ಮತದಾರರ ಸೆಳೆಯಲು ಅಭ್ಯರ್ಥಿಗಳ ಕಸರತ್ತು
•ಬಿಜೆಪಿಯಿಂದ ಅಭಿವೃದ್ಧಿ ಮಂತ್ರ •ಕಾಂಗ್ರೆಸ್‌ಗೆ ಗೆಲ್ಲುವ ರಣತಂತ್ರ•ಸ್ಪರ್ಧಿಸಿದ ಏಕೈಕ ಕ್ಷೇತ್ರದಲ್ಲಿ ಜೆಡಿಎಸ್‌ನಿಂದ ಹೋರಾಟದ ಮಂತ್ರ
Team Udayavani, May 23, 2019, 9:45 AM IST
ಶೃಂಗೇರಿ: ವಿವಿಧ ವಾರ್ಡ್‌ಗಳಲ್ಲಿ ಶಾಸಕ ಟಿ.ಡಿ.ರಾಜೇಗೌಡ ಕಾಂಗ್ರೆಸ್ ಅಭ್ಯರ್ಥಿಗಳ ಪರ ಮತಯಾಚಿಸಿದರು.
ಶೃಂಗೇರಿ: ಬಿಜೆಪಿಗೆ ಅಭಿವೃದ್ಧಿ ಮಂತ್ರ, ಕಾಂಗ್ರೆಸ್‌ಗೆ ಗೆಲ್ಲುವ ರಣತಂತ್ರ, ಜೆಡಿಎಸ್ ಸ್ಪರ್ಧಿಸಿದ ಏಕೈಕ ಕ್ಷೇತ್ರದಲ್ಲಿ ಹೋರಾಟದ ಮಂತ್ರ ಹಾಗೂ ಪಕ್ಷೇತರರ ಅಬ್ಬರದ ಪ್ರಚಾರ, ವೈಯಕ್ತಿಕ ಮತದಾರರ ಭೇಟಿ, ಹಾಲಿ ಹಾಗೂ ಮಾಜಿ ಶಾಸಕರ ವೈಯಕ್ತಿಕ ಪ್ರತಿಷ್ಟೆಯ ಜಿದ್ದಾಜಿದ್ದಿ. ಇದು ಶೃಂಗೇರಿ ಪಟ್ಟಣ ಪಂಚಾಯತ್ ಚುನಾವಣೆಯ ಹೈಲೈಟ್ಸ್.
ಪ್ರಜ್ಞಾವಂತ ಮತದಾರರ ಚುನಾವಣೆಯಂದೇ ಕರೆಯುವ ಪಟ್ಟಣ ಪಂಚಾಯತ್ ಚುನಾವಣೆಗೆ ಕಾವು ತಾರಕ್ಕೇರಿದೆ. ಆದರೆ ಮತದಾರರು ಮಾತ್ರ ಗುಟ್ಟು ಬಿಟ್ಟುಕೊಡದೆ ಮೌನಕ್ಕೆ ಶರಣಾಗಿದ್ದಾರೆ.
ಇಲ್ಲಿನ ಪಟ್ಟಣ ಪಂಚಾಯತ್ 11 ವಾರ್ಡ್ ಗಳಿಗೆ ಚುನಾವಣೆ ನಡೆಯಲಿದ್ದು, ಒಟ್ಟು 25 ಅಭ್ಯರ್ಥಿಗಳ ಅದೃಷ್ಟ ಪರೀಕ್ಷೆ ನಡೆಯಲಿದೆ. 1387 ಪುರುಷರು, 1477 ಮಹಿಳಾ ಮತದಾರರು ಸೇರಿ ಒಟ್ಟು 2858 ಮತದಾರರಿದ್ದಾರೆ. 11 ವಾರ್ಡ್‌ಗಳಲ್ಲಿ 4 ವಾರ್ಡ್‌ಗಳು ಮಹಿಳೆಯರಿಗೆ ಮೀಸಲಾಗಿದ್ದು, ಆದರೆ 11 ವಾರ್ಡ್‌ಗಳಲ್ಲಿ 7 ವಾರ್ಡ್‌ಗಳಲ್ಲಿ ಮಹಿಳಾ ಮತದಾರರೇ ನಿರ್ಣಾಯಕರಾಗಿದ್ದಾರೆ.
