ಕೊರೊನಾ ವ್ಯಾಕ್ಸಿನ್‌ಗೆ ಹೆಚ್ಚಿದ ಬೇಡಿಕೆ
Team Udayavani, May 30, 2021, 9:13 PM IST
ಚಿಕ್ಕಮಗಳೂರು: ಕೋವಿಡ್ ಸೋಂಕಿನ ಆರ್ಭಟ ಹೆಚ್ಚುತ್ತಿದ್ದಂತೆ, ಸೋಂಕಿನಿಂದ ರಕ್ಷಣೆ ಪಡೆಯಲು ಜನರು ಲಸಿಕೆಯತ್ತ ಮುಖ ಮಾಡಿದ್ದಾರೆ. ಎಲ್ಲೆಡೆ ವ್ಯಾಕ್ಸಿನ್‌ಗಾಗಿ ಬೇಡಿಕೆ ಹೆಚ್ಚುತ್ತಿದೆ. ಯಾವಾಗ ನಮಗೆ ವ್ಯಾಕ್ಸಿನ್ ಸಿಗುತ್ತದೆ ಎಂದು ಜನರು ಚಾತಕ ಪಕ್ಷಗಳಂತೆ ಕಾದು ಕುಳಿತಿದ್ದಾರೆ. ಕಾನಾಡಿನಲ್ಲೂ ಕೋವಿಡ್ ವ್ಯಾಕ್ಸಿನ್‌ಗೆ ಭಾರೀ ಬೇಡಿಕೆ ಇದ್ದು, ಒಂದಷ್ಟು ಜನ ಮೊದಲ ಡೋಸ್ ಪಡೆದುಕೊಂಡು ಎರಡನೇ ಡೋಸ್‌ಗೆ ಕಾಯುತ್ತಿದ್ದಾರೆ.
ಮತ್ತೂಂದು ಕಡೆ ಮೊದಲ ಡೋಸ್ ಪಡೆದುಕೊಳ್ಳಲು ಕಾತುರಾಗಿದ್ದಾರೆ. ಆದರೆ, ಬೇಡಿಕೆಗೆ ಅನುಗುಣವಾಗಿ ಸರ್ಕಾರ ವ್ಯಾಕ್ಸಿನ್ ಪೂರೈಕೆ ಮಾಡದಿರುವುದರಿಂದ ವ್ಯಾಕ್ಸಿನ್ ವಿತರಣೆ ನಿಧಾನಗತಿಯಲ್ಲಿ ಸಾಗುತ್ತಿದೆ. ಜಿಲ್ಲೆಯಲ್ಲಿ ವ್ಯಾಕ್ಸಿನ್ ನೀಡಲು 103 ಕೇಂದ್ರಗಳನ್ನು ತೆರೆಯಲಾಗಿದೆ. ಜಿಲ್ಲಾಸ್ಪತ್ರೆ, 6 ತಾಲೂಕು ಆಸ್ಪತ್ರೆ, 5 ಸಮುದಾಯ ಕೇಂದ್ರ ಆಸ್ಪತ್ರೆ, 89 ಪ್ರಾಥಮಿಕ ಆರೋಗ್ಯ ಕೇಂದ್ರ, 2 ನಗರ ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ವ್ಯಾಕ್ಸಿನ್ ಕೇಂದ್ರ ತೆರೆದು ಲಸಿಕೆ ವಿತರಣೆ ಮಾಡಲಾಗುತ್ತಿದ್ದು ಆರೋಗ್ಯ ಇಲಾಖೆ ಸಿಬ್ಬಂದಿ ಹಗಲಿರುಳು ಶ್ರಮಿಸುತ್ತಿದ್ದಾರೆ.
