ಕಾಫಿ ನಾಡಿನ ಕ್ರಿಕೆಟ್ ಪ್ರತಿಭೆಗೆ ಅಮೆರಿಕ ತಂಡದಲ್ಲಿ ಮನ್ನಣೆ
Team Udayavani, Jan 25, 2022, 7:21 PM IST
ಚಿಕ್ಕಮಗಳೂರು: ವಿದ್ಯೆಗೆ ತಕ್ಕ ಕೆಲಸ ಸಿಕ್ಕಿಲ್ಲ. ನನ್ನ ಪ್ರತಿಭೆಗೆ ತಕ್ಕ ಅವಕಾಶ ಸಿಗಲಿಲ್ಲ, ಇಂತಹಮಾತುಗಳನ್ನು ನಿತ್ಯ ನಮ್ಮ ಸುತ್ತಮುತ್ತ ಕೇಳುತ್ತಲೇ ಇರುತ್ತೇವೆ. ಕೆಲವರು ಅವಕಾಶಕ್ಕಾಗಿ ಕಾಯದೆ ತಮ್ಮ ಬಳಿಗೆ ಅವಕಾಶಗಳು ಹುಡುಕಿಕೊಂಡು ಬರುವಂತೆಮಾಡಿದ್ದನ್ನು ನೋಡಿದ್ದೇವೆ, ಕೇಳಿದ್ದೇವೆ.ಆದರೆ ಕೆಲವರು ಇಲ್ಲಿ ಅವಕಾಶ ಸಿಗದೆ ವಿದೇಶಕ್ಕೆಹಾರುವುದೂ ಹೊಸದಲ್ಲ. ಇಂಥದ್ದೊಂದು ಪ್ರತಿಭಾಫಲಾಯನಕ್ಕೆ ಕಾಫಿನಾಡು ಚಿಕ್ಕಮಗಳೂರು ಸಾಕ್ಷಿಯಾಗಿದೆ.
ಪ್ರತಿಭಾ ಪಲಾಯನ ಎನ್ನುವುದು ಕೇವಲ ಒಂದು ಕ್ಷೇತ್ರಕ್ಕೆ ಮಾತ್ರ ಸೀಮಿತವಾಗಿಲ್ಲ, ಅನೇಕಕ್ಷೇತ್ರಗಳನ್ನು ಕಾಡುತ್ತಿದೆ. ಹಾಗೇ ಕ್ರೀಡಾ ಕ್ಷೇತ್ರವನ್ನು ಬಿಟ್ಟಿಲ್ಲ, ನಮ್ಮ ದೇಶದಲ್ಲಿ ಆಡಿ ಬೆಳೆದ ಅದೆಷ್ಟೋಪ್ರತಿಭೆಗಳು ಬೇರೆ ದೇಶವನ್ನು ಪ್ರತಿನಿಧಿ ಸುತ್ತಿದ್ದಾರೆ. ಹಾಗೆಯೇ ಕಾಫಿ ನಾಡಿನ ಯುವಕ ಭಾರತದಲ್ಲಿಅವಕಾಶ ವಂಚಿತನಾಗಿ ಅಮೆರಿಕ ಕ್ರಿಕೆಟ್ ಟೀಮ್‌ನಲ್ಲಿ ಸ್ಥಾನ ದಕ್ಕಿಸಿಕೊಂಡಿದ್ದಾನೆ. ಕ್ರಿಕೆಟ್ ಜಗತ್ತಿನಲ್ಲಿ ಅಮೆರಿಕಈಗ ತಾನೇ ಅಂಬೆಗಾಲಿಡುತ್ತಿದೆ.
