ಇಂದಿನಿಂದ ಶೃಂಗೇರಿ ಶ್ರೀಗಳ ವರ್ಧಂತಿ ಉತ್ಸವ
Team Udayavani, Apr 13, 2021, 6:06 PM IST
ಶೃಂಗೇರಿ: ಶ್ರೀ ಶಾರದಾ ಪೀಠದ ಜಗದ್ಗುರು ಶ್ರೀ ಭಾರತೀತೀರ್ಥ ಸ್ವಾಮೀಜಿಗಳ 71 ನೇ ವರ್ಧಂತಿ ಉತ್ಸವದ ಕಾರ್ಯಕ್ರಮವು ಏ.13 ರಂದು ಆರಂಭಗೊಳ್ಳಲಿದೆ. ವರ್ಧಂತಿ ಅಂಗವಾಗಿ ಮಂಗಳವಾರ ಶ್ರೀಮಠದಲ್ಲಿ ಲಕ್ಷಮೋದಕ ಗಣ ಹೋಮದೊಂದಿಗೆ ಧಾರ್ಮಿಕ ಕಾರ್ಯಕ್ರಮ ಆರಂಭವಾಗಲಿದೆ.
ಲಕ್ಷ ಮೋದಕವನ್ನು ಸ್ವಯಂ ಸೇವಕರ ಸಹಕಾರದಿಂದ ಕಳೆದ ಮೂರು ದಿನದಿಂದ ಸಿದ್ಧಪಡಿಸಲಾಗಿತ್ತು. ವರ್ಧಂತಿ ಅಂಗವಾಗಿ ನಡೆಯುವ ಕೋಟಿ ಕುಂಕುಮರ್ಚಾನೆ, ಆಯುತ ಚಂಡಿಕಾ ಯಾಗ, ಅತಿರುದ್ರ ಯಾಗ ಮಹಾಯಾಗ ನಡೆಯಲಿದೆ. ಲಕ್ಷಮೋದಕ ಗಣಹೋಮವು ನರಸಿಂಹವನದಲ್ಲಿ ನಡೆಯಲಿದ್ದು, ಗಣಹೋಮದ ಪೂರ್ಣಾಹುತಿಯಲ್ಲಿ ಜಗದ್ಗುರುಗಳು ಉಪಸ್ಥಿತರಿರಲಿದ್ದಾರೆ.
ಏ.14 ರಂದು ಅತಿರುದ್ರ ಮಹಾಯಾಗದ ಸಂಕಲ್ಪ ನಡೆಯಲಿದ್ದು, ಏ.15 ರಂದು ಆಯುತ ಚಂಡಿಕಾ ಮಹಾಯಾಗದ ಸಂಕಲ್ಪ, ಏ.16 ರಂದು ಶ್ರೀ ಶಾರದಾಂಬೆ ಸನ್ನಿ ಧಿಯಲ್ಲಿ ಕೋಟಿ ಕುಂಕುಮಾರ್ಚನೆ ಸಂಕಲ್ಪ ನಡೆಯಲಿದೆ. ಏ.18 ರಂದು ಜಗದ್ಗುರು ಶ್ರೀ ಭಾರತೀತೀರ್ಥ ಸ್ವಾಮೀಜಿಗಳ ವರ್ಧಂತಿ ಉತ್ಸವ ನಡೆಯಲಿದೆ.
