ಮೈದುಂಬಿದ ಕೆರೆ; ಕೊಳವೆಬಾವಿಗಳಿಗೆ ಮರುಜೀವ
Team Udayavani, Oct 15, 2021, 9:51 AM IST
ಚಿಕ್ಕಬಳ್ಳಾಪುರ: ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ರೇಷ್ಮೆ, ಹೈನುಗಾರಿಕೆ, ತರಕಾರಿ, ಹೂ ಹಣ್ಣು ಉತ್ಪಾದನೆಯಲ್ಲಿ ಅಗ್ರಸ್ಥಾನ ಪಡೆದಿರುವ ಜಿಲ್ಲೆಯಲ್ಲಿ ಮಳೆ ಆರ್ಭಟಕ್ಕೆ ಕೆರೆ-ಕುಂಟೆ, ಜಲಾಶಯಗಳು ಭರ್ತಿಯಾಗಿ ಕೋಡಿ ಹರಿಯುತ್ತಿವೆ. ಸತತ ಬರಗಾಲದಿಂದ ತತ್ತರಿಸುತ್ತಿದ್ದ ಚಿಕ್ಕ ಬಳ್ಳಾ ಪುರ ಜಿಲ್ಲೆಯಲ್ಲಿ ಎಚ್.ಎನ್.ವ್ಯಾಲಿ ಯೋಜನೆ ಮೂಲಕ ಕೆರೆಗಳಲ್ಲಿ ನೀರು ಕಾಣಿಸಿಕೊಳ್ಳುವ ಭಾಗ್ಯ ಕಂಡು ಬಂದಿತ್ತು.
ಆದರೆ, ಇತ್ತೀಚಿಗೆ ಎಡೆಬಿಡದೆ ಸುರಿಯುತ್ತಿರುವ ಮಳೆಯಿಂದ ಕೆರೆ-ಕುಂಟೆಗಳು ಮತ್ತು ಜಲಾಶಯಗಳು ಭರ್ತಿಯಾಗಿವೆ. ಅಲ್ಲದೇ, ಮಳೆ ಅಭಾವದಿಂದ ಬತ್ತಿಹೋಗಿದ್ದ ಕೊಳವೆ ಬಾವಿಗಳಲ್ಲಿ ನೀರು ಬಂದಿದೆ. ಹಾಗೆಯೇ ಮಳೆ ಆರ್ಭಟಕ್ಕೆ ಹೊಲದಲ್ಲಿನ ಬೆಳೆಗಳು ನೀರು ಪಾಲಾಗಿ ರೈತರು ಕಂಗಾಲಾಗಿದ್ದಾರೆ.
ಜಿಲ್ಲೆಯಲ್ಲಿ ಈಗಾಗಲೇ ಮಹಾತ್ಮಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆ ಮೂಲಕ ನಿರ್ಮಿಸಿರುವ ಕೆರೆ-ಕುಂಟೆ, ಕಲ್ಯಾಣಿಗಳು, ಕೃಷಿ ಹೊಂಡಗಳು ವಿಶೇಷವಾಗಿ ಬಹುಕಮಾನ್ ಚೆಕ್‌ಡ್ಯಾಮ್‌ಗಳಲ್ಲಿ ನೀರು ತುಂಬಿ ಕೋಡಿ ಹರಿಯುತ್ತಿದೆ.