ಯುಎಸ್‌ಎಇಂಟರ್ ನ್ಯಾಶನಲ್ ಟೀಮ್‌ನಲ್ಲಿ ಚಿಕ್ಕಮಗಳೂರು ಜಿಲ್ಲೆ ಮೂಡಿಗೆರೆ ತಾಲೂಕಿನ ಕೆಂಜಿಗೆ ಗ್ರಾಮದ ನೋಸ್ತುಶ್ ಸದಸ್ಯನಾಗಿದ್ದಾನೆ. ಮೂಡಿಗೆರೆ ತಾಲೂಕಿನ ಕೆಂಜಿಗೆಗ್ರಾಮದ ಪ್ರದೀಪ್ ಕೆಂಜಿಗೆ ಮತ್ತು ಶೃತಿ ಕೀರ್ತಿ ದಂಪತಿಪುತ್ರ ನೋಸ್ತುಶ್ ಚಿಕ್ಕ ವಯಸ್ಸಿನಿಂದಲೂ ಕ್ರಿಕೆಟ್‌ನಲ್ಲಿದೊಡ್ಡ ಹೆಸರು ಮಾಡಬೇಕು ಎಂಬ ಕನಸು ಹೊತ್ತುಹಗಲಿರುಳು ಶ್ರಮಿಸಿದ.
ಆದರೆ, ಇಲ್ಲಿ ಅವಕಾಶವಂಚಿತನಾಗಿ ಅನಿವಾರ್ಯವಾಗಿ ಬೇರೆ ದೇಶದತ್ತ ಮುಖ ಮಾಡಿದ್ದಾರೆ. 2017ರಿಂದ ಅಮೆರಿಕ ತಂಡವನ್ನುಪ್ರತಿನಿ ಧಿಸುತ್ತಿರುವ ನೋಸ್ತುಶ್ ಅಮೆರಿಕತಂಡದ ಪರ ಟಿ-20 ಸೇರಿದಂತೆ ವಿವಿಧಪಂದ್ಯಗಳಲ್ಲಿ ಆಡಿದ್ದಾರೆ. ಸದ್ಯ ತವರೂರುಚಿಕ್ಕಮಗಳೂರಿಗೆ ಆಗಮಿಸಿರುವಅವರು, ನಗರದ ಸುಭಾಷ್ ಚಂದ್ರಬೋಸ್ ಆಟದಮೈದಾನದಲ್ಲಿ ನೆಟ್ ಪ್ರ್ಯಾಕ್ಟಿಸ್‌ನಲ್ಲಿ ಭಾಗಿಯಾಗಿದ್ದರು.
ನಾನು ಕ್ರಿಕೆಟ್ ಆರಂಭಿಸಿದ್ದು, ನನ್ನ ಹೆಮ್ಮೆಯ ದೇಶ ಭಾರತದಲ್ಲೇ, ನನ್ನ ದೇಶದ ಪರ ಆಡುವ ಆಸೆಯಿತ್ತು. ಆದರೆ ಇಲ್ಲಿ ಹೆಚ್ಚು ಅವಕಾಶಗಳು ಸಿಗಲಿಲ್ಲ. ಹಾಗಾಗಿ ಅಮೆರಿಕಗೆ ಹೋಗಬೇಕಾಗಿ ಬಂತು ಎಂದು ನೋಸ್ತುಶ್ ನೋವಿನಿಂದ ಹೇಳುತ್ತಾರೆ. ನಾನು ಕ್ರಿಕೆಟನ್ನು ತುಂಬಾ ಪ್ರೀತಿಸುತ್ತೇನೆ. ಆಟವನ್ನುಎಂಜಾಯ್ ಮಾಡುತ್ತೇನೆ. ಈ ಹಿಂದೆ ಕ್ಲಬ್ ಪರಆಡುವಾಗ ಮಯಾಂಕ್ ಅಗರ್ವಾಲ್, ಕರುಣ್‌ನಾಯರ್, ಶ್ರೇಯಸ್ ಅಯ್ಯರ್ ಜತೆ ಆಡಿದ್ದೇನೆ. ಮುಂದಿನ ಜೂನ್ ತಿಂಗಳಲ್ಲಿವರ್ಲ್ಡ್ಕಪ್ ಕ್ವಾಲಿಫೈಯರ್ ಮ್ಯಾಚ್ ಇದೆ.2023ರಲ್ಲಿ ವರ್ಲ್ಡ್ಕಪ್ ಮ್ಯಾಚ್ ಚಿನ್ನಸ್ವಾಮಿಸ್ಟೇಡಿಯಂನಲ್ಲಿ ಆಡುವಾಸೆಯಿದೆ ಎಂದುನೋಸ್ತುಶ್ ಹೇಳುತ್ತಾರೆ.
