ಕಾಡಾನೆ ಹಿಂಡು ಕಾಡಿಟ್ಟಲು ಹರಸಾಹಸ


Team Udayavani, Jun 10, 2021, 10:32 PM IST

10-16

ಕೊಟ್ಟಿಗೆಹಾರ: ಕಳೆದ ನಾಲ್ಕೈದು ದಿನಗಳಿಂದ ಬಣಕಲ್‌ನ ಸಬ್ಲಿ ಗ್ರಾಮದಲ್ಲಿ ಬೀಡುಬಿಟ್ಟಿದ್ದ ಕಾಡಾನೆಗಳು ಅಕ್ಕಪಕ್ಕದ ಗ್ರಾಮಗಳಾದ ಚಕ್ಕೋಡು, ಹೆಬ್ರಿಗೆ, ಕಂಬಳಕಾಡು, ಚನ್ನಹಡ್ಲು, ಅತ್ತಿಗೆರೆ ಗ್ರಾಮಗಳಲ್ಲಿ ಸಂಚರಿಸುತ್ತಿದ್ದು, ಕಾಡಾನೆ ಓಡಿಸಲು ಅರಣ್ಯ ಸಿಬ್ಬಂದಿ ಹರಸಾಹಸ ಪಡುತ್ತಿದ್ದಾರೆ. ಆದರೂ, ಕಾಡಾನೆಗಳು ಹಜ್ಜೆ ಕೀಳುತ್ತಿಲ್ಲ.

ಹಲವು ಕಾಫಿ ತೋಟಗಳಲ್ಲಿ ಓಡಾಡಿಕೊಂಡು ಹಾನಿ ಮಾಡಿರುವ ನಾಲ್ಕು ಕಾಡಾನೆಗಳ ಹಿಂಡು, ಕಂಬಳಕಾಡು ತೋಟದಲ್ಲಿ ಬೀಡು ಬಿಟ್ಟಿದೆ. ಬುಧವಾರ ಅತ್ತಿಗೆರೆ ಭಾಗದ ತೋಟದಲ್ಲಿ ಬೀಡು ಬಿಟ್ಟಿದೆ. ಗ್ರಾಮಸ್ಥರು, ಕೂಲಿ ಕಾರ್ಮಿಕರು ಕಾಡಾನೆ ಭಯದಿಂದ ಕೆಲಸಕ್ಕೆ ಹೋಗಲು ಸಾಧ್ಯವಾಗುತ್ತಿಲ್ಲ. ಕಳೆದ ಮೂರು ದಿನಗಳ ಹಿಂದೆ ಅರಣ್ಯ ಸಿಬ್ಬಂದಿಗೆ ಕಾಡಾನೆ ಓಡಿಸಲು ಮಳೆ ಅಡ್ಡಿಯಾಗಿತ್ತು. ನಂತರ ಮಳೆ ಬಿಡುವು ಕೊಟ್ಟಿತ್ತು.

ಆದರೂ ಕಾಡಾನೆಗಳನ್ನು ಕಾಡಿಗೆ ಅಟ್ಟುವ ಕಾರ್ಯಾಚರಣೆಯಲ್ಲಿ ಕಾಡಾನೆಗಳ ಹಿಂಡು ಮಾತ್ರ ಊರು ಬಿಟ್ಟು ಕಾಡಿಗೆ ಹೋಗದೇ ಅರಣ್ಯ ಸಿಬ್ಬಂದಿಯನ್ನು ಫಜೀತಿಗೆ ಸಿಕ್ಕಿಸಿದೆ. ದೈತ್ಯಾಕಾರದ ಮೂರು ಕಾಡಾನೆಗಳು ಪಟಾಕಿ ಶಬ್ದಕ್ಕೂ ಭಯ ಪಡದೇ ಹಲವು ಗ್ರಾಮಗಳ ಸುತ್ತಮುತ್ತ ಸುತ್ತುತ್ತಿರುವುದರಿಂದ ಬೆಳೆ ಹಾನಿಯ ಜತೆಗೆ ಪ್ರಾಣ ಹಾನಿ ಸಂಭವಿಸುವ ಸಾಧ್ಯತೆಗಳಿವೆ ಎಂದು ಗ್ರಾಮಸ್ಥರು ಆತಂಕ ವ್ಯಕ್ತಪಡಿಸಿದ್ದಾರೆ.

