ದಿಶಾ ರವಿ ಬೆಂಬಲಿಸುವ ಕಾಂಗ್ರೆಸ್ ನವರಿಗೆ ನಾಚಿಕೆಯಾಗಬೇಕು: ಸಿ.ಟಿ.ರವಿ
Team Udayavani, Feb 16, 2021, 3:29 PM IST
ಚಿಕ್ಕಮಗಳೂರು: ಅರಾಜಕತೆ ಹುಟ್ಟು ಹಾಕುವುದು ಪ್ರಜಾಪ್ರಭುತ್ವದ ಲಕ್ಷಣವೇ? ಪ್ರಜಾಪ್ರಭುತ್ವದ ಹೋರಾಟಕ್ಕಾಗಿ ಅವಳ ಬಂಧನವಾಗಿಲ್ಲ. ಅರಾಜಕತೆ ಸೃಷ್ಟಿ ಮಾಡಿದ್ದಕ್ಕಾಗಿ ಆಕೆಯ ಬಂಧನವಾಗಿದೆ. ಆದರೆ ದಿಶಾ ರವಿ ಬಗ್ಗೆ ವೈಭವಿಕರಿಸಿ ಮಾತಾನಾಡುತಿದ್ದಾರೆ. ದಿಶಾ ರವಿ ಬೆಂಬಲಿಸುವ ಕಾಂಗ್ರೆಸ್ ನವರಿಗೆ ನಾಚಿಕೆಯಾಗಬೇಕು ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ಹೇಳಿದರು.
ಚಿಕ್ಕಮಗಳೂರಿನಲ್ಲಿ ಮಾತನಾಡಿದ ಅವರು, ಸಿ.ಟಿ.ರವಿ ಬಗ್ಗೆ ನಿಮಗೆಲ್ಲಾ ಗೊತ್ತು. ದಿಶಾ ರವಿ ಹೆಸರು ಯಾರಿಗೆ ಗೊತ್ತಿತ್ತು? ಆಕೆಯ ಬಗ್ಗೆ ತನಿಖೆಯಾಗುತ್ತಿದೆ. ಪ್ರಾಥಮಿಕ ವರದಿಯಲ್ಲಿ ಅರಾಜಕತೆ ಸೃಷ್ಟಿ ಬಗ್ಗೆ ಇದ್ದ ಕಾರಣ ಬಂಧನವಾಗಿದೆ. ನಮಗೆ ನಮ್ಮ ದೇಶದ ಸಂವಿಧಾನ ದೊಡ್ಡದು, ದೇಶದ ಅಖಂಡತೆ ದೊಡ್ಡದು. ಇಂತಹ ಕೃತ್ಯ ಬೆಂಬಲಿಸಿ ಕಾಂಗ್ರೆಸ್ ತನ್ನ ನಾಯಕರನ್ನು ಕಳೆದುಕೊಂಡಿದೆ. ಅಂತಹದ್ದೆ ಪರಿಸ್ಥಿತಿ ತಂದಿಡುವ ಹೀನ ಕೆಲಸ ಕಾಂಗ್ರೆಸ್ ಮಾಡಬಾರದು. ದೇಶದ ಅಖಂಡತೆಗೆ ಭಂಗ ತರುವ ಯಾವ ಶಕ್ತಿಯನ್ನು ಬೆಂಬಲಿಸಲ್ಲ, ಕ್ಷಮಿಸಲ್ಲ ಎಂದರು.
ಇದನ್ನೂ ಓದಿ:ಯಾವ ಐಎಎಸ್ ಅಧಿಕಾರಿ ಲಾಬಿಯೋ ಗೊತ್ತಿಲ್ಲ: ಕತ್ತಿ ವಿರುದ್ದ ರೇಣುಕಾಚಾರ್ಯ ಕಿಡಿ
ಸಚಿವ ಉಮೇಶ್ ಕತ್ತಿ ಹೇಳಿಕೆಯನ್ನು ಸಮರ್ಥಿಸಿದ ಸಿ.ಟಿ ರವಿ ಅವರು, ಬೈಕ್, ಫ್ರಿಡ್ಜ್, ಟಿವಿ ಇದ್ದವರಿಗೆ ಬಿಪಿಎಲ್ ಕಾರ್ಡ್ ರದ್ದು ಸಿದ್ದರಾಮಯ್ಯ ಸಿಎಂ ಆಗಿದ್ದಾಗ ತೆಗೆದುಕೊಂಡಿದ್ದ ನಿಲುವು. ಈ ನಿಯಮದ ಪುನರುಚ್ಚಾರವನ್ನು ಈಗಿನ ಸಚಿವರು ಹೇಳಿದ್ದಾರೆ. ಆಗ ನಿಯಮ ಮಾಡಬೇಕಾದ್ರೆ ಕಾಂಗ್ರೆಸ್ ನವರು ಅರೆ ಪ್ರಜ್ಞಾವಸ್ಥೆಯಲ್ಲಿದ್ದರಾ? ಈಗ ಅರೆಪ್ರಜ್ಞಾವಸ್ಥೆಯಿಂದ ಕಾಂಗ್ರೆಸ್ ನವರು ಹೊರಬಂದಿದ್ದಾರೆ ಎಂದು ಟೀಕಿಸಿದರು.
