ಶ್ರದ್ಧಾ ಭಕ್ತಿಯ ಭೂಮಿ ಹುಣ್ಣಿಮೆ ಹಬ್ಬ
Team Udayavani, Oct 21, 2021, 3:24 PM IST
ಶೃಂಗೇರಿ: ರೈತರ ಹಬ್ಬವೆಂದೇ ಭಾವಿಸಲಾಗಿರುವ ಭೂಮಿ ಹುಣ್ಣಿಮೆಹಬ್ಬವನ್ನು ತಾಲೂಕಿನಾದ್ಯಾಂತ ಶ್ರದ್ಧಾ ಭಕ್ತಿಯಿಂದ ಬುಧವಾರಆಚರಿಸಲಾಯಿತು.ಸೂರ್ಯ ಉದಯಿಸುವುದಕ್ಕೂ ಮುನ್ನವೇ ರೈತರು ಭೂಮಿಪೂಜೆಮಾಡಲು ಅಗತ್ಯ ತಯಾರಿಯೊಂದಿಗೆ ತಮ್ಮ ಜಮೀನಿಗೆ ತೆರಳಿ ಪೂಜೆಸಲ್ಲಿಸಿದರು.
ರೈತರು ಹಬ್ಬಕ್ಕಾಗಿ ವಿಶೇಷ ತಯಾರಿ ನಡೆಸಿದ್ದರು. ತಮ್ಮಜಮೀನಿನಲ್ಲಿ ತಳಿರು, ತೋರಣ, ಬಾಳೆ ಕಂಬ ನೆಟ್ಟು,ರಂಗೋಲಿ ಹಾಕಿಹಬ್ಬದ ಸಿದ್ದತೆ ನಡೆಸಿದರು. ತೋಟಗಳಲ್ಲಿ ಅಡಕೆ,ಬಾಳೆ ಮರಗಳಿಗೆಕೆಮ್ಮಣ್ಣು,ಸುಣ್ಣ ಬಳಿದು, ತಳಿರು ತೋರಣ, ಹೂವಿನ ಹಾರ ಹಾಕಿಶೃಂಗರಿಸಿದ್ದರು. ಅರಿಶಿನ ಕುಂಕುಮ, ಗಂಧ ಲೇಪಿಸಿ ಪೂಜೆ ಸಲ್ಲಿಸಿದರು.
ಭೂತಾಯಿಗೆ ಬೆರಕೆ ಸೊಪ್ಪಿನ ಪಲ್ಯ, ಮೊಸರನ್ನ, ತುಪ್ಪನ್ನ, ಚಿತ್ರನ್ನ,ಕೋಸಂಬರಿ, ಪಾಯಸ ಸಮರ್ಪಿಸಿದರು.ನಂತರ ಭತ್ತದ ಗದ್ದೆಗಳಲ್ಲಿಯೂವಿಶೇಷ ಪೂಜೆ ಸಲ್ಲಿಸಿ, ತೋಟ ಹಾಗೂ ಗದ್ದೆಗಳಿಗೆ ಪ್ರಸಾದವನ್ನು ಚೆಲ್ಲಿದರು.
ಮನೆ ಮನೆಗಳಲ್ಲಿ ವಿಶೇಷ ಅಡುಗೆ ಮಾಡಿ ಸಂಭ್ರಮಿಸಿದರು. ಭೂಮಿಹುಣ್ಣಿಮೆಯ ಮರುದಿನ ಭೂಮಿಯು ಬಲಿಯುವುದು ಎಂಬ ನಂಬಿಕೆಇರುವ ಹಿನ್ನಲೆಯಲ್ಲಿ ಭೂಮಿಗೆ ಪೆಟ್ಟು ಮಾಡಬಾರದು ದೃಷ್ಠಿಯಿಂದಕಾರ್ಮಿಕರು ಗುರುವಾರ ಕಾಯಕದಿಂದ ದೂರ ಉಳಿಯುತ್ತಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Chikkamagaluru: ಮದುವೆ ಹಾಲ್ ನಲ್ಲೇ ವಧುವಿನ ಚಿನ್ನ ಎಗರಿಸಿದ ಖದೀಮರು…
Chikkamagaluru: ಕೇರಳದಿಂದ “ಸುರಕ್ಷಿತ’ ಮಲೆನಾಡಿನತ್ತ “ನಕ್ಸಲರು’?
Naxalite: ಮಲೆನಾಡಿಗೆ ನಕ್ಸಲರ ಭೇಟಿ ದೃಢ; 3 ಬಂದೂಕು-ಮದ್ದುಗುಂಡು ವಶ
ಚಿಕಿತ್ಸೆಗೆಂದು ಬಂದಿದ್ದ ರೋಗಿ ಸಾವು; ವೈದ್ಯರ ನಿರ್ಲಕ್ಷ್ಯವೇ ಕಾರಣ ಎಂದು ಕುಟುಂಬಸ್ಥರ ಆರೋಪ
Chikkamagaluru: ಮನೆಯೊಂದರಲ್ಲಿ ಬಂದೂಕು ಪತ್ತೆ; ನಕ್ಸಲ್ ಓಡಾಟ ಶಂಕೆ
MUST WATCH
ಹೊಸ ಸೇರ್ಪಡೆ
PoK ಪ್ರದೇಶದಲ್ಲಿ ಚಾಂಪಿಯನ್ಸ್ ಟ್ರೋಫಿ ಪಂದ್ಯಗಳು: ಬಿಸಿಸಿಐ ನಿಂದ ತೀವ್ರ ಖಂಡನೆ
Congress: ಸರ್ಕಾರದಲ್ಲಿ ಒಬ್ಬರು ಏತಿ ಅಂದರೆ ಮತ್ತೊಬ್ಬರು ಪ್ರೇತಿ ಅಂತಾರೆ: ಆರ್.ಅಶೋಕ್
50 cr for 50 Cong MLAs ; ಎಸ್ ಐಟಿ ತನಿಖೆಗೆ ಎಚ್.ಡಿ.ಕುಮಾರಸ್ವಾಮಿ ಒತ್ತಾಯ
‘Kanguva’; ಮೊದಲ ದಿನವೇ 58.62 ಕೋಟಿ ರೂ. ಬಾಚಿದ ಕಂಗುವ
Udupi: ಮೀನುಗಾರಿಕೆ ಕಾರ್ಮಿಕ ಸಾವು; ಪ್ರಕರಣ ದಾಖಲು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.