ಮಾಣಿಕ್ಯಧಾರಾದಲ್ಲಿ ಸ್ಪಚ್ಛತಾ ಕಾರ್ಯ
Team Udayavani, Oct 24, 2021, 2:05 PM IST
ಚಿಕ್ಕಮಗಳೂರು: ಪ್ರವಾಸಿಗರು ಎಲ್ಲೆಂದರಲ್ಲಿಎಸೆದಿರುವ ಕಸ, ಅನುಪಯುಕ್ತ ಬಟ್ಟೆ, ಪ್ಲಾಸ್ಟಿಕ್‌ಗಳನ್ನು, ಮದ್ಯದ ಬಾಟಲಿಗಳನ್ನು ತೆಗೆದು ಸ್ವತ್ಛಗೊಳಿಸುವ ಮೂಲಕ ಅ ಧಿಕಾರಿಗಳು ಇತರರಿಗೆ ಮಾದರಿಯಾಗಿದ್ದಾರೆ.
ಶನಿವಾರ ಜಿಲ್ಲಾಡಳಿತ ಮತ್ತು ನಗರಸಭೆಯಿಂದಆಯೋಜಿಸಿದ್ದ ಐ.ಡಿ.ಪೀಠದ ಮಾಣಿಕ್ಯಧಾರಾಜಲಪಾತ ಸುತ್ತಮುತ್ತಲ ಪ್ರದೇಶ ಸ್ವತ್ಛತಾಕಾರ್ಯದಲ್ಲಿ ಉಪವಿಭಾಗಾ ಧಿಕಾರಿ ಡಾ|ಎಚ್.ಎಲ್.ನಾಗರಾಜ್, ನಗರಸಭೆ ಪೌರಾಯುಕ್ತಬಿ.ಸಿ.ಬಸವರಾಜ್, ತಹಶೀಲ್ದಾರ್ ಡಾ|ಕೆ.ಜೆ.ಕಾಂತರಾಜ್, ಮುತ್ತೋಡಿ ವಲಯ ಅರಣ್ಯಾಧಿಕಾರಿ ಕಿರಣ್‌ಕುಮಾರ್ ಹಾಗೂ ನಗರಸಭೆಸಿಬ್ಬಂದಿ, ಕಂದಾಯ ಇಲಾಖೆಯ ಅ ಧಿಕಾರಿಗಳುಸ್ವತ್ಛತಾ ಕಾರ್ಯ ನಡೆಸಿದರು.
ಉಪವಿಭಾಗಾ ಧಿಕಾರಿ ಡಾ|ಎಚ್.ಎಲ್.ನಾಗರಾಜ್ ಮಾತನಾಡಿ, ಗಿರಿಪ್ರದೇಶದಲ್ಲಿಸ್ವತ್ಛತೆ ಕಾಪಾಡುವಂತೆ ನಿರಂತರವಾಗಿ ಜಾಗೃತಿಮೂಡಿಸುತ್ತಿದ್ದರು ಪ್ರವಾಸಿಗರು ನಿರ್ಲಕ್ಷ್ಯ ಧೋರಣೆ ಅನುಸರಿಸುತ್ತಿದ್ದಾರೆ.
ಮಾಣಿಕ್ಯಾಧಾರದಲ್ಲಿಸ್ನಾನ ಮಾಡುವ ಪ್ರವಾಸಿಗರು ಸ್ನಾನ ಮಾಡಿದಬಟ್ಟೆಗಳನ್ನು ಅಲ್ಲಿಯೇ ಬಿಟ್ಟು ಮೌಡ್ಯಪ್ರದರ್ಶಿಸುತ್ತಿದ್ದಾರೆ. ಕ್ಷೇತ್ರದ ಪಾವಿತ್ರÂತೆ ಉಳಿಸಲುಎಲ್ಲರೂ ಸಹರಿಸಬೇಕೆಂದು ತಿಳಿಸಿದರು.
ಪ್ರವಾಸಿಗರು ದಾರಿಯುದ್ದಕ್ಕೂ ಪ್ಲಾಸ್ಟಿಕ್,ಮದ್ಯದ ಬಾಟಲಿ ಎಲ್ಲೆಂದರಲ್ಲಿ ಎಸೆದುಅಗೌರವ ತೋರುತ್ತಿದ್ದಾರೆ. ಮುಂದಿನ ದಿನಗಳಲ್ಲಿಪ್ರವಾಸಿಗರು ಇದೇ ರೀತಿ ವರ್ತಿಸಿದರೆ ಜಿಲ್ಲೆಯನ್ನುಪ್ರವಾಸಿಗರು ಜಿಲ್ಲೆಯನ್ನು ಪ್ರವೇಶಿಸದಂತೆತಡೆಯುವ ದಿನಗಳು ಬಂದರೂ ಆಶ್ಚರ್ಯಪಡಬೇಕಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.