ಕಾಡಾನೆ ಓಡಿಸಲು ಒತ್ತಾಯ: ಸಬ್ಲಿ, ಚಕ್ಕೋಡು, ಹಳ್ಳಿಕೆರೆ, ಚನ್ನಹಡ್ಲು, ಕಂಬಳಕಾಡು, ಅತ್ತಿಗೆರೆ ಭಾಗದಲ್ಲಿ ಈಗಾಗಲೇ ಅಪಾರ ಬೆಳೆ ಹಾನಿ ಸಂಭವಿಸಿದೆ. ಕಾಡಾನೆಗಳ ಹಿಂಡು ಅತ್ತಿಂದಿತ್ತ ಓಡಾಡುತ್ತಿರುವುದರಿಂದ ಗಾಬರಿಗೊಂಡಿವೆ. ಇದರಿಂದ ಕೂಲಿ ಕಾರ್ಮಿಕರ ತೋಟದ ಕೆಲಸಕ್ಕೆ ತೊಂದರೆಯಾಗಿದೆ. ಕೂಡಲೇ ಸಂಬಂಧಿ  ಸಿದ ಹಿರಿಯ ಅರಣ್ಯ ಅಧಿ ಕಾರಿಗಳು ಕಾಡಾನೆಗಳನ್ನು ಕಾಡಿಗೆ ಓಡಿಸಬೇಕು.

ಇಲ್ಲವಾದರೆ ಕಾಡಾನೆಗಳನ್ನು ಸ್ಥಳಾಂತರಿಸಬೇಕು. ಹಾನಿಯಾದ ಬೆಳೆಗೆ ಸೂಕ್ತ ಪರಿಹಾರ ನೀಡಬೇಕೆಂದು ಮೂಡಿಗೆರೆ ಬೆಳೆಗಾರರ ಸಂಘದ ತಾಲೂಕು ಅಧ್ಯಕ್ಷ ಬಾಲಕೃಷ್ಣ ಬಾಳೂರು ಒತ್ತಾಯಿಸಿದ್ದಾರೆ.

ಟಾಪ್ ನ್ಯೂಸ್

rishabh-pant

IPL Mega Auction: ಭರ್ಜರಿ ಬಿಡ್‌ ಗಳಿಸಿ ಅಯ್ಯರ್‌ ದಾಖಲೆ ಮುರಿದ ರಿಷಭ್‌ ಪಂತ್

11

IPL ‌Mega Auction: ಬಟ್ಲರ್‌ಗೆ ಬಲೆ ಬೀಸಿದ ಗುಜರಾತ್; ಸಿಕ್ಕ ಬೆಲೆ ಎಷ್ಟು?

