ನಿರಾಶ್ರಿತರ ಕೇಂದ್ರದಲ್ಲಿ ಆರತಕ್ಷರತೆ – ಜನಮೆಚ್ಚುಗೆ
Team Udayavani, Jun 14, 2021, 10:44 PM IST
ಚಿಕ್ಕಮಗಳೂರು: ಕೋವಿಡ್ ನಿಯಂತ್ರಿಸಲು ಸರ್ಕಾರ ಜನಸಂಚಾರ, ವ್ಯಾಪಾರ- ವಹಿವಾಟಿಗೆ ನಿರ್ಬಂಧಗಳನ್ನು ವಿಧಿಸಿದ್ದು, ಭಿಕ್ಷುಕರು, ನಿರ್ಗತಿಕರಿಗೆ ನಗರದಲ್ಲಿ ನಿರಾಶ್ರಿತರ ಕೇಂದ್ರವನ್ನು ತೆರೆಯಲಾಗಿದೆ. ಕೇಂದ್ರ ಈಗ ಮದುವೆಯ ಆರಕ್ಷತೆಗೂ ಸಾಕ್ಷಿಯಾಗಿದೆ. ನಗರದ ಕ್ರಿಶ್ಚಿಯನ್ ಸಮುದಾಯದ ಜೆನೆಟ್ ಮತ್ತು ಸತ್ಯಕಾಂತ್ ಅವರು ಶನಿವಾರ ಬೆಥಲ್ ಚರ್ಚ್‌ನಲ್ಲಿ ವಿವಾಹವಾಗಿ ನೇರವಾಗಿ ನಗರದ ಕಲ್ಯಾಣ ನಗರದಲ್ಲಿ ಡಾ| ಬಿ.ಆರ್. ಅಂಬೇಡ್ಕರ್ ವಸತಿ ಶಾಲೆಯಲ್ಲಿ ಜಿಲ್ಲಾಡಳಿತ ನೆರವಿನೊಂದಿಗೆ ಮಲೆನಾಡು ಕ್ರೈಸ್ತ್ರ ಅಭಿವೃದ್ಧಿ ಸಂಘದಿಂದ ತೆರೆಯಲಾಗಿರುವ ನಿರಾಶ್ರಿತರ ಕೇಂದ್ರಕ್ಕೆ ತೆರಳಿ ನಿರಾಶ್ರಿತರ ಸಮ್ಮುಖದಲ್ಲಿ ಆರಕ್ಷತೆಯನ್ನು ಕಾರ್ಯಕ್ರಮವನ್ನು ಆಚರಿಸಿಕೊಂಡರು.
ಚಿಕ್ಕಮಗಳೂರು ನಗರದ ಕಲ್ಯಾಣ ನಗರದ ಜೆನೆಟ್ ಖಾಸಗಿ ಶಾಲೆಯೊಂದರಲ್ಲಿ ಕೆಲಸ ನಿರ್ವಹಿಸುತ್ತಿದ್ದು, ಇವರ ವಿವಾಹ ಬೆಂಗಳೂರಿನಲ್ಲಿ ಸಾಫ್ಟ್‌ವೇರ್ ಕಂಪನಿ ಉದ್ಯೋಗಿಯಾಗಿರುವ ತಮಕೂರು ಜಿಲ್ಲೆಯ ದೇವನೂರು ಮೂಲದ ಸತ್ಯಕಾಂತ್ ಅವರ ಜೊತೆ ಕಳೆದ ವರ್ಷ ವಿವಾಹ ನಿಶ್ಚಯಗೊಂಡಿತ್ತು. ಮದುವೆ ನಿಶ್ಚಯಗೊಂಡ ನಂತರ ದಿನಗಳಲ್ಲಿ ಕೋವಿಡ್ ಮೊದಲ ಅಲೆ ಅಪ್ಪಳಿಸಿದ್ದು, ಕೋವಿಡ್ ಮೊದಲ ಅಲೆ ನಿಯಂತ್ರಿಸಲು ಸರ್ಕಾರ ದೇಶಾದ್ಯಂತ ಸಂಪೂರ್ಣ ಲಾಕ್‌ಡೌನ್ ವಿಧಿಸಿತ್ತು. ಈ ಹಿನ್ನೆಲೆಯಲ್ಲಿ ನಿಗ ದಿಯಾಗಿದ್ದ ವಿವಾಹ ಮಹೋತ್ಸವನ್ನು ಮುಂದಕ್ಕೆ ಹಾಕಲಾಗಿತ್ತು. ಹಾಗೇ 2021ರ ಜೂ.12ರಂದು ಅವರ ವಿವಾಹ ಮಹೋತ್ಸವವನ್ನು ನೆರ ವೇರಿಸಲು ಗುರು ಹಿರಿಯರು ನಿಶ್ಚಯಿಸಿದ್ದರು.
