ಬೀದಿಬದಿ ವ್ಯಾಪಾರಿಗಳ ಎತ್ತಂಗಡಿ ಸರಿಯಲ್ಲ
ಬಾಳೆಹೊನ್ನೂರು
Team Udayavani, Feb 7, 2021, 5:33 PM IST
ಬಾಳೆಹೊನ್ನೂರು: ಪಟ್ಟಣದಲ್ಲಿ ಇತ್ತೀಚಿಗೆ ಮಾಡಿರುವ ಪಾರ್ಕಿಂಗ್ ವ್ಯವಸ್ಥೆ ನಿಜಕ್ಕೂ ಅವೈಜ್ಞಾನಿಕ ಮತ್ತು ನಗರದ ಬೆಳವಣಿಗೆ ಹಾಗೂ ಸಾರ್ವಜನಿಕರಿಗೆ ಅನುಪಯುಕ್ತವಾಗಿದ್ದು ಸ್ಥಳೀಯ ಸಣ್ಣ ಬೀದಿ ವ್ಯಾಪಾರಿಗಳನ್ನು ಎತ್ತಂಗಡಿ ಮಾಡಿರುವುದು ನಿಜಕ್ಕೂ ಅಕ್ಷಮ್ಯವಾಗಿದೆ ಎಂದು ಬಿ.ಕಣಬೂರು ಗ್ರಾಪಂ ಸದಸ್ಯ ಜಗದೀಶ್ಚಂದ್ರ ತಿಳಿಸಿದ್ದಾರೆ.
ಈ ಕುರಿತು ಪತ್ರಿಕಾ ಹೇಳಿಕೆ ನೀಡಿ ಮಾತನಾಡಿದ ಅವರು, ಬಾಳೆಹೊನ್ನೂರು ನಗರದ ಶ್ರೀ ರಂಭಾಪುರಿ ಮಠ ಕಾಂಪ್ಲೆಂಕ್ಸ್ ಎದುರಲ್ಲಿ ನಾಲ್ಕು ಚಕ್ರಗಳ ವಾಹನ ನಿಲುಗಡೆ ತೆಗೆದಿರುವುದು ಸರಿಯಲ್ಲ. ಈ ಕಾಂಪ್ಲೆಕ್ಸ್‌ನಲ್ಲಿ ಎರಡು ಪ್ರತಿಷ್ಠಿತ ಬ್ಯಾಂಕ್ ಗಳಿದ್ದು ಬ್ಯಾಂಕ್‌ನಲ್ಲಿ ನಿತ್ಯ ಕಾಫಿ ಎಸ್ಟೇಟ್ ಮಾಲೀಕರು ಕೋಟ್ಯಂತರ ರೂ.ಗಳ ವ್ಯವಹಾರ ನಡೆಸುತ್ತಾರೆ. ಬ್ಯಾಂಕ್ ಎದುರಲ್ಲಿ ಪಾರ್ಕಿಂಗ್ ಇರದೇ 100 ಮೀ.ದೂರದಲ್ಲಿ
ವಾಹನ ನಿಲ್ಲಿಸಿ ಹಣ ಸಾಗಾಟ ಮಾಡುವಾಗ ಏನಾದರೂ ಹೆಚ್ಚು ಕಡಿಮೆ ಆಗಿ ಕಳ್ಳತನದಂತಹ ಪ್ರಕರಣ ನಡೆಯುವ ಮುನ್ನವೇ ಪೊಲೀಸ್ ಇಲಾಖೆ ಎಚ್ಚೆತ್ತು ಇಲ್ಲಿ ಪಾರ್ಕಿಂಗ್‌ಗೆ ಅವಕಾಶ ಕಲ್ಪಿಸಬೇಕು. ಅಪಘಾತವಾಗುತ್ತದೆ ಎಂಬ ಕಾರಣ ಕೊಡುವುದಿದ್ದರೆ ಬಾಳೆಹೊನ್ನೂರು ಮುಖ್ಯರಸ್ತೆಯಲ್ಲಿ ಸಂಚಾರಕ್ಕೆ ವೇಗಮಿತಿ ಅಳವಡಿಸಲಿ ಅಥವಾ ಹಂಪ್ ಗಳನ್ನು ನಿರ್ಮಿಸಲಿ. ಅಲ್ಲದೆ ಈ ಕಾಂಪ್ಲೆಕ್ಸ್‌ನ ಅಕ್ಕಪಕ್ಕದಲ್ಲಿ
ಇನ್ನೂ ಸಹ ರಸ್ತೆ ಅಗಲೀಕರಣದ ಕೆಲಸ ನಡೆದಿಲ್ಲ. ಈ ಕೆಲಸ ನಡೆಯದೆಯೇ ಈಗಲೇ ಇಲ್ಲಿ ನೋ ಪಾರ್ಕಿಂಗ್ ಬೋರ್ಡ್ ಹಾಕಿರುವುದು ನಿಜಕ್ಕೂ ಅವೈಜ್ಞಾನಿಕ. ಊರಿನ ಬಗ್ಗೆ ಕಾಳಜಿ ಇರುವುದಾದಲ್ಲಿ ಮೊದಲು ರಸ್ತೆ ಅಗಲೀಕರಣಕ್ಕೆ ತೊಡಕಾಗಿರುವ ಕಟ್ಟಡಗಳನ್ನು ತೆಗೆಯಲಿ. ಅದು ಬಿಟ್ಟು ಈ ರೀತಿ ಸಾರ್ವಜನಿಕರಿಗೆ ತೊಂದರೆ ನೀಡುವುದು ಸರಿಯಲ್ಲ ಎಂದು ತಿಳಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Chikkamagaluru: ಮದುವೆ ಹಾಲ್ ನಲ್ಲೇ ವಧುವಿನ ಚಿನ್ನ ಎಗರಿಸಿದ ಖದೀಮರು…
Chikkamagaluru: ಕೇರಳದಿಂದ “ಸುರಕ್ಷಿತ’ ಮಲೆನಾಡಿನತ್ತ “ನಕ್ಸಲರು’?
Naxalite: ಮಲೆನಾಡಿಗೆ ನಕ್ಸಲರ ಭೇಟಿ ದೃಢ; 3 ಬಂದೂಕು-ಮದ್ದುಗುಂಡು ವಶ
ಚಿಕಿತ್ಸೆಗೆಂದು ಬಂದಿದ್ದ ರೋಗಿ ಸಾವು; ವೈದ್ಯರ ನಿರ್ಲಕ್ಷ್ಯವೇ ಕಾರಣ ಎಂದು ಕುಟುಂಬಸ್ಥರ ಆರೋಪ
Chikkamagaluru: ಮನೆಯೊಂದರಲ್ಲಿ ಬಂದೂಕು ಪತ್ತೆ; ನಕ್ಸಲ್ ಓಡಾಟ ಶಂಕೆ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.