ಸಂಭ್ರಮದ ದುರ್ಗಾಂಬಾ ದೇವಿ ಜಾತ್ರೆ
ಅಜ್ಜಂಪುರ: ಅಂತರಘಟ್ಟೆ ದುರ್ಗಾಂಬಾ ದೇವಿ ರಥೋತ್ಸವ ಜರುಗಿತು.
Team Udayavani, Feb 21, 2021, 5:52 PM IST
ಅಜ್ಜಂಪುರ: ಸಮೀಪದ ಅಂತರಘಟ್ಟೆ ದುರ್ಗಾಂಬಾ ದೇವಿ ರಥೋತ್ಸವ ಶನಿವಾರ ಅತ್ಯಂತ ವಿಜೃಂಭಣೆಯಿಂದ ನೆರವೇರಿತು. ರಾಜ್ಯದ ನಾನಾ ಕಡೆಗಳಿಂದ ಭಕ್ತರು ಎತ್ತಿನ ಗಾಡಿ, ಆಟೋ, ಟ್ರಾಕ್ಟರ್ ಮೂಲಕ ಆಗಮಿಸಿ ದೇವಿಯ ದರ್ಶನ ಪಡೆದರು. ಕಮಾನು ಕಟ್ಟಿದ ಗಾಡಿಗಳ ಮೂಲಕ ದೇವಾಲಯಕ್ಕೆ ಆಗಮಿಸಿದ ಭಕ್ತರು ಪಾನಕ- ಫಲಾಹಾರ ಹಂಚಿ ಸಂಭ್ರಮಿಸಿದರು. ಭಕ್ತಾ ದಿಗಳು ರಥದ ಚಕ್ರಕ್ಕೆ ತೆಂಗಿನ ಕಾಯಿ ಒಡೆದು ಹರಕೆ ತೀರಿಸಿದರು.
ರಥೋತ್ಸವಕ್ಕೂ ಮುನ್ನ ದೇವಾಲಯದಲ್ಲಿ ಅನೇಕ ಧಾರ್ಮಿಕ ವಿ ಧಿ-ವಿಧಾನಗಳು ಜರುಗಿದವು. ಶುಕ್ರವಾರ ರಾತ್ರಿ ವಿವಿಧ ಜಾನಪದ ಕಲಾ ತಂಡಗಳ ಸಮ್ಮುಖದಲ್ಲಿ ದೇವಿಯ ಮೆರವಣಿಗೆ ಅತ್ಯಂತ ವಿಜೃಂಭಣೆಯಿಂದ ನೆರವೇರಿತು. ರಥೋತ್ಸವವನ್ನು ಸಂಪೂರ್ಣ ಹೂವಿನಿಂದ ಅಲಂಕರಿಸಿದ್ದು ವಿಶೇಷ ವಾಗಿತ್ತು. ಮಳೆಯ ನಡುವೆಯೂ ಲಕ್ಷಾಂತರ ಭಕ್ತರು ರಥೋತ್ಸವದಲ್ಲಿ ಪಾಲ್ಗೊಂಡು ಸಂಭ್ರಮಿಸಿದರು. ಭಕ್ತರು ಬೆಳಗ್ಗೆಯಿಂದಲೇ ಸರದಿ ಸಾಲಿನಲ್ಲಿ ನಿಂತು ದೇವಿಯ ದರ್ಶನ ಪಡೆದರು.
ತಿಂಡಿ- ತಿನಿಸು, ಆಟಿಕೆಗಳ ಖರೀದಿ ಜೋರಾಗಿತ್ತು. ಬಂದಂತಹ ಭಕ್ತಾ ದಿಗಳಿಗೆ ಶುಕ್ರವಾರ ಹಾಗೂ ಶನಿವಾರ 2 ದಿನಗಳ
ಕಾಲ ನಿರಂತರವಾಗಿ ಗ್ರಾಮಸ್ಥರು ಅನ್ನಸಂತರ್ಪಣೆ ನೆರವೇರಿಸಿದರು. ತರೀಕೆರೆ ಶಾಸಕ ಡಿ.ಎಸ್. ಸುರೇಶ್ ಜಾತ್ರಾ ಮಹೋತ್ಸವಕ್ಕೆ ಆಗಮಿಸಿ
ದೇವಿಯ ದರ್ಶನ ಪಡೆದರು.