ಕೆರೆಗಳು ಭರ್ತಿ: ಚಿಕ್ಕಬಳ್ಳಾಪುರ ತಾಲೂಕಿನಲ್ಲಿ ಸುಮಾರು 8 ಕೆರೆ ಕೋಡಿ ಹರಿಯುತ್ತಿವೆ. ತಾಲೂಕಿನ ಪೆರೇಸಂದ್ರ ಮಾರ್ಗದ ಬೈರಸಂದ್ರ ಕೆರೆ ಕೋಡಿ ಹರಿದು ಲಕ್ಷ್ಮಣಸಾಗರ ಕೆರೆ ತುಂಬುತ್ತಿದೆ. ಗುಡಿಬಂಡೆ ತಾಲೂಕಿನ ಸೋಮೇ ಶ್ವರ ಕೆರೆಗೆ ನೀರು ಹರಿಯಲು ಆರಂಭಿಸಿದೆ. ಎಚ್.ಎನ್.ವ್ಯಾಲಿ ನೀರಿನೊಂ ದಿಗೆ ಮಳೆ ನೀರು ಹರಿಯುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಚಿಕ್ಕಬಳ್ಳಾಪುರ ತಾಲೂಕಿನ ಮುಸ್ಟೂರು ಕೆರೆ ಕೋಡಿ ಹರಿಯುತ್ತಿದ್ದು ಚಿಕ್ಕಬಳ್ಳಾಪುರ ನಗರ ಪ್ರವೇಶ ಮಾಡುವ ಮಾರ್ಗದ ಗೋಪಾಲಕೃಷ್ಣ ಕೆರೆಯೂ ಎಚ್.ಎನ್.ವ್ಯಾಲಿಯ ನೀರು ಸೇರಿದಂತೆ ಮಳೆ ನೀರಿನಿಂದ ಮೈದುಂಬಿದೆ. ಇನ್ನೂ ರಂಗಧಾಮ ಕೆರೆ ಕೋಡಿ ಹರಿದಿದ್ದು ಕಂದವಾರ ಕೆರೆ ಮೂಲಕ ದಿಬ್ಬೂರು ಮತ್ತು ಪೆರೇಸಂದ್ರ ಭಾಗದ ಕೆರೆಗಳಿಗೆ ನೀರು ಹರಿಯಲು ಆರಂಭಗೊಂಡಿದೆ. ಇದರಲ್ಲದೆ ಜಿಲ್ಲೆಯ ಶಿಡ್ಲಘಟ್ಟ ತಾಲೂಕಿನ ದಿಬ್ಬೂರಹಳ್ಳಿ, ತಲಕಾಯಲಬೆಟ್ಟ ಕೆರೆ ಕೋಡಿ ಹರಿಯುತ್ತಿದ್ದು ಶಾಸಕ ವಿ.ಮುನಿಯಪ್ಪ ಸಹಿತ ಗ್ರಾಮಸ್ಥರು ಕೆರೆಗೆ ಬಾಗಿನ ಅರ್ಪಿಸಿದ್ದರು.
ಇದನ್ನೂ ಓದಿ:- ಡಬಲ್ ಬ್ಯಾನರ್‌ನಿಂದ “ಕಾಂಗ್ರೆಸ್’ಗೆ ತಲೆನೋವು!
ಶಾಲಾ ಮಕ್ಕಳ ಬಗ್ಗೆ ಗಮನಹರಿಸಿ
ಜಿಲ್ಲೆಯಲ್ಲಿ ಕೊರೊನಾ ನಿಯಂತ್ರಣಗೊಂಡಿರುವ ಹಿನ್ನೆಲೆ ಸರ್ಕಾರಿ ಶಾಲಾ ಕಾಲೇಜು ಆರಂಭಿಸಿ ಯಾವುದೇ ತೊಂದರೆ ಇಲ್ಲದೇ ತರಗತಿಗಳು ನಡೆಯುತ್ತಿವೆ. ಮುಂದಿನ ದಿನಗಳಲ್ಲಿ ದಸರಾ ಹಿನ್ನೆಲೆಯಲ್ಲಿ ಸಾರ್ವತ್ರಿಕ ರಜೆ ಘೋಷಣೆ ಮಾಡುವ ಸಾಧ್ಯತೆ ಇದ್ದು ವಿದ್ಯಾರ್ಥಿಗಳು ಕೆರೆ-ಕುಂಟೆಗಳಲ್ಲಿ ಈಜಾಡಲು ಧಾವಿಸಬಹುದೆಂಬ ಆತಂಕ ಪೋಷಕರಿಗೆ ಕಾಡುತ್ತಿದೆ. ಮಳೆ ಆರ್ಭಟದಿಂದ ಒಂದು ಕಡೆ ಕೆರೆ-ಕುಂಟೆಗಳು ಭರ್ತಿಯಾಗಿ ಕೋಡಿ ಹರಿಯುತ್ತಿದ್ದರೆ ಮತ್ತೂಂದಡೆ ಮೈದುಂಬಿ ಹರಿಯುತ್ತಿರುವ ಕೆರೆ-ಕುಂಟೆಗಳು ಅಪಾಯದ ಮಟ್ಟದಲ್ಲಿದೆ. ಜಿಲ್ಲಾಡಳಿತ ಈ ಕುರಿತು ಸೂಕ್ತ ಗಮನಹರಿಸಬೇಕಾಗಿದೆ.
