ಅವಧಿ ಮುಗಿದ ಗ್ಲೂಕೋಸ್ ಪೊಟ್ಟಣ ವಿತರಣೆಗೆ ಆಕ್ರೋಶ
Team Udayavani, Apr 21, 2021, 6:43 PM IST
ಚಿಕ್ಕಮಗಳೂರು: ನಗರದ ಸರ್ಕಾರಿ ಮಲ್ಲೇಗೌಡ ಜಿಲ್ಲಾಸ್ಪತ್ರೆ ಆವರಣದಲ್ಲಿರುವ ಜನೌಷಧ ಮೆಡಿಕಲ್ ಅಂಗಡಿಯಲ್ಲಿ ಅವಧಿ ಮುಗಿದ (9 ವರ್ಷ ಹಳೆಯ) ಗ್ಲೂಕೋಸ್ ಪೊಟ್ಟಣ ನೀಡಿದ್ದಾರೆಂದು ಗ್ರಾಹಕರೊಬ್ಬರು ಆರೋಪಿಸಿದ್ದಾರೆ.
ನಗರದ ನಿವಾಸಿ ಗುರು ಎಂಬುವವರ ಚಿಕ್ಕಪ್ಪ ಅನಾರೋಗ್ಯದಿಂದ ಸರ್ಕಾರಿ ಮಲ್ಲೇಗೌಡ ಜಿಲ್ಲಾಸ್ಪತ್ರೆಗೆ ದಾಖಲಾಗಿದ್ದರು. ಆಸ್ಪತ್ರೆ ನರ್ಸ್ ಒಬ್ಬರು ಗುರು ಚಿಕ್ಕಪ್ಪ ಅವರಿಗೆ ಎಳನೀರು ಮತ್ತು ಗ್ಲೂಕೋಸ್ ನೀಡುವಂತೆ ತಿಳಿಸಿದ್ದು ಅದರಂತೆ ಆಸ್ಪತ್ರೆಯ ಆವರಣದಲ್ಲಿರುವ ಜನೌಷಧ ಕೇಂದ್ರದಲ್ಲಿ ಗುರು ಚಿಕ್ಕಪ್ಪ ಗ್ಲೂಕೋಸ್ ಖರೀದಿಸಿದ್ದು, 26 ರೂ. ಬೆಲೆಯ ಗ್ಲೂಕೋಸ್ ಪೊಟ್ಟಣವನ್ನು 13 ರೂ.ಗೆ ಮೆಡಿಕಲ್ ಸ್ಟೋರ್ ನವರು ನೀಡಿದ್ದಾರೆ.
ಕಡಿಮೆ ಬೆಲೆಗೆ ಗ್ಲೂಕೋಸ್ ನೀಡಿದ್ದರಿಂದ ಅನುಮಾನಗೊಂಡ ಗುರು ಗ್ಲೂಕೋಸ್ ತಯಾರಿಕೆ ದಿನಾಂಕ, ಅವಧಿ, ಬೆಲೆ ನಮೂದಿಸಿದ ಸ್ಥಳ ಪರಿಶೀಲನೆ ಮಾಡಿದಾಗ ಲೇಬಲ್ ಅಂಟಿಸಿರುವುದು ಕಂಡು ಬಂದಿದೆ. ಇದನ್ನು ಖಚಿತ ಪಡೆಸಿಕೊಳ್ಳುವ ಉದ್ದೇಶದಿಂದ ಗುರು ಅವರು ಮತ್ತೋಂದು ಗ್ಲೂಕೋಸ್ ಪೊಟ್ಟಣ ಖರೀದಿಸಿದ್ದು, ಅದರ ಮೇಲೆ ಅಂಟಿಸಿದ್ದ ಲೇಬಲ್ ತಗೆದು ಪರಿಶೀಲಿಸಿದಾಗ ಅವ ಧಿ ಮುಗಿದ ಗ್ಲೂಕೋಸ್ ನೀಡಿರುವುದು ತಿಳಿದು ಬಂದಿದೆ.
