ಧೂಳೆಬ್ಬಿಸಿದ ಕಾರ್ ರ್ಯಾಲಿ
Team Udayavani, May 9, 2022, 3:19 PM IST
ಚಿಕ್ಕಮಗಳೂರು: ಅಬ್ಲೇಜ್ ಮೋಟಾರ್ ನ್ಪೋರ್ಟ್ಸ್ ಕ್ಲಬ್ ವತಿಯಿಂದ ಹಮ್ಮಿಕೊಂಡಿದ್ದ ಡರ್ಟ್ ಪ್ರಿಕ್ಸ್ ಆಟೋಕ್ರಾಸ್ ರ್ಯಾಲಿಯಲ್ಲಿ ಕಾರುಗಳು ಧೂಳೆಬ್ಬಿಸುವ ಮೂಲಕ ನೆರೆದಿದ್ದ ಜನರನ್ನು ರಂಜಿಸಿದವು.
ಭಾನುವಾರ ನಗರದ ಮೌಂಟೆನ್‌ವ್ಯೂ ಕಾಲೇಜು ಆವರಣದಲ್ಲಿ ಆಯೋಜಿಸಿದ್ದ ರ್ಯಾಲಿಯಲ್ಲಿ ಕಾರು ಚಾಲಕರು ಅತೀ ವೇಗವಾಗಿ ಚಲಾಯಿಸಿದರೆ ಪ್ರೇಕ್ಷಕರು ಶೀಟಿ ಹೊಡೆದು, ಚಪ್ಪಾಳೆ ತಟ್ಟಿ ಚಾಲಕರನ್ನು ಹುರಿದುಂಬಿಸಿದರು. ಅಂಕುಡೊಂಕಿನ ಟ್ರ್ಯಾಕ್‌ನಲ್ಲಿ ಕಾರುಗಳು ಅತೀವೇಗವಾಗಿ ಚಲಿಸುತ್ತಿದ್ದರೆ, ಮುಗಿಲೆತ್ತರಕ್ಕೆ ಧೂಳು ಆವರಿಸುತ್ತಿತ್ತು. ಮೈದಾನದ ಏರಿಗಳ ಮೇಲೆ ಕುಳಿತಿದ್ದ ಜನರು ಜೋರಾಗಿ ಕೂಗಿ ಚಪ್ಪಾಳೆ ತಟ್ಟಿ ಪ್ರೋತ್ಸಾಹಿಸಿದರು.
ರ್ಯಾಲಿಗೆ ಮುಂಬೈ, ಬೆಂಗಳೂರು, ತಮಿಳುನಾಡು, ಕೇರಳ ಹಾಗೂ ಜಿಲ್ಲೆಯ ಚಿಕ್ಕಮಗಳೂರು ಮತ್ತು ಮೂಡಿಗೆರೆ ಚಾಲಕರು ಪಾಲ್ಗೊಂಡು ಚಾಲನೆಯ ಚಾಕಚಕ್ಯತೆಯನ್ನು ಮೆರೆದರು.
ಚಾಂಪಿಯನ್ ಕಾರು ಚಾಲಕರಾದ ಬೆಂಗಳೂರಿನ ರೂಪೇಶ್, ಮೈಸೂರಿನ ಸೈಯದ್ ಸಲ್ಮಾನ್, ಉತ್ತರ ಕನ್ನಡದ ರಿತೇಶ್ ಗುತ್ತೇದಾರ್, ಚಿಕ್ಕಮಗಳೂರಿನ ಅಸದ್‌ಪಾಷ್, ಏಮನ್ ರ್ಯಾಲಿಯ ಕೇಂದ್ರಬಿಂದುವಾಗಿದ್ದರು.
ಅಬ್ಲೇಜ್ ಮೋಟಾರ್ ನ್ಪೋರ್ಟ್ಸ್ಕ್ಲಬ್ ಸ್ಥಾಪನೆಯಾಗಿ 10 ವರ್ಷವಾದ ಹಿನ್ನಲೆಯಲ್ಲಿ ಮೋಟಾರ್ ರ್ಯಾಲಿಯನ್ನು ಆಯೋಜಿಸಿದ್ದು ಅದ್ಧೂರಿಯಾಗಿ ಆರಂಭಗೊಂಡಿತು. 18 ವಿಭಾಗದಲ್ಲಿ ರ್ಯಾಲಿ ನಡೆದಿದ್ದು ವಿಜೇತರಿಗೆ ಪ್ರಥಮ, ದ್ವಿತೀಯ, ತೃತೀಯ ಬಹುಮಾನ ನೀಡಲಾಯಿತು.
ಎಐಟಿ ಕಾಲೇಜು ಪ್ರಾಂಶುಪಾಲ ಡಾ| ಜಯದೇವ ರ್ಯಾಲಿಗೆ ಚಾಲನೆ ನೀಡಿದರು. ಚೇತನ ನರ್ಸಿಂಗ್ ಹೋಮ್ ಕಚೇಂದ್ರ, ಚಿಕ್ಕಮಗಳೂರು ಬುಲೆಟ್ ರೈಡರ್‌ಕ್ಲಬ್‌ನ ಯಧುಕುಮಾರ್, ವೀರಾಸ್ ಪ್ಲೈಹೋಮ್ ಡೆಕಾರ್‌ನ ಸೆಂದಿಲ್ ಭಾಗವಹಿಸಿದ್ದರು.
ಎ.ಎಂ.ಎಸ್.ಪಿ.ಯ ಅಧ್ಯಕ್ಷ ಗೌತಮ್, ಕಾರ್ಯದರ್ಶಿ ಧನುಷ್, ಉಪಾಧ್ಯಕ್ಷ ವಿನಯ್, ಪದಾಧಿಕಾರಿ ನಿಶಾಂತ್, ಅಭಿಷೇಕ್‌ರಾಜ್ ಅರಸ್, ಯಧುಕುಮಾರ್, ಬಾಬು, ಪೂರ್ಣಚಂದ್ರ, ಲೋಹಿತ್ ಇದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಮದುವೆಯಾಗಿದ್ದೇವೆ… ನಮಗೆ ರಕ್ಷಣೆ ನೀಡಿ ಎಂದು ಠಾಣೆ ಮೆಟ್ಟಿಲೇರಿದ ಪ್ರೇಮಿಗಳು
Chikkamagaluru: ಮೂರು ದಿನದ ಬಾಣಂತಿ ಮೃತ್ಯು; ವೈದ್ಯರ ನಿರ್ಲಕ್ಷ್ಯವೇ ಕಾರಣವೆಂದು ಆರೋಪ
Kottigehara: ನಿರ್ದೇಶಕ ಉಪೇಂದ್ರ ಅವರ ‘ಯುಐ’ ಚಿತ್ರದಲ್ಲಿ ಖಳನಟನಾಗಿ ನಟಿಸಿದ ಬಣಕಲ್ ನಿವಾಸಿ
Save Life: ಚಾರ್ಮಾಡಿ ಘಾಟ್‌ನಲ್ಲಿ ವ್ಯಕ್ತಿ ಆತ್ಮಹತ್ಯೆಗೆ ಯತ್ನ; ಜೀವ ರಕ್ಷಿಸಿದ ಪೊಲೀಸರು
Elephant: ಕಾಫಿನಾಡಿನಲ್ಲಿ ಕಾಡಾನೆ ನೈಟ್ ರೌಂಡ್ಸ್… ಇದು ಮುಗಿಯದ ಗೋಳು ಎಂದ ಗ್ರಾಮಸ್ಥರು
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.