ಕೇಂದ್ರದಿಂದ ರೈತ- ಜನ ವಿರೋಧಿ ಬಜೆಟ್
ಜೈ ಜವಾನ್, ಜೈ ಕಿಸಾನ್ ಬದಲಾಗಿ "ಮಾರೋ ಕಿಸಾನ್ ಮಾರೋ ಜವಾನ್': ಎಐಸಿಸಿ ಕಾರ್ಯದರ್ಶಿ ಸಂದೀಪ್ ಆರೋಪ
Team Udayavani, Feb 3, 2021, 2:55 PM IST
ಚಿಕ್ಕಮಗಳೂರು: ಕೇಂದ್ರ ಸರ್ಕಾರಸೋಮವಾರ ಮಂಡಿಸಿರುವ ಬಜೆಟ್‌ರೈತರು ಮತ್ತು ಜನಸಾಮಾನ್ಯರ ವಿರೋಧಿ ಬಜೆಟ್ ಆಗಿದೆ ಎಂದು ಎಐಸಿಸಿಕಾರ್ಯದರ್ಶಿ ಬಿ.ಎಂ. ಸಂದೀಪ್‌ಆರೋಪಿಸಿದರು.
ಮಂಗಳವಾರ ನಗರದಲ್ಲಿಸುದ್ದಿಗೋಷ್ಠಿಯಲ್ಲಿ ಮಾತನಾಡಿದಅವರು, ಈ ಬಜೆಟ್‌ನಲ್ಲಿ ಯಾವುದೇಮುಂದಾಲೋಚನೆ ಇಲ್ಲ. ರೈತರು, ಸೈನಿಕರು,
ನಿರುದ್ಯೋಗಿ, ಜನಸಾಮಾನ್ಯರ ವಿರೋಧಿಯಾಗಿದ್ದು, ಬಂಡಾವಳಶಾಹಿಗಳಿಗೆಗುತ್ತಿಗೆ ನೀಡಿದಂತಿದೆ. ದೇಶವನ್ನುಸರ್ವೋದಯ ಬದಲಾಗಿಅಂತ್ಯೋದಯದೆಡೆಗೆ ಕೊಂಡೊಯ್ಯವಬಜೆಟ್ ಆಗಿದೆ ಎಂದರು.
ಮುಂಬರುವ ಚುನಾವಣೆಯನ್ನುಗುರಿಯಿರಿಸಿಕೊಂಡು ಕೆಲವು ರಾಜ್ಯಗಳಿಗೆಅನುದಾನ ನೀಡಲಾಗಿದೆ. ಗ್ಯಾಸ್,ಪೆಟ್ರೋಲ್, ಡೀಸೆಲ್ ಸೇರಿದಂತೆ ತೈಲಬೆಲೆ ಏರಿಕೆಯಾಗಿದೆ. ಕೃಷಿ ವಿರೋಧಿ ಕಾಯ್ದೆಗಳ ಬಗ್ಗೆ ಪ್ರಸ್ತಾಪಿಸಿಲ್ಲ. ಇದೊಂದು”ಜೈ ಜವಾನ್, ಜೈ ಕಿಸಾನ್’ ಬದಲಾಗಿ”ಮಾರೋ ಕಿಸಾನ್ ಮಾರೋ ಜವಾನ್’ಎನ್ನುವಂತಿದೆ ಎದು ಟೀಕಿಸಿದರು.