ಜಿಲ್ಲಾ ಧಿಕಾರಿ, ಪೊಲೀಸ್ ವರಿಷ್ಠಾ ಧಿಕಾರಿ,ಜಿಪಂ ಮುಖ್ಯಕಾರ್ಯನಿರ್ವಹಣಾ ಧಿಕಾರಿನೇತೃತ್ವದಲ್ಲಿ ಸಭೆ ನಡೆಸಲಾಗಿದೆ. ಸ್ಥಳೀಯವಾಗಿಕಾರ್ಯನಿರ್ವಹಿಸುತ್ತಿರುವ ಗ್ರಾಮ ಅರಣ್ಯಸಮಿತಿ ಇಲ್ಲಿ ಸಂಗ್ರಹಿಸುವ ಹಣವನ್ನುವಿನಿಯೋಗಿಸಿ ಸ್ವತ್ಛತೆ ಕಾಪಾಡಿ ಕೊಳ್ಳುತ್ತಿಲ್ಲ ಎಂಬದೂರುಗಳು ಕೇಳಿ ಬಂದಿರುವ ಹಿನ್ನೆಲೆಯಲ್ಲಿಅವರಿಗೆ ಜಿಲ್ಲಾಡಳಿತ ಎಚ್ಚರಿಸುವ ಕೆಲಸ ಮಾಡಿದೆಎಂದು ತಿಳಿಸಿದರು.
ಪೌರಾಯುಕ್ತ ಬಸವರಾಜ್ ಮಾತನಾಡಿ,ಐ.ಡಿ. ಪೀಠ ಪ್ರದೇಶದಲ್ಲಿ ಹಲವು ಬಾರೀಸ್ವತ್ಛತಾ ಕಾರ್ಯಕೈಗೊಂಡಿದ್ದರೂ ಯಾವುದೇಬದಲಾವಣೆ ಕಂಡುಬಂದಿಲ್ಲ. ಸ್ಥಳೀಯ ಗ್ರಾಪಂ ಸಿಬ್ಬಂದಿಯು ಸೇರಿದಂತೆ ಸಾರ್ವಜನಿಕರು ಸ್ವತ್ಛತೆಯನ್ನು ನಿರ್ಲಕ್ಷಿಸುತ್ತಿರುವುದು ಬೇಸರದಸಂಗತಿ ಎಂದರು
.ಸ್ವತ್ಛತಾ ಕಾರ್ಯದಲ್ಲಿ ಜಿಲ್ಲಾ ಧಿಕಾರಿ ಕೆ.ಎಸ್.ರಮೇಶ್ ಸೇರಿದಂತೆ ಜಿಲ್ಲಾಡಳಿತ ಮತ್ತು ನಗರಸಭೆಸಿಬ್ಬಂದಿಗಳು ಪಾಲ್ಗೊಂಡಿದ್ದರು. ಅನುಪಯುಕ್ತತ್ಯಾಜ್ಯವನ್ನು ಸಂಗ್ರಹಿಸಿ ಸ್ವತ್ಛ ಗೊಳಿಸಲಾಯಿತು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Dhanashree Verma: ಯಶ್ ಸಿನಿಮಾಕ್ಕೆ ಕ್ರಿಕೆಟಿಗ ಚಹಾಲ್ ಪತ್ನಿ ಹೀರೋಯಿನ್
Re-Release: ಈ ವರ್ಷ ರೀ ರಿಲೀಸ್ ಆದ ಬಾಲಿವುಡ್ ಸಿನಿಮಾಗಳ ಬಾಕ್ಸ್ ಆಫೀಸ್ ಗಳಿಕೆ ಎಷ್ಟು?
Uttara Pradesh By poll: 30 ವರ್ಷದ ಬಳಿಕ ಮುಸ್ಲಿಂ ಬಾಹುಳ್ಯದ ಕ್ಷೇತ್ರದಲ್ಲಿ ಅರಳಿದ ಕಮಲ!
IPL Mega Auction: 2008-2024.. ಪ್ರತಿ ಹರಾಜಿನ ದುಬಾರಿ ಆಟಗಾರರ ಪಟ್ಟಿ ಇಲ್ಲಿದೆ
ಬೆಳಗಾವಿ:ಬಟ್ಟೆ ಅಂಗಡಿಯಲ್ಲಿ ಕೆಲಸ ಮಾಡಿದ ಹುಡುಗ..ಜಿಲ್ಲಾ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.