ಭೋಸರ ಮಾತಲ್ಲಿತ್ತು ದೇಶಪ್ರೇಮದ ಕಿಚ್ಚು: ಸುಬ್ರಹ್ಮಣ್ಯ
ಶ್ರೀ ವಿದ್ಯಾಗಣಪತಿ ಸಮುದಾಯ ಭವನದಲ್ಲಿ ಜೇಸಿಐ ಕ್ಲಾಸಿಕ್ ವತಿಯಿಂದ ನೇತಾಜಿ ಸುಭಾಷ್ ಚಂದ್ರ ಭೋಸ್ ಅವರ ಜನ್ಮದಿನ ಆಚರಿಸಲಾಯಿತು.
Team Udayavani, Jan 25, 2021, 6:27 PM IST
ಬಾಳೆಹೊನ್ನೂರು: ಸ್ವಾತಂತ್ರ್ಯ ಚಳುವಳಿಯ ಸಂದರ್ಭದಲ್ಲಿ·ದೇಶಪ್ರೇಮದ ಕಿಚ್ಚು ಜಾಗೃತಗೊಳಿಸಿದ್ದು ಸ್ವಾತಂತ್ರ್ಯ ಸೇನಾನಿ
ನೇತಾಜಿ ಸುಭಾಷ್‌ಚಂದ್ರ ಭೋಸ್ ಎಂದು ಮಂಗಳೂರು·ಬಿಜಿಎಸ್ ಕಾಲೇಜಿನ ಉಪ ಪ್ರಾಂಶುಪಾಲ ಸುಬ್ರಹ್ಮಣ್ಯ·ಹೇಳಿದರು.
ಜ.23ರಂದು ಸಂಜೆ ಬಾಳೆಹೊನ್ನೂರು ಶ್ರೀ ವಿದ್ಯಾಗಣಪತಿಸಮುದಾಯ ಭವನದಲ್ಲಿ ಜೇಸಿಐ ಕ್ಲಾಸಿಕ್ ಸಂಸ್ಥೆಯವತಿಯಿಂದ ಸ್ವಾತಂತ್ರÂಸೇನಾನಿ ನೇತಾಜಿ ಸುಬಾಷ್ ಚಂದ್ರಬೋಸ್ ಅವರ 124ನೇ ಜನ್ಮದಿನಾಚರಣೆ ಸಂದರ್ಭದಲ್ಲಿ
ಅವರು ಮಾತನಾಡಿದರು.
ಸುಭಾಷ್ ಚಂದ್ರ ಬೋಸ್ ಅವರ ಜನ್ಮ ದಿನವನ್ನುದೇಶಾದ್ಯಂತ ಪರಾಕ್ರಮ ದಿನವನ್ನಾಗಿ ಆಚರಿಸಲು ಕೇಂದ್ರಸರಕಾರಘೋಷಣೆಮಾಡಿರುವುದು ಶ್ಲಾಘನೀಯ. ಅಪ್ರತಿಮದೇಶಭಕ್ತರಾಗಿದ್ದ ಬೋಸ್ ಅವರು ವಿದೇಶದಲ್ಲೂ ಸ್ವಾತಂತ್ರ್ಯ·ಹೋರಾಟವನ್ನು ಸಂಘಟಿಸಿದ್ದರು. ಅಲ್ಲದೆ ಅವರ ಸಿಡಿಲಬ್ಬರದಮಾತುಗಳು ಅಸಂಖ್ಯಾತ ಜನರಿಗೆ ಸ್ಫೂರ್ತಿಯಾಗಿದ್ದವು·ಎಂದರು.
