ಗಣತಿಯಲ್ಲಿ “ಬ್ರಾಹ್ಮಣ’ ನಮೂದಿಸಲು ಹಿಂಜರಿಕೆ ಬೇಡ
ನಾಟಕ ಅಕಾಡೆಮಿ ಪ್ರಶಸ್ತಿ ಪುರಸ್ಕೃತ ಬಿ.ಎಲ್. ರವಿಕುಮಾರ್ ಅವರನ್ನು ಅಭಿನಂದಿಸಲಾಯಿತು.
Team Udayavani, Feb 7, 2021, 5:41 PM IST
ಶೃಂಗೇರಿ: ಜನಗಣತಿ ಸಂದರ್ಭದಲ್ಲಿ ಬ್ರಾಹ್ಮಣ ವರ್ಗದವರು ಬ್ರಾಹ್ಮಣ ಎಂದು ನಮೂದಿಸಲು ಯಾವುದೇ ಹಿಂಜರಿಕೆ ಬೇಡ ಎಂದು ರಾಜ್ಯ ಬ್ರಾಹ್ಮಣ ಅಭಿವೃದ್ಧಿ ಮಂಡಳಿ ಅಧ್ಯಕ್ಷ ಸಚ್ಚಿದಾನಂದಮೂರ್ತಿ ಹೇಳಿದರು.
ಪಟ್ಟಣದ ರಾಜಾನಗರದ ಶ್ರೀ ವಿದ್ಯಾಭಾರತೀ ಭವನದಲ್ಲಿ ತಾಲೂಕು ಬ್ರಾಹ್ಮಣ ಮಹಾಸಭೆಯಿಂದ ಶನಿವಾರ ಏರ್ಪಡಿಸಿದ್ದ ಲಕ್ಷ ಗಾಯತ್ರಿ ಹೋಮದ ನಂತರ ಅವರು ಮಾತನಾಡಿದರು. ಗಣತಿಯಲ್ಲಿ ಉಪ ಪಂಗಡಗಳ ಬಗ್ಗೆ ನಮೂದಿಸದೆ ಬ್ರಾಹ್ಮಣ ಎಂದು ನಮೂದಿಸಬೇಕು. ಗ್ರಾಮ ಗ್ರಾಮದಲ್ಲಿ ಬ್ರಾಹ್ಮಣ ಸಮಾಜ ಸಂಘಟನೆ ಮಾಡಿ,ಒಗ್ಗಟ್ಟು ಕಾಪಾಡಿಕೊಳ್ಳಬೇಕು. ಮಂಡಳಿಯಿಂದ ಆರ್ಥಿಕವಾಗಿ ಹಿಂದುಳಿದವರಿಗಾಗಿ ಅನೇಕ ಯೋಜನೆ ರೂಪಿಸಲಾಗಿದೆ ಎಂದರು.
ಜಿಲ್ಲಾ ಅರ್ಚಕ ಪರಿಷತ್ತಿನ ಉಪಾಧ್ಯಕ್ಷ ಕುಡ್ನಳ್ಳಿ ಲಕ್ಷ್ಮೀ ನಾರಾಯಣ ಸೋಮಾಯಾಜಿ ಮಾತನಾಡಿ, ಸನಾತನ ಧರ್ಮದಲ್ಲಿ ಶ್ರೀ ಶಂಕರಾಚಾರ್ಯರು ಹಾಕಿಕೊಟ್ಟ ಮಾರ್ಗದಲ್ಲಿ ನಾವು ನಡೆಯಬೇಕು. ಪ್ರತಿಯೊಬ್ಬ ಬ್ರಾಹ್ಮಣನು ಗಾಯತ್ರಿಯನ್ನು ಆರಾ ಧಿಸುವ ಮೂಲಕ
ಶ್ರೇಯೋವಂತರಾಗಬೇಕು ಎಂದರು.