1ನೇ ವಾರ್ಡ್: 1ನೇ ವಾರ್ಡ್‌ನಲ್ಲಿ 130 ಪುರುಷರು, 125 ಮಹಿಳೆಯರು ಸೇರಿ 255 ಮತದಾರರಿದ್ದು, ಶೇ.60ರಷ್ಟು ಮತದಾರರು ಮುಸ್ಲಿಂ ಸಮುದಾಯದವರಾಗಿದ್ದಾರೆ. ಈ ವಾರ್ಡ್ ಸಾಮಾನ್ಯ ಅಭ್ಯರ್ಥಿಗೆ ಮೀಸಲಾಗಿದ್ದು, ಇಲ್ಲಿ 5 ಜನರ ಮಧ್ಯೆ ಸ್ಪರ್ಧೆ ಏರ್ಪಟ್ಟಿದೆ. ಕಾಂಗ್ರೆಸ್‌ನಿಂದ ರಿಯಾಜ್ ಅಹಮದ್, ಬಿಜೆಪಿಯಿಂದ ಸಾದಿಕ್ ಅಹಮದ್, ಜೆಡಿಎಸ್‌ನಿಂದ ಫಯಾಜ್ ಮಹಮದ್ ಖಾನ್ ಅಭ್ಯರ್ಥಿಯಾಗಿದ್ದಾರೆ. ಪಕ್ಷೇತರರಾಗಿ ಅಸ್ಗರ್ ಆಲಿ ಖಾನ್, ರಫೀಕ್ ಅಹಮದ್ ಸ್ಪರ್ಧಿಸಿದ್ದಾರೆ.
2ನೇ ವಾರ್ಡ್: ಈ ವಾರ್ಡ್ ಪರಿಶಿಷ್ಟ ಜಾತಿಗೆ ಮೀಸಲಿದ್ದು, 147 ಪುರುಷರು, 155 ಮಹಿಳೆಯರು ಸೇರಿ ಒಟ್ಟು 302 ಮತದಾರರಿದ್ದು, ಜಿಪಂ ಸದಸ್ಯ ಬಿ.ಶಿವಶಂಕರ್ ಸಹೋದರ ಅರುಣ್ ಬಿಜೆಪಿಯಿಂದ ಸ್ಪರ್ಧಿಸಿದ್ದರೆ, ಶೇಖರ್ ಕಾಂಗ್ರೆಸ್‌ನಿಂದ ಸ್ಪರ್ಧಿಸಿದ್ದಾರೆ.
3ನೇ ವಾರ್ಡ್: ಈ ವಾರ್ಡ್‌ನಲ್ಲಿ 117 ಪುರುಷರು, 106 ಮಹಿಳೆಯರು ಸೇರಿ ಒಟ್ಟು 223 ಮತದಾರರಿದ್ದು, ಹಿಂದುಳಿದ ವರ್ಗ ‘ಎ’ ಮಹಿಳೆಗೆ ಮೀಸಲಾಗಿದೆ. ಈ ವಾರ್ಡ್‌ನಲ್ಲಿ ಹ್ಯಾಟ್ರಿಕ್ ಗೆಲುವಿನತ್ತ ಮುಖ ಮಾಡಿರುವ ಕಳೆದ ಬಾರಿ ಅಧ್ಯಕ್ಷರಾಗಿದ್ದ ಬಿಜೆಪಿಯ ಶೋಭಾ ಅನಂತಯ್ಯ ಹಾಗೂ ಕಾಂಗ್ರೆಸ್‌ನಿಂದ ಎಂ.ರೂಪ ಸ್ಪರ್ಧಿಸುತ್ತಿದ್ದಾರೆ.
4ನೇ ವಾರ್ಡ್: ಈ ವಾರ್ಡ್‌ನಲ್ಲಿ 103 ಪುರುಷರು, 113 ಮಹಿಳಾ ಸೇರಿ ಒಟ್ಟು 216 ಮತದಾರರಿದ್ದು, ಸಾಮಾನ್ಯ ಮಹಿಳೆಗೆ ಮೀಸಲಾಗಿದೆ. ಕಾಂಗ್ರೆಸ್‌ನಿಂದ ಡಾ| ಭುವನೇಶ್ವರಿ ಬಲ್ಲಾಳ್, ಬಿಜೆಪಿಯಿಂದ ಶ್ರೀವಿದ್ಯಾ ನಡುವೆ ಸ್ಪರ್ಧೆ ಏರ್ಪಟ್ಟಿದೆ.
