ವಾರಾಂತ್ಯ ಕರ್ಫ್ಯೂ; ಎಲೆಡೆ ಸಂಪೂರ್ಣ ಲಾಕ್
Team Udayavani, Apr 25, 2021, 6:29 PM IST
ಕಡೂರು: ಕೊರೊನಾ ಎರಡನೇ ಅಲೆ ನಿಯಂತ್ರಣಕ್ಕೆ ಸರಕಾರ ವಿಧಿಸಿರುವ ಲಾಕ್‌ಡೌನ್ ಹಿನ್ನೆಲೆಯಲ್ಲಿ ವೀಕೆಂಡ್ ಕರ್ಫ್ಯೂಗೆ ಶನಿವಾರ ಸಂಪೂರ್ಣ ಬೆಂಬಲ ವ್ಯಕ್ತವಾಯಿತು. ಪಟ್ಟಣದ ಮುಖ್ಯ ರಸ್ತೆಗಳು ಮತ್ತು ವಿವಿಧ ರಸ್ತೆಗಳ ಎಲ್ಲಾ ರೀತಿಯ ವ್ಯಾಪಾರ ಮಳಿಗೆಗಳು ಮುಚ್ಚಿದ್ದವು. ಔಷಧ ಅಂಗಡಿ ತೆರೆದಿದ್ದರೂ ಅಲ್ಲಿಯೂ ಕೂಡ ಗ್ರಾಹಕರಿಲ್ಲದೆ ಬಿಕೋ ಎನ್ನುತ್ತಿತ್ತು. ಪಟ್ಟಣದ ಸುಭಾಷ್ ವೃತ್ತ, ಕನಕ ವೃತ್ತ, ಬಸವೇಶ್ವರ ವೃತ್ತ, ಹೊಸ ಬಸ್ ನಿಲ್ದಾಣ, ಡಾ| ಅಂಬೇಡ್ಕರ್ ವೃತ್ತ, ಕೆಎಲ್‌ವಿ ವೃತ್ತ ಹಾಗೂ ಗಣಪತಿ ಆಂಜನೇಯ ದೇವಾಲಯದ ರಸ್ತೆಗಳು ಸದಾ ಗಿಜಿಗುಡುತ್ತಿದ್ದವು.
ಆದರೆ ವೀಕೆಂಡ್ ಕರ್ಫ್ಯೂನಿಂದಾಗಿ ಶನಿವಾರ ಖಾಲಿ ಹೊಡೆಯುತ್ತಿದ್ದವು. ಚಿತ್ರಮಂದಿರಗಳು, ಸರಕಾರಿ ಕಚೇರಿಗಳು, ಬ್ಯಾಂಕ್, ಪೆಟ್ರೋಲ್ ಬಂಕ್, ಸಣ್ಣಸಣ್ಣ ಉದ್ಯಮಗಳು ತೆರೆಯದೆ ಇಡೀ ಪಟ್ಟಣವೇ ಹಾಳು ಸುರಿಯುತ್ತಿತ್ತು. ಮೊದಲೇ ನಿರ್ಧರಿಸಿದಂತೆ ಪೊಲೀಸರು ಆಯ್ದ ಸ್ಥಳಗಳಲ್ಲಿ ಚೆಕ್‌ಪೋಸ್ಟ್ ರಚಿಸಿ ಸಿಬ್ಬಂದಿಗಳನ್ನು ನಿಯೋಜಿಸಿದ್ದರು. ಅನಗತ್ಯವಾಗಿ ತಿರುಗಾಡುವ ಪ್ರತಿಯೊಬ್ಬರಿಗೂ ಪೊಲೀಸರು ಬುದ್ಧಿ ಹೇಳಿ ಕಳುಹಿಸುತ್ತಿದ್ದ ಘಟನೆಗಳು ಕಂಡು ಬಂದವು. ಮುಖ್ಯವಾಗಿ ನಿತ್ಯ ಕೂಲಿ ಮಾಡಿ ದುಡಿದು ತಿನ್ನುವ ಕಾರ್ಮಿಕ ವರ್ಗ ಬವಣೆಗೆ ಒಳಗಾಯಿತು.