Iyer

IPL ‌Mega Auction: ದಾಖಲೆ ಬೆಲೆ ಪಡೆದ ಶ್ರೇಯಸ್‌ ಅಯ್ಯರ್‌ ಪಂಜಾಬ್‌ ಪಾಲಿಗೆ

IPL Mega Auction: ಹರಾಜು ಆರಂಭ; ಭರ್ಜರಿ ಬಿಡ್‌ ಗಳಿಸಿದ ವೇಗಿ ಅರ್ಶದೀಪ್‌ ಸಿಂಗ್

IPL Mega Auction: ಹರಾಜು ಆರಂಭ; ಭರ್ಜರಿ ಬಿಡ್‌ ಗಳಿಸಿದ ವೇಗಿ ಅರ್ಶದೀಪ್‌ ಸಿಂಗ್

Saira Banu: ಎ.ಆರ್‌.ರೆಹಮಾನ್‌ರಿಂದ ದೂರವಾದ ಬಗ್ಗೆ ಕೊನೆಗೂ ಮೌನ ಮುರಿದ ಸಾಯಿರಾ

Saira Banu: ಎ.ಆರ್‌.ರೆಹಮಾನ್‌ರಿಂದ ದೂರವಾದ ಬಗ್ಗೆ ಕೊನೆಗೂ ಮೌನ ಮುರಿದ ಸಾಯಿರಾ

19-uv-fusion

Garbage Disposal: ಕಸದ ಸೂಕ್ತ ವಿಲೇವಾರಿ ನಮ್ಮದೇ ಜವಾಬ್ದಾರಿ

1-abaz-matr-11

Maharashtra; ಇನ್‌ಸ್ಟಾದಲ್ಲಿ 56 ಲಕ್ಷ ಫಾಲೋವರ್ಸ್‌ ಇದ್ರು ಸಿಕ್ಕಿದ್ದು ಕೇವಲ 155 ಮತ!!


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

17-ckm

Kaduru: ಜೆಡಿಎಸ್ ಅಭ್ಯರ್ಥಿ ನಿಖಿಲ್ ಕುಮಾರಸ್ವಾಮಿಗೆ ರಕ್ತದಲ್ಲಿ ಪತ್ರ ಬರೆದ ಕಾರ್ಯಕರ್ತ

7-bus

Chikkamagaluru: ಸರ್ಕಾರಿ ಬಸ್-ಲಾರಿ ಮುಖಾಮುಖಿ ಡಿಕ್ಕಿ; ಹಲವರಿಗೆ ಗಾಯ

15-

Chikkamagaluru: ಆಕಸ್ಮಿಕ ಬೆಂಕಿ ತಗುಲಿ ಸಂಪೂರ್ಣ ಸುಟ್ಟು ಭಸ್ಮವಾದ ಗುಡಿಸಲು

1-dp

Datta peeta; ಸರಕಾರ ನೇಮಕ ಮಾಡಿದ್ದ ಅರ್ಚಕ ರಾಜೀನಾಮೆ

Kottigehara: ಅಪಘಾತದಿಂದ ಗಾಯಗೊಂಡ ನಾಗರಹಾವಿಗೆ ಚಿಕಿತ್ಸೆ

Kottigehara: ಅಪಘಾತದಿಂದ ಗಾಯಗೊಂಡ ನಾಗರಹಾವಿಗೆ ಚಿಕಿತ್ಸೆ

MUST WATCH

udayavani youtube

ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು

udayavani youtube

ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?

udayavani youtube

ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್‌ |

udayavani youtube

ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್

udayavani youtube

ಉಡುಪಿ ಶ್ರೀ ಕೃಷ್ಣ ಮಠದಲ್ಲಿ ಬೃಹತ್ ಗೀತೋತ್ಸವಕ್ಕೆ ಅದ್ದೂರಿ ಚಾಲನೆ|

ಹೊಸ ಸೇರ್ಪಡೆ

rishabh-pant

IPL Mega Auction: ಭರ್ಜರಿ ಬಿಡ್‌ ಗಳಿಸಿ ಅಯ್ಯರ್‌ ದಾಖಲೆ ಮುರಿದ ರಿಷಭ್‌ ಪಂತ್

11

IPL ‌Mega Auction: ಬಟ್ಲರ್‌ಗೆ ಬಲೆ ಬೀಸಿದ ಗುಜರಾತ್; ಸಿಕ್ಕ ಬೆಲೆ ಎಷ್ಟು?

Iyer

IPL ‌Mega Auction: ದಾಖಲೆ ಬೆಲೆ ಪಡೆದ ಶ್ರೇಯಸ್‌ ಅಯ್ಯರ್‌ ಪಂಜಾಬ್‌ ಪಾಲಿಗೆ

IPL Mega Auction: ಹರಾಜು ಆರಂಭ; ಭರ್ಜರಿ ಬಿಡ್‌ ಗಳಿಸಿದ ವೇಗಿ ಅರ್ಶದೀಪ್‌ ಸಿಂಗ್

IPL Mega Auction: ಹರಾಜು ಆರಂಭ; ಭರ್ಜರಿ ಬಿಡ್‌ ಗಳಿಸಿದ ವೇಗಿ ಅರ್ಶದೀಪ್‌ ಸಿಂಗ್

20-uv-fusion

UV Fusion: ಜೀವಂತಿಕೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.