ಈ ಬಾರಿಯೂ ಕೋವಿಡ್ 2ನೇ ಅಲೆಯಿಂದ ಸರ್ಕಾರ ಸರಳವಾಗಿ 10 ಜನರ ಸಮ್ಮುಖದಲ್ಲಿ ವಿವಾಹ ಕಾರ್ಯಕ್ರಮಕ್ಕೆ ಅವಕಾಶ ಮಾಡಿ ಕೊಟ್ಟಿದೆ. ಇನ್ನೂ ಹೆಚ್ಚು ದಿನಗಳ ಕಾಲ ವಿವಾಹ ಮಹೋತ್ಸವವನ್ನು ಮುಂದಕ್ಕೆ ಹಾಕುವುದು ಸರಿಯಲ್ಲವೆಂದು ನಿರ್ಧರಿಸಿದ ಎರಡು ಕುಟುಂಬಗಳ ಹಿರಿಯರು ಈ ಹಿಂದೇ ನಿಗ ಪಡಿಸಿದ ಜೂ.12ರಂದು ನಗರದ ಬೆಥಲ್ ಚರ್ಚ್‌ನಲ್ಲಿ ಎರಡು ಕುಟುಂಬದ 10ಜನರ ಸಮ್ಮುಖದಲ್ಲಿ ಸರಳವಾಗಿ ವಿವಾಹ ಮಹೋತ್ಸವನ್ನು ನೆರವೇರಿಸಿದ್ದಾರೆ.
ಮದುವೆ ಕಾರ್ಯ ಮುಗಿಯುತ್ತಿದ್ದಂತೆ ನಿರಾಶ್ರಿತರ ಕೇಂದ್ರಕ್ಕೆ ತೆರಳಿ ನವಜೋಡಿ ಕೇಂದ್ರದಲ್ಲಿ ಆಶ್ರಯ ಪಡೆದುಕೊಂಡವರ ಸಮ್ಮುಖದಲ್ಲಿ ಕೇಕ್ ಕತ್ತರಿಸಿ ನಿರಾಶ್ರಿತರಿಗೆ ಊಟ ಬಡಿಸುವ ಮೂಲಕ ಆರಕ್ಷತೆಯನ್ನು ಆಚರಿಸಿಕೊಂಡಿದ್ದು, ಇವರ ಈ ಕಾರ್ಯಕ್ಕೆ ಜನಮೆಚ್ಚುಗೆಯೂ ವ್ಯಕ್ತ ವಾಗಿದೆ.
ಈ ಮುಂಚಿತವಾಗಿ ಮದುವೆ ಕಾರ್ಯಕ್ರಮದ ಬಳಿಕ ನಿರಾಶ್ರಿತರ ಕೇಂದ್ರದಲ್ಲಿ ಆರಕ್ಷತೆ ಕಾರ್ಯಕ್ರಮ ಆಯೋಜಿಸಲು ಎರಡು ಕುಟುಂಬಗಳ ಹಿರಿಯರು ನಿರ್ಧರಿಸಿದ್ದರು. ಅದರಂತೆ ಎಲ್ಲಾ ವ್ಯವಸ್ಥೆಯನ್ನು ಮಾಡಲಾಗಿತ್ತು. ಅಲ್ಲಿ ಸರಳವಾಗಿ ಆರಕ್ಷತೆ ಕಾರ್ಯಕ್ರಮವನ್ನು ಆಚರಿಸಿಕೊಳ್ಳುವ ಮೂಲಕ ಜಿಲ್ಲೆಯಲ್ಲೇ ಇದೇ ಮೊದಲ ಬಾರಿಗೆ ನಿರಾಶ್ರಿತರ ಕೇಂದ್ರದಲ್ಲಿ ನಿರಾಶ್ರಿತರ ಸಮ್ಮುಖದಲ್ಲಿ ವಧು-ವರ ತಮ್ಮ ನೂತನ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.