ತರೀಕೆರೆ ಡಿವೈಎಸ್‌ಪಿ ಏಗಣ್ಣನವರ್ ನೇತೃತ್ವದ ಅಜ್ಜಂಪುರ, ಲಿಂಗದಹಳ್ಳಿ, ತರೀಕೆರೆ, ಕಡೂರು, ಯಗಟಿ, ಲಕ್ಕವಳ್ಳಿ ಪೊಲೀಸ್ ಠಾಣೆಯ 400ಕ್ಕೂ ಹೆಚ್ಚು ಪೊಲೀಸ್ ಸಿಬ್ಬಂದಿ ಬಂದೋಬಸ್ತ್ ಕಾರ್ಯದಲ್ಲಿ ನಿರತರಾಗಿದ್ದರು.
ಓದಿ : ಸಿಎಂ ಅವರಿಂದ ಲಿಂಗಾಯತ ಪಂಚಮಸಾಲಿ ಸಮುದಾಯಕ್ಕೆ ನ್ಯಾಯ ಸಿಗಲಿದೆ: ಸಚಿವ ನಿರಾಣಿ ವಿಶ್ವಾಸ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Chikkamagaluru: ಮದುವೆ ಹಾಲ್ ನಲ್ಲೇ ವಧುವಿನ ಚಿನ್ನ ಎಗರಿಸಿದ ಖದೀಮರು…
Chikkamagaluru: ಕೇರಳದಿಂದ “ಸುರಕ್ಷಿತ’ ಮಲೆನಾಡಿನತ್ತ “ನಕ್ಸಲರು’?
Naxalite: ಮಲೆನಾಡಿಗೆ ನಕ್ಸಲರ ಭೇಟಿ ದೃಢ; 3 ಬಂದೂಕು-ಮದ್ದುಗುಂಡು ವಶ
ಚಿಕಿತ್ಸೆಗೆಂದು ಬಂದಿದ್ದ ರೋಗಿ ಸಾವು; ವೈದ್ಯರ ನಿರ್ಲಕ್ಷ್ಯವೇ ಕಾರಣ ಎಂದು ಕುಟುಂಬಸ್ಥರ ಆರೋಪ
Chikkamagaluru: ಮನೆಯೊಂದರಲ್ಲಿ ಬಂದೂಕು ಪತ್ತೆ; ನಕ್ಸಲ್ ಓಡಾಟ ಶಂಕೆ
MUST WATCH
ಹೊಸ ಸೇರ್ಪಡೆ
Belagavi: ವಿವಾಹಿತ ಮಹಿಳೆ ಮತ್ತು ತಾಯಿಯ ಸೀರೆ ಬಿಚ್ಚಿ ಹಲ್ಲೆ ನಡೆಸಿದ ನೆರೆಹೊರೆಯವರು!
Tamil Director: ಖ್ಯಾತ ತಮಿಳು ಚಿತ್ರ ನಿರ್ದೇಶಕ ಸುರೇಶ್ ಸಂಗಯ್ಯ ವಿಧಿವಶ
SMAT 2024: ಸಯ್ಯದ್ ಮುಷ್ತಾಕ್ ಅಲಿ ಕೂಟಕ್ಕೆ ಬಲಿಷ್ಠ ಕರ್ನಾಟಕ ತಂಡ ಪ್ರಕಟ
ಹೆದ್ದಾರಿ ತಡೆ ನಡೆಸಿದ ಆರೋಪ; ಸುಳ್ಯ, ಬೈಂದೂರು ಶಾಸಕರ ಸಹಿತ ಹಲವರ ವಿರುದ್ಧ ಪ್ರಕರಣ
IPL Auction: ಸಂಪೂರ್ಣ ಐಪಿಎಲ್ ಹರಾಜು ನಡೆಸಲಿದ್ದಾರೆ ಮಲ್ಲಿಕಾ ಸಾಗರ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.