ಗೋಸುಂಬೆ ರಾಜಕಾರಣದಿಂದ ಕಾಂಗ್ರೆಸ್‌ಗೆ ಹೀನಾಯ ಸ್ಥಿತಿ : ರವಿ
Team Udayavani, Jul 18, 2021, 9:28 PM IST
ಚಿಕ್ಕಮಗಳೂರು: ಲಸಿಕಾ ರಾಜಕಾರಣದಂತ ಗೋಸುಂಬೆ ರಾಜಕಾರಣದಿಂದ ಕಾಂಗ್ರೆಸ್ ಇಂದು ಹೀನಾಯ ಸ್ಥಿತಿಗೆ ತಲುಪಿದೆ ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ, ಶಾಸಕ ಸಿ.ಟಿ.ರವಿ ಕಾಂಗ್ರೆಸ್ ವಿರುದ್ಧ ಹರಿಹಾಯ್ದರು.
ನಗರದಲ್ಲಿ ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಲಸಿಕೆ ಪಡೆದುಕೊಂಡರೆ ಮಕ್ಕಳಾಗುವುದಿಲ್ಲ ಎಂದು ಅಪಪ್ರಚಾರ ನಡೆಸಿದವರೂ ಇವರೇ. ಸಿದ್ಧರಾಮಯ್ಯ ಏನೆಂದು ಹೇಳಿದರು. ಡಿ.ಕೆ. ಶಿವಕುಮಾರ್ ಏನಂತ ಟ್ವೀಟ್ ಮಾಡಿದರು. ಜಾರ್ಖಂಡ್ ಆರೋಗ್ಯ ಸಚಿವರ ಹೇಳಿಕೆ ಇವನ್ನೆಲ್ಲ ನೆನಪು ಮಾಡಬೇಕಾ ಎಂದು ತಿರುಗೇಟು ನೀಡಿದರು.
ಕಾಂಗ್ರೆಸ್‌ನವರ ಎಡಬಿಡಂಗಿತನ ಅರಿತಿದ್ದ ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಎಲ್ಲರಿಗೂ ಉಚಿತ ಲಸಿಕೆ ಘೋಷಣೆ ಮಾಡಿದರು. ಈ ಕ್ರೆಡಿಟ್ ಪ್ರಧಾನಿಗೆ, ಬಿಜೆಪಿಗೆ ಹೋಗಬಹುದು ಎಂದು ಸುಪ್ರೀಂಕೋರ್ಟ್ ಕಡೆ ಬೊಟ್ಟು ಮಾಡಿದರು. ಕಾಂಗ್ರೆಸ್‌ನವರಿಗೆ ದೂರಲು ಮೋದಿ ಬೇಕು. ಒಳ್ಳೆಯದಕ್ಕೆ ಮೋದಿ ಬೇಡ ಎಂದರು.
ವಿಪಕ್ಷದಲ್ಲಿನ ಮುಖ್ಯಮಂತ್ರಿ ಸ್ಥಾನ ಪೈಪೋಟಿ ಕುರಿತು ಪ್ರತಿಕ್ರಿಯಿಸಿದ ಅವರು, ಅಧಿ ಕಾರದಲ್ಲಿರುವ ಪಕ್ಷದಲ್ಲಿ ಮುಖ್ಯಮಂತ್ರಿ ಸ್ಥಾನದ ಪೈಪೋಟಿ ಸಹಜ. ಎಲ್ಲಾ ಚುನಾವಣೆಗಳಲ್ಲಿ ಸೋತರೂ ಕಾಂಗ್ರೆಸ್‌ನಲ್ಲಿ ಹಲವರು ಇನ್ನೂ ಮುಖ್ಯಮಂತ್ರಿ ಸ್ಥಾನದ ಕನಸು ಕಾಣುತ್ತಿದ್ದಾರೆ. ಇದು ತಿರುಕನ ಕನಸು ಎಂದು ಹೇಳಬೇಕೋ, ಹೊಸ ಪದ ಹುಟ್ಟು ಹಾಕಬೇಕೋ ಗೊತ್ತಾಗುತ್ತಿಲ್ಲ ಎಂದು ವ್ಯಂಗ್ಯವಾಡಿದರು.
ಉತ್ತರಪ್ರದೇಶ ಹಾಗೂ ಅಸ್ಸಾಂನಲ್ಲಿ ಜನಸಂಖ್ಯಾ ನಿಯಂತ್ರಣ ಕಾಯ್ದೆ ತರುವ ಕುರಿತು ಚರ್ಚೆ ನಡೆಯುತ್ತಿದೆ. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಜನಾಭಿಪ್ರಾಯ ರೂಪಿಸಬೇಕು. ಕಾಯ್ದೆ ಪರ ಜನಾಭಿಪ್ರಾಯ ಇದ್ದರೆ ರಾಜ್ಯದಲ್ಲೂ ಕಾಯ್ದೆ ಜಾರಿಗೆ ತರಲಿ. ಒತ್ತಾಯಪೂರ್ವಕವಾಗಿ ತರಲು ಇದು ತುರ್ತು ಪರಿಸ್ಥಿತಿಯಲ್ಲ ಎಂದು ಹೇಳಿದರು. ನಾವು ಸಂವಿಧಾನದ ಮೇಲೆ ನಂಬಿಕೆ ಇಟ್ಟಿದ್ದೇವೆ. ಬಂದೂಕಿನ ಮೊನೆಯಲ್ಲಿ ಬೆದರಿಸೋಕೆ ನಾವು ನಕ್ಸಲರಲ್ಲ, ನಾವು ಬ್ಯಾಲೆಟ್ ಪೇಪರ್ ಮೇಲೆ ನಂಬಿಕೆ ಇಟ್ಟಿದ್ದೇವೆ. ರಾಜ್ಯದಲ್ಲಿ ಜನಸಂಖ್ಯೆ ಏಳು ಕೋಟಿ ದಾಟಿದೆ. ದೇಶದಲ್ಲಿ 140 ಕೋಟಿ ದಾಟಿದೆ. ದೇಶ ಮತ್ತು ರಾಜ್ಯದ ಹಿತದೃಷ್ಟಿಯಿಂದ ಜನಾಭಿಪ್ರಾಯ ರೂಪುಗೊಂಡರೆ ಕಾಯ್ದೆ ಜಾರಿಗೆ ತರಲಿ ಎಂದರು.