5ನೇ ವಾರ್ಡ್: ಅತ್ಯಂತ ಕಡಿಮೆ ಮತದಾರರನ್ನು ಹೊಂದಿರುವ ಈ ವಾರ್ಡ್‌ನಲ್ಲಿ 39 ಪುರುಷರು 50 ಮಹಿಳೆಯರು ಸೇರಿ ಒಟ್ಟು 89 ಮತದಾರರಿದ್ದಾರೆ. ಹಿಂದುಳಿದ ವರ್ಗ ‘ಎ’ಗೆ ಮೀಸಲಿರುವ ಈ ವಾರ್ಡ್‌ನಲ್ಲಿ ಬಿಜೆಪಿಯಿಂದ ವೇಣುಗೋಪಾಲ್, ಕಾಂಗ್ರೆಸ್‌ನಿಂದ ಶಂಕರಾಚಾರ್ಯ ಸ್ಪರ್ಧಿಸಿದ್ದಾರೆ.
6ನೇ ವಾರ್ಡ್: ಈ ವಾರ್ಡ್‌ನಲ್ಲಿ ಪುರುಷರು ಹಾಗೂ ಮಹಿಳೆಯರು ಸಮಬಲ ಹೊಂದಿದ್ದು ಒಟ್ಟು 250 ಮತದಾರರಿದ್ದಾರೆ. ಇಲ್ಲಿ ಬಜರಂಗ ದಳದ ರತ್ನಾಕರ ಬಿಜೆಪಿಯಿಂದ, ಕಾಂಗ್ರೆಸ್‌ನ ಮಂಜುನಾಥ್ ನಡುವೆ ನೇರ ಸ್ಪರ್ಧೆ ಏರ್ಪಟ್ಟಿದೆ. ಈ ವಾರ್ಡ್ ಹಿಂದುಳಿದ ವರ್ಗ ‘ಬಿ’ಗೆ ಮೀಸಲಾಗಿದೆ.
7ನೇ ವಾರ್ಡ್: ಈ ವಾರ್ಡ್ ಜಿದ್ದಾಜಿದ್ದಿನಿಂದ ಕೂಡಿದ್ದು, ಸಾಮಾನ್ಯ ವರ್ಗಕ್ಕೆ ಮೀಸಲಿರುವ ಈ ವಾರ್ಡ್‌ನಲ್ಲಿ ವಿಶ್ವಹಿಂದೂ ಪರಿಷತ್‌ನ ಹರೀಶ್ ವಿ.ಶೆಟ್ಟಿ, ಬಿಜೆಪಿಯಿಂದ, ಸ್ಟೈಲೋ ದಿನೇಶ್‌ಶೆಟ್ಟಿ ಕಾಂಗ್ರೆಸ್‌ನಿಂದ ಸ್ಪರ್ಧಿಸಿದ್ದಾರೆ. 128 ಪುರುಷರು, 158 ಮಹಿಳೆಯರು ಸೇರಿ ಒಟ್ಟು 286 ಮತದಾರರಿದ್ದಾರೆ.
8ನೇ ವಾರ್ಡ್: ಈ ವಾರ್ಡ್ ಸಾಮಾನ್ಯ ವರ್ಗಕ್ಕೆ ಮೀಸಲಾಗಿದ್ದು, 126 ಪುರುಷರು, 113 ಮಹಿಳೆಯರು ಸೇರಿ ಒಟ್ಟು 239 ಮತದಾರರಿದ್ದಾರೆ. ಕಾಂಗ್ರೆಸ್‌ನಿಂದ ಉಮೇಶ್ ಪುದುವಾಳ್, ಬಿಜೆಪಿಯಿಂದ ಪ್ರಕಾಶ್ ಸ್ಪರ್ಧಿಸಿದ್ದು, ಇಬ್ಬರ ನಡುವೆ ನೇರ ಸ್ಪರ್ಧೆ ಏರ್ಪಟ್ಟಿದೆ.
9ನೇ ವಾರ್ಡ್: ಈ ವಾರ್ಡ್ ಸಾಮಾನ್ಯ ಮಹಿಳೆಗೆ ಮೀಸಲಾಗಿದ್ದು, ಕಾಂಗ್ರೆಸ್‌ನಿಂದ ಎಚ್.ಎಸ್.ಸೌಮ್ಯ, ಬಿಜೆಪಿಯಿಂದ ರಾಕ ಸ್ಪರ್ಧಿಸಿದ್ದು, ಇಬ್ಬರ ನಡುವೆ ನೇರ ಹೋರಾಟ ಏರ್ಪಟ್ಟಿದೆ. 79 ಪುರುಷರು, 82 ಮಹಿಳೆಯರು ಸೇರಿ ಒಟ್ಟು 161 ಮತದಾರರಿದ್ದಾರೆ.