ಜೇಸಿಐ ಕ್ಲಾಸಿಕ್‌ನ ಅಧ್ಯಕ್ಷ ಎಸ್.ಎಲ್. ಚೇತನ್‌ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ, ನೇತಾಜಿಸುಬಾಷ್ ಚಂದ್ರ ಬೋಸ್ ಅವರಲ್ಲಿದ್ದ ದೇಶಪ್ರೇಮಇಂದಿನ ಯುವ ಜನಾಂಗಕ್ಕೆ ಪ್ರೇರಕವಾಗಬೇಕು. ಅಲ್ಲದೆಮಹಾನ್ ವ್ಯಕ್ತಿಗಳ ಜನ್ಮದಿನಾಚರಣೆ ಆಚರಿಸುವುದ ಮೂಲಕಅವರ ತತ್ವ ಸಿದ್ಧಾಂತ, ಆದರ್ಶ ಗುಣಗಳನ್ನು ಜೀವನದಲ್ಲಿಅಳವಡಿಸಿಕೊಳ್ಳಬೇಕೆಂದರು. ನೇತಾಜಿ ಸುಬಾಸ್ ಚಂದ್ರಬೋಸ್ ಅವರ ಭಾವಚಿತ್ರವಿರುವ ಮಿನಿ ಕ್ಯಾಲೆಂಡರ್‌ಬಿಡುಗಡೆ ಮಾಡಲಾಯಿತು. ಜಯಪುರ ಬಿಜಿಎಸ್ ಕಾಲೇಜಿನಉಪನ್ಯಾಸಕ ಸೋಮೇಶ್, ಬಾಳೆಹೊನ್ನೂರುಸರಕಾರಿಪ್ರೌಡಶಾಲೆಶಿಕ್ಷಕ ಸುರೇಂದ್ರ ಮಾತನಾಡಿದರು. ಇಂಪಾಲ್‌ಗ್ರೂಪ್ಸ್‌ನ ಮಾಲೀಕ ಟಿ.ಎಂ.ಬಷೀರ್,ಎಚ್.ಗೋಪಾಲ್,ಸಿ.ಪಿ.ರಮೇಶ್,ದಯಾಕರ್‌ಸುವರ್ಣ, ಬಿ.ಎಸ್. ಸಚ್ಚಿನ್‌ಕುಮಾರ್, ಕಡೆಮನೆ ಜಗದೀಶ್, ಇಬ್ರಾಹಿಂಶಾ,ಮುದುಗುಣಿಪ್ರಕಾಶ್,ಬನ್ನೂರುಶ್ರೀನಿವಾಸ್,ರೋಹಿತ್‌ಡಿ.ರಾಜೇಂದ್ರ, ಎಸ್.ಕೆ. ರಫಿಕ್ ಆಲಿ, ಆಶೋಕ,
ಡಿ ಸ್ಟೀಫನ್, ತುಪ್ಪೂರು ಮಂಜುನಾಥ್, ಬಿ.ಸಿ. ಸಂತೋಷ್.ಕುಮಾರ್ ಮತ್ತಿತರರು ಇದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Chikkamagaluru;ಹಣಕ್ಕಾಗಿ ಮೊಮ್ಮಗನಿಂದಲೇ ವೃದ್ಧ ದಂಪತಿಯ ಬರ್ಬರ ಹ*ತ್ಯೆ
Baba Budan Dargah: ಗೋರಿಗಳ ಮೇಲೆ ಕುಂಕುಮ ಹಚ್ಚಿರುವ ಆರೋಪ
Naxal leader Vikram Gowda Encounter: ಕುದುರೆಮುಖ: ಶೋಧ ಕಾರ್ಯ ಚುರುಕು
Naxal: ಎನ್‌ಕೌಂಟರ್‌ಗೆ ಜಾಲತಾಣದಲ್ಲಿ ಮಾಜಿ ನಕ್ಸಲ್ ಪತ್ನಿ ಆಕ್ರೋಶ
Congress ಶಾಸಕರಿಗೆ ಬಿಜೆಪಿ ಆಫರ್; ರವಿ ಗಣಿಗ ಆರೋಪಕ್ಕೆ ಶಾಸಕ ತಮ್ಮಯ್ಯ ಸ್ಪಷ್ಟನೆ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.