ಜಿಲ್ಲೆ 2011ರ ಜನಗಣತಿ ಆಧಾರದ ಮೇಲೆ ಒಟ್ಟು 11,37,961ರಷ್ಟು ಜನಸಂಖ್ಯೆ ಹೊಂದಿದ್ದು, ಇದರಲ್ಲಿ 5,66,622 ಮಂದಿ ಪುರುಷರು ಹಾಗೂ 5,71,339 ಮಹಿಳೆಯರಿದ್ದಾರೆ. 45ರಿಂದ 49ವರ್ಷದೊಳಗಿನವರು 80,756ರಷ್ಟು ಜನರಿದ್ದಾರೆ. ಗ್ರಾಮೀಣ ಪ್ರದೇಶದಲ್ಲಿ 64,473ರಷ್ಟು ಜನರಿದ್ದು, ಪಟ್ಟಣ ಪ್ರದೇಶದಲ್ಲಿ 16,083ರಷ್ಟು ಜನರಿದ್ದಾರೆ. 50ರಿಂದ 54 ವರ್ಷದೊಳಗಿನವರು 60,644 ರಷ್ಟಿದ್ದು, ಗ್ರಾಮೀಣ ಪ್ರದೇಶದಲ್ಲಿ 48,562 ಹಾಗೂ ನಗರ ಪ್ರದೇಶದಲ್ಲಿ 12,082ರಷ್ಟಿದ್ದಾರೆ.
ಜಿಲ್ಲೆಯಲ್ಲಿ 55ರಿಂದ 59 ವರ್ಷದೊಳಗಿನವರು 47,974ರಷ್ಟಿದ್ದು, ಗ್ರಾಮೀಣ ಪ್ರದೇಶದಲ್ಲಿ 38,760ರಷ್ಟಿದ್ದಾರೆ. ನಗರ ಪ್ರದೇಶದಲ್ಲಿ 9,214ಮಂದಿ ಇದ್ದಾರೆ. 62ರಿಂದ 64 ವರ್ಷದೊಳಗಿನವರು 40,595ರಷ್ಟು ಇದ್ದು, ಗ್ರಾಮೀಣ ಪ್ರದೇಶದಲ್ಲಿ 33,458, ನಗರದಲ್ಲಿ 7,137 ಮಂದಿ ಇದ್ದಾರೆ. 56ರಿಂದ 69 ವರ್ಷದೊಳಗಿನವರು 33,054ರಷ್ಟು ಜನರಿದ್ದು, ಗ್ರಾಮೀಣ ಪ್ರದೇಶದಲ್ಲಿ 22,766 ಹಾಗೂ ಪಟ್ಟಣ ಪ್ರದೇಶದಲ್ಲಿ 5,288ರಷ್ಟು ಜನರಿದ್ದಾರೆ.
70ರಿಂದ 74ವರ್ಷದವರು ಜಿಲ್ಲೆಯಲ್ಲಿ 22,603ರಷ್ಟು ಜನರಿದ್ದು, ಗ್ರಾಮೀಣ ಪ್ರದೇಶದಲ್ಲಿ 9,160 ಹಾಗೂ ನಗರ ಪ್ರದೇಶದಲ್ಲಿ 3,443, 75ರಿಂದ 79ವರ್ಷದ 12,267ಮಂದಿ ಇದ್ದು ಗ್ರಾಮೀಣ ಪ್ರದೇಶದಲ್ಲಿ 10,290 ಮತ್ತು ನಗರ ಪ್ರದೇಶದಲ್ಲಿ 1977 ಮಂದಿ ಇದ್ದಾರೆ. ಅದೇ ರೀತಿ 82ರಿಂದ 84ವರ್ಷದವರು 7795ರಷ್ಟಿದ್ದು, ಗ್ರಾಮೀಣ 6647 ಮತ್ತು ನಗರದಲ್ಲಿ 1148ರಷ್ಟು ಜನಸಂಖ್ಯೆ ಹೊಂದಿದೆ. 85-89 ವರ್ಷದೊಳಗಿನವರಲ್ಲಿ 3047 ಜನರಿದ್ದು, ಗ್ರಾಮೀಣದಲ್ಲಿ 2543, ನಗರ 504 ಮಂದಿ, 92 ರಿಂದ 94 ವರ್ಷದೊಳಗಿನವರಲ್ಲಿ 1629 ಜನರಿದ್ದು, ಅದರಲ್ಲಿ ಗ್ರಾಮೀಣದಲ್ಲಿ 1399, ನಗರ 225, 95ರಿಂದ 99 ವರ್ಷದೊಳಗಿನವರಲ್ಲಿ 652 ಜನರಿದ್ದಾರೆ.