10ನೇ ವಾರ್ಡ್: ಈ ವಾರ್ಡ್‌ನಲ್ಲಿ 123 ಪುರುಷರು, 131 ಮಹಿಳೆಯರು ಸೇರಿ ಒಟ್ಟು 254 ಮತದಾರರಿದ್ದು, ಈ ವಾರ್ಡ್ ಸಾಮಾನ್ಯ ಮಹಿಳೆಗೆ ಮೀಸಲಾಗಿದೆ. ಬಿಜೆಪಿಯಿಂದ ಸುಮನ, ಕಾಂಗ್ರೆಸ್‌ನಿಂದ ಆಶಾ ಶೆಟ್ಟಿ ಸ್ಪರ್ಧಿಸಿದ್ದಾರೆ.
11ನೇ ವಾರ್ಡ್: ಈ ವಾರ್ಡ್‌ನಲ್ಲಿ 319 ಮಹಿಳೆಯರು, 270 ಪುರುಷರು ಸೇರಿ ಒಟ್ಟು 589 ಮತದಾರರಿದ್ದಾರೆ. ಬಿಜೆಪಿಯಿಂದ ನಿತ್ಯಾನಂದ, ಕಾಂಗ್ರೆಸ್‌ನಿಂದ ಆಶಾ ಸ್ಪರ್ಧಿಸಿದ್ದಾರೆ. ಈ ವಾರ್ಡ್ ಪರಿಶಿಷ್ಟ ಪಂಗಡಕ್ಕೆ ಮೀಸಲಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Datta peeta; ಸರಕಾರ ನೇಮಕ ಮಾಡಿದ್ದ ಅರ್ಚಕ ರಾಜೀನಾಮೆ
Kottigehara: ಅಪಘಾತದಿಂದ ಗಾಯಗೊಂಡ ನಾಗರಹಾವಿಗೆ ಚಿಕಿತ್ಸೆ
Chikkamagaluru: ಅಪರಿಚಿತ ವಾಹನ ಡಿಕ್ಕಿಯಾಗಿ ಕಂಡಕ್ಟರ್ ಸಾವು
Chikkamagaluru: ನಾವು ನಡೆದಿದ್ದೇ ದಾರಿ, ನಡಿ ಮಗಾ….ಮರಿ ಆನೆಗೆ ನಡೆಯಲು ಕಲಿಸಿದ ತಾಯಿ ಆನೆ
Mudigere: ಕಾಫಿ ಬೆಳೆಗಾರರ ಸಂಘಟನೆಗಳ ಪದಾಧಿಕಾರಿಗಳ ಜೊತೆ ಪೊಲೀಸ್ ಅಧಿಕಾರಿಗಳ ಸಭೆ
MUST WATCH
ಹೊಸ ಸೇರ್ಪಡೆ
Election Results: ಮಹಾರಾಷ್ಟ್ರ, ಝಾರ್ಖಂಡ್ ನಲ್ಲಿ ಮತ ಎಣಿಕೆ ಪ್ರಕ್ರಿಯೆ ಆರಂಭ
ಉಪ ಚುನಾವಣಾ ಫಲಿತಾಂಶ: ಸಂಡೂರು, ಚನ್ನಪಟ್ಟಣ, ಶಿಗ್ಗಾಂವಿ ಕ್ಷೇತ್ರಗಳ ಮತ ಎಣಿಕೆ ಆರಂಭ
BJP Internal Politics: ಬಿಜೆಪಿಯ ಬೇಗುದಿ ಇತ್ಯರ್ಥಕ್ಕೆ ಡಿಸೆಂಬರ್‌ನಲ್ಲಿ ಮುಹೂರ್ತ?
Naxal Vikram Gowda: ನೆಟ್ಟಣದಿಂದ ಮುರ್ಡೇಶ್ವರಕ್ಕೆ ರೈಲಿನಲ್ಲಿ ಪ್ರಯಾಣಿಸಿದ್ದ ನಕ್ಸಲರು!
Vikram Gowda Encounter: ಭೀತಿಗ್ರಸ್ತ ಪೀತಬೈಲು ಪರಿಸರದಲ್ಲಿ ನೀರವ ಮೌನ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.