ದತ್ತಮಾಲಾಧಾರಿಗಳಿಂದ ಪಡಿ ಸಂಗ್ರಹ
Team Udayavani, Nov 14, 2021, 8:24 PM IST
ಚಿಕ್ಕಮಗಳೂರು: ಶ್ರೀರಾಮಸೇನೆ ವತಿಯಿಂದಆಯೋಜಿಸಿರುವ 17ನೇ ವರ್ಷದದತ್ತಮಾಲಾ ಅಭಿಯಾನದ ಅಂಗವಾಗಿಶ್ರೀರಾಮಸೇನೆ ಮಾಲಾಧಾರಿಗಳು ನಗರದಲ್ಲಿಮನೆ- ಮನೆಗೆ ತೆರಳಿ ಪಡಿ ಸಂಗ್ರಹಿಸಿದರು.
ಶನಿವಾರ ಬೆಳಗ್ಗೆ ನಗರದ ವಿಜಯಪುರ,ಬಸವನಹಳ್ಳಿ ಸೇರಿದಂತೆ ಪ್ರಮುಖ ಬೀದಿಗಳಲ್ಲಿ ಮಾಲಾಧಾರಿಗಳು ಮನೆ ಮನೆಗಳಿಗೆ ತೆರಳಿದತ್ತಾತ್ರೇಯ ಸ್ವಾಮಿಗೆ ಪ್ರಿಯವಾದ ಅಕ್ಕಿ,ಬೆಲ್ಲ, ತೆಂಗಿನಕಾಯಿ ಸಂಗ್ರಹಿಸಿದರು.ಭಾನುವಾರ ಶ್ರೀರಾಮಸೇನೆಮಾಲಾಧಾರಿಗಳು ವಿವಿಧ ಮಠಗಳಸ್ವಾಮೀಜಿಗಳ ನೇತೃತ್ವದಲ್ಲಿ ಶ್ರೀ ದತ್ತಾತ್ರೇಯಬಾಬಾಬುಡನ್ ಸ್ವಾಮಿ ದರ್ಗಾಕ್ಕೆ ತೆರಳಿದತ್ತಪಾದುಕೆಗಳ ದರ್ಶನ ಪಡೆದುಪಡಿಯನ್ನು ದತ್ತಾತ್ರೇಯ ಸ್ವಾಮಿಗೆ ಅರ್ಪಿಸಿನಂತರ ಧಾರ್ಮಿಕ ವಿಧಿ- ವಿಧಾನಗಳಲ್ಲಿಮಾಲಾಧಾರಿಗಳು ಭಾಗವಹಿಸಲಿದ್ದಾರೆ.
ಪಡಿಸಂಗ್ರಹದ ಬಳಿಕ ಶ್ರೀರಾಮಸೇನೆಕಾರ್ಯಾಧ್ಯಕ್ಷ ಗಂಗಾಧರ್ ಕುಲಕರ್ಣಿಮಾತನಾಡಿ, ನ.14ರಂದು ದತ್ತಾತ್ರೇಯಪೀಠದಲ್ಲಿ ಧಾರ್ಮಿಕ ಸಮಾರೋಪಸಮಾರಂಭ ಜೊತೆಗೆ ದತ್ತಪಾದುಕೆ ದರ್ಶನನಡೆಯಲಿದೆ. ಈ ನಿಟ್ಟಿನಲ್ಲಿ ದತ್ತಾತ್ರೇಯಸ್ವಾಮಿಗೆ ಸಲ್ಲಿಕೆ ಮಾಡಲು ಶ್ರದ್ಧಾಭಕ್ತಿಯಿಂದಶನಿವಾರ ಬೆಳಗ್ಗೆ ಮನೆ- ಮನೆಗಳಿಗೆ ತೆರಳಿಪಡಿ ಸಂಗ್ರಹ ಮಾಡಲಾಗಿದೆ ಎಂದರು.ದತ್ತಪೀಠದಲ್ಲಿ ನಡೆಯುವ ಧಾರ್ಮಿಕಕಾರ್ಯಕ್ರಮಕ್ಕೆ ವಿವಿಧೆಡೆಯಿಂದ ಸಾಧುಸಂತರು, ಮಠಾಧಿಧೀಶರು ಭಾಗವಹಿಸಲಿದ್ದುದತ್ತಾತ್ರೇಯ ಸ್ವಾಮಿಯ ದರ್ಶನಪಡೆದುಕೊಳ್ಳಲಿದ್ದಾರೆ ಎಂದು ಮಾಹಿತಿ ನೀಡಿದರು