ನೋಸ್ತುಶ್ ಉತ್ತಮ ಬ್ಯಾಟ್ಸ್‌ಮನ್ ಮತ್ತುಎಡಗೈ ಸ್ಪಿನ್ ಬೌಲರ್ ಆಗಿದ್ದು, ಅಮೆರಿಕ ತಂಡವನ್ನುಪ್ರತಿನಿ ಧಿಸುತ್ತಿದ್ದಾರೆ. ಕಾಫಿ ನಾಡಿನ ಯುವಕನೊಬ್ಬಅಮೆರಿಕ ಕ್ರಿಕೆಟ್ ತಂಡದಲ್ಲಿ ಅವಕಾಶ ಗಿಟ್ಟಿಸಿಕೊಂಡು ಕಾμ ನಾಡಿಗೆ ಕೀರ್ತಿ ತಂದಿದ್ದು ಸಂತೋಷ ಪಡುವಂತಹವಿಷಯವಾದರೂ ನಮ್ಮ ದೇಶದಲ್ಲಿ ಅರಳಬೇಕಾದಪ್ರತಿಭೆಯೊಂದು ಅವಕಾಶ ಸಿಗದೆ ಬೇರೆ ದೇಶದಲ್ಲಿಅರಳುತ್ತಿರುವುದು ಮಾತ್ರ ನೋವಿನ ಸಂಗತಿ.
ಸಂದೀಪ ಜಿ.ಎನ್.ಶೇಡ್ಗಾರ್
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಸುಮ್ನೆ ಬ್ಯಾಂಡೇಜ್ ಹಾಕಿಕೊಳ್ಳಲು ಯಾರಿಗೂ ತಲೆ ಕೆಟ್ಟಿಲ್ಲ: ಸಿ.ಟಿ.ರವಿ ಪತ್ನಿ ಪಲ್ಲವಿ
ಬಿಜೆಪಿ, ಕಾಂಗ್ರೆಸ್‌ಗೆ ಪ್ರತ್ಯೇಕ ಕಾನೂನಿಲ್ಲ, ನನ್ನ ದೂರಿಗೆ ಕ್ರಮವಿಲ್ಲವೇಕೆ?: ಸಿ.ಟಿ.ರವಿ
Mudigere: ಹೊರನಾಡು ದೇವರ ದರ್ಶನಕ್ಕೆ ಬರುತ್ತಿದ್ದವರ ವಾಹನ ಪಲ್ಟಿ… ನಾಲ್ವರಿಗೆ ಗಂಭೀರ ಗಾಯ
CT Ravi: ದೂರು ದಾಖಲಾಗದಿದ್ದರೆ ಬೆಳಗಾವಿ ಚಲೋ
CT Ravi; ಚಿಕ್ಕಮಗಳೂರಿಗೆ ಬಂದ ಕೂಡಲೇ ಟೆಂಪಲ್ ರನ್ ಆರಂಭಿಸಿದ ಸಿ.ಟಿ.ರವಿ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Parliament: ಸಂಸದರ ತಳ್ಳಾಟ: ಇಂದು ಸಂಸತ್ ಭವನಕ್ಕೆ ದಿಲ್ಲಿ ಪೊಲೀಸರ ಭೇಟಿ?
Former Supreme Court Judge ವಿ.ಸುಬ್ರಹ್ಮಣಿಯನ್ ಎನ್‌ಎಚ್‌ಆರ್‌ಸಿ ಮುಖ್ಯಸ್ಥ
Shatrughan Sinha ಪುತ್ರಿ ವಿವಾಹ ಬಗ್ಗೆ ವಿಶ್ವಾಸ್ ವಿವಾದಾಸ್ಪದ ಹೇಳಿಕೆ
Maharashtra: ನಿಗದಿತ ಮಾರ್ಗ ಬಿಟ್ಟು ಬೇರೆಡೆ ಸಾಗಿದ ವಂದೇ ಭಾರತ್ ರೈಲು!
Syria ಮಾಜಿ ಅಧ್ಯಕ್ಷ ಅಸಾದ್‌ಗೆ ವಿಚ್ಛೇದನ ಕೊಡಲು ಪತ್ನಿ ಚಿಂತನೆ?
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.