತಾಗಿ ಕಾಮಗಾರಿಗೆ ಚಾಲನೆ ನೀಡಿತ್ತು.
ಮಳೆಗಾಲಕ್ಕೂ ಮುನ್ನ ನಿರ್ಮಾಣವಾಗಬೇಕಿದ್ದ ಸೇತುವೆ ಈಗಾಗಲೇ 15 ಲಕ್ಷಕ್ಕೂ ಅಧಿಕ ವೆಚ್ಚದಲ್ಲಿ ಪಿಲ್ಲರ್ ನಿರ್ಮಿಸಲಾಗಿತ್ತು. ಸೇತುವೆ ನಿರ್ಮಾಣಕ್ಕೆ ಶಂಕುಸ್ಥಾಪನೆಯಾಗಿ,ಅಗತ್ಯ ವಸ್ತು ಪೂರೈಕೆಯಾಗಿ ಸಾಕಷ್ಟು ಕಾಮಗಾರಿ ನಂತರ ಇದೀಗ ವನ್ಯಜೀವಿ ಇಲಾಖೆ ಈ ಕಾಮಗಾರಿಗೆ ತಡೆಯೊಡ್ಡಲಾಗಿದೆ.
ರಸ್ತೆ, ಸೇತುವೆ ನಿರ್ಮಾಣಕ್ಕೆ ಅಡ್ಡಿಪಡಿಸಿರುವುದಕ್ಕೆ ವನ್ಯಜೀವಿ ಇಲಾಖೆ ಮೇಲೆ ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ವನ್ಯಜೀವಿ ಇಲಾಖೆಯಿಂದ ಉದ್ಯಾನದೊಳಗೆ ಯಾವುದೇ ಕಾಮಾಗಾರಿ ನಡೆಯಲು ಅನುಮತಿ ನೀಡದಿರುವುದು ಇದೇ
ಮೊದಲಲ್ಲ. ತನಿಕೋಡು ಕೆರೆಕಟ್ಟೆಯ ವರೆಗಿನ 20 ಕಿ.ಮೀ. ರಸ್ತೆ ಅಭಿವೃದ್ಧಿಗೆ ಇಲಾಖೆ ಅಡ್ಡಿಪಡಿಸಿದ್ದು, ಇದರಿಂದ ಎನ್ನೆಚ್
169 ರ ರಸ್ತೆ ಪ್ರತಿ ದಿನವೂ ಅಪಘಾತ ವಲಯವಾಗಿದೆ.
ವನ್ಯಜೀವಿ ಇಲಾಖೆ ಎಲ್ಲ ಕಾಮಗಾರಿಗೂ ತಡೆಯೊಡ್ಡುತ್ತಿರುವುದು ಅಭಿವೃದ್ಧಿಗೆ ಹಿನ್ನಡೆಯಾಗಿದೆ. ಚುನಾವಣೆ ವೇಳೆ ಅಧಿಕಾರಿಗಳು ಜನಪ್ರತಿನಿಧಿಗಳ ಮಾತು ಕೇಳದೇ ಏಕಪಕ್ಷಿ
ಕುದುರೆಮುಖ ರಾಷ್ಟ್ರೀಯ ಉದ್ಯಾನ ವ್ಯಾಪ್ತಿಯ ಅಂಚಿನಲ್ಲಿರುವ ಈ ಸೇತುವೆ ಮಂಜೂರಾತಿಗೆ ನಾವು ಹತ್ತಾರು ವರ್ಷದಿಂದ ಪ್ರಯತ್ನಿಸಿದ್ದೆವು. ಶಾಲಾ ಮಕ್ಕಳು, ಅನಾರೋಗ್ಯ ಪೀಡಿತರು, ವೃದ್ಧರು ಕಾಲುಸಂಕ ದಾಟಿ ಮಳೆಗಾಲದಲ್ಲಿ ತೆರಳುವುದು ತೀರಾ ಅಪಾಯಕಾರಿಯಾಗಿದೆ. ಆಳದಲ್ಲಿ ಹರಿಯುವ ಹಳ್ಳ ದಾಟಿ ಸಾಗುವುದು ಸಾಹಸದ ಕೆಲಸವಾಗಿದೆ. ಮೂಲಭೂತ ಸೌಕರ್ಯಕ್ಕೆ ವನ್ಯಜೀವಿ ಇಲಾಖೆ ಅಡ್ಡಿಪಡಿಸುತ್ತಿರುವುದು ಎಷ್ಟು ಸರಿ? ಆರಂಭಿಕ ಕಾಮಗಾರಿ ಆದ ನಂತರ ತಡೆಯೊಡ್ಡಿರುವುದು ತೀವ್ರ ನಿರಾಸೆಯಾಗಿದೆ.
ಯೋಗಪ್ಪ, ಕೆಂಪಣ್ಣಗೌಡ, ಪುಟ್ಟೇಗೌಡ, ರತ್ನಮ್ಮ, ಗ್ರಾಮಸ್ಥರು ಹೆಮ್ಮಿಗೆ