ಸರ್ಕಾರಿ ಕಾರ್ಯಕ್ರಮಗಳಲ್ಲಿ ಕಡೆಗಣನೆ-ಆರೋಪ
ತಾಪಂ ಅಧ್ಯಕ್ಷೆ ಬಿ.ಆರ್.ಪ್ರೇಮಾಬಾಯಿ ಕೃಷ್ಣಮೂರ್ತಿ ಗಂಭೀರ ಆರೋಪ·ಮಾಡಿದರು.
Team Udayavani, Jan 29, 2021, 6:09 PM IST
ಕಡೂರು: ಸರ್ಕಾರಿ ಕಾರ್ಯಕ್ರಮಗಳಲ್ಲಿ ತಮ್ಮನ್ನು·ಕಡೆಗಣಿಸಲಾಗುತ್ತಿದೆ ಎಂದು ತಾಪಂ ಅಧ್ಯಕ್ಷೆ ಬಿ.ಆರ್.ಪ್ರೇಮಾಬಾಯಿ ಕೃಷ್ಣಮೂರ್ತಿ ಗಂಭೀರ ಆರೋಪ·ಮಾಡಿದರು.
ಗುರುವಾರ ಸುದ್ದಿಗಾರರೊಂದಿಗೆಮಾತನಾಡಿದ ಅವರು, ಸರ್ಕಾರಿ ಕಾರ್ಯಕ್ರಮಗಳ ಆಹ್ವಾನಪತ್ರಿಕೆಗಳಲ್ಲಿ ತಮ್ಮ ಹೆಸರಿದ್ದರೂ ಆಹ್ವಾನ ಪತ್ರಿಕೆಯನ್ನುತಲುಪಿಸುವುದಿಲ್ಲ. ತಲುಪಿದರೂ ಕೆಲವೇ ನಿಮಿಷದ ಹಿಂದೆತಲುಪುತ್ತದೆ. ಇದಕ್ಕೆ ಯಾರನ್ನು ಹೊಣೆ ಮಾಡಬೇಕೆಂದುಪ್ರಶ್ನಿಸಿದರು. ಸಭೆಗಳಲ್ಲಿ ಕೆಲವು ಅತಿಥಿಗಳಿದ್ದರೂ ಸಹತಮಗೆ ಭಾಷಣದ ಅವಕಾಶನೀಡುವುದಿಲ್ಲ. ಅನೇಕ ಸಂದರ್ಭಸ್ವಾಗತ ಮಾಡುವವರು ತಮ್ಮನ್ನುಸ್ವಾಗತಿಸುವುದೂ ಇಲ್ಲ. ಕೇವಲಕಾಟಚಾರಕ್ಕೆ ತಮ್ಮ ಹೆಸರನ್ನು ಆಹ್ವಾನಪತ್ರಿಕೆಯಲ್ಲಿ ಬಳಸುತ್ತಿರುವುದು
ಬೇಸರದ ಸಂಗತಿ ಎಂದರು.
ಮೊನ್ನೆ ನಡೆದ ಗಣರಾಜ್ಯೋತ್ಸವಕಾರ್ಯಕ್ರಮದ ಆಹ್ವಾನ ಪತ್ರಿಕೆಯನ್ನು ಕೆಲವೇ ಗಂಟೆಮುಂಚಿತವಾಗಿ ನೀಡಿದ್ದರು. ಕನ್ನಡ ರಾಜ್ಯೋತ್ಸವದಕಾರ್ಯಕ್ರಮದಲ್ಲಿ ತಹಶೀಲ್ದಾರರು ವೇದಿಕೆಯಲ್ಲಿ ತಮ್ಮಹೆಸರನ್ನೇ ಪ್ರಸ್ತಾಪಿಸಲಿಲ್ಲ, ಸ್ವಾಗತಕಾರರು ಸ್ವಾಗತವನ್ನುಬಯಸಲಿಲ್ಲ. ಇದು ಶೋಚನೀಯ ವ್ಯವಸ್ಥೆ ಎಂದರು.
