ಸಾಹಿತ್ಯ ಪರಿಷತ್ತಿಗೆ ಸಮರ್ಥ ಅಭ್ಯರ್ಥಿ ಅಗತ್ಯ
ಜಿಲ್ಲಾಧ್ಯಕ್ಷ ಸ್ಥಾನದ ಅಕಾಂಕ್ಷಿಗಳು-ಸಮಾನ ಮನಸ್ಕರ ಪೂರ್ವಭಾವಿ ಸಭೆಯಲ್ಲಿ ಸಾಹಿತಿ ಚಟ್ನಳ್ಳಿ ಮಹೇಶ್ ಅಭಿಮತ
Team Udayavani, Jan 29, 2021, 5:52 PM IST
ಚಿಕ್ಕಮಗಳೂರು: ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ರಾಜ್ಯದಲ್ಲೇ ಮುಂಚೂಣಿಯಲ್ಲಿರಬೇಕೆಂಬುದು ಸಾಹಿತ್ಯಾಸಕ್ತರ ಅಭಿರುಚಿಯಾಗಿದ್ದು, ಸಾಹಿತ್ಯ ಪರಿಷತ್‌ಗೆ ದಿಕ್ಕನ್ನು ತೋರಿಸಿ ಕೊಟ್ಟಿದ್ದ ಪ್ರೊ| ಚಂದ್ರಯ್ಯನಾಯ್ಡು ಅವರ ಅವಧಿಯಲ್ಲಿ ಜನಸಾಮಾನ್ಯರ ಪರಿಷತ್ತಾಗಿ ವಿಶೇಷ ಆಯಾಮ ಹೊಂದಿದ್ದು ಅದೇ ಗತವೈಭವ ಮರುಕಳಿಸಬೇಕಾದರೆ ಸಮರ್ಥ ಅಭ್ಯರ್ಥಿ ಆಯ್ಕೆ ಅಗತ್ಯ ಎಂದು ಸಾಹಿತಿ ಚಟ್ನಳ್ಳಿ ಮಹೇಶ್ ಹೇಳಿದರು.
ಗುರುವಾರ ನಗರದ ವಿಜಯಪುರ ಸದಾಶಿವ ಶಾಸ್ತ್ರಿ ಭವನದಲ್ಲಿ ಜಿಲ್ಲಾ ಕಸಾಪ ಅಧ್ಯಕ್ಷರ ಚುನಾವಣೆ ಕುರಿತಂತೆ ಜಿಲ್ಲಾಧ್ಯಕ್ಷ ಆಕಾಂಕ್ಷಿಗಳು, ಸಮಾನ ಮನಸ್ಕರು ನಡೆಸಿದ ಪೂರ್ವಭಾವಿ ಸಭೆಯಲ್ಲಿ ಅವರು ಮಾತನಾಡಿದರು. ಕೆಲವು ಬದಲಾವಣೆಗಳಿಂದ ಸಾಹಿತ್ಯ ಪರಿಷತ್‌ನ
ಕಾಲಾವಧಿ 5 ವರ್ಷಕ್ಕೆ ನಿಗದಿಯಾಗಿರುವುದರಿಂದ ಸದ್ಯದಲ್ಲೇ ಕನ್ನಡ ಸಾಹಿತ್ಯ ಪರಿಷತ್‌ನ ಚುನಾವಣೆಗಳು ನಡೆಯತ್ತವೆ. ಸೂರಿ ಶ್ರೀನಿವಾಸ್ ಅವರು ಅಭ್ಯರ್ಥಿ ಆಕಾಂಕ್ಷಿ ಎಂಬ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ದಿ.ಅಜ್ಜಂಪುರ ಜಿ.ಸೂರಿ ಅವರು ಜಿಲ್ಲಾಧ್ಯಕ್ಷರಾಗಿದ್ದಾಗ ಬದ್ಧತೆ, ಸಾಹಿತ್ಯದ ಬಗ್ಗೆ ಇರುವ ಕಳಕಳಿಯ ಹಾದಿಯನ್ನು ಸಾಹಿತ್ಯ ಕ್ಷೇತ್ರದಲ್ಲಿ ಕಳೆದ ಹಲವು ವರ್ಷಗಳಿಂದ ಮುಂದುವರಿಸಿಕೊಂಡು ಬಂದು ಸಾಹಿತ್ಯ ಪರಿಷತ್ತನ್ನು ಸಮರ್ಥವಾಗಿ ನಡೆಸಲು ಅಗತ್ಯ ವಾದ ಆಲೋಚನೆಗಳನ್ನು ಹೊಂದಿದ್ದಾರೆ ಎಂದರು.