ಆಯುತ ಚಂಡಿಕಾ ಮಹಾಯಾಗದ ಅಗತ್ಯ ಪೂರ್ವ ಸಿದ್ಧತೆ ನಡೆಸಲಾಗಿದೆ. ನರಸಿಂಹವನದಲ್ಲಿ ಯಾಗ ನಡೆಯುವ ಸ್ಥಳದಲ್ಲಿ ಬೃಹತ್ ಯಾಗಶಾಲೆ ನಿರ್ಮಿಸಲಾಗಿದೆ. ಋತ್ವಿಜರು ಉಳಿದುಕೊಳ್ಳುವ ವ್ಯವಸ್ಥೆಯನ್ನು ನರಸಿಂಹವನದಲ್ಲಿಯೇ ಮಾಡಲಾಗಿದೆ. ನರಸಿಂಹವನಕ್ಕೆ ಪ್ರವೇಶಿಸುವ ಮಾರ್ಗದಲ್ಲಿ ಚಪ್ಪರವನ್ನು ನಿರ್ಮಿಸಲಾಗಿದೆ. ತಳಿರು ತೋರಣ ಹಾಕಲಾಗಿದ್ದು, ಗುರುಭವನ ಹಾಗೂ ಶ್ರೀಮಠವನ್ನು ವಿದ್ಯುದ್ದೀಪದಿಂದ ಅಲಕಂರಿಸಲಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Naxal leader Vikram Gowda Encounter: ಕುದುರೆಮುಖ: ಶೋಧ ಕಾರ್ಯ ಚುರುಕು
Naxal: ಎನ್‌ಕೌಂಟರ್‌ಗೆ ಜಾಲತಾಣದಲ್ಲಿ ಮಾಜಿ ನಕ್ಸಲ್ ಪತ್ನಿ ಆಕ್ರೋಶ
Congress ಶಾಸಕರಿಗೆ ಬಿಜೆಪಿ ಆಫರ್; ರವಿ ಗಣಿಗ ಆರೋಪಕ್ಕೆ ಶಾಸಕ ತಮ್ಮಯ್ಯ ಸ್ಪಷ್ಟನೆ
Chikkamagaluru: ಗಾಂಜಾ ಮಾರಾಟ ಮಾಡುತ್ತಿದ್ದ ಇಬ್ಬರು ಆರೋಪಿಗಳ ಬಂಧನ
Chikkamagaluru: ಮದುವೆ ಹಾಲ್ ನಲ್ಲೇ ವಧುವಿನ ಚಿನ್ನ ಎಗರಿಸಿದ ಖದೀಮರು…
MUST WATCH
ಉಡುಪಿ ಶ್ರೀ ಕೃಷ್ಣ ಮಠದಲ್ಲಿ ಬೃಹತ್ ಗೀತೋತ್ಸವಕ್ಕೆ ಅದ್ದೂರಿ ಚಾಲನೆ|
ಲಾಭದಾಯಕ ಗುಲಾಬಿ ಕೃಷಿ ಮಾಡುವ ವಿಧಾನ
ಗೀತೋತ್ಸವ ತ್ರಿಪಕ್ಷ ಶತವೈಭವ ಕಾರ್ಯಕ್ರಮಕ್ಕೆ ಆಮಂತ್ರಿಸಿದ ಪರ್ಯಾಯ ಪುತ್ತಿಗೆ ಶ್ರೀಗಳು
ಶರಣಾಗತಿಗೆ ಸೂಚಿಸಿದರೂ ಸ್ಪಂದಿಸಿಲ್ಲ, ಗುಂಡಿನ ಚಕಮಕಿಯಲ್ಲಿ ಮೋಸ್ಟ್ ವಾಂಟೆಡ್ ನಕ್ಸಲ್ ಸಾವು
ಉಚ್ಚಿಲದ ರೆಸಾರ್ಟ್ ಈಜುಕೊಳದಲ್ಲಿ ಮುಳುಗಿ ಮೂವರು ವಿದ್ಯಾರ್ಥಿನಿಯರ ಸಾ**ವು
ಹೊಸ ಸೇರ್ಪಡೆ
Chikkaballapura: ಕಾರಿನಲ್ಲಿ ಸಾಗಿಸುತ್ತಿದ್ದ 7.20 ಲಕ್ಷ ರೂ. ಮೌಲ್ಯದ ಗಾಂಜಾ ವಶ
Rafael Nadal Retire: ದೈತ್ಯ ಆಟಗಾರ ನಡಾಲ್‌ಗೆ ಸೋಲಿನ ವಿದಾಯ
Belagavi: ಬಾಲಕಿ ಮೇಲೆ ಅತ್ಯಾಚಾರ… ಆರೋಪಿಗೆ 20 ವರ್ಷ ಜೈಲು ಶಿಕ್ಷೆ
BBK11: ಬಿಗ್ ಬಾಸ್ ಮನೆಯಲ್ಲಿ ದುಡ್ಡು ಕದ್ದು ಓಡಿದ ಚೈತ್ರಾ.! ಮನೆಮಂದಿ ಶಾಕ್
Hockey: ವನಿತಾ ಏಷ್ಯನ್ ಚಾಂಪಿಯನ್ಸ್ ಟ್ರೋಫಿ ಪಂದ್ಯಾವಳಿ.. ಹಾಕಿ ಕಿರೀಟ ಉಳಿಸಿಕೊಂಡ ಭಾರತ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.