ಗುದ್ದಾಟದ ಕಾರಣಕ್ಕೆ ಸಿದ್ದು ಭೇಟಿ: ವಿಪಕ್ಷ ನಾಯಕ ಸಿದ್ದರಾಮಯ್ಯ ದೆಹಲಿಗೆ ಭೇಟಿ ನೀಡಿದ ವಿಚಾರಕ್ಕೆ ಪ್ರತಿಕ್ರಿಯೆ ನೀಡಿದ ಅವರು, ಸಿದ್ದರಾಮಯ್ಯ-ಡಿ.ಕೆ.ಶಿವಕುಮಾರ್ ನಡುವೆ ಮುಸುಕಿನ ಗುದ್ದಾಟವಿದೆ. ಬಹುಶಃ ಗುದ್ದಾಟದ ಕಾರಣಕ್ಕೆ ದೆಹಲಿಗೆ ಭೇಟಿ ಕೊಡ್ತಿರಬಹುದು. ನಾವು ಸಿದ್ದರಾಮಯ್ಯ ಪರವೂ ಅಲ್ಲ, ಡಿ ಕೆ ಶಿವಕುಮಾರ್ ಪರನೂ ಅಲ್ಲ. ನಾವು ಕಾಂಗ್ರೆಸ್ ವಿರುದ್ಧ, ಅವರೇನು ಮಾಡಿದರೂ ನಮಗೆ ಸಂಬಂಧವಿಲ್ಲ ಎಂದರು.
ಇದನ್ನೂ ಓದಿ:ಭತ್ತದ ಗದ್ದೆಗೆ ಡ್ರೋಣ್ ಮೂಲಕ ಕ್ರಿಮಿನಾಶಕ ಸಿಂಪರಣೆ: ಗಂಗಾವತಿ ಭಾಗದ ರೈತರ ಹೊಸ ಪ್ರಯೋಗ
ಎಚ್ ಡಿಕೆ ಸಣ್ಣ ಮಟ್ಟದ ಆಲೋಚನೆ: ಮನಸ್ಸಿಗೆ ಮೊಳೆ ಹೊಡೆಯುವ ವಿಚಾರ ಕುಮಾರಸ್ವಾಮಿಗೆ ಶ್ರೇಯಸ್ಸಲ್ಲ. ಕುಮಾರಸ್ವಾಮಿ ಸಣ್ಣ ಮಟ್ಟಕ್ಕೆ ಆಲೋಚನೆ ಮಾಡುತ್ತಾರೆ ಎಂದು ನನಗೆ ಅಂದುಕೊಂಡಿರಲಿಲ್ಲ. ಎಲ್ಲಿ, ಯಾರು ಮೊಳೆ ಹೊಡೆಯುವ ಕೆಲಸ ಮಾಡಿದ್ದಾರೆ ಎಂದರು.
ಎಲ್ಲಾ ಜಾತಿಯ ಜನ ಸ್ವಯಂ ಪ್ರೇರಿತವಾಗಿ ದೇಣಿಗೆ ನೀಡುತ್ತಿದ್ದಾರೆ. ರಾಮ ಮಂದಿರ ನಿರ್ಮಾಣಕ್ಕೆ ಜನರು ಹಣ ಕೊಡುತ್ತಿದ್ದಾರೆ. ಜನರು ಭಕ್ತಿಯಿಂದ ಕೊಡುವ ಹಣ ಬೇಕೇ ಹೊರತು ದಬ್ಬಾಳಿಕೆಯಿಂದ ಪಡೆಯುವಂತದಲ್ಲ. ಕುಮಾರಸ್ವಾಮಿ ಯಾಕೆ ಹೀಗೆ ಮಾತನಾಡುತ್ತಿದ್ದಾರೆ. ಇದು ಅವರಿಗೆ ಗೌರವ ತರುವ ಸಂಗತಿಯಲ್ಲ ಸುಳ್ಳು ಹೇಳುವ ಕೆಲಸ ಖಂಡನೀಯ ಎಂದು ಸಿ ಟಿ ರವಿ ಹೇಳಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Covid: ಎನ್-95 ಮಾಸ್ಕ್ ಅವ್ಯವಹಾರ: ಆತುರದ ಕ್ರಮ ಕೈಗೊಳ್ಳದಂತೆ ಸೂಚನೆ
Belagavi: ಖಾನಾಪುರ ಪೊಲೀಸ್ ಠಾಣೆ ಸಿಪಿಐ ಅಮಾನತಿಗೆ ಸ್ಪಷ್ಟನೆ ಕೊಟ್ಟ ಸಿಎಂ
ಸಿ.ಟಿ.ರವಿ ಮನಸ್ಸಲ್ಲೇ ಕೊಳೆ ತುಂಬಿದೆ, ಫೆನಾಯಿಲ್ ಹಾಕಿ ತೊಳೆದುಕೊಳ್ಳಲಿ: ಸಚಿವೆ ಲಕ್ಷ್ಮೀ
Kalaburagi: ಟಿಟಿ ಟಯರ್ ಸ್ಫೋಟಗೊಂಡು ಸರಣಿ ಅಪಘಾತ; ಮೂವರು ಸ್ಥಳದಲ್ಲೇ ಮೃತ್ಯು!
Egg Thrown: ಬಿಜೆಪಿ ಶಾಸಕ ಮುನಿರತ್ನ ಮೇಲೆ ಮೊಟ್ಟೆ ಎಸೆತ; ಮೂವರ ಬಂಧನ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.