- ಜಿಲ್ಲಾದ್ಯಂತ ಧಾರಾಕಾರ ಮಳೆ ಸುರಿಯುತ್ತಿದ್ದು ಚಿಕ್ಕಬಳ್ಳಾಪುರ ತಾಲೂಕಿನ ಮುಸ್ಟೂರು ಕೆರೆ ತುಂಬಿ ಕೋಡಿ ಹರಿಯುತ್ತಿರುವುದು.
- ಮಳೆ ಹಿನ್ನೆಲೆಯಲ್ಲಿ ಶಿಡ್ಲಘಟ್ಟ ಕೊಳವೆ ಬಾವಿಗಳಲ್ಲಿ ಅಂತರ್ಜಲ ವೃದ್ಧಿಸಿರುವುದು.
“ವಾಡಿಕೆಗಿಂತಲೂ ಮಳೆ ಹೆಚ್ಚಾಗಿದೆ. ಜತೆಗೆ ಎಚ್.ಎನ್.ವ್ಯಾಲಿ ನೀರು ಹರಿದು ಬಹುತೇಕ ಕೆರೆ ಭರ್ತಿಯತ್ತ ಸಾಗಿವೆ. ಚಿಕ್ಕಬಳ್ಳಾಪುರ ತಾಲೂಕಿನಲ್ಲಿ 8 ಕೆರೆ ಸೇರಿದಂತೆ ಗುಡಿಬಂಡೆ, ಶಿಡ್ಲಘಟ್ಟ ತಾಲೂಕಿನಲ್ಲೂ ಕೆರೆಗಳು ಕೋಡಿ ಬಿದ್ದಿವೆ. ಕೆರೆಗಳಲ್ಲಿ ನೀರು ಸೋರಿಕೆ ಕುರಿತು ದೂರು ಬಂದಿಲ್ಲ.”
ನರೇಂದ್ರಬಾಬು, ಕಾರ್ಯಪಾಲಕ ಅಭಿಯಂತರರು, ಸಣ್ಣನೀರಾವರಿ ಇಲಾಖೆ
ಚಿಕ್ಕಬಳ್ಳಾಪುರ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Chikkamagaluru: ಮದುವೆ ಹಾಲ್ ನಲ್ಲೇ ವಧುವಿನ ಚಿನ್ನ ಎಗರಿಸಿದ ಖದೀಮರು…
Chikkamagaluru: ಕೇರಳದಿಂದ “ಸುರಕ್ಷಿತ’ ಮಲೆನಾಡಿನತ್ತ “ನಕ್ಸಲರು’?
Naxalite: ಮಲೆನಾಡಿಗೆ ನಕ್ಸಲರ ಭೇಟಿ ದೃಢ; 3 ಬಂದೂಕು-ಮದ್ದುಗುಂಡು ವಶ
ಚಿಕಿತ್ಸೆಗೆಂದು ಬಂದಿದ್ದ ರೋಗಿ ಸಾವು; ವೈದ್ಯರ ನಿರ್ಲಕ್ಷ್ಯವೇ ಕಾರಣ ಎಂದು ಕುಟುಂಬಸ್ಥರ ಆರೋಪ
Chikkamagaluru: ಮನೆಯೊಂದರಲ್ಲಿ ಬಂದೂಕು ಪತ್ತೆ; ನಕ್ಸಲ್ ಓಡಾಟ ಶಂಕೆ
MUST WATCH
ಹೊಸ ಸೇರ್ಪಡೆ
Maharastra: ಚುನಾವಣಾ ರ್‍ಯಾಲಿ ರದ್ದುಗೊಳಿಸಿ ದಿಢೀರ್ ದೆಹಲಿಗೆ ವಾಪಸ್ಸಾದ ಸಚಿವ ಅಮಿತ್ ಶಾ
Kantara Chapter 1: ರಿಷಬ್ ಶೆಟ್ಟಿ ʼಕಾಂತಾರ ಚಾಪ್ಟರ್ -1ʼ ರಿಲೀಸ್ ಗೆ ಡೇಟ್ ಫಿಕ್ಸ್
The Sabarmati Report ;ಸಿನಿಮಾವಾಗಿ ಗೋಧ್ರಾ ದುರಂತ: ಸತ್ಯ ಹೊರಬರುತ್ತಿದೆ ಎಂದ ಪ್ರಧಾನಿ
Kinnal raj; ʼಸಿಂಹರೂಪಿಣಿʼಗೆ 25ರ ಸಂಭ್ರಮ
Mangaluru: ಅನಧಿಕೃತ ಫ್ಲೆಕ್ಸ್ , ಬ್ಯಾನರ್ ತೆರವು ಆರಂಭ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.