ಸಂಭ್ರಮ ಸಡಗರದ ರಂಜಾನ್ ಆಚರಣೆ
Team Udayavani, Jun 16, 2018, 11:03 AM IST
ಬಾಳೆಹೊನ್ನೂರು: ರಂಜಾನ್ ತಿಂಗಳಲ್ಲಿ ಧಾನ ಧರ್ಮ ಮಾಡಿದರೆ ಇಹಪರದಲ್ಲಿ ಯಶಸ್ಸು ದೊರಕಲಿದೆ ಎಂಬ ನಂಬಿಕೆಯಿದೆ ಎಂದು ಪಟ್ಟಣದ ಮಸೀದಿಕೆರೆ ಗ್ರಾಮದ ಅಲ್ ಬದ್ರಿಯಾ ಜುಮ್ಮಾ ಮಸೀದಿ ಧರ್ಮಗುರುಗಳಾದ ಅಬುಸಾಲಿ ಸಖಾಫಿ ಹೇಳಿದರು.
ಅವರು ಶುಕ್ರವಾರ ಮಸೀದಿಕೆರೆ ಗ್ರಾಮದ ಅಲ್ ಬದ್ರಿಯಾ ಜುಮ್ಮಾ ಮಸೀದಿಯಲ್ಲಿ ರಂಜಾನ್ ಆಚರಣೆಯ ಪ್ರಯುಕ್ತ ವಿಶೇಷ ಪ್ರಾರ್ಥನೆ ಸಲ್ಲಿಸಿ ಮಾತನಾಡಿದರು. ಮುಸ್ಲಿಂ ಬಾಂಧವರು ಪವಿತ್ರ ರಂಜಾನ್ ಹಬ್ಬವನ್ನು ಸಡಗರ ಸಂಭ್ರಮದಿಂದ ಹೊಸ ಬಟ್ಟೆ ಧರಿಸಿ ಮಸೀದಿಗಳಿಗೆ ತೆರಳಿ ವಿಶೇಷ ಪ್ರಾರ್ಥನೆ ಸಲ್ಲಿಸಿ ಪರಸ್ಪರ ಶುಭಾಶಯ ವಿನಿಮಯ ಮಾಡಿಕೊಳ್ಳುತ್ತಾರೆ.
ಅಲ್ಲದೆ ಒಂದು ತಿಂಗಳಿಂದ ಉಪವಾಸ ವ್ರತಾಚರಣೆ ಮೂಲಕ ದೇಹ ದಂಡಿಸಿ, ತಿಂಗಳ ಕೊನೆಯಲ್ಲಿ ಚಂದ್ರನ ದರ್ಶನ ಪಡೆಯುತ್ತಾರೆ. ಬಹಳ ಪ್ರಮುಖವಾಗಿ ದಾನ, ದರ್ಮಮಾಡಿ ಆತ್ಮ ತೃಪ್ತಿ ಪಡೆಯುತ್ತಾರೆ ಎಂದರು. ಈ ಸಂದರ್ಭದಲ್ಲಿ ಅಲ್ ಬದ್ರಿಯಾ ಜುಮ್ಮಾ ಮಸೀದಿ ಅಧ್ಯಕ್ಷ ಟಿ.ಎಂ.ನಾಸೀರ್, ಕಾರ್ಯದರ್ಶಿ ಮೈಯ್ಯದ್ದಿ, ಕಾಂಗ್ರೆಸ್ ಮುಖಂಡ ಕೆ.ಇಬ್ರಾಹಿಂ, ಲತೀಪ್, ಅಲ್ ಬದ್ರಿಯಾ ಮಸೀದಿಯ ಅಹಮ್ಮದ್ ಝಮೀರ್, ಇಬ್ರಾಹಿಂಶಾಪಿ, ರಪೀಕ್.ಕೆ.ಎಂ. ಶಾನ್ವಾಜ್, ರಪೀಕ್.ಎಸ್, ಆಸಿಪ್ ಆಲಿ, ನಯಾಜ್, ಜುಹೇಬ್, ಹಾರೀಸ್, ಹಮೀದ್ ಉಸ್ತಾಧ್, ಟಿ.ಡಿ. ಮೈದಿನ್ ಇದ್ದರು. ಸುತ್ತಮುತ್ತಲ ಮುಸಲ್ಮಾನ್ ಬಾಂಧವರು ಪಾಲ್ಗೊಂಡು ವಿಷೇಷ ಪ್ರಾರ್ಥನೆ ಸಲ್ಲಿಸಿ ಪರಸ್ಪರ ಶುಭಾಶಯ ವಿನಿಮಯ ಮಾಡಿಕೊಂಡರು.
