13ನೇ ದಿನಕ್ಕೆ ಕಾಲಿಟ್ಟ ಸಾರಿಗೆ ನೌಕರರ ಮುಷ್ಕರ
Team Udayavani, Apr 20, 2021, 6:04 PM IST
ಚಿಕ್ಕಮಗಳೂರು: ರಾಜ್ಯ ರಸ್ತೆ ಸಾರಿಗೆ ನೌಕರರ ಮುಷ್ಕರ 13ನೇ ದಿನಕ್ಕೆ ಕಾಲಿಟ್ಟಿದ್ದು, ಸೋಮವಾರ ಬೆಳಗ್ಗೆ ಭಿತ್ತಿಪತ್ರ ಪ್ರದರ್ಶಿಸಿ ಉಪವಾಸ ಸತ್ಯಾಗ್ರಹ ನಡೆಸಿದರು.
ಕೆಲವರು ಸಾರಿಗೆ ನೌಕರರು ಅ ಧಿಕಾರಿಗಳ ಒತ್ತಡಕ್ಕೆ ಮಣಿದು ಕೆಲಸಕ್ಕೆ ಹಾಜರಾಗಿದ್ದರೆ ರಾಜ್ಯ ಸರ್ಕಾರಿ ಸಂಸ್ಥೆ ನೌಕರರ ಕೂಟದ ವತಿಯಿಂದ ಬಹುತೇಕ ಸಾರಿಗೆ ನೌಕರರು 13 ದಿನದಿಂದ ನಗರದ ಗಾಂಧಿ ಉದ್ಯಾನವನದಲ್ಲಿ ಮುಷ್ಕರದಲ್ಲಿ ಪಾಲ್ಗೊಳ್ಳುತ್ತಿದ್ದಾರೆ. ಮುಷ್ಕರ ನಿರತ ಕೆಲವು ನೌಕರರು ಸೋಮವಾರ ಬಸ್ ನಿಲ್ದಾಣಕ್ಕೆ ತೆರಳಿ ಬಸ್ ಓಡಿಸಲು ಮುಂದಾಗಿರುವವರಿಗೆ ಸಹದ್ಯೋಗಿಗಳೇ ನೀವು ಬಸ್ ಓಡಿಸುತ್ತಿರುವುದು ರಸ್ತೆಯ ಮೇಲಲ್ಲ, ಹೋರಾಟಗಾರರ ಎದೆಯ ಮೇಲೆ. ನಮ್ಮೆಲ್ಲರ ಮುಂದಿನ ಭವಿಷ್ಯಕ್ಕಾಗಿ ಹೋರಾಟ ನಡೆಸಿ. ವಜಾಗೊಂಡು, ಅಮಾನತು ಹಾಗೂ ವರ್ಗಾವಣೆಯಾಗಿರುವ ನೌಕರರ ಹೊಟ್ಟೆಮೇಲೆ ಹೊಡೆಯಬೇಡಿ. ನೀವು ಇಂದು ಕರ್ತವ್ಯ ನಿರ್ವಹಿಸಿದರೆ ನಾಳೆ ನಮ್ಮ ಬಾಯಿಗೆ ಮಣ್ಣು ಬೀಳಲಿದೆ. ಸಾರಿಗೆ ನೌಕರರ ಹೋರಾಟದ ದಿಕ್ಕು ತಪ್ಪಿಸುವ ಕುತಂತ್ರಕ್ಕೆ ಬಲಿಯಾಗದಿರಿ ಎಂಬ ಭಿತ್ತಿಪತ್ರಗಳನ್ನು ಪ್ರದರ್ಶಿಸಿದರು.
ಪ್ರತಿಭಟನಾಕಾರರು ಬೆಳಗ್ಗೆಯಿಂದ ಸಂಜೆವರೆಗೂ ತಿಂಡಿ, ಊಟವನ್ನು ಸೇವಿಸದೆ ಉಪವಾಸ ಸತ್ಯಾಗ್ರಹ ನಡೆಸಿದರು. ಸರ್ಕಾರ ಬೇಡಿಕೆ ಈಡೇರಿಸಲು ಮುಂದಾಗದಿದ್ದರೆ, ನಿಷೇಧಾಜ್ಞೆ ಇರುವ ಪ್ರದೇಶಕ್ಕೆ ತೆರಳಿ ಪ್ರತಿಭಟನೆ ನಡೆಸುವ ಮೂಲಕ ಜೈಲು ತುಂಬುವ ಚಳವಳಿಗೆ ಸಾರಿಗೆ ನೌಕರರು ಮುಂದಾಗುವುದಾಗಿ ತಿಳಿಸಿದರು.