ಗ್ರಾಮೀಣ ಪ್ರದೇಶದಲ್ಲಿ 745 ನಗರದಲ್ಲಿ 107 ಮಂದಿ, 100 ಮತ್ತು ಅದಕ್ಕೂ ಮೇಲ್ಪಟ್ಟವರಲ್ಲಿ 409 ಜನರಿದ್ದು, ಗ್ರಾಮೀಣರಲ್ಲಿ 345 ಜನರು, ನಗರದಲ್ಲಿ 64 ಮಂದಿ ನೂರನೇ ವಸಂತ ದಾಟಿದವರು ಇದ್ದಾರೆ. ಇವರು ಸೇರಿದಂತೆ 18 ವರ್ಷ ಮೇಲ್ಪಟ್ಟವರಿಗೂ ಲಸಿಕೆ ವಿತರಣೆ ಮಾಡಬೇಕಿದೆ. ಸದ್ಯ ಜಿಲ್ಲೆಯಲ್ಲಿ (ಮೇ.28) 2,13,522 ಮಂದಿ ಮೊದಲಹಂತದ ಲಸಿಕೆಯನ್ನು ಪಡೆದುಕೊಂಡಿದ್ದಾರೆ. 53,790ರಷ್ಟು ಮಂದಿ 2ನೇ ಹಂತದ ಲಸಿಕೆ ಪಡೆದುಕೊಂಡಿದ್ದಾರೆ. ಆರೋಗ್ಯ ಇಲಾಖೆ ವಾರಿಯರ್ ಮೊದಲ ಡೋಸ್ 9776 ಎರಡನೇ ಡೋಸ್‌ನ್ನು 7454 ಮಂದಿ ಪಡೆದುಕೊಂಡಿ ದ್ದಾರೆ.
ಫ್ರಂಟ್‌ಲೆçನ್ ವರ್ಕರ್ಸ್ ಮೊದಲ ಡೋಸ್ 6959 ಹಾಗೂ 2ನೇ ಡೋಸ್ 4513 ಮಂದಿ ಪಡೆದುಕೊಂಡಿದ್ದಾರೆ. 18 ವರ್ಷ ಮೇಲ್ಪಟ್ಟವರು 8,268 ಮಂದಿ ಮೊದಲ ಡೋಸ್ ಪಡೆದುಕೊಂಡಿದ್ದಾರೆ. 45ರಿಂದ 59 ವರ್ಷದೊಳಗಿನವರು 95891 ಮಂದಿ ಮೊದಲ ಡೋಸ್ ಹಾಗೂ 10,724 ಮಂದಿ 2ನೇ ಡೋಸ್ ಪಡೆದುಕೊಂಡಿದ್ದಾರೆ. 60 ವರ್ಷ ಮೇಲ್ಪಟ್ಟವರು 92,628 ಮಂದಿ ಮೊದಲ ಡೋಸ್ ಮತ್ತು 31099 ಮಂದಿ 2ನೇ ಡೋಸ್ ಪಡೆದುಕೊಂಡಿದ್ದಾರೆ ಒಟ್ಟಾರೆಯಾಗಿ 2,13,522ಮಂದಿ ಮೊದಲ ಡೋಸ್ ಮತ್ತು 53,790 ಮಂದಿ 2ನೇ ಡೋಸ್ ಪಡೆದುಕೊಂಡಿದ್ದಾರೆ.