ಕಡೂರು ತಾಲೂಕು ಮಾಜಿ ಅಧ್ಯಕ್ಷ ಸೂರಿ ಶ್ರೀನಿವಾಸ್ ಮಾತನಾಡಿ, ಕನ್ನಡದ ಮನಸ್ಸುಗಳನ್ನು ಒಂದುಗೂಡಿಸಿದ್ದ ದಿ. ಚಂದ್ರಯ್ಯನಾಯ್ಡು, ತಂದೆ ಜಿ. ಸೂರಿ, ಕೋದಂಡ ರಾಮಶ್ರೇಷ್ಠಿ ಅವರು ಸಾಹಿತ್ಯ ಕ್ಷೇತ್ರದ ಕಾಯಕದಲ್ಲಿ ತೊಡಗಿಸಿಕೊಂಡಿದ್ದನ್ನು ನೋಡುತ್ತಲೇ ಬೆಳೆದವನು. ಕಡೂರು ತಾಲೂಕು ಕಸಾಪ ಅಧ್ಯಕ್ಷನಾದ ಸಂದರ್ಭ ಹಿರಿಯ ಸಾಹಿತ್ಯಾಭಿಮಾನಿಗಳ ಮಾರ್ಗದರ್ಶನದಲ್ಲಿ ಗ್ರಾಮ ಮಟ್ಟದಿಂದ ಜಿಲ್ಲಾ ಸಮ್ಮೇಳನಗಳನ್ನು ಮಾಡಿ 18ಲಕ್ಷ ರೂ. ಕನ್ನಡಭವನ ನಿರ್ಮಿಸಲಾಗಿದೆ. ದತ್ತಿ ಉಪನ್ಯಾಸಕ್ಕೆ ಕಸಾಪ ಸೀಮಿತವಾಗಬಾರದು. ಕಾವ್ಯ ಕಮ್ಮಟ, ಕನ್ನಡಭಾಷೆ, ಸಾಹಿತ್ಯ ಬೆಳೆಯವ ರಸಗ್ರಹಣ ಕಮ್ಮಟ ಮಾಡಬೇಕೆಂಬ ಪರಿಕಲ್ಪನೆ ಹೊಂದಿ ಅಧ್ಯಕ್ಷ ಆಕಾಂಕ್ಷಿಯಾಗಿದ್ದು, ನೀವು ಇಂದು ಪ್ರೋತ್ಸಾಹದ ಮಾತನಾಡಿ ಉತ್ತೇಜಿಸಿರುವುದು ಸಂತೋಷ ತಂದಿದೆ ಎಂದರು.
ಜಯ ಕರ್ನಾಟಕ ಸಂಘಟನೆ ಜಿಲ್ಲಾಧ್ಯಕ್ಷ ಕೆ.ಆರ್. ಅನಿಲ್‌ಕುಮಾರ್ ಮಾತನಾಡಿ, ಗಡಿಭಾಗ, ಕನ್ನಡಿಗರಿಗೆ ತೊಂದರೆಯಾದಾಗ ಧ್ವನಿಯಾಗಬೇಕು, ಕಸಾಪ ಜಿಲ್ಲೆಯ ಸಾಮಾನ್ಯ ಜನರಿಗೆ ತಲುಪಿದೆ ಎಂದರೆ ಪ್ರೊ| ಚಂದ್ರಯ್ಯನಾಯ್ಡು ಅವರನ್ನು ನೆನೆಸಿಕೊಳ್ಳ ಬೇಕು ಎಂದರು.
ಕರ್ನಾಟಕ ರಕ್ಷಣಾ ವೇದಿಕೆ ಜಿಲ್ಲಾ ಅಧ್ಯಕ್ಷ ತೇಗೂರು ಜಗದೀಶ್ ಮಾತನಾಡಿ, ಇತ್ತೀಚಿನ ದಿನಗಳಲ್ಲಿ ಯಾವುದಾದರೂ ಕಸಾಪ
ಮೆರವಣಿಗೆಗಳಿಗೆ ಮಾತ್ರ ಕನ್ನಡಪರ ಸಂಘಟನೆ ಕಾರ್ಯಕರ್ತರನ್ನು ನೆನಪಿಸಿಕೊಂಡು ನಮ್ಮನ್ನು ಅಷ್ಟಕ್ಕೆ ಸೀಮಿತ ಮಾಡಿದ್ದಾರೆ. ನಾವು ಬೀದಿಗೆ ಬಂದು ಹೋರಾಟ ಮಾಡಬೇಕಾದರೆ ಸಾಹಿತ್ಯ ಪರಿಷತ್ ನಿಂದ ಇತ್ತೀಚಿನ ದಿನಗಳಲ್ಲಿ ಬೆಂಬಲಿಸದಿರುವುದು ವಿಪರ್ಯಾಸ. ಮುಂದೆ ಆ ರೀತಿಯಾಗದಂತೆ ಎಚ್ಚರಿಕೆ ವಹಿಸಬೇಕು ಎಂದರು.
ಸಭೆಯಲ್ಲಿ ಓಂಕಾರಸ್ವಾಮಿ, ಡಾ| ಎಂ.ಎಸ್. ನಂಜುಂಡಸ್ವಾಮಿ, ರಂಗಪ್ಪ, ಡಾ| ರಾಜ್ ಕುಮಾರ್ ಅಭಿಮಾನಿಗಳ ಸಂಘದ ಅಧ್ಯಕ್ಷ ಐ.ಕೆ.
ಓಂಕಾರೇಗೌಡ, ಸದಸ್ಯ ವರಸಿದ್ದಿ ವೇಣುಗೋಪಾಲ್, ವಾಣಿ ಚಂದ್ರಯ್ಯ ನಾಯ್ಡು, ಲಕ್ಷ್ಮೀ ಶ್ಯಾಮರಾವ್, ಕನ್ನಡ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ನವರತ್ನ ಇಂದುಕುಮಾರ್, ವಕೀಲರಾದ ಡಿ.ಎಸ್. ಮಮತಾ, ಜಗದೀಶ್, ನಟರಾಜ್, ವಿವಿಧ ಸಂಘಟನೆಯ ಬಿ.ಎಂ. ಕುಮಾರ್, ಚಿ.ಸ. ಪ್ರಭುಲಿಂಗ ಶಾಸ್ತ್ರಿ, ಕಳವಾಸೆ ರವಿ, ಎಲ್.ವಿ. ಕೃಷ್ಣಮೂರ್ತಿ ಇದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.