ಈಗಾಗಲೇ ನಿಗಮದ ಅ ಧಿಕಾರಿಗಳು ಕರ್ತವ್ಯಕ್ಕೆ ಹಾಜರಾಗದ ಮುಷ್ಕರದಲ್ಲಿ ಪಾಲ್ಗೊಂಡಿರುವ ಕೆಲವರನ್ನು ವರ್ಗಾವಣೆಗೊಳಿಸಿದೆ. 14 ನೌಕರರನ್ನು ಚಿಕ್ಕಬಳ್ಳಾಪುರ, 22 ಮಂದಿ ಉಡುಪಿ, 10 ನೌಕರರನ್ನು ಪುತ್ತೂರು, 14 ಮಂದಿಯನ್ನು ಮಂಗಳೂರು ಡಿಪೋಗೆ ಮತ್ತು ಕೆಲವರನ್ನು ಕಡೂರು, ಬೇಲೂರು ಡಿಪೋಗಳಿಗೆ ವರ್ಗಾವಣೆಗೊಳಿಸಲಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Chikkamagaluru: ಗಾಂಜಾ ಮಾರಾಟ ಮಾಡುತ್ತಿದ್ದ ಇಬ್ಬರು ಆರೋಪಿಗಳ ಬಂಧನ
Chikkamagaluru: ಮದುವೆ ಹಾಲ್ ನಲ್ಲೇ ವಧುವಿನ ಚಿನ್ನ ಎಗರಿಸಿದ ಖದೀಮರು…
Chikkamagaluru: ಕೇರಳದಿಂದ “ಸುರಕ್ಷಿತ’ ಮಲೆನಾಡಿನತ್ತ “ನಕ್ಸಲರು’?
Naxalite: ಮಲೆನಾಡಿಗೆ ನಕ್ಸಲರ ಭೇಟಿ ದೃಢ; 3 ಬಂದೂಕು-ಮದ್ದುಗುಂಡು ವಶ
ಚಿಕಿತ್ಸೆಗೆಂದು ಬಂದಿದ್ದ ರೋಗಿ ಸಾವು; ವೈದ್ಯರ ನಿರ್ಲಕ್ಷ್ಯವೇ ಕಾರಣ ಎಂದು ಕುಟುಂಬಸ್ಥರ ಆರೋಪ
MUST WATCH
ಹೊಸ ಸೇರ್ಪಡೆ
Boeing: 400ಕ್ಕೂ ಅಧಿಕ ಉದ್ಯೋಗಿಗಳಿಗೆ ವಜಾ ನೋಟಿಸ್ ನೀಡಿದ ಬೋಯಿಂಗ್
Kharge: ನಾವು ಸಂವಿಧಾನ ರಕ್ಷಿಸದಿದ್ದರೆ ಮೋದಿ ಚಹಾ ಮಾರಿಕೊಂಡೇ ಇರಬೇಕಿರುತ್ತಿತ್ತು
Kanguva ಕುರಿತು ಭಾರೀ ನೆಗೆಟಿವ್ ವಿಮರ್ಶೆ: ನಟ ಸೂರ್ಯ ಪತ್ನಿ ಜ್ಯೋತಿಕಾ ಆಕ್ರೋಶ
Madhya Pradesh: ಸರ್ಕಾರಿ ಕಾರ್ಯಕ್ರಮದಲ್ಲಿ ನಕ್ಕ ಅಧಿಕಾರಿ ವಿರುದ್ಧ ಶೋಕಾಸ್ ನೋಟಿಸ್
Congress ಜೂಟ್ ಮತ್ತು ಲೂಟ್ ರಾಜಕೀಯದಲ್ಲಿ ತೊಡಗಿದೆ: ರಾಜಸ್ಥಾನ ಸಿಎಂ ಭಜನ್ ಲಾಲ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.