ದೀಪಾವಳಿ ನಂತರ ಸಚಿವ ಸಂಪುಟ ವಿಸ್ತರಣೆ: ಸಿ.ಟಿ ರವಿ
Team Udayavani, Nov 14, 2020, 4:22 PM IST
ಚಿಕ್ಕಮಗಳೂರು: ಪಕ್ಷದ ವರಿಷ್ಠರು ಬಿಹಾರದ ವಿದ್ಯಮಾನಗಳಲ್ಲಿ ನಿರತರಾಗಿರುವ ಕಾರಣ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ಅವರ ದೆಹಲಿ ಭೇಟಿ ಸಾಧ್ಯವಾಗಿಲ್ಲ. ದೀಪಾವಳಿ ಹಬ್ಬದ ನಂತರ ಮುಖ್ಯಮಂತ್ರಿಯವರು ದೆಹಲಿಗೆ ಭೇಟಿ ನೀಡಿ ವರಿಷ್ಠರನ್ನು ಭೇಟಿಯಾಗುತ್ತಾರೆ ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ಹೇಳಿದರು.
ಚಿಕ್ಕಮಗಳೂರಿನ ದೇವಿರಮ್ಮನ ಬೆಟ್ಟಕ್ಕೆ ಆಗಮಿಸಿದ್ದ ಅವರು ಸುದ್ದಿಗಾರರೊಂದಿಗೆ ಮಾತನಾಡಿ, ಹಬ್ಬದ ಬಳಿಕ ಸಂಪುಟ ಪುನರ್ ರಚನೆ ಅಥವಾ ವಿಸ್ತರಣೆ ಮಾಡುವ ಯೋಚನೆ ಮುಖ್ಯಮಂತ್ರಿಗಳಿಗಿದೆ ಎಂದರು.
ಚಿಕ್ಕಮಗಳೂರು ಜಿಲ್ಲೆಗೆ ಮಂತ್ರಿ ಸ್ಥಾನ ನೀಡುವುದು ಸಿಎಂ ಬಿಎಸ್ ವೈ ಅವರ ರ್ತೀಮಾನ , ಅದನ್ನ ನಾನು ಹೇಳಲಾಗದು ಎಂದರು.
ಪಕ್ಷ ಮಹಾರಾಷ್ಟ್ರ, ಗೋವಾ, ತಮಿಳುನಾಡಿನ ಉಸ್ತುವಾರಿ ನೀಡಿದೆ. ಪಕ್ಷ ನೀಡಿರುವ ಜವಾಬ್ದಾರಿಗೆ ಶಕ್ತಿ ತುಂಬುವ ಕೆಲಸ ಮಾಡುತ್ತೇನೆ ಎಂದ ಅವರು, ಅಯ್ಯೋಧ್ಯೆಯಲ್ಲಿ 500 ವರ್ಷಗಳ ನಂತರ ಸಂಭ್ರಮ ಮನೆ ಮಾಡಿದೆ. ಉತ್ತರ ಪ್ರದೇಶದ ಸಿಎಂ ಯೋಗಿ ಆದಿತ್ಯನಾಥ್ ನೇತೃತ್ವದಲ್ಲಿ ಒಳ್ಳೆ ಕೆಲಸ ನಡೆಯುತ್ತಿದೆ. ಇದೊಂದು ಶುಭ ಸಂಕೇತ, ಅಯೋಧ್ಯೆಯಲ್ಲಿ ಅಯೋಧ್ಯೆಯ ಗತ ವೈಭವ ಮರುಕಳಿಸಿದೆ ಎಂದು ಹೇಳಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Naxalite: ಮಲೆನಾಡಿಗೆ ನಕ್ಸಲರ ಭೇಟಿ ದೃಢ; 3 ಬಂದೂಕು-ಮದ್ದುಗುಂಡು ವಶ
ಚಿಕಿತ್ಸೆಗೆಂದು ಬಂದಿದ್ದ ರೋಗಿ ಸಾವು; ವೈದ್ಯರ ನಿರ್ಲಕ್ಷ್ಯವೇ ಕಾರಣ ಎಂದು ಕುಟುಂಬಸ್ಥರ ಆರೋಪ
Chikkamagaluru: ಮನೆಯೊಂದರಲ್ಲಿ ಬಂದೂಕು ಪತ್ತೆ; ನಕ್ಸಲ್ ಓಡಾಟ ಶಂಕೆ
Chikkamagaluru: ವಿದ್ಯುತ್ ಸ್ಪರ್ಶಿಸಿ ಕಾಡಾನೆ ಸಾವು ಪ್ರಕರಣ; ಮೂವರ ಮೇಲೆ ದೂರು ದಾಖಲು
Miracle: ಮಂಗಳಾರತಿ ವೇಳೆ ಅಲುಗಾಡಿ ವಿಸ್ಮಯ ಮೂಡಿಸುವ ಉಣ್ಣಕ್ಕಿ ಹುತ್ತ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.