ಕೇಂದ್ರದ ವಿರುದ್ಧ ಷಡ್ಯಂತ್ರ: ರವಿ ಆರೋಪ
ಕಾಯ್ದೆಯನ್ನೇ ರದ್ದುಪಡಿಸಬೇಕೆಂಬ ಆಗ್ರಹ ದುರುದ್ದೇಶದ್ದು
Team Udayavani, Jan 27, 2021, 6:12 PM IST
ಚಿಕ್ಕಮಗಳೂರು: ಕೇಂದ್ರ ಸರ್ಕಾರ ಜಾರಿಗೆ ತಂದಿರುವ ಕೃಷಿ ಕಾಯ್ದೆಗಳಲ್ಲಿ ರೈತರಿಗೆ ವಿರುದ್ಧವಾಗಿರುವ ಯಾವ ಅಂಶವಿದೆ ಎಂಬುದನ್ನು ಕಾಯ್ದೆಗಳನ್ನು ವಿರೋಧಿಸುತ್ತಿರುವರು ಸ್ಪಷ್ಟಪಡಿಸಿಲಿ ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಹಾಗೂ ಶಾಸಕ
ಸಿ.ಟಿ.ರವಿ ಪ್ರಶ್ನಿಸಿದರು.
ಮಂಗಳವಾರ ಜಿಲ್ಲಾಡಳಿತದಿಂದ ಆಯೋಜಿಸಿದ್ದ ಗಣರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಭಾಗವಹಿಸಿ ನಂತರ ಸುದ್ದಿಗಾರರ ಜೊತೆ ಮಾತನಾಡಿದ ಅವರು, ಕೃಷಿ ಕ್ಷೇತ್ರದಲ್ಲಿ ಸುಧಾರಣೆ ತರಲು ಇದುವೆರೆಗೂ ಸಾಧ್ಯವಾಗಿಲ್ಲ ಎಂಬುದಕ್ಕೆ ನಿತ್ಯ ನಡೆಯುವ ರೈತರ ಆತ್ಮಹತ್ಯೆಗಳೇ ಸಾಕ್ಷಿಯಾಗಿವೆ. ರೈತರು ತಾವು ಬೆಳೆದ ಉತ್ಪನ್ನವನ್ನು ಎಲ್ಲಿ ಬೇಕಾದರೂ ಮಾರುವ ಹಕ್ಕು ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ನೀಡಿದ್ದಾರೆ.
ಇದರಲ್ಲಿ ತಪ್ಪು ಹುಡುಕುವ ಕೆಲಸವನ್ನು ಕೆಲವರು ಮಾಡುತ್ತಿದ್ದಾರೆಂದು ಆರೋಪಿಸಿದರು. ಕಾಯ್ದೆಯಲ್ಲಿ ಯಾವ ಅಂಶ ರೈತ ವಿರೋಧಿಯಾಗಿದೆ. ಆ ಅಂಶವನ್ನು ತಗೆಯುತ್ತೇವೆ ಎಂದು ಪ್ರತಿಭಟನಾನಿರತ ರೈತರೊಂದಿಗೆ ನಡೆದ 10 ಬಾರಿಯ ಮಾತುಕತೆಯಲ್ಲೂ ಕೇಂದ್ರ ಕೃಷಿ ಸಚಿವರು ಹೇಳಿದ್ದಾರೆ.
ಆದರೆ, ಕಾಯ್ದೆಯನ್ನೇ ತೆಗೆದುಹಾಕಬೇಕೆನ್ನುವುದರ ಹಿಂದೆ ದುರುದ್ದೇಶ ಕೂಡಿದೆ ಎಂದ ಅವರು, ಕಾಯ್ದೆಯ ಫಲವನ್ನು ನೋಡದೆ ವಿರೋಧಿಸುವುದು ಎಷ್ಟರ ಮಟ್ಟಿಗೆ ಸರಿ. ರೈತ ವಿರೋಧಿಯಾಗಿದ್ದರೆ ತಿದ್ದುಪಡಿಗೆ ಅಥವಾ ಹಿಂಪಡೆಯಲು ಅವಕಾಶವಿದೆ
ಎಂದರು.