ಅದರಲ್ಲೂ ಹೋಟೆಲ್ ಕಾರ್ಮಿಕರು, ಎತ್ತಿನಗಾಡಿ ಮೂಲಕ ಸಾಮಾನು ಸರಂಜಾಮು ಸಾಗಿಸುವವರು ಹಾಗೂ ರೈಲು, ಬಸ್ ನಿಲ್ದಾಣದಲ್ಲಿ ಕಂಡು ಬರುತ್ತಿದ್ದ ಬಿಕ್ಷುಕ ಸಮೂಹ ಕರ್ಫ್ಯೂನಿಂದ ನರಳುವಂತಾಯಿತು. ವಿಶೇಷವಾಗಿ ಭಿಕ್ಷುಕ ಸಮುದಾಯವು ಆಹಾರವಿಲ್ಲದೆ ಪರದಾಡಿ ದಾರಿಯಲ್ಲಿ ಆಗೊಮ್ಮೆ ಈಗೊಮ್ಮೆ ಕಾಣಿಸಿಕೊಳ್ಳುವ ವ¤ಕ್ತಿಗಳನ್ನು ಅಂಗಲಾಚುತ್ತಿದ್ದ ದೃಶ್ಯ ಮನಮಿಡಿಯುತ್ತಿತ್ತು. ಕಳೆದ ಬಾರಿ ಲಾಕ್‌ಡೌನ್ ಸಮಯದಲ್ಲಿ ಕೆಲವು ಸಂಘ-ಸಂಸ್ಥೆಗಳು ಕಾರ್ಮಿಕರು ಮತ್ತು ಭಿಕ್ಷುಕರಿಗೆ ಆಹಾರ ಪೊಟ್ಟಣಗಳನ್ನು ಪೂರೈಕೆ ಮಾಡಿದ್ದವು.
ಈ ಬಾರಿ ಯಾವುದೇ ಸಂಘ- ಸಂಸ್ಥೆಗಳು ಇದುವರೆಗೂ ಮುಂದೆ ಬಂದಿಲ್ಲ. ಕನಿಷ್ಟ ವೀಕೆಂಡ್ ಕರ್ಫ್ಯೂ ಸಮಯದಲ್ಲಾದರೂ ನಿರ್ಗತಿಕರಿಗೆ ಮತ್ತು ಕಾರ್ಮಿಕರಿಗೆ ಆಹಾರ ಪೂರೈಕೆ ಆಗಬೇಕೆಂಬುದು ಅವರ ಅಭಿಪ್ರಾಯವಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
CT Ravi:ಪ್ರಕರಣ ಮುಗಿದ ಬಳಿಕ ಧರ್ಮಸ್ಥಳಕ್ಕೂ,ಸವದತ್ತಿ ಯಲ್ಲಮ್ಮನ ದೇವಸ್ಥಾನಕ್ಕೂ ಹೋಗುತ್ತೇನೆ
Mudigere: ಆಕಸ್ಮಿಕ ಬೆಂಕಿ ತಗುಲಿ ಕಟ್ಟಡದಲ್ಲಿದ್ದ ಫೈನಾನ್ಸ್ ಕಚೇರಿಗೆ ಬೆಂಕಿ ಸುಟ್ಟು ಭಸ್ಮ
Derogatory Remark: ಧರ್ಮಸ್ಥಳದಲ್ಲಿ ಆಣೆ, ಪ್ರಮಾಣ ಮುಗಿದ ಕತೆ: ಸಿ.ಟಿ.ರವಿ
ಸುಮ್ನೆ ಬ್ಯಾಂಡೇಜ್ ಹಾಕಿಕೊಳ್ಳಲು ಯಾರಿಗೂ ತಲೆ ಕೆಟ್ಟಿಲ್ಲ: ಸಿ.ಟಿ.ರವಿ ಪತ್ನಿ ಪಲ್ಲವಿ
ಬಿಜೆಪಿ, ಕಾಂಗ್ರೆಸ್‌ಗೆ ಪ್ರತ್ಯೇಕ ಕಾನೂನಿಲ್ಲ, ನನ್ನ ದೂರಿಗೆ ಕ್ರಮವಿಲ್ಲವೇಕೆ?: ಸಿ.ಟಿ.ರವಿ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.