ಬಹುತೇಕ ಮಂದಿ ಲಸಿಕೆ ಪಡೆದುಕೊಳ್ಳಲು ಬಾಕಿ ಉಳಿದಿದ್ದು, ಯಾವಾಗ ಲಸಿಕೆ ಸಿಗುತ್ತದೆ ಎಂದು ಕಾದುಕುಳಿತ್ತಿದ್ದಾರೆ. 18 ವರ್ಷ ಮೇಲ್ಪಟ್ಟವರಿಗೆ ಲಸಿಕೆ ವಿತರಣೆ ಸರ್ಕಾರ ನಿಲ್ಲಿಸಿದ್ದು ತುರ್ತುಸೇವೆಯಲ್ಲಿರುವರಿಗೆ ಮಾತ್ರ ಲಸಿಕೆ ನೀಡಲಾಗುತ್ತಿದೆ. ಜನರ ಆರೋಗ್ಯದ ದೃಷ್ಟಿಯಿಂದ ಸರ್ಕಾರ ಲಸಿಕೆವಿತರಣೆಗೆ ಚುರುಕು ಮುಟ್ಟಿಸಬೇಕೆಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Kaduru: ಜೆಡಿಎಸ್ ಅಭ್ಯರ್ಥಿ ನಿಖಿಲ್ ಕುಮಾರಸ್ವಾಮಿಗೆ ರಕ್ತದಲ್ಲಿ ಪತ್ರ ಬರೆದ ಕಾರ್ಯಕರ್ತ
Chikkamagaluru: ಸರ್ಕಾರಿ ಬಸ್-ಲಾರಿ ಮುಖಾಮುಖಿ ಡಿಕ್ಕಿ; ಹಲವರಿಗೆ ಗಾಯ
Chikkamagaluru: ಆಕಸ್ಮಿಕ ಬೆಂಕಿ ತಗುಲಿ ಸಂಪೂರ್ಣ ಸುಟ್ಟು ಭಸ್ಮವಾದ ಗುಡಿಸಲು
Datta peeta; ಸರಕಾರ ನೇಮಕ ಮಾಡಿದ್ದ ಅರ್ಚಕ ರಾಜೀನಾಮೆ
Kottigehara: ಅಪಘಾತದಿಂದ ಗಾಯಗೊಂಡ ನಾಗರಹಾವಿಗೆ ಚಿಕಿತ್ಸೆ
MUST WATCH
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಉಡುಪಿ ಶ್ರೀ ಕೃಷ್ಣ ಮಠದಲ್ಲಿ ಬೃಹತ್ ಗೀತೋತ್ಸವಕ್ಕೆ ಅದ್ದೂರಿ ಚಾಲನೆ|
ಹೊಸ ಸೇರ್ಪಡೆ
Maharashtra polls; ದೇಶ ಒಡೆಯುವ ಮಾತನಾಡುವವರಿಗೆ ತಕ್ಕ ಪಾಠ: ಕಂಗನಾ
IPL 2025 Auction: ಮೊದಲ ಎರಡು ಸುತ್ತಿನಲ್ಲಿ ಮಾರಾಟವಾದ ಆಟಗಾರರ ಸಂಪೂರ್ಣ ಪಟ್ಟಿ..
IPL Auction: ಡೆಲ್ಲಿ ಕ್ಯಾಪಿಟಲ್ಸ್ ಪಾಲಾದ ಕೆಎಲ್ ರಾಹುಲ್; ಖರೀದಿ ಆರಂಭಿಸಿದ ಆರ್ ಸಿಬಿ
Ex-CJI ಚಂದ್ರಚೂಡ್ ರಾಜಕಾರಣಿಗಳಿಗೆ ಕಾನೂನಿನ ಭಯ ತೆಗೆದುಹಾಕಿದ್ದಾರೆ : ರಾವತ್
IPL Mega Auction: ಸ್ಪಿನ್ನರ್ ಚಾಹಲ್ ಗೆ ಭಾರೀ ಬೇಡಿಕೆ; ಮಿಲ್ಲರ್ ಲಕ್ನೋಗೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.