ಕಾಯ್ದೆಗೆ ಅವಕಾಶ ನೀಡದಿದ್ದರೆ ಕೃಷಿಕ್ಷೇತ್ರದಲ್ಲಿ ದೊಡ್ಡ ಬಂಡವಾಳ ಹೂಡಲು ಸಾಧ್ಯವಿಲ್ಲ. ರೈತರ ಉತ್ಪನ್ನದ ಮೌಲ್ಯವರ್ಧನೆಯಾಗುವುದಿಲ್ಲ. ಉದ್ಯೋಗ ಸೃಷ್ಟಿಯಾಗುವುದಿಲ್ಲ, ಈ ಎಲ್ಲಾ ಅಂಶಗಳನ್ನು ಗಮನದಲ್ಲಿಟ್ಟುಕೊಂಡು ಕಾಯ್ದೆಯನ್ನು ತರಲಾಗಿದೆ. ಹಠಮಾರಿ ಧೋರಣೆ ನಮ್ಮಲ್ಲೂ ಇಲ್ಲ, ಕಾಯ್ದೆಯಲ್ಲಿ ಯಾವ ಅಂಶ ರೈತವಿರೋಧಿ ಎಂಬುದನ್ನು ವ್ಯಕ್ತಪಡಿಸಿದಲ್ಲಿ ಅಂತಹ ಅಂಶವನ್ನು ತಗೆದುಹಾಕಲು ಸರ್ಕಾರ ಸಿದ್ಧ ಎಂದರು.
ಕೇಂದ್ರ ಸರ್ಕಾರದ ಬಗ್ಗೆ ಜನರಲ್ಲಿ ತಪ್ಪು ಅಭಿಪ್ರಾಯ ತರುವ ಷಡ್ಯಂತ್ರ ನಡೆಯುತ್ತಿದೆ. ಇದು ಒಂದು ಷಡ್ಯಂತ್ರದ ಭಾಗವಷ್ಟೇ. ಇಂತಹ ಷಡ್ಯಂತ್ರವನ್ನು ಸಮರ್ಥವಾಗಿ ಎದುರಿಸುತ್ತೇವೆ ಎಂದ ಅವರು, ಈ ವಿಚಾರದಲ್ಲಿ ಕಾಂಗ್ರೆಸ್ ಬೂಟಾಟಿಕೆ ಪ್ರದರ್ಶನ ಮಾಡುತ್ತಿದೆ. 2011ರಲ್ಲಿ ಅಂದಿನ ಕೃಷಿಸಚಿವ ಶರದ್ ಪವಾರ್ ಅವರು ಮಾತನಾಡಿದ ಮತ್ತು ಲೋಕಸಭೆಯಲ್ಲಿ ರಾಹುಲ್ ಗಾಂಧಿ ಮಾತನಾಡಿದ ವಿಡಿಯೋಗಳು ಹರಿದಾಡುತ್ತಿವೆ.2019ರ ಲೋಕಸಭಾ ಚುನಾವಣೆ ಕಾಂಗ್ರೆಸ್ ಪ್ರಣಾಳಿಕೆಯಲ್ಲಿ ಈ ವಿಚಾರ ಹೇಳಿದೆ. ಮಾಜಿ ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರು ಎಪಿಎಂಸಿ ಬಗ್ಗೆ ಅಂದು ಬರೆದ ಪತ್ರ ಅವರ ಬಣ್ಣ ಬಯಲು ಮಾಡಿದೆ ಎಂದರು.
ಹೋರಾಟದ ಹೆಸರಿನಲ್ಲಿ ಬಿಜೆಪಿ ರೈತ ವಿರೋ ಧಿ ಸರ್ಕಾರ ಎಂದು ರೂಪಿಸುವ ದೊಡ್ಡ ಷಡ್ಯಂತ್ರ ನಡೆಯುತ್ತಿದೆ. ಎಲ್ಲಿ ಕಾಯ್ದೆ ರೈತಪರವಾದಲ್ಲಿ ಇನಷ್ಟು ರೈತರು ಬಿಜೆಪಿ ಕಡೆ ವಾಲುತ್ತಾರೆ. ಬಿಜೆಪಿ ಇನ್ನಷ್ಟು ಗಟ್ಟಿಯಾಗುತ್ತೇ ಎಂಬ ಕಾರಣಕ್ಕೆ ಈ ರೀತಿಯ ಷಡ್ಯಂತ್ರ ನಡೆಯುತ್ತಿದ್ದು ಇಂತಹ ಅನೇಕ ಷಡ್ಯಂತ್ರಗಳನ್ನು ಎದುರಿಸಿದ್ದೇವೆ ಇದನ್ನೂ ಎದುರಿಸುತ್ತೇವೆ ಎಂದರು.
