ಲಾಕ್‌ಡೌನ್‌ನಲ್ಲೂ ಜನರ ಸರಾಗ ಓಡಾಟ!


Team Udayavani, Jun 8, 2021, 10:34 PM IST

8-15

ಚಿಕ್ಕಮಗಳೂರು:  ಕೋವಿಡ್‌ ಪಾಸಿಟಿವಿಟಿ ರೇಟ್‌ ಶೇ.25ರಿಂದ ಶೇ.26 ರಷ್ಟಿದೆ. ರಾಜ್ಯದಲ್ಲಿ ಜಿಲ್ಲೆ 2 ಅಥವಾ 3ನೇ ಸ್ಥಾನದಲ್ಲಿದೆ. ಜೂ.14ರ ವರೆಗೂ ರಾಜ್ಯ ಸರ್ಕಾರ ನಿರ್ಬಂಧ ವಿಧಿ ಸಿದೆ. ಆದರೆ, ಯಾವ ನಿರ್ಬಂಧಗಳಿಗೆ ಕ್ಯಾರೆ ಎನ್ನದೆ ಜನರ ಓಡಾಟ ಮಾತ್ರ ಸರಾಗವಾಗಿ ನಡೆಯುತ್ತಿದೆ.

ರಾಜ್ಯ ಸರ್ಕಾರದ ಆದೇಶದಂತೆ ಬೆಳಗ್ಗೆ 6 ಗಂಟೆಯಿಂದ 10 ಗಂಟೆಯವರೆಗೂ ಅಗತ್ಯ ವಸ್ತುಗಳ ಖರೀದಿಗೆ ಅಕವಾಶ ಕಲ್ಪಿಸಿದೆ. ಹೋಮ್‌ ಡೆಲಿವರಿಗೆ ಅವಕಾಶ ಮಾಡಿಕೊಟ್ಟಿದೆ. ಹಣ್ಣು- ತರಕಾರಿಯನ್ನು ತಳ್ಳುಗಾಡಿಯ ಮೂಲಕ ಮನೆ ಬಾಗಿಲಿಗೆ ಹೋಗಿ ವ್ಯಾಪಾರ ಮಾಡಲು ಅನುಮತಿ ನೀಡಿದೆ. ಸರ್ಕಾರ ಇಷ್ಟೆಲ್ಲ ಅವಕಾಶಗಳನ್ನು ಮಾಡಿಕೊಟ್ಟರೂ ಜನರ ಓಡಾಟ ಮಾತ್ರ ನಿಲ್ಲುವ ಲಕ್ಷಣ ಕಾಣದಂತಾಗಿದೆ.

ಕೋವಿಡ್‌ ನಿಯಂತ್ರಿಸಲು ಸರ್ಕಾರ ನಿರ್ಬಂಧಗಳನ್ನು ವಿ ಧಿಸಿದ ಬಳಿಕ ಇದೇ ಮೊದಲು ಚಿಕ್ಕಮಗಳೂರು ನಗರದಲ್ಲಿ ಎಗ್ಗಿಲ್ಲದೆ ವಾಹನ ಸಂಚಾರ ನಡೆಸಿವೆ. ಎಂದಿನಂತೆ ಬೆಳಗ್ಗೆ 6 ಗಂಟೆಯಿಂದ 10 ಗಂಟೆಯವರೆಗೂ ಅಗತ್ಯ ವಸ್ತುಗಳ ಖರೀದಿಗೆ ಅವಕಾಶ ನೀಡಲಾಗಿತ್ತು. ಮಾರುಕಟ್ಟೆಯಲ್ಲಿ ಜನಸಂದಣಿಯಿಂದ ಕೂಡಿತ್ತು. 10 ಗಂಟೆಯ ಬಳಿಕವೂ ನಗರದಲ್ಲಿ ವಾಹನ ಮತ್ತು ಜನಸಂಚಾರ ಎಗ್ಗಿಲ್ಲದೆ ನಡೆದಿದ್ದು, ವಾಹನ ಸಂಚಾರವನ್ನು ನಿಯಂತ್ರಿಸಲು ಪೊಲೀಸರು ಹರಸಾಹಸ ಪಡಬೇಕಾದ ಪರಿಸ್ಥಿತಿ ನಿರ್ಮಾಣವಾಗಿತ್ತು.