ಇದೇ ಸಂದರ್ಭದಲ್ಲಿ ನೂತನ ಗ್ರಾಪಂ ಸದಸ್ಯರಾದ ಮರ್ಕಲ್ ಗ್ರಾಪಂ ಅಧ್ಯಕ್ಷೆಯಾಗಿರುವ ವಾಣಿ, ವಿವಿಧ ಗ್ರಾಪಂ ಸದಸ್ಯರಾದ ಪುಷ್ಪಲತಾ ಜನಾರ್ಧನ್, ಲೀಲಾವತಿ, ರಾಘವೇಂದ್ರ, ಶಿವಶಂಕರ್, ಕುಮಾರಸ್ವಾಮಿ ಭಟ್ಟ, ಸವಿತಾ ಶಿವಶಂಕರ್ ಹಾಗೂ ಸತತ ನಾಲ್ಕನೇ ಬಾರಿ
ಬೆಟ್ಟಗೆರೆ ಪಿಎಸಿಎಸ್ ಅಧ್ಯಕ್ಷರಾದ ಕೆ.ಎಂ. ರಮೇಶ್ ಭಟ್ಟರನ್ನು ಅಭಿನಂದಿಸಲಾಯಿತು. ನಾಟಕ ಅಕಾಡೆಮಿ ಪ್ರಶಸ್ತಿ ಪುರಸ್ಕೃತಬಿ.ಎಲ್. ರವಿಕುಮಾರ್ ಹಾಗೂ ಹಿರಿಯ ಕಲಾವಿದ ತಾಳಕೋಡು ವೆಂಕಟೇಶ್ ಭಟ್‌ರನ್ನು ಗೌರವಿಸಲಾಯಿತು. ಜಿ.ಎಂ. ಸತೀಶ್ ಅಧ್ಯಕ್ಷತೆಯಲ್ಲಿ ನಡೆದ ಸಮಾರಂಭದಲ್ಲಿ ರಾಜ್ಯ ಬ್ರಾಹ್ಮಣ ಅಭಿವೃದ್ಧಿ ಮಂಡಳಿ ನಿರ್ದೇಶಕರಾದ ಡಾ| ರಾಘವೇಂದ್ರ ಭಟ್,ಭಾನುಪ್ರಕಾಶ ಶರ್ಮ, ಬ್ರಾಹ್ಮಣ ಮುಖಂಡರಾದ ವಿಶ್ವೇಶ್ವರ ಭಟ್, ಸು ಧೀಂದ್ರ, ಮಾರ್ಕಾಂಡೇಯ ಭಟ್, ಉದಯಶಂಕರ ಭಟ್ ಇದ್ದರು. ಬೆಳಗ್ಗೆ ಅರ್ಚಕ ಲಕ್ಷ್ಮೀ ನಾರಾಯಣ ಸೋಮಯಾಜಿ ನೇತೃತ್ವದಲ್ಲಿ ಲಕ್ಷ ಗಾಯತ್ರಿ ಹೋಮ ನಡೆಯಿತು.ಇದೇ ಸಂದರ್ಭದಲ್ಲಿ ವಿಪ್ರ ಮಹಿಳೆಯರಿಂದ ಗಾಯತ್ರಿ ಅಷ್ಟೋತ್ತರ, ಶ್ರೀ ಶಂಕರ ಅಷ್ಟೋತ್ತರ ಹಾಗೂ ಭಜನೆ ನಡೆಯಿತು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Chikkamagaluru: ಮದುವೆ ಹಾಲ್ ನಲ್ಲೇ ವಧುವಿನ ಚಿನ್ನ ಎಗರಿಸಿದ ಖದೀಮರು…
Chikkamagaluru: ಕೇರಳದಿಂದ “ಸುರಕ್ಷಿತ’ ಮಲೆನಾಡಿನತ್ತ “ನಕ್ಸಲರು’?
Naxalite: ಮಲೆನಾಡಿಗೆ ನಕ್ಸಲರ ಭೇಟಿ ದೃಢ; 3 ಬಂದೂಕು-ಮದ್ದುಗುಂಡು ವಶ
ಚಿಕಿತ್ಸೆಗೆಂದು ಬಂದಿದ್ದ ರೋಗಿ ಸಾವು; ವೈದ್ಯರ ನಿರ್ಲಕ್ಷ್ಯವೇ ಕಾರಣ ಎಂದು ಕುಟುಂಬಸ್ಥರ ಆರೋಪ
Chikkamagaluru: ಮನೆಯೊಂದರಲ್ಲಿ ಬಂದೂಕು ಪತ್ತೆ; ನಕ್ಸಲ್ ಓಡಾಟ ಶಂಕೆ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.