ದೇಶದ ಗಡಿಯೊಳಗೆ ಚೀನಾಹಳ್ಳಿ ನಿರ್ಮಾಣವಾಗುತ್ತಿದೆ. ದೇಶದಸೈನಿಕರಿಗೆ ಮತ್ತಷ್ಟು ಶಕ್ತಿ ತುಂಬುವಕೆಲಸ ಮಾಡಿಲ್ಲ. ರಕ್ಷಣಾ ವ್ಯವಸ್ಥೆಯನ್ನುಸಂಪೂರ್ಣವಾಗಿ ಕಡೆಗಣಿಸಲಾಗಿದೆ.ಕೃಷಿ ವಲಯಕ್ಕೆ ತೆರಿಗೆ ವಿ ಧಿಸಿರುವುದರಜೊತೆಗೆ ಶೇ.6ರಷ್ಟು ಅನುದಾನ ಕಡಿತ,ಪಿಎಂ ಕಿಸಾನ್ ಸಮ್ಮಾನ್ ಯೋಜನೆಯಡಿಶೇ.13ರಷ್ಟು ಕಡಿತ ಮಾಡಲಾಗಿದೆ.ಕೃಷಿ ವಲಯದ ಸಹಾಯಧನದ ಬಗ್ಗೆಪ್ರಸ್ತಾಪ ಮಾಡದಿರುವುದು ಬಜೆಟ್‌ಬಂಡವಾಳಶಾಹಿ ಪರ ಎಂಬುದುಸ್ಪಷ್ಟವಾಗಿ ಗೋಚರವಾಗಿದೆ ಎಂದರು.
ಜಿಲ್ಲೆಯಲ್ಲಿ ಅಕಾಲಿಕ ಮಳೆಯಿಂದಾಗಿಕಾಫಿ ಅಡಕೆ, ಭತ್ತ, ಮೆಣಸು ಸಹಿತ ಅಪಾರಪ್ರಮಾಣದಲ್ಲಿ ಬೆಳೆ ಹಾನಿಯಾಗಿದ್ದುಬೆಳೆಗಾರರು ಸಂಕಷ್ಟ ಎದುರಿಸುತ್ತಿದ್ದಾರೆ.ಅ ಧಿಕ ಪ್ರಮಾಣದ ವಿದೇಶಿ ವಿನಿಮಯತಂದು ಕೊಡುವ ಕಾಫಿ ಉದ್ಯಮವನ್ನುನಾಶ ಮಾಡಲು ಕೇಂದ್ರ ಮುಂದಾಗಿದೆ.ಜಿಲ್ಲೆಯ ಸಂಸದರು, ಶಾಸಕರುಸಮಸ್ಯೆಯನ್ನು ಕೇಂದ್ರದಲ್ಲಿ ಚರ್ಚಿಸಿವಿಶೇಷ ಪ್ಯಾಕೇಜ್ ಘೋಷಣೆ ಯಾಕೆತರಲಿಲ್ಲ ಎಂದು ಪ್ರಶ್ನಿಸಿದರು.
ಬ್ಯಾಂಕ್, ರೈಲ್ವೆ, ಸೇರಿದಂತೆ ವಿವಿಧಸರ್ಕಾರಿ ಸ್ವಾಮ್ಯದ ಇಲಾಖೆಗಳನ್ನುಖಾಸಗಿಯವರಿಗೆ ಅಡವಿಡುವ ಕೆಲಸಕ್ಕೆಕೇಂದ್ರ ಮುಂದಾಗಿದೆ. ನಿರುದ್ಯೋಗಸಮಸ್ಯೆಯಿಂದಾಗಿ ಯುವಜನತೆಬೇಸತ್ತಿದ್ದಾರೆ. ಸಣ್ಣ ಉದ್ದಿಮೆದಾರರುಆತ್ಮಹತ್ಯೆ ಮಾಡಿಕೊಳ್ಳುವ ಹಂತಕ್ಕೆತಲುಪಿದ್ದಾರೆ. ನರೇಂದ್ರ ಮೋದಿಸರ್ಕಾರ ಈ ಹಿಂದೆ ಪ್ರಣಾಳಿಕೆಯಲ್ಲಿಘೋಷಿಸಿದ ಯಾವುದೇ ಯೋಜನೆಗಳುಸಮರ್ಪಕವಾಗಿ ಅನುಷ್ಠಾನಗೊಂಡಿಲ್ಲ.ಎಲ್ಲವೂ ಖಾಸಗಿ ಬಂಡವಾಳದಾರರಪರವಾಗಿ ಬಜೆಟ್ ಮಂಡಿಸಲಾಗಿದೆಎಂದರು.