ಪ್ರತಿಯೊಂದು ಚೆಕ್‌ಪೋಸ್ಟ್‌ಗಳಲ್ಲೂ ವಾಹನಗಳು ಸರದಿಯಾಗಿ ನಿಲ್ಲುತ್ತಿದ್ದ ದೃಶ್ಯಗಳು ಕಂಡುಬಂದವು. ಚೆಕ್‌ಪೋಸ್ಟ್‌ಗಳಲ್ಲಿ ಪೊಲೀಸರು ವಾಹನಗಳನ್ನು ತಡೆದು ನಿಲ್ಲಿಸಿ ವಿಚಾರಿಸಿದರು. ಕುಂಟು ನೆಪಗಳನ್ನು ಹೇಳಿಕೊಂಡು ಸಂಚಾರ ನಡೆಸುತ್ತಿದ್ದದ್ದು ಕಂಡುಬಂದಿತು. ಎಗ್ಗಿಲ್ಲದೆ ವಾಹನ ಸಂಚಾರ ನಡೆಸಿದ್ದರಿಂದ ಎಂ.ಜಿ. ರಸ್ತೆ, ಐಜಿ ರಸ್ತೆ, ಮಾರ್ಕೆಟ್‌ ರಸ್ತೆ ಸೇರಿದಂತೆ ಪ್ರಮುಖ ರಸ್ತೆಗಳಲ್ಲಿ ವಾಹನಗಳು ಸಾಲುಗಟ್ಟಿ ನಿಂತಿದ್ದವು. ಶನಿವಾರ ಮತ್ತು ಭಾನುವಾರ ಬ್ಯಾಂಕ್‌ ಸೇರಿದಂತೆ ಇತರೆ ಕಾರ್ಯಚಟುವಟಿಕೆಗಳು ಇಲ್ಲದಿರುವ ಕಾರಣದಿಂದ ಗ್ರಾಮೀಣ ಮತ್ತು ನಗರ ಪ್ರದೇಶದಿಂದ ಹೆಚ್ಚಿನ ಜನರು ರಸ್ತೆಗಿಳಿದ್ದರಿಂದ ವಾಹನ ಸಂಚಾರ ಹೆಚ್ಚಳವಾಗಿದ್ದು, ಕೋವಿಡ್‌ ಭಯವಿಲ್ಲದೇ ಜನರು ಸಂಚಾರ ನಡೆಸಿದರು.

ಜಿಲ್ಲೆ ಕೋವಿಡ್‌ ಪಾಸಿಟಿವಿಟಿ ರೇಟ್‌ನಲ್ಲಿ ರಾಜ್ಯದಲ್ಲೇ 2 ಮತ್ತು 3ನೇ ಸ್ಥಾನದಲ್ಲಿದೆ. ಶೇ.25 ರಿಂದ 26ರಷ್ಟು ಪಾಸಿಟಿವಿಟಿ ರೇಟ್‌ ಇದೆ. ಗ್ರಾಮೀಣ ಪ್ರದೇಶಕ್ಕೆ ಹಬ್ಬಿರುವ ಕೋವಿಡ್‌ ಸೋಂಕು ಇನ್ನೂ ನಿಯಂತ್ರಣಕ್ಕೆ ಬಂದಿಲ್ಲ, ಈ ಹಿನ್ನೆಲೆಯಲ್ಲಿ ಸೋಂಕು ಮತ್ತಷ್ಟು ವ್ಯಾಪಿಸುವ ಭಯ ಎಲ್ಲರನ್ನೂ ಕಾಡುತ್ತಿದೆ. ಜಿಲ್ಲಾಡಳಿತ ಮತ್ತು ಜಿಲ್ಲಾ ಪೊಲೀಸ್‌ ಇಲಾಖೆ ಅನಗತ್ಯ ಸಂಚಾರಕ್ಕೆ ಕಡಿವಾಣ ಹಾಕಬೇಕೆಂಬುದು ಸಾರ್ವಜನಿಕರ ಒತ್ತಾಯವಾಗಿದೆ.

