ಬೇಡಿಕೆ ಈಡೇರಿಕೆಗೆ ಕಾಫಿ ಬೆಳೆಗಾರರ ಒತ್ತಾಯ
ಆಲ್ದೂರು ಕಾಫಿ ಬೆಳೆಗಾರರ ಸಂಘದಿಂದ ಧರಣಿ
Team Udayavani, Jan 29, 2021, 6:04 PM IST
ಚಿಕ್ಕಮಗಳೂರು: ಕಾಫಿ ಬೆಳೆಗಾರರ·ಬ್ಯಾಂಕ್ ಸಾಲಮನ್ನಾ ಮಾಡಬೇಕು.·ಕಡಿಮೆ ಬಡ್ಡಿಗೆ ಸಾಲ ನೀಡಬೇಕು ಮತ್ತುಕಾಫಿ ಮಂಡಳಿ ವಿಸ್ತರಣಾ ಕಚೇರಿಗಳನ್ನುರದ್ದುಪಡಿಸಬಾರದು ಎಂದು ಒತ್ತಾಯಿಸಿಆಲ್ದೂರು ಕಾಫಿ ಬೆಳೆಗಾರರ ಸಂಘದಿಂದನಗರದಲ್ಲಿ ಧರಣಿ ನಡೆಸಿದರು.
ಗುರುವಾರ ನಗರದ ಗಾಂ ಧಿ ಪಾರ್ಕ್‌ಆವರಣದಲ್ಲಿ ಸಮಾವೇಶಗೊಂಡಕಾಫಿ ಬೆಳೆಗಾರರು, ಸಂಘದ ಪದಾ ಧಿಕಾರಿಗಳು ಧರಣಿ ನಡೆಸಿದರು. ನಂತರಮಾತನಾಡಿದ ಬೆಳೆಗಾರರು ಅತೀವೃಷ್ಟಿ,ಅನಾವೃಷ್ಟಿ, ಅಕಾಲಿಕ ಮಳೆ, ಬೆ·ಲೆಕುಸಿತದಪರಿಣಾಮ ಕಾಫಿ ಬೆಳೆಗಾರರು ಕಷ್ಟಕ್ಕೆಸಿಲುಕಿದ್ದು ಬ್ಯಾಂಕ್ ಸಾಲ ಮರುಪಾವತಿಮಾಡಲು ಸಾಧ್ಯವಾಗುತ್ತಿಲ್ಲ. ಕೇಂದ್ರಮತ್ತು ರಾಜ್ಯ ಸರ್ಕಾರ ನೆರವಿಗೆ ಬರಬೇಕುಆಗ್ರಹಿಸಿದರು.
ಕಾಫಿ ಬೆಳೆಯುವ ಜಿಲ್ಲೆಗಳಲ್ಲಿ ಕಳೆದನಾಲ್ಕು ವರ್ಷಗಳಿಂದ ಹವಾಮಾನವೈಪರೀತ್ಯ, ಅತಿವೃಷ್ಟಿ, ಅನಾವೃಷ್ಟಿ, ಅಕಾಲಿಕಮಳೆಯಿಂದ ಕಾಫಿ ಬೆಳೆ ಸಂಪೂರ್ಣನಾಶವಾಗಿದೆ. ತೋಟ ನಿರ್ವಹಣೆಸಾಧ್ಯವಾಗುತ್ತಿಲ್ಲ. ಬೆಲೆಕುಸಿತ, ರೋಗಬಾಧೆ,ಕಾರ್ಮಿಕರ ಸಮಸ್ಯೆ ಸೇರಿದಂತೆ ಹತ್ತುಹಲವು ಸಮಸ್ಯೆಗಳಿಂದ ಬೆಳೆಗಾರರು ತತ್ತರಿಸಿಹೋಗಿ ಬೆಳೆಗಾರರ ಬದುಕು ಬೀದಿಗೆಬಂದಿದೆ. ಬೆಳೆಗಾರರು ಬ್ಯಾಂಕ್ ಸಾಲಮರುಪಾವತಿ ಮಾಡಲು ಸಾಧ್ಯವಾಗುತ್ತಿಲ್ಲ·ಎಂದು ತಮ್ಮ ಅಳಲು ತೋಡಿಕೊಂಡರು.