ಸುದ್ದಿಗೋಷ್ಠಿಯಲ್ಲಿ ಜಿಲ್ಲಾಕಾಂಗ್ರೆಸ್ ವಕ್ತಾರರಾದ ರೂಬೆನ್ ಮೊಸಸ್,ಹಿರೇಮಗಳೂರು ಪುಟ್ಟಸ್ವಾಮಿ, ಜಿಲ್ಲಾಅಸಂಘಟಿತ ಕಾರ್ಮಿಕರ ಸಂಘದ ಅಧ್ಯಕ್ಷರಸೂಲ್‌ಖಾನ್, ಬ್ಲಾಕ್ ಕಾಂಗ್ರೆಸ್ ಸಮಿತಿಕಾರ್ಯದರ್ಶಿ ತನೋಜ್‌ಕುಮಾರ್,ಎಸ್‌ಸಿ, ಎಸ್‌ಟಿ ಘಟಕದ ಹೊನ್ನೇಶಇದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Suspended: ಕರ್ತವ್ಯಲೋಪ… ಚಿಕ್ಕಮಗಳೂರು ನಗರ ಪೊಲೀಸ್ ಠಾಣೆ ಇನ್ಸ್ ಪೆಕ್ಟರ್ ಅಮಾನತು
Chikkamagaluru: 92 ರ ಹರೆಯದಲ್ಲಿ ಬೀದಿಗೆ ಬಿದ್ದ ಜಿಲ್ಲಾ ಬಿಜೆಪಿ ಭೀಷ್ಮ ವಿಟ್ಠಲ ಆಚಾರ್ಯ
ಒಕ್ಕಲಿಗ ಸಂಘದ ಕಾರ್ಯಕ್ರಮದಲ್ಲಿ ಕೆ.ಜೆ.ಜಾರ್ಜ್ ಭಾಷಣಕ್ಕೆ ಆಕ್ಷೇಪ: ಕ್ಷಮೆಯಾಚಿಸಿದ ಸಚಿವರು
Waqf; ದಾನದ ಆಸ್ತಿ ಬೇರೆ, ಕಂಡವರ ಆಸ್ತಿ ವಕ್ಫ್ ಬೋರ್ಡ್ ಗೆ ಬರೆಯುವುದು ಬೇರೆ: ಸಿ.ಟಿ ರವಿ
Kaduru: ಜೆಡಿಎಸ್ ಅಭ್ಯರ್ಥಿ ನಿಖಿಲ್ ಕುಮಾರಸ್ವಾಮಿಗೆ ರಕ್ತದಲ್ಲಿ ಪತ್ರ ಬರೆದ ಕಾರ್ಯಕರ್ತ
MUST WATCH
ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಹೊಸ ಸೇರ್ಪಡೆ
Cyber Fraud Case: ದಾಳಿ ನಡೆಸಲು ಹೋದ ಇಡಿ ಅಧಿಕಾರಿಗಳ ಮೇಲೆಯೇ ತಂಡದಿಂದ ಹಲ್ಲೆ
Rashmika Mandanna; ಪುಷ್ಟ-3 ಸುಳಿವು ನೀಡಿದ ನಟಿ ರಶ್ಮಿಕಾ ಮಂದಣ್ಣ
Deepika Das: ನಟಿ ದೀಪಿಕಾ ದಾಸ್ ಕುಟುಂಬಕ್ಕೆ ಬೆದರಿಕೆ ಕರೆ; ಯುವಕನ ವಿರುದ್ಧ ದೂರು
Pakistan: ಇಮ್ರಾನ್ ಬಿಡುಗಡೆಗೆ ಬೆಂಬಲಿಗರ ಪ್ರತಿಭಟನೆ: ಹಿಂಸಾಚಾರ, ಸಾವಿರಾರು ಜನರ ಬಂಧನ
Madikeri: ಲಾರಿ ಡಿಕ್ಕಿಯಾಗಿ ರಸ್ತೆ ಬದಿ ನಡೆದುಕೊಂಡು ಹೋಗುತ್ತಿದ್ದ ಬಾಲಕಿ ಸಾವು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.