ಟಾಪ್ ನ್ಯೂಸ್

police

Davanagere; ಏಕಾಏಕಿ ಬಾರ್ ಗೆ ನುಗ್ಗಿ ಮದ್ಯ ಸೇವಿಸುತ್ತಿದ್ದ ವ್ಯಕ್ತಿಯ ಇರಿದು ಹ*ತ್ಯೆ

1-ammi

J&K Assembly polls; ಈಗ ಪಾಕಿಸ್ಥಾನವು ಮೋದಿಗೆ ಹೆದರುತ್ತಿದೆ: ಅಮಿತ್ ಶಾ ವಾಗ್ದಾಳಿ

Achraya-das

Tirupati laddoo: ʼಅಯೋಧ್ಯೆ ರಾಮಮಂದಿರ ಪ್ರಾಣಪ್ರತಿಷ್ಠೆಯಲ್ಲಿ ಲಡ್ಡು ಪ್ರಸಾದ ಹಂಚಿದ್ದೆವುʼ

1-ewqewqe

AtishiAAP; ದೆಹಲಿಯ ಮೂರನೇ ಮಹಿಳಾ ಸಿಎಂ ಆದ ಆತಿಷಿ

BBK11: ಈ ಬಾರಿ ಬಿಗ್‌ ಬಾಸ್‌ ಮನೆಯಲ್ಲಿ ಇರಲಿದೆ ಸ್ವರ್ಗ- ನರಕದ ಕಿಚ್ಚು.. ಹೊಸ ಪ್ರೋಮೊ ಔಟ್

BBK11: ಈ ಬಾರಿ ಬಿಗ್‌ ಬಾಸ್‌ ಮನೆಯಲ್ಲಿ ಇರಲಿದೆ ಸ್ವರ್ಗ- ನರಕದ ಕಿಚ್ಚು.. ಹೊಸ ಪ್ರೋಮೊ ಔಟ್

1-frr

Munirathna ವಿರುದ್ಧದ ಪ್ರಕರಣಗಳ ತನಿಖೆಗೆ ಎಸ್‌ಐಟಿ ರಚಿಸಿದ ರಾಜ್ಯ ಸರಕಾರ

Udayavani.com “ನಮ್ಮನೆ ಕೃಷ್ಣ”: ಪ್ರಥಮ ಬಹುಮಾನ ಗಳಿಸಿದ ರೀಲ್ಸ್

Udayavani.com “ನಮ್ಮನೆ ಕೃಷ್ಣ”: ಪ್ರಥಮ ಬಹುಮಾನ ಗಳಿಸಿದ ರೀಲ್ಸ್


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Mudigere: 30 ಅಡಿ ಎತ್ತರದಿಂದ ಪಂಚಾಯಿತಿ ಆವರಣಕ್ಕೆ ಬಿದ್ದ ಕಾರು… ಮೂವರ ಸ್ಥಿತಿ ಗಂಭೀರ

Mudigere: 30 ಅಡಿ ಎತ್ತರದಿಂದ ಪಂಚಾಯತ್ ಆವರಣಕ್ಕೆ ಬಿದ್ದ ಕಾರು… ಮೂವರ ಸ್ಥಿತಿ ಗಂಭೀರ

CT Ravi: ಶೇ. 80ರಷ್ಟು ಹಿಂದೂಗಳೇ ಇದ್ದರೂ ಗಣೇಶೋತ್ಸವಕ್ಕೆ ಅಡ್ಡಿ

CT Ravi: ಶೇ. 80ರಷ್ಟು ಹಿಂದೂಗಳೇ ಇದ್ದರೂ ಗಣೇಶೋತ್ಸವಕ್ಕೆ ಅಡ್ಡಿ

1-asaaasa

Hindutva ಮತ್ತು ಹಿಂದೂಗಳಿಗೆ ಒಳ್ಳೆಯದಾಗಲಿ: ದೇವರ ಹುಂಡಿಗೆ ಪತ್ರ!