ಸಾಲ ಮರುಪಾವತಿ ಮಾಡಲುಸಾಧ್ಯವಾಗದ ಹಿನ್ನೆಲೆಯಲ್ಲಿ ಬ್ಯಾಂಕ್‌ಸಾಲಎನ್‌ಪಿಎ ಆಗುತ್ತಿದ್ದು, ನ್ಯಾಯಾಲಯಗಳಮೂಲಕ ನೋಟಿಸ್ ಜಾರಿ ಮಾಡುತ್ತಾಕಾಫಿತೋಟಗಳ ಹರಾಜಿಗೆ ಮುಂದಾಗಿವೆ.ಕಾ·ಫಿ ಉದ್ಯಮ ಲಕ್ಷಾಂತರ ಜನರಿಗೆಬದುಕು ಕೊಟ್ಟಿದೆ. ಉದ್ಯಮದಿಂದದೇಶಕ್ಕೆಸಾವಿರಾರು ಕೋಟಿ ರೂ. ವಿದೇಶಿವಿನಿಮಯ ನಡೆಯುತ್ತಿದೆ. ಲಕ್ಷಾಂತರಜನರ ಉದ್ಯೋಗ ನೀಡಿರುವ ಕಾಫಿಉದ್ಯಮವನ್ನು ಉಳಿಸಲು ಕೇಂದ್ರ ಮತ್ತುರಾಜ್ಯ ಸರ್ಕಾರ ಮುಂದಾಗಬೇಕು. ಹಾಗೂರೈತರ ಸಾಲಮನ್ನಾ ಮಾಡಬೇಕು ಎಂದು
ಮನವಿ ಮಾಡಿದರು.
ಸರ್ಕಾರಿ ಸ್ವಾಮ್ಯದ ಸತ್ತುಗಳು ದೇಶದಜನತೆಯ ಸ್ವತ್ತು. ಅದನ್ನು ಮಾರಲುಮತ್ತು ಮುಚ್ಚಲು ಯಾವ ಸರ್ಕಾರಕ್ಕೂಅ ಧಿಕಾರವಿಲ್ಲ. ಆದರೆ, ಕೇಂದ್ರ ಸರ್ಕಾರಜಲ್ಲೆಯ ಹೋಬಳಿ ಕೇಂದ್ರಗಳಲ್ಲಿರುವಕಾಫಿ ಮಂಡಳಿ ಅಧಿಧೀನ ಕಚೇರಿಗಳನ್ನುಮುಚ್ಚಲು ಮುಂದಾಗಿದೆ. ಈ ಕಚೇರಿಗಳು
ಕಾಫಿ ಉದ್ಯಮದ ಅಭಿವೃದ್ಧಿಗೆ ಸಹಕಾರನೀಡುತ್ತಿವೆ. ಕಚೇರಿಗಳ ಮೂಲಕ ಕಾಫಿಸಂಶೋಧನೆ, ಸಬ್ಸಿಡಿ, ಕಾರ್ಮಿಕರ ಮಕ್ಕಳಿಗೆಸಹಾಯಧನ ಸೌಲಭ್ಯ ದೊರೆಯುತ್ತಿತ್ತು.ಆದರೆ, ಅ ಧೀನ ಕಚೇರಿಗಳನ್ನುಮುಚ್ಚುತ್ತಿರುವುದು ದುರಾದೃಷ್ಟಕರ ಎಂದಅವರು, ಅಧಿಧೀನ ಕಚೇರಿಗಳನ್ನು ಯಾವುದೇಕಾರಣಕ್ಕೂ ಮುಚ್ಚಬಾರದು ಎಂದುಆಗ್ರಹಿಸಿದರು.