2012ರಲ್ಲಿ ತಯಾರಾದ ಗ್ಲೂಕೋಸ್ ಪೊಟ್ಟಣದ ಮೇಲೆ 2021 ಏಪ್ರಿಲ್ ಎಂದು ಬರೆದಿರುವ ಲೇಬಲ್ ಅಂಟಿಸಿ ಮಾರಾಟ ಮಾಡುತ್ತಿರುವುದು ತಿಳಿದು ಬಂದಿದ್ದು, 24 ತಿಂಗಳು ಅವ ಧಿಯ ಗ್ಲೂಕೋಸನ್ನು ಲೇಬಲ್ ಅಂಟಿಸಿ 9 ವರ್ಷಗಳ ಬಳಿಕವೂ ಮಾರಾಟ ಮಾಡುತ್ತಿರುವುದನ್ನು ಕಂಡು ಜಿಲ್ಲೆಯ ಜನತೆ ಬೆಚ್ಚಿ ಬೀಳುವಂತೆ ಮಾಡಿದೆ. ಸರ್ಕಾರ ತೆರೆದಿರುವ ಜನೌಷಧ ಕೇಂದ್ರಗಳಲ್ಲಿ ಅವ ಧಿ ಮುಗಿದ ಗ್ಲೂಕೋಸ್‌ಗೆ ಲೇಬಲ್ ಅಂಟಿಸಿ ಗ್ರಾಹಕರಿಗೆ ಮೋಸ ಮಾಡಿದರೆ, ಗ್ರಾಹಕರು ಯಾರನ್ನು ನಂಬಬೇಕು. ಗ್ರಾಹಕರಿಗೆ ಮೋಸ ಮಾಡುವ ಜನೌಷಧ ಕೇಂದ್ರದ ಮೇಲೆ ಆರೋಗ್ಯ ಇಲಾಖೆ ಮತ್ತು ಜಿಲ್ಲಾಡಳಿತ ಕಠಿಣ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Chikkamagaluru: ಮದುವೆ ಹಾಲ್ ನಲ್ಲೇ ವಧುವಿನ ಚಿನ್ನ ಎಗರಿಸಿದ ಖದೀಮರು…
Chikkamagaluru: ಕೇರಳದಿಂದ “ಸುರಕ್ಷಿತ’ ಮಲೆನಾಡಿನತ್ತ “ನಕ್ಸಲರು’?
Naxalite: ಮಲೆನಾಡಿಗೆ ನಕ್ಸಲರ ಭೇಟಿ ದೃಢ; 3 ಬಂದೂಕು-ಮದ್ದುಗುಂಡು ವಶ
ಚಿಕಿತ್ಸೆಗೆಂದು ಬಂದಿದ್ದ ರೋಗಿ ಸಾವು; ವೈದ್ಯರ ನಿರ್ಲಕ್ಷ್ಯವೇ ಕಾರಣ ಎಂದು ಕುಟುಂಬಸ್ಥರ ಆರೋಪ
Chikkamagaluru: ಮನೆಯೊಂದರಲ್ಲಿ ಬಂದೂಕು ಪತ್ತೆ; ನಕ್ಸಲ್ ಓಡಾಟ ಶಂಕೆ
MUST WATCH
ಹೊಸ ಸೇರ್ಪಡೆ
Bangladesh: ಶೇ.90ರಷ್ಟಿ ಮುಸ್ಲಿಮರು ಇರುವ ಬಾಂಗ್ಲಾದೇಶ ಶೀಘ್ರ ಇಸ್ಲಾಮಿಕ್ ರಾಷ್ಟ್ರ?
India-South Africa; ನಾಲ್ಕನೇ ಟಿ20 ಪಂದ್ಯ ಇಂದು: ಸರಣಿ ಗೆಲುವಿನ ನಿರೀಕ್ಷೆಯಲ್ಲಿ ಭಾರತ
Marriage: ಕ್ರಿಸ್ಮಸ್‌ಗೆ ಅಮೆಜಾನ್ ಸಿಇಒ ಅದ್ಧೂರಿ ವಿವಾಹ?
Washington: ಅಮೆರಿಕ ಗುಪ್ತಚರ ಸಂಸ್ಥೆಗೆ ತುಳಸಿ ಗಬಾರ್ಡ್ ಮುಖ್ಯಸ್ಥೆ
Daily Horoscope: ಉದ್ಯೋಗಾಸಕ್ತರಿಗೆ ಹೊಸ ಅವಕಾಶಗಳು ಗೋಚರ, ಸ್ವರ್ಣೋದ್ಯಮಕ್ಕೆ ಲಾಭ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.