![Thirthahalli: ಸಾಲ ಕಟ್ಟದ್ದಕ್ಕೆ ಕಿವಿಯೋಲೆ ಕಿತ್ತ ಬ್ಯಾಂಕ್ ಸಿಬ್ಬಂದಿ!](https://www.udayavani.com/wp-content/uploads/2025/02/19-4-415x249.jpg)
![Thirthahalli: ಸಾಲ ಕಟ್ಟದ್ದಕ್ಕೆ ಕಿವಿಯೋಲೆ ಕಿತ್ತ ಬ್ಯಾಂಕ್ ಸಿಬ್ಬಂದಿ!](https://www.udayavani.com/wp-content/uploads/2025/02/19-4-415x249.jpg)
Team Udayavani, Jan 4, 2021, 6:05 PM IST
ಚಿಕ್ಕಮಗಳೂರು: ರಾತ್ರಿ ರಿಸೆಪ್ಷನ್ ವೇಳೆ ಇದ್ದ ವರ ಬೆಳಗ್ಗೆ ಮದುವೆ ಮುಹೂರ್ತದ ವೇಳೆಗೆ ನಾಪತ್ತೆಯಾಗಿದ್ದು, ಮದುಮಗಳಾಗಿ ನಿಂತಿದ್ದ ಯುವತಿಯನ್ನು ಬೆಂಗಳೂರಿನ ಬಿಎಂಟಿಸಿ ಬಸ್ ಕಂಡಕ್ಟರ್ ಕೈ ಹಿಡಿದ ಅಪರೂಪದ ಘಟನೆ ಜಿಲ್ಲೆಯ ತರೀಕೆರೆ ತಾಲೂಕಿನಲ್ಲಿ ನಡೆದಿದೆ.
ತರೀಕೆರೆ ತಾಲೂಕಿನ ದೋರನಾಳು ಗ್ರಾಮದ ಅಶೋಕ್ ಹಾಗೂ ನವೀನ್ ಎಂಬ ಸಹೋದರರಿಗೆ ದಾವಣಗೆರೆ ಹಾಗೂ ಚಿತ್ರದುರ್ಗ ಜಿಲ್ಲೆಯ ಯುವತಿಯರೊಂದಿಗೆ ವಿವಾಹ ನಿಶ್ಚಯವಾಗಿತ್ತು. ಅಶೋಕ್ ಅವರ ವಿವಾಹ ದಾವಣಗೆರೆ ಮೂಲದ ಯುವತಿಯೊಂದಿಗೆ ಶನಿವಾರ ನಡೆದಿದೆ.
ಚಿತ್ರದುರ್ಗ ಜಿಲ್ಲೆ ಹೊಸದುರ್ಗ ತಾಲೂಕಿನ ಸರಪನಹಳ್ಳಿಯ ಯುವತಿ ಸಿಂಧು ವನ್ನು ವಿವಾಹವಾಗಬೇಕಿದ್ದ ನವೀನ್ ಶನಿವಾರ ರಾತ್ರಿ ಛತ್ರದಿಂದ ನಾಪತ್ತೆಯಾಗಿದ್ದಾನೆ. ಇದರಿಂದ ನವೀನ್ ಹಾಗೂ ಯುವತಿಯ ಪೋಷಕರು ಕಂಗಾಲಾಗಿದ್ದರು. ಆದರೆ ದೋರನಾಳು ಸಮೀಪದ ನಂದಿ ಗ್ರಾಮದ ಯುವಕ, ಬಿಎಂಟಿಸಿ ಬಸ್ ಕಂಡಕ್ಟರ್ ಚಂದ್ರು ಯುವತಿ ಸಿಂಧುವನ್ನು ಒಪ್ಪಿ ವಿವಾಹವಾಗಿದ್ದಾನೆ.
ಪ್ರಿಯತಮೆಯ ಬೆದರಿಕೆಯಿಂದ ನಾಪತ್ತೆ: ಶನಿವಾರ ರಾತ್ರಿ ಔತಣಕೂಟದಲ್ಲಿ ಸಿಂಧು ಜೊತೆಗಿದ್ದ ನವೀನ್ ಭಾನುವಾರ ಬೆಳಗ್ಗೆ ನಾಪತ್ತೆಯಾಗಿದ್ದ. ನವೀನ್ ಈ ಮೊದಲೇ ಪ್ರೀತಿಸುತ್ತಿದ್ದ ಯುವತಿ ಬೇರೆ ಹುಡುಗಿಯನ್ನು ಮದುವೆಯಾಗಲು ಬಿಡಲ್ಲ. ನಾನು ಛತ್ರದಲ್ಲೇ ವಿಷ ಕುಡಿಯುತ್ತೇನೆ ಎಂದು ಹೆದರಿಸಿದ್ದು, ನವೀನ್ ಹೆದರಿ ಛತ್ರದಿಂದಲೇ ನಾಪತ್ತೆಯಾಗಿದ್ದಾನೆ ಎಂದು ತಿಳಿದು ಬಂದಿದೆ.
ಇದನ್ನೂ ಓದಿ : ಗಂಡನನ್ನು ಕೊಂದ ಮಾಹಿತಿ Facebookನಲ್ಲಿ ಹಂಚಿ ಬಳಿಕ ತಾನು ಆತ್ಮಹತ್ಯೆಗೆ ಯತ್ನಿಸಿದ ಪತ್ನಿ
Kaup: ಸ್ಕೂಟಿ, ಕಾರಿಗೆ ಬಸ್ ಢಿಕ್ಕಿ; ಸವಾರನಿಗೆ ಗಾಯ
Thirthahalli: ಸಾಲ ಕಟ್ಟದ್ದಕ್ಕೆ ಕಿವಿಯೋಲೆ ಕಿತ್ತ ಬ್ಯಾಂಕ್ ಸಿಬ್ಬಂದಿ!
Padubidri: ಕಬ್ಬಿಣದ ತುಂಡು ಹೆಕ್ಕಿದ ಬಾಲಕರಿಗೆ ರೈಲ್ವೇ ಗ್ಯಾಂಗ್‌ಮನ್ ಹಲ್ಲೆ; ದೂರು
Restriction: ನಿಷೇಧವಿದ್ದರೂ ಗೂಡ್ಸ್ ವಾಹನಗಳಲ್ಲಿ ಜನರು ಬಿಳಿಗಿರಿ ರಂಗನ ಬೆಟ್ಟಕ್ಕೆ ಪಯಣ!
Pro Hockey: ಇಂಗ್ಲೆಂಡ್ ವಿರುದ್ಧ ಭಾರತ ವನಿತೆಯರಿಗೆ ಸೋಲು
You seem to have an Ad Blocker on.
To continue reading, please turn it off or whitelist Udayavani.