Attigere: ಶಾಲಾ ಆವರಣದಲ್ಲಿ ಬರೋಬ್ಬರಿ 15 ಅಡಿ ಉದ್ದದ ಕಾಳಿಂಗ ಸರ್ಪ ಸೆರೆ

Attigere: ಶಾಲಾ ಆವರಣದಲ್ಲಿ ಬರೋಬ್ಬರಿ 15 ಅಡಿ ಉದ್ದದ ಕಾಳಿಂಗ ಸರ್ಪ ಸೆರೆ

Chikkamagaluru: ಮನೆಯಲ್ಲಿ ಯಾರೂ ಇರದ ವೇಳೆ ಐದರ ಬಾಲಕಿ ಅನುಮಾನಾಸ್ಪದ ಸಾವು

Chikkamagaluru: ಮನೆಯಲ್ಲಿ ಯಾರೂ ಇರದ ವೇಳೆ ಐದರ ಬಾಲಕಿ ಅನುಮಾನಾಸ್ಪದ ಸಾವು

MUST WATCH

udayavani youtube

Kaljigaದಲ್ಲಿ ದೈವದ ಅಪಪ್ರಚಾರ ನಡೆದಿಲ್ಲ, ಸಿನಿಮಾ ನೋಡಿದ ಬಳಿಕ ಈ ಬಗ್ಗೆ ಪ್ರತಿಕ್ರಿಯಿಸಿ

udayavani youtube

ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ

udayavani youtube

ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ

udayavani youtube

ಈಟ್ ರಾಜಾ ಶಾಪ್ ನಲ್ಲಿ ಜ್ಯೂಸ್ ಕುಡಿಯೋದಷ್ಟೇ ಅಲ್ಲ ತಿನ್ನಲೂ ಬಹುದು

udayavani youtube

ಅಯ್ಯೋ…ಸಂತೆಕಟ್ಟೆ ಅಂಡರ್ ಪಾಸ್ ಪ್ರಯಾಣ ನಿತ್ಯ ನರಕ!

ಹೊಸ ಸೇರ್ಪಡೆ

29

Gujjadi: ನಾಪತ್ತೆಯಾಗಿದ್ದ ವ್ಯಕ್ತಿ ಶವ ಹೊಳೆಯಲ್ಲಿ ಪತ್ತೆ

Hangzhou Open: ಪ್ರಶಾಂತ್‌-ಜೀವನ್‌ ಸೆಮಿಗೆ

Hangzhou Open: ಪ್ರಶಾಂತ್‌-ಜೀವನ್‌ ಸೆಮಿಗೆ

AFC U20 Asian Cup Qualifiers: ಅಂಡರ್‌-20 ಏಷ್ಯಾ ಅರ್ಹತಾ ಫುಟ್‌ಬಾಲ್‌ಗೆ ಭಾರತ ತಂಡ

AFC U20 Asian Cup Qualifiers: ಅಂಡರ್‌-20 ಏಷ್ಯಾ ಅರ್ಹತಾ ಫುಟ್‌ಬಾಲ್‌ಗೆ ಭಾರತ ತಂಡ

Duleep Trophy: ಇಂಡಿಯಾ ಎ, ಡಿ  ತಂಡಗಳಿಗೆ 300 ಲೀಡ್‌

Duleep Trophy: ಇಂಡಿಯಾ ಎ, ಡಿ  ತಂಡಗಳಿಗೆ 300 ಲೀಡ್‌

police

Davanagere; ಏಕಾಏಕಿ ಬಾರ್ ಗೆ ನುಗ್ಗಿ ಮದ್ಯ ಸೇವಿಸುತ್ತಿದ್ದ ವ್ಯಕ್ತಿಯ ಇರಿದು ಹ*ತ್ಯೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.