.ದತ್ತಪೀಠಕ್ಕೆ ತೆರಳಲು ಬಸ್ ವ್ಯವಸ್ಥೆಕಲ್ಪಿಸುವಂತೆ ಜಿಲ್ಲಾಡಳಿತಕ್ಕೆ ಮನವಿಮಾಡಲಾಗಿತ್ತು. ಅದಕ್ಕೆ ಸ್ಪಂ ದಿಸಿದಜಿಲ್ಲಾಡಳಿತ ಬಸ್ ವ್ಯವಸ್ಥೆಯನ್ನು ಕಲ್ಪಿಸಿದೆ.ಇನ್ನೂ ಯಾವುದೇ ಸೂಕ್ತ ದಾಖಲೆಗಳಿಲ್ಲದೆಅನ ಧಿಕೃತವಾಗಿ ಸಂಚರಿಸುತ್ತಿದ್ದ 40 ಬಸ್‌ಗಳನ್ನು ವಶಪಡಿಸಿಕೊಂಡಿರುವುದು ಉತ್ತಮಬೆಳವಣಿಗೆ ಎಂದರು.ಶ್ರೀರಾಮ ಸೇನೆ ಜಿಲ್ಲಾಧ್ಯಕ್ಷ ರಂಜಿತ್ ಶೆಟ್ಟಿ,ಪುನೀತ್ ಸೇರಿದಂತೆ ಅನೇಕ ಮಾಲಾಧಾರಿಗಳುಇದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Chikkamagaluru: ನ.9ರಿಂದ 11ರ ತನಕ ದತ್ತಪೀಠಕ್ಕೆ ಪ್ರವಾಸಿಗರಿಗೆ ನಿರ್ಬಂಧ
Charmadi Ghat: ಚಾಲಕನ ನಿಯಂತ್ರಣ ತಪ್ಪಿ ಬಂಡೆಕಲ್ಲಿಗೆ ಡಿಕ್ಕಿ ಹೊಡೆದ ಕಾರು.. ಮಹಿಳೆ ಗಂಭೀರ
Hebbe Falls: ಸ್ನೇಹಿತರ ಜೊತೆ ಹೆಬ್ಬೆ ಜಲಪಾತದಲ್ಲಿ ಈಜಲು ಹೋಗಿ ಜೀವ ಕಳೆದುಕೊಂಡ ಪ್ರವಾಸಿಗ
Mudigere: ಬೀದಿನಾಯಿ ಅಡ್ಡಬಂದು ಅಪಘಾತ… ಬೈಕ್ ಸವಾರ ಸ್ಥಳದಲ್ಲೇ ಮೃತ್ಯು
Chikkamagaluru: ಮಳೆಯ ನಡುವೆಯೂ ಬೆಟ್ಟ ಹತ್ತಿ ದೇವಿರಮ್ಮನ ದರ್ಶನ ಪಡೆದ ಸಾವಿರಾರು ಭಕ್ತರು
MUST WATCH
ಹೊಸ ಸೇರ್ಪಡೆ
Award: ಪ್ರೊ.ತಾಳ್ತಜೆ ವಸಂತ ಕುಮಾರ್‌ಗೆ ಕನಕ ಗೌರವ ಪ್ರಶಸ್ತಿ
Chikkamagaluru: ನ.9ರಿಂದ 11ರ ತನಕ ದತ್ತಪೀಠಕ್ಕೆ ಪ್ರವಾಸಿಗರಿಗೆ ನಿರ್ಬಂಧ
Attack On Car: ಎಡನೀರು ಸ್ವಾಮೀಜಿ ಕಾರಿನ ಮೇಲೆ ದಾಳಿ: ಕಸಾಪ, ಬ್ರಾಹ್ಮಣ ಮಹಾಸಭಾ ಖಂಡನೆ
Covid Scam: ತನಿಖೆಗೆ ಎಸ್‌ಐಟಿ?: ಬಿಜೆಪಿಯ ಇಕ್ಕಟ್ಟಿಗೆ ಸಿಲುಕಿಸಲು ಸಿದ್ಧತೆ
Hassan: ವಿವಾಹ ಆಮಂತ್ರಣ ಪತ್ರಿಕೆ ಹಂಚಿ ಮನೆಗೆ ಮರಳುತ್ತಿದ್ದ ಪೊಲೀಸ್ ಬರ್ಬರ ಹ*ತ್ಯೆ!
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.