ಮೋದಿ ಆಡಳಿತದಲ್ಲಿ ಅಭಿವೃದ್ದಿ ಪಥದಲ್ಲಿ ದೇಶ
Team Udayavani, Jun 16, 2022, 1:55 PM IST
ಚಿಕ್ಕಮಗಳೂರು: ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು 135ಕೋಟಿ ರೂ. ಜನರ ಶ್ರೇಯೋಭಿವೃದ್ಧಿಗಾಗಿ ಹಗಲಿರುಳು ಶ್ರಮಿಸುತ್ತಿದ್ದಾರೆ.ವಿರೋಧ ಪಕ್ಷದವರಿಗೆ ಟೀಕೆ ಮಾಡಲು ವಿಷಯಗಳಿಲ್ಲದೇ ಸುಳ್ಳು ಪ್ರಚಾರಮಾಡುತ್ತಿದ್ದಾರೆ ಎಂದು ರಾಜ್ಯಸಭೆ ಸದಸ್ಯ ಜಗ್ಗೇಶ್ ಕಾಂಗ್ರೆಸ್ ವಿರುದ್ಧಹರಿಹಾಯ್ದರು.ನಗರದಲ್ಲಿ ಬಿಜೆಪಿ ಯುವಮೋರ್ಚಾದಿಂದ ಬುಧವಾರಆಯೋಜಿಸಿದ್ದ ವಿಕಾಸ ತೀರ್ಥಬೈಕ್ ರ್ಯಾಲಿ ಉದ್ಘಾಟಿಸಿ, ಆಜಾದ್‌ಪಾರ್ಕ್ ವೃತ್ತದಲ್ಲಿ ನಡೆದ ಬಹಿರಂಗಸಭೆಯಲ್ಲಿ ಅವರು ಮಾತನಾಡಿದರು.
ಪ್ರಧಾನಮಂತ್ರಿ ನರೇಂದ್ರ ಮೋದಿಅವರು ಅಧಿ ಕಾರಕ್ಕೆ ಬರುವ ಮುಂಚೇಪ್ರಧಾನಮಂತ್ರಿ ಆಡಂಬರದ ಜೀವನನಡೆಸುತ್ತಿದ್ದರು. ಅವರ ಸುತ್ತಮುತ್ತಹೊಗಳು ಭಟ್ಟರು ಇರುತ್ತಿದ್ದರು. ಅನೇಕ ವರ್ಷಗಳಿಂದ ಇದೇನಡೆದುಕೊಂಡು ಬಂದಿತ್ತು ಎಂದರು.ಇಂದು ಕುಟುಂಬ ನಿರ್ವಹಣೆಯೇ ಕಷ್ಟ ಇರುವಂತ ಸಂದರ್ಭದಲ್ಲಿನರೇಂದ್ರ ಮೋದಿ ಅವರು ದೇಶದ 135 ಕೋಟಿ ಜನರಿಗೆ ಎಳ್ಳಷ್ಟುತೊಂದರೆಯಾಗದಂತೆ ಶ್ರದ್ಧೆಯಿಂದ ದೇಶವನ್ನು ಅಭಿವೃದ್ಧಿ ಪಥದತ್ತಕೊಂಡೊಯ್ಯತ್ತಿದ್ದಾರೆ. ವಿಪಕ್ಷದಲ್ಲಿ ಒಬ್ಬರನ್ನು ನಾಯಕ ಎಂದುಬಿಂಬಿಸುತ್ತಿದ್ದಾರೆ. ಅವರು ಏನು ಹೇಳುತ್ತಾರೆಂದು ಗೊತ್ತಾಗುವುದಿಲ್ಲ.
ಬಾಯಿಗೂ ತಲೆಗೂ ಸಂಪರ್ಕವೇ ಇಲ್ಲ. ಅವರಲ್ಲಿ ನಾಯಕತ್ವ ಗುಣವೇಇಲ್ಲವೆಂದು ವಿಪಕ್ಷ ನಾಯಕ ರಾಹುಲ್ ಗಾಂಧಿ ಯನ್ನು ಚೇಡಿಸಿದರು.ಕಾಯ, ವಾಚ, ಮನಸ್ಸು, ಶ್ರದ್ಧೆಯಿಂದ ಕೆಲಸ ಮಾಡಿದರೇ ಅಧಿ ಕಾರಹುಡುಕಿಕೊಂಡು ಬರುತ್ತದೆ. ಬೋಗಳೆ ಹೊಡೆದರೇ ಏನು ಬರುವುದಿಲ್ಲ.ನರೇಂದ್ರ ಮೋದಿ ಅವರು ಪ್ರಧಾನಮಂತ್ರಿಯಾದ ಬಳಿಕ ಭಾರತವಿಶ್ವಮಟ್ಟದಲ್ಲಿ ಅಗ್ರಸ್ಥಾನ ಪಡೆದಿದೆ ಎಂದರು.
ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಹಾಗೂ ಶಾಸಕ ಸಿ.ಟಿ.ರವಿ ಮಾತನಾಡಿ, ಪ್ರಧಾನಮಂತ್ರಿ ನರೇಂದ್ರ ಮೋದಿ ಅವರಿಗೆ ದೇಶದೊಡ್ಡದು, ಕಾಂಗ್ರೆಸ್‌ನವರಿಗೆ ಕುಟುಂಬ ದೊಡ್ಡದು. ಕಾಂಗ್ರೆಸ್‌ನವರಲ್ಲಿನಾನು ತಿನ್ನುತ್ತೇನೆ ನೀವು ತಿನ್ನಿ ಎನ್ನುವಂತೆ ಹಗರಣಗಳ ಮೇಲೆ ಹಗರಣಮಾಡಿದರು. ಆಡುಮುಟ್ಟದ ಸೊಪ್ಪಿಲ್ಲ, ಕಾಂಗ್ರೆಸ್ ಮಾಡದ ಹಗರಣವಿಲ್ಲ.ಕಾಂಗ್ರೆಸ್‌ನವರು ಸ್ಕಾ Âಮ್ ಮಾಡಿದರೇ, ಮೋದಿ ಅವರು ಸ್ಕೀಮ್‌ಮಾಡಿದರು ಎಂದು ಟೀಕಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.