ಏಕಾಏಕಿ ಕಾಯ್ದೆಯನ್ನು ಜಾರಿ ಮಾಡಿಲ್ಲ. 2009ರಿಂದ ಚರ್ಚೆಯಲ್ಲಿದೆ. ರಾಜಕೀಯ ಪಕ್ಷಗಳು ಚುನಾವಣೆ ಪ್ರಣಾಳಿಕೆಯಲ್ಲಿ ವಿಷಯ ಪ್ರಸ್ತಾಪಿಸಿದ್ದಾರೆ. ರೈತ ಮುಖಂಡರು ಆಗ್ರಹಿಸಿದ್ದಾರೆ. ಈಗ ಬಿಜೆಪಿ ಸರ್ಕಾರ ಮಾಡುತ್ತಿದೆ ಎಂದು ಯುಟರ್ನ್ ಹೊಡೆಯುತ್ತಿದ್ದಾರೆ. ಎಪಿಎಂಸಿ ವ್ಯವಸ್ಥೆ ರೈತರ ಪರ ಎಂದು ಇವರು ಒಪ್ಪುತ್ತಾರಾ ಎಂದು ಪ್ರಶ್ನಿಸಿದ ಅವರು, ಕಂಟ್ರಾಕ್ಟ್ ಫಾರ್ಮಿಗ್ ಇಂದು ನಿನ್ನೆ ನಡೆಯುತ್ತಿಲ್ಲ ಅದಕ್ಕೆ ಶಾಸನ ರೂಪ ನೀಡಿದ್ದೇವೆ. ಅಂಬಾನಿ, ಅದಾನಿ ಮಾತ್ರ ವ್ಯಾಪಾರ ಮಾಡತಕ್ಕದ್ದು ಎಂದು ಕಾಯ್ದೆಯಲ್ಲಿ ಹೇಳಿದ್ದರೆ ನಾನು ಪ್ರತಿಭಟಿಸುತ್ತಿದ್ದೆ ಎಂದರು.
ಓದಿ :ಕೇಂದ್ರದಿಂದ 18 ರಾಜ್ಯಗಳಿಗೆ 12,351 ಕೋಟಿ ಅನುದಾನ ಬಿಡುಗಡೆ : ಕರ್ನಾಟಕಕ್ಕೆ 2,412 ಕೋಟಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
KSRTC: ಚಾರ್ಮಾಡಿ ಘಾಟಿಯಲ್ಲಿ ಕೆಟ್ಟು ನಿಂತ ಸರ್ಕಾರಿ ಬಸ್, ಪ್ರಯಾಣಿಕರಲ್ಲಿ ಆತಂಕ…!
Mudigere; ಕಾಫಿ ಎಸ್ಟೇಟ್ ನಲ್ಲಿ ಕಾಡುಕೋಣ ದಾಳಿ: ಅಸ್ಸಾಂ ಮೂಲದ ಕಾರ್ಮಿಕ ಮಹಿಳೆ ಮೃ*ತ್ಯು
Naxalites ಶರಣಾಗತಿಯಲ್ಲಿ ಟ್ವಿಸ್ಟ್; ಚಿಕ್ಕಮಗಳೂರು ಬದಲು ಬೆಂಗಳೂರಿನಲ್ಲಿ ನಕ್ಸಲರ ಶರಣಾಗತಿ
Naxal ಶರಣಾಗತಿ; ಚಿಕ್ಕಮಗಳೂರು ಡಿಸಿ ಕಚೇರಿ ಸುತ್ತಮುತ್ತ ಬಿಗಿ ಭದ್ರತೆ
Kadur; ತಾಲೂಕು ವೈದ್ಯಾಧಿಕಾರಿ ಮನೆ ಮೇಲೆ ಲೋಕಾಯುಕ್ತ ದಾಳಿ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.