ತಾವು ಬಿ.ಎ ಪದವೀಧರರಾಗಿದ್ದು ಸ್ವತಂತ್ರವಾಗಿಆಲೋಚನೆ ಮಾಡುವ,ಚಿಂತಿಸುವ ಹಾಗೂ ಭಾಷಣಕಲೆಯನ್ನು ರೂಢಿಸಿಕೊಂಡಿದ್ದೇನೆ . ನಾಲ್ಕಾರು ಹಿತವಚನತಿಳಿಸುವ ಇಂಗಿತ ತಮಗೂ ಇದೆ. ಆದರೆ ಅ ಧಿಕಾರಿಗಳಬೇಜವಾಬ್ದಾರಿಯಿಂದ ಕಡೆಗಣನೆಯಾಗುತ್ತಿದೆ. ಇದುಮಹಿಳಾ ಮೀಸಲು ಪ್ರಜಾಪ್ರಭುತ್ವ ವ್ಯವಸ್ಥೆಗೆ ಬಿದ್ದ ಕೊಡಲಿಪೆಟ್ಟು ಎಂದು ಅಭಿಪ್ರಾಯಪಟ್ಟರು
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Chikkamagaluru: ಅಪರಿಚಿತ ವಾಹನ ಡಿಕ್ಕಿಯಾಗಿ ಕಂಡಕ್ಟರ್ ಸಾವು
Chikkamagaluru: ನಾವು ನಡೆದಿದ್ದೇ ದಾರಿ, ನಡಿ ಮಗಾ….ಮರಿ ಆನೆಗೆ ನಡೆಯಲು ಕಲಿಸಿದ ತಾಯಿ ಆನೆ
Mudigere: ಕಾಫಿ ಬೆಳೆಗಾರರ ಸಂಘಟನೆಗಳ ಪದಾಧಿಕಾರಿಗಳ ಜೊತೆ ಪೊಲೀಸ್ ಅಧಿಕಾರಿಗಳ ಸಭೆ
Chikkamagaluru;ಹಣಕ್ಕಾಗಿ ಮೊಮ್ಮಗನಿಂದಲೇ ವೃದ್ಧ ದಂಪತಿಯ ಬರ್ಬರ ಹ*ತ್ಯೆ
Baba Budan Dargah: ಗೋರಿಗಳ ಮೇಲೆ ಕುಂಕುಮ ಹಚ್ಚಿರುವ ಆರೋಪ
MUST WATCH
ಹೊಸ ಸೇರ್ಪಡೆ
ಬೆಳಗಾವಿ: ಸಿಎಂ ಸಿದ್ದರಾಮಯ್ಯಗೆ ಬೆಳಗಾವಿ ಅಧಿವೇಶನವೇ ಕೊನೆ-ಬಿ.ವೈ ವಿಜಯೇಂದ್ರ
Anandapura: ಬೈಕ್ ನಲ್ಲಿ ಶಾಲೆಗೆ ತೆರಳುತ್ತಿರುವಾಗಲೇ ಶಿಕ್ಷಕನಿಗೆ ಹೃದಯಾಘಾತ
Chikkamagaluru: ಅಪರಿಚಿತ ವಾಹನ ಡಿಕ್ಕಿಯಾಗಿ ಕಂಡಕ್ಟರ್ ಸಾವು
Naxal Encounter Case: ಜಯಂತ್ ಗೌಡ ವಿಚಾರಣೆ, ಠಾಣೆಗೆ ಮುತ್ತಿಗೆ ಹಾಕಿದ ಗ್ರಾಮಸ್ಥರು
ನವೆಂಬರ್ 26-30: ಧರ್ಮಸ್ಥಳ ಲಕ್ಷದೀಪೋತ್ಸವ ಸಂಭ್ರಮ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.