ತುರ್ತು ಪರಿಸ್ಥಿತಿ ಅವ ಧಿಯಲ್ಲಿ ಇಂದಿರಾ ಗಾಂಧಿ , ಇಂದಿರಾ ಬ್ರಿಗೇಡ್ ಹೆಸರಿನಲ್ಲಿ ನಸ್ ಬಂದಿ ಕಾರ್ಯಕ್ರಮ ಮಾಡಿದರು. ಆಗ ಸಿದ್ಧರಾಮಯ್ಯ ಅವರು ಕಾಂಗ್ರೆಸ್ ಹಾಗೂ ಇಂದಿರಾ ಗಾಂಧಿ ವಿರುದ್ಧ ಮಾತನಾಡುತ್ತಿದ್ದರು. ಡಿ.ಕೆ.ಶಿವಕುಮಾರ್ ಯುವ ಕಾಂಗ್ರೆಸ್‌ನಲ್ಲಿದ್ದರು.
ಯುವ ಕಾಂಗ್ರೆಸ್‌ನವರು ನಸ್‌ಬಂದಿ ಮಾಡಿಸಿದ್ರೇ ಹುದ್ದೆ ಸಿಗುತ್ತಿತ್ತು. ಆಗ ಡಿ.ಕೆ. ಶಿವಕುಮಾರ್ ಎಷ್ಟು ನಸ್‌ಬಂದಿ ಮಾಡಿಸಿದ್ರು ಎಂದು ಕೇಳಬೇಕು. ಆಗ ಸಿ.ಟಿ. ರವಿ ಹೇಳುತ್ತಿರುವುದು ಸರಿಯೋ ತಪ್ಪೋ ಗೊತ್ತಾಗುತ್ತದೆ ಎಂದ ಅವರು, ಒತ್ತಾಯಪೂರ್ವಕವಾಗಿ ಹೇಳುತ್ತಿಲ್ಲ. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಚರ್ಚೆಯಾಗಲಿ ಎಂದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Chikkamagaluru: ಮದುವೆ ಹಾಲ್ ನಲ್ಲೇ ವಧುವಿನ ಚಿನ್ನ ಎಗರಿಸಿದ ಖದೀಮರು…
Chikkamagaluru: ಕೇರಳದಿಂದ “ಸುರಕ್ಷಿತ’ ಮಲೆನಾಡಿನತ್ತ “ನಕ್ಸಲರು’?
Naxalite: ಮಲೆನಾಡಿಗೆ ನಕ್ಸಲರ ಭೇಟಿ ದೃಢ; 3 ಬಂದೂಕು-ಮದ್ದುಗುಂಡು ವಶ
ಚಿಕಿತ್ಸೆಗೆಂದು ಬಂದಿದ್ದ ರೋಗಿ ಸಾವು; ವೈದ್ಯರ ನಿರ್ಲಕ್ಷ್ಯವೇ ಕಾರಣ ಎಂದು ಕುಟುಂಬಸ್ಥರ ಆರೋಪ
Chikkamagaluru: ಮನೆಯೊಂದರಲ್ಲಿ ಬಂದೂಕು ಪತ್ತೆ; ನಕ್ಸಲ್ ಓಡಾಟ ಶಂಕೆ
MUST WATCH
ಹೊಸ ಸೇರ್ಪಡೆ
Bangladesh: ಶೇ.90ರಷ್ಟಿ ಮುಸ್ಲಿಮರು ಇರುವ ಬಾಂಗ್ಲಾದೇಶ ಶೀಘ್ರ ಇಸ್ಲಾಮಿಕ್ ರಾಷ್ಟ್ರ?
India-South Africa; ನಾಲ್ಕನೇ ಟಿ20 ಪಂದ್ಯ ಇಂದು: ಸರಣಿ ಗೆಲುವಿನ ನಿರೀಕ್ಷೆಯಲ್ಲಿ ಭಾರತ
Marriage: ಕ್ರಿಸ್ಮಸ್‌ಗೆ ಅಮೆಜಾನ್ ಸಿಇಒ ಅದ್ಧೂರಿ ವಿವಾಹ?
Washington: ಅಮೆರಿಕ ಗುಪ್ತಚರ ಸಂಸ್ಥೆಗೆ ತುಳಸಿ ಗಬಾರ್ಡ್ ಮುಖ್ಯಸ್ಥೆ
Daily Horoscope: ಉದ್ಯೋಗಾಸಕ್ತರಿಗೆ ಹೊಸ ಅವಕಾಶಗಳು ಗೋಚರ, ಸ್ವರ್ಣೋದ್ಯಮಕ್ಕೆ ಲಾಭ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.