ಕಾಫಿ ಬೆಳೆಗಾರರಿಗೆ ಕಾಡುಪ್ರಾಣಿಗಳಹಾವಳಿ ದೊಡ್ಡ ತಲೆನೋವಾಗಿದ್ದು, ಕಾಡಾನೆಹಾವಳಿಯಿಂದಾಗಿ ಕಾμತೋಟಗಳಿಗೆಭಾರೀ ಹಾನಿಯಾಗುತ್ತಿದೆ. ಅಲ್ಲದೇಕಾಫಿ ಬೆಳೆಗಾರರ ಪ್ರಾಣಕ್ಕೂ ಕುತ್ತಾಗಿದೆ.ಕಾಡಾನೆಗಳ ಹಾವಳಿ ತಪ್ಪಿಸಲು ಆನೆಕಾರಿಡಾರ್ ವ್ಯಾಪ್ತಿಯಲ್ಲಿ ರೈಲ್ವೆ ಕಂಬಿಗಳಬ್ಯಾರಿಕೇಡ್ ನಿರ್ಮಿಸಬೇಕು. ಕಾಫಿಬೆಳೆಗಾರರು ಬೆಳೆದ ಸಿಲ್ವರ್ ಮರಗಳ ಕಟಾವುಸಂದರ್ಭ ಮರಗಳನ್ನು ಖರೀದಿಸುವವರು
ಮರಗಳ ಗುಣಮಟ್ಟದ ನೆಪವೊಡ್ಡಿ ಉತ್ತಮಮರಗಳಿಗೂ ಶೇ.10ರಷ್ಟು ಹಣ ಕಡಿಮೆನೀಡುತ್ತಿದ್ದಾರೆ. ಜಿಲ್ಲಾಡಳಿತ ಈ ಹಣವನ್ನುಕಡಿತ ಮಾಡದಂತೆ ಸಾಮಿಲ್ ಮಾಲೀಕರಿಗೆಆದೇಶ ನೀಡಬೇಕೆಂದು ತಿಳಿಸಿದರು.ಧರಣಿ ಬಳಿಕ ಜಿಲ್ಲಾ ಧಿಕಾರಿ ಡಾ| ಬಗಾದಿಗೌತಮ್ ಅವರಿಗೆ ಬೆಳೆಗಾರರು ಮನವಿಸಲ್ಲಿಸಿದರು.
ಮನವಿಗೆ ಪ್ರತಿಕ್ರಿಯಿಸಿದ ಜಿಲ್ಲಾಧಿಕಾರಿ, ಅಗತ್ಯ ಕ್ರಮ ಕೈಗೊಳ್ಳುವುದಾಗಿಭರವಸೆ ನೀಡಿದರು. ಧರಣಿಯಲ್ಲಿಆಲ್ದೂರು ಕಾಫಿ ಬೆಳೆಗಾರರ ಸಂಘದ ಅಧ್ಯಕ್ಷಸಿ.ಎಸ್. ಸುರೇಶ್, ಮಾಜಿ ಅಧ್ಯಕ್ಷ ಡಿ.ಎಂ.ವಿಜಯ್, ಮುಖಂಡರಾದ ರಾಜೀವ್,ತೌಸಿಫ್, ರವಿ, ಸೂರಪ್ಪನಹಳ್ಳಿ ಅಶೋಕ್,ಜಿಪಂ ಮಾಜಿ ಸದಸ್ಯೆ ಸವಿತಾ ರಮೇಶ್‌ಮತ್ತಿತರರು ಇದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
CT Ravi; ಚಿಕ್ಕಮಗಳೂರಿಗೆ ಬಂದ ಕೂಡಲೇ ಟೆಂಪಲ್ ರನ್ ಆರಂಭಿಸಿದ ಸಿ.ಟಿ.ರವಿ
Chikkamagaluru: 5 ವರ್ಷದ ಮಗು ಮೇಲೆ ಬೀದಿ ನಾಯಿ ದಾಳಿ
Chikkamagaluru: ಪ್ರವಾಸಕ್ಕೆ ಬಂದಿದ್ದ ಶಾಲಾ ಮಕ್ಕಳ ವ್ಯಾನ್ ಪಲ್ಟಿ; ಗಾಯ
Chikkmagalur: ಸಿ.ಟಿ ರವಿ ಬಂಧನ ಖಂಡಿಸಿ ಪ್ರತಿಭಟನೆ; ಬಂದ್‌ಗೆ ಮಿಶ್ರ ಪ್ರತಿಕ್ರಿಯೆ
CT Ravi Arrested: ಬಿಜೆಪಿ ಕರೆ ನೀಡಿದ್ದ ಬಂದ್ ಗೆ ಚಿಕ್ಕಮಗಳೂರಿನಲ್ಲಿ ಮಿಶ್ರ ಪ್ರತಿಕ್ರಿಯೆ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.