ಸಡಗರದ ರಂಜಾನ್ ಆಚರಣೆ
ಕೊಪ್ಪ: ತಾಲೂಕಿನ ಕೊಪ್ಪ ನಾರ್ವೆ, ಜಯಪುರ, ಕಮ್ಮರಡಿ ಹಾಗೂ ಕುದ್ರೆಗುಂಡಿಯಲ್ಲಿ ಶುಕ್ರವಾರ ರಂಜಾನ್ ಹಬ್ಬವನ್ನು ಆಚರಿಸುವ ಮೂಲಕ ಶಾಫಿ ಪಂಥದ ಮುಸ್ಲಿಮರು ಕಳೆದೊಂದು ತಿಂಗಳಿನಿಂದ ಹಿಡಿದಿದ್ದ ಉಪವಾಸ ವ್ರತವನ್ನು ಅಂತ್ಯಗೊಳಿಸಿದರು.
ಕೇರಳ, ತಮಿಳುನಾಡು, ಕರಾವಳಿ ಕರ್ನಾಟಕ ಭಾಗದ ಮುಸ್ಲಿಮರು ಅರಬ್ ರಾಷ್ಟ್ರಗಳ ಪದ್ಧತಿ ಅನುಸರಿಸುತ್ತಾರೆ. ಅರಬ್ ರಾಷ್ಟ್ರದಲ್ಲಿ ಚಂದ್ರದರ್ಶನವಾದ ಮೇಲೆ ಶಾಫಿ ಪಂಥದ ಮುಸ್ಲಿಮರು ಮರುದಿನ ಹಬ್ಬ ಆಚರಣೆ ಮಾಡುತ್ತಾರೆ. ಅದರಂತೆ ಪಟ್ಟಣದ ಮೋಹಿದ್ದೀನ್ ಜುಮ್ಮಾ ಮಸೀದಿ, ನೇತಾಜಿ ನಗರದ ಬದ್ರಿಯ ಜುಮ್ಮ ಮಸೀದಿ, ರಾಘವೇಂದ್ರ ನಗರದ ನೂರುಲ್ ಆಲಮ್ ಜುಮ್ಮ ಮಸೀದಿ ಸೇರಿದಂತೆ ವಿವಿಧೆಡೆ ರಂಜಾನ್ ಹಬ್ಬವನ್ನು ಆಚರಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Chikkamagaluru: ಮದುವೆ ಹಾಲ್ ನಲ್ಲೇ ವಧುವಿನ ಚಿನ್ನ ಎಗರಿಸಿದ ಖದೀಮರು…
Chikkamagaluru: ಕೇರಳದಿಂದ “ಸುರಕ್ಷಿತ’ ಮಲೆನಾಡಿನತ್ತ “ನಕ್ಸಲರು’?
Naxalite: ಮಲೆನಾಡಿಗೆ ನಕ್ಸಲರ ಭೇಟಿ ದೃಢ; 3 ಬಂದೂಕು-ಮದ್ದುಗುಂಡು ವಶ
ಚಿಕಿತ್ಸೆಗೆಂದು ಬಂದಿದ್ದ ರೋಗಿ ಸಾವು; ವೈದ್ಯರ ನಿರ್ಲಕ್ಷ್ಯವೇ ಕಾರಣ ಎಂದು ಕುಟುಂಬಸ್ಥರ ಆರೋಪ
Chikkamagaluru: ಮನೆಯೊಂದರಲ್ಲಿ ಬಂದೂಕು ಪತ್ತೆ; ನಕ್ಸಲ್ ಓಡಾಟ ಶಂಕೆ
MUST WATCH
ಹೊಸ ಸೇರ್ಪಡೆ
Karnataka: ಹೊಸ ಸಿಎಂ ನೇತೃತ್ವದಲ್ಲಿ ಬೆಳಗಾವಿ ಅಧಿವೇಶನ: ಸುನಿಲ್
Udupi: ಶತಚಂಡಿಕಾಯಾಗ, ಬ್ರಹ್ಮಮಂಡಲ ಸೇವೆ ಆಮಂತ್ರಣ ಪತ್ರಿಕೆ ಬಿಡುಗಡೆ
Children’s Day: ಶಿಕ್ಷಣವನ್ನು ಪ್ರೋತ್ಸಾಹಿಸಿ ಮೋದಿ ಕನಸಿನ ವಿಕಸಿತ ಭಾರತ ನಿರ್ಮಾಣ ಮಾಡೋಣ
Bantwal: ನಾಪತ್ತೆಯಾದವರ ಮೃತ*ದೇಹ ಉಳ್ಳಾಲ ರೈಲು ಹಳಿಯಲ್ಲಿ ಪತ್ತೆ
Dharmasthala; ಗ್ರಾಮಾಭಿವೃದ್ಧಿ ಯೋಜನೆ ಜನರ ನಾಡಿಮಿಡಿತ: ನಿರ್ಮಲಾ ಸೀತಾರಾಮನ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.